ಸಮಗ್ರ ನ್ಯೂಸ್: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೂಲಕ ರಾಜ್ಯ ಸರ್ಕಾರವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಅವಕಾಶ ಕಲ್ಪಿಸಿದೆ. ಒಟ್ಟು 560 ಭೂಮಾಪಕರ (Surveyor) ಹಾಗೂ 67 ಗ್ರಾಮ ಆಡಳಿತಾಧಿಕಾರಿ (VAO) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)ವು ಕಲ್ಯಾಣ ಕರ್ನಾಟಕ ಪ್ರದೇಶದ 67 ಗ್ರಾಮ ಆಡಳಿತ ಅಧಿಕಾರಿ (ಗ್ರಾಮ ಲೆಕ್ಕಿಗ) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಜುಲೈ 11, 2026ರಿಂದ ಜುಲೈ 30, 2026ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ
ಒಟ್ಟು 67 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಜಿಲ್ಲಾವಾರು ಹಂಚಿಕೆ ಹೀಗಿದೆ.
ಕಲಬುರಗಿ – 40 ಹುದ್ದೆಗಳು
ಬೀದರ್ – 17 ಹುದ್ದೆಗಳು
ರಾಯಚೂರು – 10 ಹುದ್ದೆಗಳು
ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಪಿಯುಸಿ (PUC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಸಿಬಿಎಸ್‌ಇ (CBSE), ಐಸಿಎಸ್‌ಇ (ICSE), ಇತರ ರಾಜ್ಯ ಮಂಡಳಿಗಳ 12ನೇ ತರಗತಿ ಹಾಗೂ ಸರ್ಕಾರ ಮಾನ್ಯತೆ ನೀಡಿರುವ ಎನ್‌ಐಒಎಸ್ (NIOS) ಮತ್ತು ಐಟಿಐ (ITI) ಅರ್ಹತೆಗಳನ್ನು ಪರಿಗಣಿಸಲಾಗುತ್ತದೆ. ಜೊತೆಗೆ ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯ.
ವಯೋಮಿತಿ
ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳು ಆಗಿರಬೇಕು. ಸರ್ಕಾರದ ಆದೇಶದಂತೆ ಗರಿಷ್ಠ ವಯೋಮಿತಿಯಲ್ಲಿ ಒಮ್ಮೆ ಮಾತ್ರ 5 ವರ್ಷಗಳ ಸಡಿಲಿಕೆ ನೀಡಲಾಗಿದೆ.
ಸಾಮಾನ್ಯ ವರ್ಗ (GM): 40 ವರ್ಷ
ಪ್ರವರ್ಗ 2A, 2B, 3A, 3B: 43 ವರ್ಷ
ಎಸ್‌ಸಿ, ಎಸ್‌ಟಿ ಹಾಗೂ ಪ್ರವರ್ಗ-1: 45 ವರ್ಷ
ಇದಲ್ಲದೆ ಮಾಜಿ ಸೈನಿಕರು, ವಿಧವೆಯರು, ಅಂಗವಿಕಲರು ಹಾಗೂ ಇತರ ಮೀಸಲು ವರ್ಗಗಳಿಗೆ ನಿಯಮಾನುಸಾರ ಹೆಚ್ಚುವರಿ ವಯೋಮಿತಿ ಸಡಿಲಿಕೆ ಲಭ್ಯವಿದೆ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆ ಆರಂಭ: 11 ಜುಲೈ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಜುಲೈ 2026
ಶುಲ್ಕ ಪಾವತಿಗೆ ಕೊನೆಯ ದಿನಾಂಕ: 31 ಜುಲೈ 2026
ಅರ್ಜಿ ಸಲ್ಲಿಕೆ ವಿಧಾನ ಮತ್ತು ಶುಲ್ಕ
ಅಭ್ಯರ್ಥಿಗಳು KEA ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಒಬ್ಬ ಅಭ್ಯರ್ಥಿ ಕೇವಲ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
ಅರ್ಜಿ ಶುಲ್ಕ:
ಸಾಮಾನ್ಯ ಹಾಗೂ 2A/2B/3A/3B: ₹750 (₹500 ಅರ್ಜಿ ಶುಲ್ಕ + ₹250 ಸಂಸ್ಕರಣಾ ಶುಲ್ಕ)
ಎಸ್‌ಸಿ/ಎಸ್‌ಟಿ/ಪ್ರವರ್ಗ-1/ಮಾಜಿ ಸೈನಿಕ/ತೃತೀಯ ಲಿಂಗಿಗಳು: ₹500 (₹250 ಅರ್ಜಿ ಶುಲ್ಕ + ₹250 ಸಂಸ್ಕರಣಾ ಶುಲ್ಕ)
ಅಂಗವಿಕಲ ಅಭ್ಯರ್ಥಿಗಳು: ₹250 (ಸಂಸ್ಕರಣಾ ಶುಲ್ಕ ಮಾತ್ರ)
ಪರೀಕ್ಷೆಯ ಮಾದರಿ
ಕನ್ನಡ ಭಾಷಾ ಪರೀಕ್ಷೆಯ ದಿನಾಂಕವನ್ನು ನಂತರ ಪ್ರಕಟಿಸಲಾಗುತ್ತದೆ.
ಸ್ಪರ್ಧಾತ್ಮಕ ಪರೀಕ್ಷೆ:25 ಅಕ್ಟೋಬರ್ 2026
ಪತ್ರಿಕೆ-1 (100 ಅಂಕಗಳು | 2 ಗಂಟೆ):
ಸಾಮಾನ್ಯ ಜ್ಞಾನ
ಪ್ರಚಲಿತ ಘಟನೆಗಳು
ಭಾರತೀಯ ಸಂವಿಧಾನ
ಕರ್ನಾಟಕದ ಇತಿಹಾಸ ಮತ್ತು ಭೂಗೋಳ
ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರೆ ವಿಷಯಗಳು
ಪತ್ರಿಕೆ-2 (100 ಅಂಕಗಳು | 2 ಗಂಟೆ):
ಸಾಮಾನ್ಯ ಕನ್ನಡ
ಸಾಮಾನ್ಯ ಇಂಗ್ಲಿಷ್
ಕಂಪ್ಯೂಟರ್ ಜ್ಞಾನ
ಪ್ರತಿ ತಪ್ಪು ಉತ್ತರಕ್ಕೆ 0.25 ನಕಾರಾತ್ಮಕ ಅಂಕ ಕಡಿತಗೊಳ್ಳಲಿದೆ. ಅರ್ಹತೆ ಪಡೆಯಲು ಕನಿಷ್ಠ 35% ಅಂಕಗಳು ಕಡ್ಡಾಯ.
ನೇಮಕಾತಿ ಪ್ರಕ್ರಿಯೆ
ಈ ಹುದ್ದೆಗಳು ಜಿಲ್ಲಾ ಮಟ್ಟದ ನೇಮಕಾತಿ ಆಗಿದ್ದು, KEA ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಸಂಬಂಧಿತ ಜಿಲ್ಲಾಧಿಕಾರಿಗಳು ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡು ವರ್ಷಗಳ ಪ್ರೊಬೇಷನರಿ ಅವಧಿ ಇರಲಿದೆ.
ವೇತನ
ಆಯ್ಕೆಯಾದ ಗ್ರಾಮ ಆಡಳಿತ ಅಧಿಕಾರಿಗಳಿಗೆ ₹34,100 ರಿಂದ ₹67,600 ವೇತನ ಶ್ರೇಣಿ ನಿಗದಿಪಡಿಸಲಾಗಿದೆ.
ಉದ್ಯೋಗಾಕಾಂಕ್ಷಿಗಳಿಗೆ ಇದು ಉತ್ತಮ ಅವಕಾಶವಾಗಿದ್ದು, ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.








