ರಾಮಮಂದಿರದಿಂದ 2.7 ಕೋಟಿ ಹುಂಡಿ ಹಣ ಕಳವು| ಎಸ್ಐಟಿ‌ ತನಿಖೆಯಿಂದ ಕೃತ್ಯ ಬಯಲು

ಸಮಗ್ರ ನ್ಯೂಸ್: ಅಯೋಧ್ಯೆಯ ಶ್ರೀ ರಾಮಮಂದಿರದ ಹುಂಡಿಯಿಂದ ಸುಮಾರು 2.7 ಕೋಟಿ ರೂಪಾಯಿ ದೇಣಿಗೆ ಹಣ ದುರುಪಯೋಗ ಅಥವಾ ಕಳ್ಳತನವಾಗಿರುವುದು ವಿಶೇಷ ತನಿಖಾ ತಂಡದ ತನಿಖೆಯಿಂದ ಹೊರಬಂದಿದೆ. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸೋಮವಾರ ಈ ಕುರಿತು ಸುಪ್ರೀಂ ಕೋರ್ಟ್‌ಗೆ ಅಧಿಕೃತ ಮಾಹಿತಿ ನೀಡಿದ್ದಾರೆ.

. Ad Widget . Ad Widget . Ad Widget

ವಿಚಾರಣಾ ನ್ಯಾಯಾಲಯಕ್ಕೆ ಎಸ್‌ಐಟಿ ಸಲ್ಲಿಸಿರುವ ಚಾರ್ಜ್ ಶೀಟ್ ಆಧಾರದ ಮೇಲೆ ವಾದ ಮಂಡಿಸಿದ ಅವರು, ಕಳ್ಳತನ ಮಾಡಿದ ಈ ಹಣದಿಂದ ಆರೋಪಿಗಳು ಬೇರೆ ಬೇರೆ ಕಡೆ ಆಸ್ತಿ ಮತ್ತು ಚಿನ್ನ ಖರೀದಿಸಿ ಹೂಡಿಕೆ ಮಾಡಿದ್ದಾರೆ ಹಾಗೂ ಬ್ಯಾಂಕ್‌ಗಳಲ್ಲಿ ಹಣ ಠೇವಣಿ ಇಟ್ಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ವಿವರಿಸಿದರು.

. Ad Widget .

ಆದಾಗ್ಯೂ, ಭಕ್ತರು ಮಂದಿರಕ್ಕೆ ಸಮರ್ಪಿಸಿದ ಐತಿಹಾಸಿಕ ಕಲಾಕೃತಿಗಳು, ಅಪರೂಪದ ವಸ್ತುಗಳು ಹಾಗೂ ಇಂತಹ ಪ್ರಮುಖ ಕಾಣಿಕೆಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂದು ಎಸ್‌ಐಟಿ ನ್ಯಾಯಪೀಠಕ್ಕೆ ಸ್ಪಷ್ಟಪಡಿಸಿದೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದ್ದು, ದುರುಪಯೋಗಪಡಿಸಿಕೊಂಡ ಹಣ ಹಾಗೂ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಗಳು ವೇಗವಾಗಿ ನಡೆಯುತ್ತಿವೆ.

Leave a Comment

Your email address will not be published. Required fields are marked *