ಕಾಸರಗೋಡು: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಸವಾರರು ಸಾವು

ಸಮಗ್ರ ನ್ಯೂಸ್: ಕಾಸರಗೋಡಿನ ಪಡನ್ನಕ್ಕಾಡ್‌ನ ನೆಹರೂ ಕಾಲೇಜು ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿ ನಿಲ್ಲಿಸಲಾಗಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿದ್ದಾರೆ.ಮೃತರನ್ನು ನೀಲೇಶ್ವರದ ಪಡಿಂಜಾಟಂ ಕೊಳುವಲ್ ನಿವಾಸಿಗಳಾದ ಅನುರಾಗ್ (22) ಮತ್ತು ಆನಂದಕೃಷ್ಣನ್ (24) ಎಂದು ಗುರುತಿಸಲಾಗಿದೆ.

. Ad Widget . Ad Widget . Ad Widget

ಕಾಞಂಗಾಡ್‌ನ ತಿರುವತ್ತ್ ಅರಯಿಲ್ ಭಗವತಿ ದೇವಸ್ಥಾನದಲ್ಲಿ ನಡೆಯುತ್ತಿದ್ದ ತೆಯ್ಯಂ ನೋಡಲು ಇಬ್ಬರೂ ನೀಲೇಶ್ವರದಿಂದ ಬೈಕ್‌ನಲ್ಲಿ ತೆರಳುತ್ತಿದ್ದರು. ರಾತ್ರಿ 9 ಗಂಟೆಯ ಸುಮಾರಿಗೆ ಪಡನ್ನಕ್ಕಾಡ್‌ನಲ್ಲಿ ಈ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ತಕ್ಷಣವೇ ಕಾಞಂಗಾಡ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

. Ad Widget .

ಮೃತದೇಹಗಳನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.ಮೃತ ಅನುರಾಗ್ ಅವರು ನೀಲೇಶ್ವರದ ವಸಂತ್ ಹೋಟೆಲ್‌ನಲ್ಲಿ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದರು.

Leave a Comment

Your email address will not be published. Required fields are marked *