ಕ್ರೈಂ

ಅಪಘಾತ: ಅಯೋದ್ಯೆಗೆ ತೆರಳಿದ್ದ 7 ಮಂದಿ ಸಾವು

ಸಮಗ್ರ ನ್ಯೂಸ್: ಟ್ರಕ್ ಮತ್ತು ಟೆಂಪೋ ಟ್ರಾವೆಲರ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ 7 ಮಂದಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಉತ್ತರ ಪ್ರದೇಶದ ಬಹ್ರೈಚ್- ಲಖಿಂಪುರ ಖೇರಿ ಹೆದ್ದಾರಿಯಲ್ಲಿ ನಡೆದಿದೆ. ಅಪಘಾತದಲ್ಲಿ ಐವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದು, ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 12 ಮಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ವಾಹನದೊಳಗೆ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆದಿದ್ದಾರೆ. ಇನ್ನೂ ಗಾಯಗೊಂಡವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮೃತದೇಹವನ್ನು ವಶಕ್ಕೆ ಪಡೆದು

ಅಪಘಾತ: ಅಯೋದ್ಯೆಗೆ ತೆರಳಿದ್ದ 7 ಮಂದಿ ಸಾವು Read More »

ಟ್ರಾಕ್ಟರ್ ಗೆ ಬೈಕ್ ಡಿಕ್ಕಿ| ಸವಾರರಿಬ್ಬರು ಸ್ಥಳದಲ್ಲೇ ಸಾವು

ಸಮಗ್ರ ನ್ಯೂಸ್: ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಲವನಹಳ್ಳಿ ಸೂಲಕುಂಟೆ ರಸ್ತೆಯ ಪಟಾಲಮ್ಮ ದೇವಾಲಯದ ಸಮೀಪ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಸೂಲಕುಂಟೆ ರಸ್ತೆಯಲ್ಲಿ ಅಪಘಾತ ಸಂಭವಿಸಿದ್ದು, ಅರೆಬೊಮ್ಮನಹಳ್ಳಿಯ ಸೂರ್ಯ(19) ಮತ್ತು ಮಹೇಶ್(20) ಮೃತಪಟ್ಟವರು ಎಂದು ಹೇಳಲಾಗಿದೆ. ಸೂಲಕುಂಟೆ ಗ್ರಾಮದ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾತ್ರಿವೇಳೆಯಲ್ಲಿ ಹೆಡ್ಲೈಟ್ ಇಲ್ಲದೆ ಟ್ರ್ಯಾಕ್ಟರ್ ಚಾಲಕ ಬರುತ್ತಿದ್ದ. ಟ್ರ್ಯಾಕ್ಟರ್ ಚಾಲಕನ ಅಜಾಗರೂಕತೆಯಿಂದ

ಟ್ರಾಕ್ಟರ್ ಗೆ ಬೈಕ್ ಡಿಕ್ಕಿ| ಸವಾರರಿಬ್ಬರು ಸ್ಥಳದಲ್ಲೇ ಸಾವು Read More »

ಬೆಳ್ತಂಗಡಿ: ಮುಸ್ಲಿಂ ಯುವಕನ ಮೇಲೆ ಹಲ್ಲೆ; ಕೊಕ್ಕಡ ಉದ್ವಿಗ್ನ

ಸಮಗ್ರ ನ್ಯೂಸ್: ಅನ್ಯಧರ್ಮೀಯ ಯುವಕನೋರ್ವ ಹಿಂದೂ ಯುವತಿಯನ್ನು ವಿವಾಹವಾದ ವಿಚಾರಕ್ಕೆ ಸಂಬಂಧಿಸಿದಂತೆ ಆತನ ಸಹೋದರನಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ನಡೆದಿದೆ. ಘಟನೆಯಲ್ಲಿ ಇತ್ತಂಡಗಳ ಮಧ್ಯೆ ಹೊಡೆದಾಟ ನಡೆದಿದೆ ಎನ್ನಲಾಗಿದ್ದು ಫೊಲೀಸರ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಗೊಂಡಿದ್ದು, ಸದ್ಯ ಕೊಕ್ಕಡ ಬೂದಿ ಮುಚ್ಚಿದ ಕೆಂಡದಂತಿದೆ. ಕೊಕ್ಕಡದ ಮಲ್ಲಿಗೆ ಮಜಲಿನ ಯುವಕನೋರ್ವ ಬೆಂಗಳೂರು ಮೂಲದ ಹಿಂದೂ ಯುವತಿಯನ್ನು ಮದುವೆಯಾಗಿದ್ದು, ಹಿಂದೂ ಸಂಘಟನೆಗಳ ಮುಖಂಡರು ಲವ್ ಜಿಹಾದ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ

ಬೆಳ್ತಂಗಡಿ: ಮುಸ್ಲಿಂ ಯುವಕನ ಮೇಲೆ ಹಲ್ಲೆ; ಕೊಕ್ಕಡ ಉದ್ವಿಗ್ನ Read More »

ಮುಂಬೈ ಡ್ರಗ್ಸ್​ ಪ್ರಕರಣ| ಆರ್ಯನ್ ಖಾನ್ ಗೆ ಕ್ಲೀನ್ ಚಿಟ್

ಸಮಗ್ರ ನ್ಯೂಸ್: ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್​ಗೆ ಡ್ರಗ್ಸ್ ಪ್ರಕರಣದಲ್ಲಿ ಎನ್​ಸಿಬಿ ಕ್ಲೀನ್ ಚಿಟ್ ನೀಡಿದೆ ಎಂದು ಮೂಲಗಳು ತಿಳಿಸಿವೆ. ಡ್ರಗ್ಸ್​ ಪಾರ್ಟಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ವಿರುದ್ಧದ ಆರೋಪ ಪಟ್ಟಿಯನ್ನು ಇಂದು ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಅದನ್ನು ಸೆಷನ್ಸ್ ನ್ಯಾಯಾಲಯದಲ್ಲಿ ಇಲಾಖೆಯ ಮುಂದೆ ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ಆರ್ಯನ್ ಖಾನ್​ಗೆ ಎನ್​ಸಿಬಿಯಿಂದ ಕ್ಲೀನ್ ಚಿಟ್ ಸಿಕ್ಕಿದೆ. ಮುಂಬೈ

ಮುಂಬೈ ಡ್ರಗ್ಸ್​ ಪ್ರಕರಣ| ಆರ್ಯನ್ ಖಾನ್ ಗೆ ಕ್ಲೀನ್ ಚಿಟ್ Read More »

ಕುಂದಾಪುರ: ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ? ಈ ಸ್ಟೋರಿ ಓದಿ…

ಸಮಗ್ರ ನ್ಯೂಸ್: ಉದ್ಯಮಿ, ಕುಂದಾಪುರ ಚಿನ್ಮಯಿ ಆಸ್ಪತ್ರೆ ಮಾಲಕ ಕಟ್ಟೆ ಗೋಪಾಲಕೃಷ್ಣ ರಾವ್‌ (ಕಟ್ಟೆ ಭೋಜಣ್ಣ) (79) ಅವರು ಹಂಗಳೂರು ಗ್ರಾಮದ ಅಂಕದಕಟ್ಟೆಯಲ್ಲಿರುವ ಉದ್ಯಮಿ ಮೊಳಹಳ್ಳಿ ಗಣೇಶ್‌ ಶೆಟ್ಟಿ ಅವರ ಮನೆಯ ಸಿಟೌಟ್‌ನಲ್ಲಿ ಪಿಸ್ತೂಲಿನಲ್ಲಿ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗ್ಗೆ 6.20ರ ಸುಮಾರಿಗೆ ಸಂಭವಿಸಿದೆ. ಕುಂದಾಪುರದಲ್ಲಿ ಆರಂಭವಾದ ಗೋಲ್ಡ್‌ ಜುವೆಲ್ಲರಿಯಲ್ಲಿ ಗಣೇಶ್‌ ಶೆಟ್ಟಿ ತಟಸ್ಥ ಪಾಲುದಾರರಾಗಿದ್ದು, ಈ ಗೋಲ್ಡ್‌ ಜುವೆಲ್ಲರಿಯ ಪಾಲುದಾರರು ಆಫ್ರಿಕಾದ ಚಿನ್ನದ ಗಣಿಯಲ್ಲಿ ಹಣ ವಿನಿಯೋಗಿಸಿದ್ದರು. ಆರಂಭದಲ್ಲಿ ಇದು ಉತ್ತಮ ಲಾಭ

ಕುಂದಾಪುರ: ಉದ್ಯಮಿ ಕಟ್ಟೆ ಭೋಜಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದೇಕೆ? ಈ ಸ್ಟೋರಿ ಓದಿ… Read More »

ಎಸಿಬಿ ಬಲೆಗೆ ಬಿದ್ದ ಸರ್ವೇಯರ್

ಸಮಗ್ರ ನ್ಯೂಸ್: ರಾಯಚೂರು ತಹಶೀಲ್ದಾರ್ ಕಚೇರಿಯ ಎಡಿಎಲ್ ಆರ್ ಕಚೇರಿಯ ಮೇಲೆ ಎಸಿಬಿ ದಾಳಿ ನಡೆಸಿದ್ದು ಸರ್ವೆಯರ್ ಎನ್ ಮಹೇಶ ಎಸಿಬಿ ಬಲೆಗೆ ಬಿದ್ದಿದ್ದಾರೆ. ವೆಂಕಟೇಶ ವರಲು ಎಂಬುವವರು ಎಸಿಬಿಗೆ ದೂರು ನೀಡಿದ್ದರು. ಈ ಆಧಾರದ ಮೇಲೆ ದಾಳಿ ನಡೆಸಿದ ಎಸಿಬಿ, ಜಮೀನು‌ ಪೋಡಿ ಮಾಡಲು 35 ಸಾವಿರ ಲಂಚ ಕೇಳಿದ್ದ ಮಹೇಶ10 ಸಾವಿರ ಮುಂಗಡ ಪಡೆಯುವ ವೇಳೆ ಎಸಿಬಿ ದಾಳಿ ನಡೆಸಿದೆ.

ಎಸಿಬಿ ಬಲೆಗೆ ಬಿದ್ದ ಸರ್ವೇಯರ್ Read More »

ಸಲೂನ್ ನಲ್ಲಿ ಹೇರ್ ಕಲರಿಂಗ್ ಮಾಡಿಸಲು ಬಂದಾತನ ಇರಿದು ಕೊಂದ ಕ್ಷೌರಿಕ!!

ಸಮಗ್ರ ನ್ಯೂಸ್: ಸಲೂನಿನಲ್ಲಿ ತಲೆಗೆ ಬಣ್ಣ ಹಚ್ಚಲು ರೇಟ್ ವಿಚಾರಕ್ಕೆ ವಾಗ್ವಾದ ನಡೆದಿದ್ದು ಕತ್ತರಿಯಿಂದ ಇರಿದು ಗ್ರಾಹಕನನ್ನು ಕ್ಷೌರಿಕ ಬರ್ಬರವಾಗಿ ಕೊಂದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಅಸಂಗಿ ಗ್ರಾಮದ ಸಲೂನ್ನಲ್ಲಿ ನಡೆದಿದೆ. ಸಾಗರ ಅವಟಿ(22) ಕೊಲೆಯಾದ ಗ್ರಾಹಕ. ಪ್ರಜ್ವಲ್ ಜೆಂಟ್ಸ್ ಪಾರ್ಲರ್ನ ಸದಾಶಿವ ನಾವಿ ಎಂಬ ಕ್ಷೌರಿಕ ಈ ಕೃತ್ಯ ಎಸಗಿದ್ದಾನೆ. ನಿನ್ನೆ ಸಂಜೆ ಸಾಗರ ಎಂಬ ಯುವಕ ತಲೆಗೆ ಕಲರ್ ಮಾಡಿಸಲು ಸಲೂನ್ಗೆ ಬಂದಿದ್ದ. ಈ ವೇಳೆ ಸಲೂನ್ ಮಾಲೀಕ ಲಕ್ಷ್ಮಣ ಕಲರ್

ಸಲೂನ್ ನಲ್ಲಿ ಹೇರ್ ಕಲರಿಂಗ್ ಮಾಡಿಸಲು ಬಂದಾತನ ಇರಿದು ಕೊಂದ ಕ್ಷೌರಿಕ!! Read More »

ಸಂಸದೆ ನವನೀತ್ ರಾಣಾಗೆ ಕೊಲೆ ಬೆದರಿಕೆ| ಮಹಾರಾಷ್ಟ್ರಕ್ಕೆ ಕಾಲಿಟ್ಟರೆ ನಿಮ್ಮ ಕಥೆ ಮುಗೀತು!

ಸಮಗ್ರ ನ್ಯೂಸ್: ಹನುಮಾನ್ ಚಾಲೀಸಾ ಪ್ರಕರಣದಲ್ಲಿ ಜೈಲಿಗೆ ಹೋಗಿ ಈಗ ಜಾಮೀನಿನ ಮೇಲೆ ಹೊರಗಡೆ ಇರುವ ಸಂಸದೆ, ನಟಿ ನವನೀತ್ ರಾಣಾ ಅವರಿಗೆ ಕೊಲೆ ಬೆದರಿಕೆ ಕರೆಗಳು ಬಂದಿದ್ದು, ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಿವಾಸ ಮಾತ್ರೋಶ್ರೀ ಹೊರಗೆ ಹನುಮಾನ್ ಚಾಲೀಸಾ ಪಠಣೆ ಮಾಡಿರುವುದಕ್ಕೆ ಸಂಬಂಧಿಸಿದಂತೆ ದೇಶದ್ರೋಹದ ಆರೋಪದ ಮೇಲೆ ಶಿಕ್ಷೆಗೆ ಒಳಗಾಗಿರುವ ಸಂಸದೆಗೆ ಇದೀಗ ಬೆದರಿಕೆ ಕರೆಗಳು ಬಂದಿವೆ. ತನ್ನ ವೈಯಕ್ತಿಕ ಮೊಬೈಲ್ ನಂಬರ್​ಗೆ 11 ಜೀವ ಬೆದರಿಕೆ ಕರೆಗಳು

ಸಂಸದೆ ನವನೀತ್ ರಾಣಾಗೆ ಕೊಲೆ ಬೆದರಿಕೆ| ಮಹಾರಾಷ್ಟ್ರಕ್ಕೆ ಕಾಲಿಟ್ಟರೆ ನಿಮ್ಮ ಕಥೆ ಮುಗೀತು! Read More »

ರಾಷ್ಟ್ರಕವಿ ಕುವೆಂಪು ಗೆ ಅಪಮಾನ| ರೋಹಿತ್ ಚಕ್ರತೀರ್ಥ, ಲಕ್ಷಣ ಆಕಾಶೆ ವಿರುದ್ದ ದೂರು

ಸಮಗ್ರ ನ್ಯೂಸ್: ರಾಷ್ಟ್ರಕವಿ ಕುವೆಂಪುರವರಿಗೆ ಅಪಮಾನ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ರೋಹಿತ್ ಚಕ್ರತೀರ್ಥ ಹಾಗೂ ಲಕ್ಷ್ಮಣ್ ಆಕಾಶೆ ವಿರುದ್ಧ ವಕೀಲರ ನಿಯೋಗ ದೂರು ದಾಖಲಿಸಿದೆ. ಈ ಸಂಬಂಧ ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ ರಂಗನಾಥ್, ಹಿರಿಯ ವಕೀಲರಾದ ಬಾಲನ್, ಕೆ.ಎನ್ ಜಗದೀಶ್ ಕುಮಾರ್, ಪ್ರದೀಪ್, ಸೂರ್ಯ ಮುಕುಂದರಾಜ್ ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಪ್ರತಾಪ್ ರೆಡ್ಡಿ ಅವರಿಗೆ ದೂರು ಸಲ್ಲಿಸಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಅವರನ್ನು ಅವಹೇಳನ ಮಾಡಿರುವ ಇವರು ನಾಡಗೀತೆಗೂ

ರಾಷ್ಟ್ರಕವಿ ಕುವೆಂಪು ಗೆ ಅಪಮಾನ| ರೋಹಿತ್ ಚಕ್ರತೀರ್ಥ, ಲಕ್ಷಣ ಆಕಾಶೆ ವಿರುದ್ದ ದೂರು Read More »

ಬೆಳ್ತಂಗಡಿ: ರಿಕ್ಷಾ ಬಾಡಿಗೆಗೆ ಬಂದವಳನ್ನೇ ಮದುವೆಯಾದ ಮುಸ್ಲಿಂ ಆಟೋವಾಲ

ಸಮಗ್ರ ನ್ಯೂಸ್: ಬೆಂಗಳೂರಿನ ಯುವತಿಯನ್ನು ಬೆಳ್ತಂಗಡಿಯ ಆಟೋ ಡ್ರೈವರ್‌ ಲವ್ ಜಿಹಾದ್ ನಿಂದ ಬಲೆಗೆ ಕೆಡವಿ ಮದುವೆಯಾದ ಘಟನೆ ನಡೆದಿದ್ದು, ಇದೀಗ ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಕಾರಣವಾಗಿದೆ. ಬೆಂಗಳೂರಿನ ಬಸಮ್ಮ ಬೆಳ್ತಂಗಡಿ ತಾಲೂಕಿನ ಸೌತಡ್ಕ ದೇವಸ್ಥಾನಕ್ಕೆ ಆಗಮಿಸಿದ್ದ ವೇಳೆ ಕೊಕ್ಕಡದಲ್ಲಿ ಆಟೋ ಓಡಿಸುತ್ತಿದ್ದ ಮುಸ್ಲಿಂ ಯುವಕ ಸಮೀರ್‌ ನ ರಿಕ್ಷಾವನ್ನು ಬಾಡಿಗೆಗೆ ಪಡೆದಿದ್ದಳು ಎನ್ನಲಾಗಿದೆ. ನಂತರದ ದಿನಗಳಲ್ಲಿ ಇವರಿಬ್ಬರ ಪರಿಚಯ ಪ್ರೇಮವಾಗಿ ತಿರುಗಿದೆ. ಪ್ರೇಮ ಮದುವೆಯವರೆಗೆ ತಲುಪಿ ಇದೇ ತಿಂಗಳು ಮದುವೆಯಾಗಿದ್ದಾರೆ. ಇದರ ಪ್ರತಿಯೊಂದು ದಾಖಲೆಗಳು ಸಾಮಾಜಿಕ

ಬೆಳ್ತಂಗಡಿ: ರಿಕ್ಷಾ ಬಾಡಿಗೆಗೆ ಬಂದವಳನ್ನೇ ಮದುವೆಯಾದ ಮುಸ್ಲಿಂ ಆಟೋವಾಲ Read More »