2 ದಿನ ಮುಕ್ಕಿ ತಿಂದು, 3ನೇ ದಿನ ಅದೇ ಕೋಣೆಯಲ್ಲಿ ಕೊಂದ ಹಂತಕ?! ಬೆಚ್ಚಿ ಬೀಳಿಸುತ್ತೆ ‘ಮಾಯಾ’ ಮರ್ಡರ್ ಮಿಸ್ಟರಿ!
ಸಮಗ್ರ ನ್ಯೂಸ್:ಇಂದಿರಾನಗರದ ಅಪಾರ್ಟ್‌ಮೆಂಟ್‌ನಲ್ಲಿ ಅಸ್ಸಾಂ ಮೂಲದ ಯುವತಿಯನ್ನು ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಿನ್ನೆ ಬೆಳಕಿಗೆ ಬಂದಿತ್ತು.ಇಂದಿರಾನಗರ ಠಾಣೆ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಲಾಗಿದ್ದು, ಕೊಲೆ ಬಳಿಕ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೆಪ್ ಆಗಿದ್ದಾರೆ. ಯುವತಿಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಕ್ಯಾಬ್ ಬುಕ್ ಮಾಡಿಕೊಂಡು ಹೋಗಿದ್ದು, ಕ್ಯಾಬ್ ಬಂದು ಹೋಗಿರುವ ಮಾರ್ಗದ ಸಿಸಿಟಿವಿಗಳನ್ನು ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಆರೋಪಿ ಕ್ಯಾಬ್‌ನಿಂದ ಎಲ್ಲಿ ಇಳಿದಿದ್ದ ಅನ್ನೋದನ್ನ ಪತ್ತೆ










