ಕ್ರೈಂ

ಕಡಬ: ವಿದ್ಯಾರ್ಥಿಗಳ ಮೇಲೇರಿ ಹೋದ ಉಪನ್ಯಾಸಕ, ಓರ್ವ ಆಸ್ಪತ್ರೆಗೆ ದಾಖಲು

ಕಡಬ: ಉಪನ್ಯಾಸಕನೋರ್ವ ವಿದ್ಯಾರ್ಥಿಗಳಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ದಕ್ಷಿಣ ಕನ್ನಡದ ಕಡಬ ರಾಮಕುಂಜದ ಖಾಸಗಿ ಕಾಲೇಜಿನಲ್ಲಿ ನಡೆದಿದ್ದು ಓರ್ವ ವಿದ್ಯಾರ್ಥಿ ಗಾಯಗೊಂಡು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾಗಿದ್ದಾನೆ.ಈ ಘಟನೆ ನ.20ರಂದು ನಡೆದಿದೆ. ವಿದ್ಯಾರ್ಥಿಗಳಿಬ್ಬರು ಕಾಲೇಜಿಗೆ ಬೈಕ್ ತಂದ ವಿಚಾರದಲ್ಲಿ ಉಪನ್ಯಾಸಕನೊಬ್ಬರು ಪ್ರಶ್ನಿಸಿ ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.ಓರ್ವ ವಿದ್ಯಾರ್ಥಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ರಾಮಕುಂಜದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕವನ್ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಯಾಗಿದ್ದಾನೆ. ವಿದ್ಯಾರ್ಥಿಯ ಹೇಳಿಕೆ ಪ್ರಕಾರ ಎಂಟು ವಿದ್ಯಾರ್ಥಿಗಳಿಗೆ ಹೊಡೆದಿರುವುದಾಗಿ ಆರೋಪಿಸಲಾಗಿದೆ. […]

ಕಡಬ: ವಿದ್ಯಾರ್ಥಿಗಳ ಮೇಲೇರಿ ಹೋದ ಉಪನ್ಯಾಸಕ, ಓರ್ವ ಆಸ್ಪತ್ರೆಗೆ ದಾಖಲು Read More »

ಕಾಸರಗೋಡು: ಪೊಲೀಸ್ ಸಿಬ್ಬಂದಿಯ ಕೊಲೆ; ಆರೋಪಿ ಪತಿ ಪರಾರಿ

ಸಮಗ್ರ ನ್ಯೂಸ್: ಕಣ್ಣೂರಿನ ಕರಿವೆಳ್ಳೂರಿನಲ್ಲಿ ಗುರುವಾರ ಸಂಜೆ ಕಾಸರಗೋಡು ಚಂದೇರ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ದಿವ್ಯಶ್ರೀ ಕೊಲೆಯಾದವರು. ಅವರ ಪತಿ ರಾಜೇಶ್ ಕೃತ್ಯ ನಡೆಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗಂಭೀರ ಗಾಯಗೊಂಡ ದಿವ್ಯಶ್ರೀ ಅವರನ್ನು ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.ದಿವ್ಯಶ್ರೀ ಹಾಗೂ ರಾಜೇಶ್ ನಡುವೆ ದಾಂಪತ್ಯ ಸಮಸ್ಯೆ ಉಂಟಾಗಿತ್ತು . ಇದರಿಂದ ಕೆಲ ದಿನಗಳಿಂದ ಇಬ್ಬರೂ ಬೇರ್ಪಟ್ಟು ವಾಸವಾಗಿದ್ದರು ಎನ್ನಲಾಗಿದೆ. ಸಂಜೆಯ ವೇಳೆ ತಲವಾರು ಹಿಡಿದುಕೊಂಡು ಬಂದ

ಕಾಸರಗೋಡು: ಪೊಲೀಸ್ ಸಿಬ್ಬಂದಿಯ ಕೊಲೆ; ಆರೋಪಿ ಪತಿ ಪರಾರಿ Read More »

ರೇಣುಕಾಸ್ವಾಮಿ ಕೊಲೆ ಪ್ರಕರಣ| ನಟ ದರ್ಶನ್ ಗೆ ಬಿಗ್ ಶಾಕ್ ನೀಡಿದ ಪೊಲೀಸರು| ಸಿಕ್ಕೇ ಬಿಡ್ತು ಮಹಾ ಸಾಕ್ಷ್ಯ!!

ಸಮಗ್ರ ನ್ಯೂಸ್: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಚಾರ್ಜ್ ಶೀಟ್ ನಲ್ಲಿ ನಟ ದರ್ಶನ್ ಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು, ಕೊಲೆ ನಡೆದ ಸ್ಥಳದ ಫೋಟೋವನ್ನು ಪೊಲೀಸರು ಇದೀಗ ರಿಕವರಿ ಮಾಡಿದ್ದಾರೆ. ಆರೋಪಿ ಪುನೀತ್ ಮೊಬೈಲ್ ನಲ್ಲಿದ್ದ ಎರಡು ಫೋಟೋಗಳನ್ನು ಇದೀಗ ಪೊಲೀಸರು ರಿಕವರಿ ಮಾಡಿದ್ದಾರೆ. ರೇಣುಕಾ ಸ್ವಾಮಿ ಕೊಲೆ ನಡೆದ ಶೆಡ್ ನಲ್ಲಿ ದರ್ಶನ್ ನಿಂತಿರುವ ಫೋಟೋ ಇದಾಗಿದ್ದು, ಬ್ಲಾಕ್ ಜೀನ್ಸ್ ಪ್ಯಾಂಟ್ ಹಾಗೂ ಬ್ಲೂ ಟಿ-ಶರ್ಟ್ ಧರಿಸಿ ದರ್ಶನ್ ನಿಂತಿದ್ದರು. ಎಲ್ಲಾ

ರೇಣುಕಾಸ್ವಾಮಿ ಕೊಲೆ ಪ್ರಕರಣ| ನಟ ದರ್ಶನ್ ಗೆ ಬಿಗ್ ಶಾಕ್ ನೀಡಿದ ಪೊಲೀಸರು| ಸಿಕ್ಕೇ ಬಿಡ್ತು ಮಹಾ ಸಾಕ್ಷ್ಯ!! Read More »

ಉಡುಪಿ: ನಿಶ್ಚಿತಾರ್ಥದ ನಂತರ ಆತ್ಮಹತ್ಯೆಗೆ ಶರಣಾದ ಯುವತಿ

ಸಮಗ್ರ ನ್ಯೂಸ್: ಉಡುಪಿ ತಾಲೂಕಿನ ದೆಂದೂರುಕಟ್ಟೆಯ ಇಂದ್ರಾಳಿ ನಿವಾಸಿ ವಿವಾಹ ನಿಶ್ಚಿತಾರ್ಥ ಆಗಿದ್ದ ಕೀರ್ತನಾ ಶೆಟ್ಟಿ ಮನೆಯ ಕೋಣೆಯಲ್ಲಿ ಕುತ್ತಿಗೆಗೆ ಶಾಲು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಕೂಡಲೇ ಮನೆಯವರು ನೋಡಿ ಆಕೆಯನ್ನು ಕಾಪಾಡಿದ್ದರು. ಆದರೆ, ನೇಣು ಬಿಗಿದುಕೊಂಡು ಅರೆ ಪ್ರಜ್ಞಾವಸ್ಥೆ ಸ್ಥಿತಿ ತಲುಪಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇದೀಗ ಚಿಕಿತ್ಸೆ ಫಲಿಸದೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನ.17ರಂದು ನಡೆದಿದೆ. ಇನ್ನು ಮೃತ ಯುವತಿ ಕೀರ್ತನಾ ಮಣಿಪುರದ ಬೆಳ್ಳೆ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಮೂರು ವರ್ಷಗಳಿಂದ

ಉಡುಪಿ: ನಿಶ್ಚಿತಾರ್ಥದ ನಂತರ ಆತ್ಮಹತ್ಯೆಗೆ ಶರಣಾದ ಯುವತಿ Read More »

ಮಲೆಯಾಳಂ ಚಿತ್ರರಂಗದ ಖ್ಯಾತನಟ ಮೇಘನಾಥನ್ ಇನ್ನಿಲ್ಲ

ಸಮಗ್ರ ನ್ಯೂಸ್: ಖಳನಾಯಕನ ಪಾತ್ರಗಳಿಗೆ ಹೆಸರುವಾಸಿಯಾದ ಮಲಯಾಳಂ ಚಲನಚಿತ್ರ ಮತ್ತು ಸೀರಿಯಲ್ ನಟ ಮೇಘನಾಥನ್ ಗುರುವಾರ(ನ.21) ಮುಂಜಾನೆ ನಿಧನರಾದರು ಎಂದು ಮೂಲಗಳು ತಿಳಿಸಿವೆ. ಮೇಘನಾಥನ್ ಅವರಿಗೆ 60 ವರ್ಷ ವಯಸ್ಸಾಗಿತ್ತು.ಉಸಿರಾಟ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮುಂಜಾನೆ 2 ಗಂಟೆಗೆ ನಿಧನರಾಗಿದ್ದಾರೆ. ಮೇಘನಾಥನ್ ಖ್ಯಾತ ನಟ ಬಾಲನ್ ಕೆ ನಾಯರ್ ಅವರ ಪುತ್ರರಾಗಿದ್ದಾರೆ. ಅವರು ಚಮಯಂ, ಚೆಂಕೋಲ್ ಮತ್ತು ಈ ಪುಜಯುಮ್ ಕಡನ್ನು ಮುಂತಾದ ಗಮನಾರ್ಹ ಕೃತಿಗಳನ್ನು ಒಳಗೊಂಡಂತೆ 50 ಕ್ಕೂ ಹೆಚ್ಚು ಚಿತ್ರಗಳಲ್ಲಿ

ಮಲೆಯಾಳಂ ಚಿತ್ರರಂಗದ ಖ್ಯಾತನಟ ಮೇಘನಾಥನ್ ಇನ್ನಿಲ್ಲ Read More »

ಹಿರಿಯ ಪತ್ರಕರ್ತ, ಚಿಂತಕ ವಿ.ಟಿ ರಾಜಶೇಖರ್ ಇನ್ನಿಲ್ಲ

ಸಮಗ್ರ‌ ನ್ಯೂಸ್: ಹಿರಿಯ ಪತ್ರಕರ್ತ, ಚಿಂತಕ , ದಲಿತ್ ವಾಯ್ಸ್ ನಿಯತಕಾಲಿಕದ ಸ್ಥಾಪಕ ಸಂಪಾದಕ ವಿ ಟಿ ರಾಜಶೇಖರ್ (93) ಅವರು ನ.20ರ ಬುಧವಾರ ಬೆಳಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಜುಲೈ 17, 1932 ರಂದು ಉಡುಪಿ ಜಿಲ್ಲೆಯ ಓಂತಿಬೆಟ್ಟುವಿನಲ್ಲಿ ಜನಿಸಿದ ವಿಟಿಆರ್ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಅವರು ಬಳಿಕ ದಲಿತರ ಧ್ವನಿಯಾಗಿ ಕೆಲಸ ಮಾಡಲು 1981 ರಲ್ಲಿ ದಲಿತ್ ವಾಯ್ಸ್ ನಿಯತಕಾಲಿಕ ಪ್ರಾರಂಭಿಸಿದ್ದರು. ದೇಶಾದ್ಯಂತ

ಹಿರಿಯ ಪತ್ರಕರ್ತ, ಚಿಂತಕ ವಿ.ಟಿ ರಾಜಶೇಖರ್ ಇನ್ನಿಲ್ಲ Read More »

ಭಿಕ್ಷಾಟನೆಗೆ ಬಂದ ಫಕೀರನಿಂದ 75 ವರ್ಷದ ವೃದ್ದೆಯ ಮೇಲೆ ಅತ್ಯಾಚಾರ

ಸಮಗ್ರ ನ್ಯೂಸ್:ಭಿಕ್ಷಾಟನೆಗೆ ಬಂದ ಫಕೀರನೊಬ್ಬ 75 ವರ್ಷದ ವೃದ್ದೆಯ ಮೇಲೆ ಅತ್ಯಾಚಾರವೆಸಗಿ ವಿಕೃತಿ ಮೆರೆದಿದ್ದಾನೆ.ಈ ಘಟನೆ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದ್ರಪಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮಕ್ಕೆ ಭಿಕ್ಷಾಟನೆ ಮಾಡಲು ಬಂದ ಫಕೀರ ಮನೆಯಲ್ಲಿ ಯಾರೂ ಇಲ್ಲದಾಗ ಅಜ್ಜಿ ಒಬ್ಬಂಟಿಯಾಗಿದ್ದ ಮನೆಯೊಳಗೆ ನುಗ್ಗಿ ಅಜ್ಜಿಯ ಮೇಲೆ ರೇಪ್ ಮಾಡಿ ಬಂದಿದ್ದಾನೆ. ಅತ್ಯಾಚಾರ ಮಾಡಿದವನನ್ನು ಇದೇ ಗ್ರಾಮದ ಪಕ್ಕದ ಐನೊಳ್ಳಿ ಗ್ರಾಮದ ಫಕೀರ ತಯ್ಯಬ್ ಎಂದು ಗುರುತಿಸಲಾಗಿದೆ. ಫಕೀರ ವೇಷಧಾರಿ ತಯ್ಯಬ್ ಬಿಕ್ಷಾಟನೆ ಮಾಡುತ್ತಾ ಊರೂರು

ಭಿಕ್ಷಾಟನೆಗೆ ಬಂದ ಫಕೀರನಿಂದ 75 ವರ್ಷದ ವೃದ್ದೆಯ ಮೇಲೆ ಅತ್ಯಾಚಾರ Read More »

ಪುತ್ತೂರು: ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಲೈಂಗಿಕ ಕಿರುಕುಳ| ಗುಲ್ಬರ್ಗಾ‌ ಮೂಲದ ಯುವಕ ಅರೆಸ್ಟ್

ಸಮಗ್ರ ನ್ಯೂಸ್: ಪಿ.ಜಿ.ಯೊಂದರಲ್ಲಿದ್ದ ಕಾಸರಗೋಡು ಮೂಲದ ಅಪ್ರಾಪ್ತೆಯನ್ನು ಪುಸಲಾಯಿಸಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಗುಲ್ಬರ್ಗಾ ಮೂಲದ ಯುವಕನ ವಿರುದ್ದ ಪೋಕ್ಸೋ ಪ್ರಕರಣ ದಾಖಲಾಗಿದೆ. ಪುತ್ತೂರಿನ ಪ್ರತಿಷ್ಠಿತ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಪಿ.ಜಿ.ಯಿಂದ ಕಾಲೇಜಿಗೆ ಹೋಗುತ್ತಿದ್ದರು. ನ.16ರಿಂದ ಆಕೆ ಪಿ.ಜಿ.ಯಿಂದ ನಾಪತ್ತೆಯಾಗಿದ್ದರು. ಈ ಕುರಿತು ವಿದ್ಯಾರ್ಥಿನಿಯ ತಾಯಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಪ್ರಾಪ್ತ ವಿದ್ಯಾರ್ಥಿನಿಯನ್ನು ಗುಲ್ಬರ್ಗಾದ ಕಾರ್ತಿಕ್ ಎಂಬಾತ ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ

ಪುತ್ತೂರು: ಅಪ್ರಾಪ್ತ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಲೈಂಗಿಕ ಕಿರುಕುಳ| ಗುಲ್ಬರ್ಗಾ‌ ಮೂಲದ ಯುವಕ ಅರೆಸ್ಟ್ Read More »

ಸರಣಿ ಅಪಘಾತ ಇಬ್ಬರು ಮೃತ್ಯು ಹಲವು ಮಂದಿಗೆ ಗಾಯ

ಸಮಗ್ರ ನ್ಯೂಸ್:ಇಂದುಮುಂಜಾನೆ ನೋಯ್ದಾ ಮತ್ತು ಪಶ್ಚಿಮ ಉತ್ತರ ಪ್ರದೇಶದ ಇತರ ಭಾಗಗಳಲ್ಲಿ ದಟ್ಟ ಮಂಜಿನಿಂದ ಆವರಿಸಿದ ವಾತಾವರಣದಿಂದಾಗಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಬೈಕ್‌ ಸವಾರರು ಮೃತಪಟ್ಟಿದ್ದು ಹದಿನೈದಕ್ಕೂ ಹೆಚ್ಚು ಗಾಯಗೊಂಡಿರುವ ಘಟನೆ ಮಂಗಳವಾರ (ನ.19) ಬೆಳಿಗ್ಗೆ ಸಂಭವಿಸಿದೆ. ಕಡಿಮೆ ಗೋಚರತೆಯಿಂದಾಗಿ ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದಿದೆ ಇದೇ ವೇಳೆ ಪಾಣಿಪತ್‌ನಿಂದ ಮಥುರಾಗೆ ತೆರಳುತ್ತಿದ್ದ ಬಸ್ ಟ್ರಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಪರಿಣಾಮ ಬಸ್ಸಿನಲ್ಲಿದ್ದ ಸುಮಾರು 12 ಮಂದಿ ಪ್ರಯಾಣಿಕರು

ಸರಣಿ ಅಪಘಾತ ಇಬ್ಬರು ಮೃತ್ಯು ಹಲವು ಮಂದಿಗೆ ಗಾಯ Read More »

ಬೆಳ್ತಂಗಡಿ: ಪತ್ರಕರ್ತ ಭುವನೇಂದ್ರ ಪುದುವೆಟ್ಟು ಇನ್ನಿಲ್ಲ

ಸಮಗ್ರ ನ್ಯೂಸ್: ವಿಜಯವಾಣಿ, ಕರಾವಳಿ ಅಲೆ, ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದ ಭುವನೇಂದ್ರ ಪುದುವೆಟ್ಟು(42ವ)ರವರು ನ.19ರಂದು ನಿಧನರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ನಿವಾಸಿ ನಾರಾಯಣ ಪೂಜಾರಿ ಮತ್ತು ಮೋಹಿನಿ ದಂಪತಿಯ ಪುತ್ರರಾದ ಭುವನೇಂದ್ರ ಪುದುವೆಟ್ಟು ಅವರಿಗೆ ಎರಡು ದಿನಗಳ ಹಿಂದೆ ತೀವ್ರ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಂಡಿದ್ದರಿಂದ ಅವರನ್ನು ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರೋಗ್ಯ ತಪಾಸಣೆ ವೇಳೆ ಪಿತ್ತಕೋಶದಲ್ಲಿ ಕಲ್ಲು ಇರುವುದರಿಂದ ಅಕ್ಯುಟ್ ಪ್ರಾಂಕಿಯಾಸಿಸ್ ಇರುವುದು ಗೊತ್ತಾಗಿತ್ತು. ತಕ್ಷಣ ಅವರನ್ನು ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆಗೆ

ಬೆಳ್ತಂಗಡಿ: ಪತ್ರಕರ್ತ ಭುವನೇಂದ್ರ ಪುದುವೆಟ್ಟು ಇನ್ನಿಲ್ಲ Read More »