NDTV ಆ್ಯಂಕರ್ ರವೀಶ್ ಕುಮಾರ್ ದಿಢೀರ್ ರಾಜೀನಾಮೆ

ಸಮಗ್ರ ನ್ಯೂಸ್: ಎನ್‌ಡಿಟಿವಿಯ ಜನಪ್ರಿಯ ನಿರೂಪಕ ರವೀಶ್ ಕುಮಾರ್ ಅವರು ವಾಹಿನಿಯ ಹಿರಿಯ ಕಾರ್ಯನಿರ್ವಾಹಕ ಸಂಪಾದಕ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ.

. Ad Widget . Ad Widget

ಎನ್‌ಡಿಟಿವಿ ಅಧ್ಯಕ್ಷೆ ಸುಪರ್ಣಾ ಸಿಂಗ್ ಅವರು ರವೀಶ್ ಅವರ ರಾಜೀನಾಮೆಯ ಕುರಿತು ಚಾನೆಲ್‌ನ ಉದ್ಯೋಗಿಗಳಿಗೆ ಇಮೇಲ್ ಮೂಲಕ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

. Ad Widget . . Ad Widget . Ad Widget

ಗೌತಮ್ ಅದಾನಿ ಚಾನೆಲ್‌ ಅಧೀನವನ್ನು ವಹಿಸಿಕೊಂಡ ನಂತರ ಚಾನೆಲ್‌ನ ಸಂಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ಅವರ ರಾಜೀನಾಮೆಯ ಬೆನ್ನಲ್ಲೇ ರವೀಶ್ ಅವರೂ ರಾಜೀನಾಮೆ ನೀಡಿದ್ದಾರೆ.

ತನ್ನ ದಿಟ್ಟ ಪತ್ರಿಕೋದ್ಯಮದ ಕಾರಣ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದರು. 2019 ರಲ್ಲಿ ರಾಮೊನ್ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದ ಐದನೇ ಭಾರತೀಯ ಪತ್ರಕರ್ತ ಎಂಬ ಹೆಗ್ಗಳಿಕೆಗೆ ಕಾರಣರಾಗಿದ್ದರು.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಯನ್ನು ರವೀಶ್ ಬಹಿರಂಗವಾಗಿ ಟೀಕಿಸುತ್ತಿದ್ದ ರವೀಶ್ ಧೋರಣೆಯನ್ನು ಪ್ರಶ್ನಿಸದ, ಅವಕಾಶವಾದವನ್ನು ತನ್ನದಾಗಿಸಿಕೊಳ್ಳುತ್ತಿದ್ದ ಮಾಧ್ಯಮಗಳನ್ನು ‘ಗೋಡಿ ಮೀಡಿಯಾ’ ಎಂಬ ಪದದ ಮೂಲಕ ಜನರೆಡೆಯಲ್ಲಿ ಪರಿಚಯಗೊಳಿಸಿದ ಕೀರ್ತಿ ಇವರದ್ದು.

Leave a Comment

Your email address will not be published. Required fields are marked *