ಕ್ರೈಂ

ಮಂಗಳೂರು: ಹಾಸ್ಟೆಲ್ ನಿಂದ‌ ಪರಾರಿಯಾದ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ

ಸಮಗ್ರ ನ್ಯೂಸ್ : ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್‌ನಿಂದ ಪರಾರಿಯಾಗಿದ್ದ ಮೂವರು ವಿದ್ಯಾರ್ಥಿನಿಯರು ಶುಕ್ರವಾರ ಚೆನ್ನೈನಲ್ಲಿ ಪತ್ತೆಯಾಗಿದ್ದಾರೆ. ಮಂಗಳೂರಿನ ಖಾಸಗಿ ಕಾಲೇಜಿನ ಹಾಸ್ಟೆಲ್ ನಿಂದ ಬುಧವಾರ ಮುಂಜಾನೆ ಸುಮಾರು 3.30 ಕ್ಕೆಬೆಂಗಳೂರಿನ ಇಬ್ಬರು ಹಾಗೂ ಚಿಕ್ಕಮಗಳೂರಿನ ಓರ್ವ ವಿದ್ಯಾರ್ಥಿನಿ ನಿಗೂಢವಾಗಿ ಕಾಣೆಯಾಗಿದ್ದರು. ಘಟನೆ ಸಂಬಂಧ ಕಂಕನಾಡಿಯ ನಗರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಚೆನ್ನೈನಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿದ ಪೊಲೀಸರು ಬಳಿಕ ಸ್ವೀಕಾರ ಕೇಂದ್ರಕ್ಕೆ ಒಪ್ಪಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಂಗಳೂರು: ಹಾಸ್ಟೆಲ್ ನಿಂದ‌ ಪರಾರಿಯಾದ ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆ Read More »

ಐಸಿಸ್ ಗೆ ಭಯೋತ್ಪಾದಕರನ್ನು ನೇಮಿಸುವ ಪಿಎಫ್ಐ ಬ್ಯಾನ್ ಮಾಡಿ| ಪ್ರಧಾನಿಗೆ ಪತ್ರ ಬರೆದ ಮುಸ್ಲಿಂ ಸಂಘಟನೆಗಳು

ಸಮಗ್ರ ನ್ಯೂಸ್: ಐಸಿಸ್ ಗೆ ಭಯೋತ್ಪಾದಕರನ್ನು ನೇಮಿಸುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ತ್ವರಿತ ಕ್ರಮವನ್ನು ತೆಗೆದುಕೊಳ್ಳಲು ಪ್ರಧಾನಿ ಮೋದಿಗೆ ಮುಸ್ಲಿಂ ಸಂಘಟನೆಗಳು ಪತ್ರ ಬರೆದಿವೆ. ಈ ಸಂಘಟನೆಗಳಲ್ಲಿ ಸೂಫಿ ಖಾನ್ಖಾಹ್ ಅಸೋಸಿಯೇಷನ್ ಮತ್ತು ಆಲ್ ಇಂಡಿಯಾ ಪಾಸ್ಮಾಂಡಾ ಮುಸ್ಲಿಂ ಮಹಾಜ್ ಕೂಡ ಸೇರಿವೆ. ಸೂಫಿ ಖಾನಖಾ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಕೌಸರ್ ಹಸನ್ ಮಜಿದಿ ಪಿಎಫ್‌ಐ ನಿಷೇಧಿಸುವಂತೆ ಕೋರಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ವರದಿಗಳ ಪ್ರಕಾರ, ಸೂಫಿ ಖಾನ್ಖಾಹ್ ರಾಷ್ಟ್ರೀಯ ಅಧ್ಯಕ್ಷ ಕೌಸರ್

ಐಸಿಸ್ ಗೆ ಭಯೋತ್ಪಾದಕರನ್ನು ನೇಮಿಸುವ ಪಿಎಫ್ಐ ಬ್ಯಾನ್ ಮಾಡಿ| ಪ್ರಧಾನಿಗೆ ಪತ್ರ ಬರೆದ ಮುಸ್ಲಿಂ ಸಂಘಟನೆಗಳು Read More »

ಕಾಬೂಲ್ ಮಸೀದಿ ಬಳಿ ಭಾರೀ ಸ್ಪೋಟ; 10ಕ್ಕೂ ಹೆಚ್ಚು ಮಂದಿ ಸಾವು

ಸಮಗ್ರ ನ್ಯೂಸ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ಮಸೀದಿಯೊಂದರ ಬಳಿ ಸ್ಫೋಟ ಸಂಭವಿಸಿದ್ದು, ನಾಲ್ವರು ಸಾವನ್ನಪ್ಪಿದ್ದು, 10ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇನ್ನು ಹಲವರು ಮೃತಪಟ್ಟಿರುವ ಶಂಕೆ ವ್ಯಕ್ತವಾಗುತ್ತಿದೆ. ನಿಖರವಾದ ಸಂಖ್ಯೆ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಸೀದಿ ಬಳಿಯ ಮುಖ್ಯ ರಸ್ತೆಯಲ್ಲಿ ಸ್ಫೋಟ ಸಂಭವಿಸಿದೆ. ಪೊಲೀಸ್ ತಂಡಗಳು ಸ್ಥಳದಲ್ಲಿದ್ದು, ತನಿಖೆ ನಡೆಯುತ್ತಿವೆ ಎಂದು ಆಂತರಿಕ ಸಚಿವ ವಕ್ತಾರ ಅಬ್ದುಲ್ ನಫಿ ಟಾಕೋರ್ ಹೇಳಿದರು. ಪ್ರಾರ್ಥನೆಯ ನಂತರ ಜನರು ಮಸೀದಿಯಿಂದ ಹೊರ ಬರುತ್ತಿದ್ದ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂದು

ಕಾಬೂಲ್ ಮಸೀದಿ ಬಳಿ ಭಾರೀ ಸ್ಪೋಟ; 10ಕ್ಕೂ ಹೆಚ್ಚು ಮಂದಿ ಸಾವು Read More »

ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಆರೋಪ| ಮುರುಘಾ ಶ್ರೀ ಜಾಮೀನು ಅರ್ಜಿ ವಜಾ; ಜೈಲುವಾಸ ಕಂಟಿನ್ಯೂ…

ಸಮಗ್ರ ನ್ಯೂಸ್: ಹಾಸ್ಟೆಲ್ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಆರೋಪದಡಿ ಜೈಲು ಪಾಲಾಗಿರುವ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದೆ. ಇದರಿಂದ ಮುರಾಘ ಶ್ರೀಗಳ ಜೈಲುವಾಸ ಮತ್ತೆ ಮುಂದುವರೆದಿದೆ. ಚಿತ್ರದುರ್ಗ 2ನೇ ಅಪರ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಮುರುಘಾ ಶ್ರೀಗಳ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಸೆಪ್ಟೆಂಬರ್ 27ರವರೆಗೆ ನ್ಯಾಯಾಂಗ ಬಂಧನದಲ್ಲಿರುವ ಮುರುಘಾ ಶ್ರೀಗಳು ಸದ್ಯ ಶಿವಮೊಗ್ಗದ ಮೆಗ್ಗಾನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೆಪ್ಟೆಂಬರ್ 19ಕ್ಕೆ ಮುರುಘಾ ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ

ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಆರೋಪ| ಮುರುಘಾ ಶ್ರೀ ಜಾಮೀನು ಅರ್ಜಿ ವಜಾ; ಜೈಲುವಾಸ ಕಂಟಿನ್ಯೂ… Read More »

ಚಿಕ್ಕಮಂಗಳೂರು: ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ/ಕಿಡಿಗೇಡಿಗಳನ್ನು ತಕ್ಷಣ ಬಂಧಿಸದಿದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ: ಪಿ.ಸುಂದರ ಪಾಟಾಜೆ,

ಸಮಗ್ರ ನ್ಯೂಸ್: ಚಿಕ್ಕಮಂಗಳೂರು ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು ತಪ್ಪಿದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ. ಚಿಕ್ಕಮಂಗಳೂರು ನಗರದ ಹನುಮಂತ ವೃತ್ತದಲ್ಲಿ ಹಾಕಿರುವಂತ ಪ್ಲೆಕ್ಸ್ ನಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಆಗಿರುವುದನ್ನು ಅಂಬೇಡ್ಕರ್ ರಕ್ಷಣಾ ವೇದಿಕೆ ಖಂಡಿಸುತ್ತದೆ. ಆದ್ದರಿಂದ ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದಂತ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು, ಇಲ್ಲದಿದ್ದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ವತಿಯಿಂದ ಉಗ್ರ ಪ್ರತಿಭಟನೆ ಮಾಡುವುದಾಗಿ ಮಾಧ್ಯಮ ಮೂಲಕ ಎಚ್ಚರಿಕೆಯನ್ನು ನೀಡುತ್ತಿದ್ದೇವೆ ಎಂದು ಜಿಲ್ಲಾಧ್ಯಕ್ಷರು

ಚಿಕ್ಕಮಂಗಳೂರು: ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ/ಕಿಡಿಗೇಡಿಗಳನ್ನು ತಕ್ಷಣ ಬಂಧಿಸದಿದಲ್ಲಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ: ಪಿ.ಸುಂದರ ಪಾಟಾಜೆ, Read More »

ಏರ್ ಫೋರ್ಸ್ ತರಬೇತಿ ಗೆ ಬಂದಿದ್ದ ಯುವಕ ಆತ್ಮಹತ್ಯೆಗೆ ಶರಣು

ಸಮಗ್ರ ನ್ಯೂಸ್: ಏರ್‌ಫೋರ್ಸ್‌ ತರಬೇತಿಗೆ ಬಂದಿದ್ದ ಯುವಕ ತನ್ನನ್ನು ಕೈಬಿಟ್ಟದ್ದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗಂಗಮ್ಮನಗುಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆಯೊಂದು ನಡೆದಿದೆ. ಅಂಕಿತ್ ಕುಮಾರ್ (27) ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ ಯುವಕ. ಅಂಕಿತ್‌ ಕುಮಾರ್‌ ದೆಹಲಿ ಮೂಲದವನಾಗಿದ್ದು, ಇಲ್ಲಿಗೆ ಏರ್‌ಫೋರ್ಸ್‌ ತರಬೇತಿಗೆ ಬಂದಿದ್ದ. ಕಾರಣಾಂತರಗಳಿಂದ ತರಬೇತಿಯಿಂದ ಅಂಕಿತ್‌ನನ್ನು ಕೈಬಿಡಲು ನಿರ್ಧರಿಸಲಾಗಿತ್ತು. ಈ ಹಿನ್ನೆಲೆ‌ ಖಿನ್ನತೆಗೊಳಗಾದ ಯುವಕ ನೇಣಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಆದರೆ ಅಂಕಿತ್ ಸಾವಿನ ಕುರಿತು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಕೊಲೆಯೆಂದು ಆರೋಪಿಸಿ

ಏರ್ ಫೋರ್ಸ್ ತರಬೇತಿ ಗೆ ಬಂದಿದ್ದ ಯುವಕ ಆತ್ಮಹತ್ಯೆಗೆ ಶರಣು Read More »

ಮದುವೆ ಆಗಿ ಒಂದು ವರ್ಷಕ್ಕೆ ಕೈಕೊಟ್ಟ ಪತಿ| ದಿಕ್ಕೆಟ್ಟ ಪತ್ನಿಯಿಂದ ಪತಿ ಸೇರಿ 16 ಮಂದಿ ವಿರುದ್ದ ದೂರು

ಸಮಗ್ರ ನ್ಯೂಸ್: ಪ್ರೀತಿಸಿ ವಿವಾಹವಾದ ಒಂದೇ ವರ್ಷಕ್ಕೆ ಸಂಸಾರದಲ್ಲಿ ಬಿರುಕು ಬಿಟ್ಟಿದ್ದು,‌‌ಪತ್ನಿಗೆ ಪತಿ ಕೈಕೊಟ್ಟಿರುವ ಘಟನೆ ಮೈಸೂರು‌ ಜಿಲ್ಲೆಯ ಹುಣಸೂರಿನಿಂದ ವರದಿಯಾಗಿದೆ. ಹೆತ್ತವರು ಹಾಗೂ ಸಂಬಂಧಿಕರ ಮಾತು ಕೇಳಿ ಪತಿ ಕೈಕೊಟ್ಟಿದ್ದು, ಜಾತಿ ನಿಂದನೆ ಮಾಡಿ ಅಪಪ್ರಚಾರ ಮಾಡಿ ಕೊಲೆ ಬೆದರಿಕೆ ಹಾಕಿ ಪತ್ನಿಯನ್ನ ದೂರ ಮಾಡಿದ ಹಿನ್ನಲೆ ವಂಚನೆಗೆ ಒಳಗಾದ ವಿವಾಹಿತೆ ನ್ಯಾಯಕ್ಕಾಗಿ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ.ಗಂಡ ಸೇರಿದಂತೆ ಒಂದೇ ಕುಟುಂಬದ 16 ಮಂದಿ ಮೇಲೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ

ಮದುವೆ ಆಗಿ ಒಂದು ವರ್ಷಕ್ಕೆ ಕೈಕೊಟ್ಟ ಪತಿ| ದಿಕ್ಕೆಟ್ಟ ಪತ್ನಿಯಿಂದ ಪತಿ ಸೇರಿ 16 ಮಂದಿ ವಿರುದ್ದ ದೂರು Read More »

ತನ್ನ ಪತಿಯನ್ನು ಹೋಟೆಲ್ ಕೋಣೆಯಲ್ಲಿ ಮಹಿಳೆಯೊಂದಿಗೆ ಅಶ್ಲೀಲ ಭಂಗಿಯಲ್ಲಿ ಕಂಡ ಪತ್ನಿ| ಮುಂದೇನಾಯಿತು ವೀಡಿಯೊ ನೋಡಿ..!

ದೆಹಲಿ: ತನ್ನ ಪತಿ ಹೋಟೆಲ್ ಕೋಣೆಯೊಂದರಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಅಶ್ಲೀಲ ಭಂಗಿಯಲ್ಲಿರುವುದನ್ನು ಕಂಡ ಪತ್ನಿ ಪಾದರಕ್ಷೆಯಿಂದ ಪತಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಆಗ್ರಾದ ದೆಹಲಿ ಗೇಟ್ ಸಮೀಪ ನಡೆದಿರುವುದಾಗಿ ವರದಿ ತಿಳಿಸಿದೆ. ತಂದೆಗೆ ಚಪ್ಪಲಿಯಿಂದ ಹೊಡೆಯುತ್ತಿರುವ ದೃಶ್ಯವನ್ನು ಮಗಳು ಸೆರೆಹಿಡಿದಿದ್ದು,ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದಾಗಿ ವರದಿ ವಿವರಿಸಿದೆ. ಮಹಿಳೆಯನ್ನು ನೀಲಂ ಎಂದು ಗುರುತಿಸಲಾಗಿದ್ದು, ಪತಿ ದಿನೇಶ್ ಗೋಪಾಲ್ ಎಂಬುದಾಗಿ ವರದಿ ತಿಳಿಸಿದೆ. ತನ್ನ ಪತಿ ದೀರ್ಘಕಾಲದಿಂದಲೂ ಇದೇ ರೀತಿ ವರ್ತಿಸುತ್ತಿರುವುದಾಗಿ ನೀಲಂ ಸುದ್ದಿಗಾರರ ಜತೆ ಮಾತನಾಡುತ್ತ

ತನ್ನ ಪತಿಯನ್ನು ಹೋಟೆಲ್ ಕೋಣೆಯಲ್ಲಿ ಮಹಿಳೆಯೊಂದಿಗೆ ಅಶ್ಲೀಲ ಭಂಗಿಯಲ್ಲಿ ಕಂಡ ಪತ್ನಿ| ಮುಂದೇನಾಯಿತು ವೀಡಿಯೊ ನೋಡಿ..! Read More »

ಬಂಟ್ವಾಳ: ನಾವೂರಲ್ಲಿ ಶಂಕಿತ ಉಗ್ರರ ಮಹಜರು-ಸದನದಲ್ಲಿ ರಾಜೇಶ್ ನಾಯ್ಕ್ ಪ್ರಸ್ತಾಪ

ಸಮಗ್ರ ನ್ಯೂಸ್: ಶಾಸಕ ರಾಜೇಶ್ ನಾಯ್ಕ್ ಅವರು ಅಧಿವೇಶನದಲ್ಲಿ ನಾವೂರ ದಲ್ಲಿ ಶಿವಮೊಗ್ಗ ದ ಆರೋಪಿಯನ್ನು ಮಹಜರು ಮಾಡಿದ ವಿಚಾರವಾಗಿ ಶೂನ್ಯ ವೇಳೆಯಲ್ಲಿ ಪ್ರಶ್ನೆ ಎತ್ತಿದ್ದಾರೆ. ಶೂನ್ಯ ವೇಳೆಯಲ್ಲಿ ವಿಚಾರ ಪ್ರಸ್ತಾಪಿಸಿದ ಅವರು, ಈ ಪ್ರಕರಣಕ್ಕೆ ಆತನಿಗೆ ಸ್ಥಳೀಯರು ಯಾರು ಸಹಕಾರ ನೀಡಿದ್ದಾರೆ ಎಂಬುವುದನ್ನು ಸಮರ್ಪಕ ಮಾಹಿತಿ ವಿಚಾರಣೆ ನಡೆಸಿ ಬಹಿರಂಗಗೊಳಿಸಬೇಕು. ಮತ್ತು ಆರೋಪಿಗಳಿಗೆ ಸ್ಥಳಾವಕಾಶ ನೀಡಿದ್ದಾರೆಯೇ ಎಂಬುದರ ಕುರಿತು ಕೂಲಂಕಷವಾಗಿ ಪರಿಶೀಲಿಸಿ ತನಿಖೆ ನಡೆಸುವಂತೆ ಒತ್ತಾಯ ಸದನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮನವಿ ಮಾಡಿದ್ದಾರೆ.

ಬಂಟ್ವಾಳ: ನಾವೂರಲ್ಲಿ ಶಂಕಿತ ಉಗ್ರರ ಮಹಜರು-ಸದನದಲ್ಲಿ ರಾಜೇಶ್ ನಾಯ್ಕ್ ಪ್ರಸ್ತಾಪ Read More »

ರಾಜ್ಯದಲ್ಲಿ ಕಟ್ಟೆಚ್ಚರವಹಿಸಿ, ಸಂಘಟನೆಗಳ ಮುಖಂಡರು ಎಚ್ಚರದಿಂದಿರಿ| ಅಹಿತಕರ ಘಟನೆ ಸಾಧ್ಯತೆ ಹಿನ್ನಲೆ ಪೊಲೀಸರಿಂದ ಹೈ ಅಲರ್ಟ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳ ಕಚೇರಿಗಳ ಮೇಲೆ ಎನ್‌ಐಎ ಹಾಗೂ ಪೊಲೀಸರ ದಾಳಿ ನಡೆದ ಬಳಿಕ ಎಲ್ಲ ಕಡೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗಾಗಿ ಕಟ್ಟೆಚ್ಚರ ವಹಿಸುವಂತೆ ಎಲ್ಲಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮೈಸೂರು, ಮಂಗಳೂರು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ನಗರಗಳ ಪೊಲೀಸ್‌ ಕಮೀಷನರ್‌ಗಳು, ಎಲ್ಲ ಜಿಲ್ಲಾ ಪೊಲೀಸ್‌ ಅಧೀಕ್ಷಕರಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ಹಲವು ಮಹತ್ವದ ಸೂಚನೆಗಳನ್ನು ನೀಡಲಾಗಿದೆ. ರಾಜ್ಯದ

ರಾಜ್ಯದಲ್ಲಿ ಕಟ್ಟೆಚ್ಚರವಹಿಸಿ, ಸಂಘಟನೆಗಳ ಮುಖಂಡರು ಎಚ್ಚರದಿಂದಿರಿ| ಅಹಿತಕರ ಘಟನೆ ಸಾಧ್ಯತೆ ಹಿನ್ನಲೆ ಪೊಲೀಸರಿಂದ ಹೈ ಅಲರ್ಟ್ Read More »