ಕ್ರೈಂ

ತಾಲಿಬಾನ್ ಉಗ್ರರರ ವಶವಾದ ಪಾಕಿಸ್ತಾನದ ಪೊಲೀಸ್ ಠಾಣೆ

ಇಸ್ಲಾಮಾಬಾದ್: ತಾಲಿಬಾನ್ ಉಗ್ರರು ಭಾನುವಾರ ಪಾಕಿಸ್ತಾನದ ವಾಯುವ್ಯ ಪ್ರದೇಶದ ಖೈಬರ್ ಪಖ್ತುಂಖ್ವಾದಲ್ಲಿ ಪೊಲೀಸ್ ಠಾಣೆಯನ್ನು ವಶಪಡಿಸಿಕೊಂಡಿದ್ದಾರೆ. ಇದು ಮಾತ್ರವಲ್ಲದೇ ಹಲವಾರು ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಉಗ್ರರು ಪ್ರದೇಶದ ಬನ್ನು ಕಂಟೋನ್ಮೆಂಟ್ ಅನ್ನು ನುಸುಳಿ, ಜೈಲಿನಲ್ಲಿದ್ದ ಭಯೋತ್ಪಾದಕರನ್ನು ಬಿಡುಗಡೆ ಮಾಡಿದ್ದಾರೆ. ಬಳಿಕ ಕಾಂಪೌಂಡ್‌ನ ಒಂದು ಭಾಗವನ್ನು ವಶಕ್ಕೆ ಪಡೆದು, ಭಯೋತ್ಪಾದನಾ ನಿಗ್ರಹ ಇಲಾಖೆಗೆ ಸೇರಿದ ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳನ್ನಾಗಿ ಇಟ್ಟುಕೊಂಡಿದ್ದಾರೆ ಎಂದು ಪಾಕಿಸ್ತಾನದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಯೋತ್ಪಾದಕರು ಹೊರಗಿನಿಂದ […]

ತಾಲಿಬಾನ್ ಉಗ್ರರರ ವಶವಾದ ಪಾಕಿಸ್ತಾನದ ಪೊಲೀಸ್ ಠಾಣೆ Read More »

ದಟ್ಟ ಮಂಜಿನಿಂದ 22 ವಾಹನಗಳು ಸರಣಿ ಅಪಘಾತ

ಚಂಡೀಗಢ: ದಟ್ಟ ಮಂಜಿನಿಂದಾಗಿ ರಸ್ತೆ ಕಾಣದಂತಾಗಿ 22 ವಾಹನಗಳು ಸರಣಿ ಅಪಘಾತಕ್ಕೀಡಾಗಿರುವ ಘಟನೆ ಹರಿಯಾಣದಿಂದ ವರದಿಯಾಗಿದೆ. ಭಾನುವಾರ ಯಮುನಾ ನಗರದ ಬಳಿ ಅಂಬಲಾ-ಸಹಾರಪುರ ಹೆದ್ದಾರಿಯಲ್ಲಿ ಒಟ್ಟು 22 ವಾಹನಗಳು ಅಪಘಾತಕ್ಕೀಡಾಗಿವೆ. ಘಟಯಲ್ಲಿ 12ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರದೇಶದಲ್ಲಿ ದಟ್ಟವಾದ ಮಂಜು ಕವಿದಿದ್ದ ಕಾರಣ ರಸ್ತೆ ಸ್ಪಷ್ಟವಾಗಿ ಕಾಣಿಸದೇ ಅಪಘಾತಗಳು ಸಂಭವಿಸಿವೆ. ಘಟನೆಯಲ್ಲಿ ಹಲವು ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ತಕ್ಷಣವೇ ಪೊಲೀಸರು ಸ್ಥಳಕ್ಕಾಗಮಿಸಿ ವಾಹನಗಳನ್ನು ತೆರವುಗೊಳಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಟ್ರಾಫಿಕ್ ಎಸ್‌ಹೆಸ್‌ಒ

ದಟ್ಟ ಮಂಜಿನಿಂದ 22 ವಾಹನಗಳು ಸರಣಿ ಅಪಘಾತ Read More »

ನಟ ದರ್ಶನ್ ಗೆ ‘ಪವರ್’ ತೋರಿಸಿದ ಪುನೀತ್ ಅಭಿಮಾನಿಗಳು| ಶೂ ಎಸೆದು ‘ದಾಸ’ನಿಗೆ ಅವಮಾನ!!

ಸಮಗ್ರ ನ್ಯೂಸ್: ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ದರ್ಶನ್ ಅವರು ಪವರ್ ಸ್ಟಾರ್ ಪುನೀತ್ ರಾಜ್‌ ಕುಮಾರ್‌ ವಿರುದ್ಧ ಮಾತನಾಡಿ, ಆರೋಪ ಹಿನ್ನೆಲೆ ನಿನ್ನೆ ತಡರಾತ್ರಿ ವಿಜಯನಗರ ಹೊಸಪೇಟೆಯ ವಾಲ್ಮೀಕಿ ವೃತ್ತದಲ್ಲಿ ನಟ ದರ್ಶನ್ ಮೇಲೆ ಶೂ ಎಸೆದು ಅಪಮಾನ ಮಾಡಿದ್ದಾರೆ. ‘ಕ್ರಾಂತಿ’ ಸಿನಿಮಾದ ಹಾಡು ಬಿಡುಗಡೆ ಸಮಾರಂಭದಲ್ಲಿ ನಟಿ ರಚಿತಾ ರಾಮ್ ಮಾತನಾಡುವಾಗ ಅವರ ಬಳಿ ನಿಂತಿದ್ದ‌ ನಟ ದರ್ಶನ್ ಮೇಲೆ ಜನರ ಗುಂಪಿನಿಂದ ವ್ಯಕ್ತಿಯೊಬ್ಬರು ಅವರ ಮೇಲೆ ಶೂ ಎಸೆದು, ಪೋಸ್ಟರ್ ಹರಿದು ಹಾಕುವ ಮೂಲಕ

ನಟ ದರ್ಶನ್ ಗೆ ‘ಪವರ್’ ತೋರಿಸಿದ ಪುನೀತ್ ಅಭಿಮಾನಿಗಳು| ಶೂ ಎಸೆದು ‘ದಾಸ’ನಿಗೆ ಅವಮಾನ!! Read More »

ಸುಳ್ಯ:ಮತ್ತೆ ಅಕ್ರಮ ಮರಳು ಅಡ್ಡೆಗಳ ಮೇಲೆ ದಿಢೀರ್ ದಾಳಿ| ಸುಮಾರು ನೂರಕ್ಕೂ ಹೆಚ್ಚು ಅನಾಥ ಮರಳು ಲೋಡ್ ಗಳ ವಶ !

ಸಮಗ್ರ ನ್ಯೂಸ್ : ಚುನಾವಣೆ ಸಮೀಪಿಸುತ್ತಿದ್ದಂತೆ ಒಂದಿಲ್ಲಾ ಒಂದು ವಿಚಾರಗಳು ಸುಳ್ಯ ತಾಲೂಕಿನಲ್ಲಿ ಬಹಳ ಸದ್ದು ಮಾಡುತ್ತಿದ್ದು ಇದೀಗ ಒಂದು ವಾರಗಳಿಂದ ನಿರಂತರವಾಗಿ ಅಕ್ರಮಗಳ ವಿರುದ್ದ ಸಮರ ಸಾರಿರುವ ಅಧಿಕಾರಿಗಳು ನಿನ್ನೆ ಧೀಡೀರ್ ಆಗಿ ಮತ್ತೆ ಅಕ್ರಮವಾಗಿ ನೂರು ಲೋಡ್ ಮರಳುಗಳನ್ನು ವಶಪಡಿಸಿಕೊಂಡ ಬಗ್ಗೆ ವರದಿಯಾಗಿದೆ. ಕೆಲ ದಿನಗಳ ಹಿಂದೆ ಒಬ್ಬ ರಾಜಕೀಯ ನಾಯಕರ ಲಾರಿ ಮತ್ತು ಗಣಿಗಾರಿಕೆ ಪ್ರದೇಶಗಳಿಗೆ ದಾಳಿ ನಡೆಸಿ ಸುಮಾರು ಎರಡು ಲಕ್ಷಗಳಷ್ಟು ಬೃಹತ್ ಮೊತ್ತವನ್ನು ಗಣಿ ಇಲಾಖೆ ಪಾವತಿಸಲು ಆದೇಶ ನೀಡಿ

ಸುಳ್ಯ:ಮತ್ತೆ ಅಕ್ರಮ ಮರಳು ಅಡ್ಡೆಗಳ ಮೇಲೆ ದಿಢೀರ್ ದಾಳಿ| ಸುಮಾರು ನೂರಕ್ಕೂ ಹೆಚ್ಚು ಅನಾಥ ಮರಳು ಲೋಡ್ ಗಳ ವಶ ! Read More »

ಉದ್ಘಾಟನೆಗೆ ಮೊದಲೇ ಕುಸಿಯಿತು ಸೇತುವೆ| 13 ಕೋಟಿ ನೀರುಪಾಲು

ಸಮಗ್ರ ನ್ಯೂಸ್: ಗುಜರಾತ್‌ನ ಮೊರ್ಬಿಯಲ್ಲಿ ಉದ್ಘಾಟನೆಯಾದ ಒಂದೇ ವಾರದಲ್ಲಿ ಸೇತುವೆ ಕುಸಿದು 141 ಜನ ಮೃತಪಟ್ಟ ಪ್ರಕರಣ ಜನರ ಮನಸ್ಸಿಂದ ಮರೆಮಾಚುವ ಮುನ್ನವೇ ಬಿಹಾರದಲ್ಲಿ ಉದ್ಘಾಟನೆಗೆ ಮೊದಲೇ ಸೇತುವೆಯೊಂದು ಕುಸಿದಿದೆ. ಬೆಗುಸರಾಯ್‌ನ ಗಂಡಕ್‌ ನದಿಗೆ ಅಡ್ಡಲಾಗಿ 206 ಮೀಟರ್‌ ಉದ್ದದ ಸೇತುವೆಯನ್ನು ಮುಖ್ಯಮಂತ್ರಿ ನಬಾರ್ಡ್‌ ಯೋಜನೆ ಅಡಿಯಲ್ಲಿ 13 ಕೋಟಿ ರೂ. ವ್ಯಯಿಸಿ ನಿರ್ಮಿಸಲಾಗಿತ್ತು. 2016ರಲ್ಲಿ ಆರಂಭವಾದ ಸೇತುವೆ ನಿರ್ಮಾಣ ಕಾಮಗಾರಿಯು 2017ರಲ್ಲಿ ಮುಕ್ತಾಯಗೊಂಡಿತ್ತು. ಆದರೆ, ಇದನ್ನು ಲೋಕಾರ್ಪಣೆ ಮಾಡಿರಲಿಲ್ಲ. ಡಿಸೆಂಬರ್‌ 15ರಂದೇ ಸೇತುವೆಯ ಮುಂಭಾಗದಲ್ಲಿ ಬಿರುಕು

ಉದ್ಘಾಟನೆಗೆ ಮೊದಲೇ ಕುಸಿಯಿತು ಸೇತುವೆ| 13 ಕೋಟಿ ನೀರುಪಾಲು Read More »

ಕೋಳಿ ಕೂಗಿದ್ರೆ ಬೆಳಗಾಗೋದು ಮಾತ್ರವಲ್ಲ, ಪೊಲೀಸ್ ಠಾಣೆಗೂ ಹೋಗ್ಬೇಕಾಗುತ್ತೆ!! ಬೆಂಗಳೂರಿನಲ್ಲೊಂದು ‘ಕೋಳಿಜಗಳ’

ಸಮಗ್ರ ನ್ಯೂಸ್: ಮುಂಜಾನೆ ಕೋಳಿ ಕೂಗಿದ್ರೆ ಮಾತ್ರ ಬೆಳಕಾಯ್ತು ಅಂತ ಎದ್ದೇಳ್ತಿದ್ರು. ಆದರೆ ಈಗ ಕಾಲ ಬದಲಾಗಿದೇ ಕೋಳಿಗಳು ಮುಂಜಾನೆ ಕೂಗೋದಕ್ಕಿಂತ ಕುಕ್ಕರ್​ನಲ್ಲಿ ಕೂಗೋದೇ ಜಾಸ್ತಿ ಆಗಿದೆ. ಆದ್ರೆ ಇದೇ ಕೋಳಿ ಗ್ಯಾಂಗ್​ ಒಂದು ಮುಂಜಾನೆ ಕೊ ಕೊ ಕೋ ಅಂತ ಕೂಗಿ ನಮಗೆ ನಿದ್ದೇ ಮಾಡೋಕೆ ಬಿಡ್ತಿಲ್ಲ ಅಂತ ಬೆಂಗಳೂರಿನ ಜೆ.ಪಿ ನಗರದ 8ನೇ ಹಂತದಲ್ಲಿ ವಾಸವಿರುವ ಕುಟುಂಬವೊಂದು ಪೊಲೀಸರ ಮೊರೆ ಹೋಗಿದೆ. ಕೋಳಿಯ ಕೂಗಿನಿಂದ ನಮಗೆ ಮುಕ್ತಿ ನೀಡಿ ಅಂತ ಮನವಿ ಸಹ ಮಾಡಿದೆ.

ಕೋಳಿ ಕೂಗಿದ್ರೆ ಬೆಳಗಾಗೋದು ಮಾತ್ರವಲ್ಲ, ಪೊಲೀಸ್ ಠಾಣೆಗೂ ಹೋಗ್ಬೇಕಾಗುತ್ತೆ!! ಬೆಂಗಳೂರಿನಲ್ಲೊಂದು ‘ಕೋಳಿಜಗಳ’ Read More »

ಮೈಸೂರು: ಮತ್ತೆ ಅಟ್ಟಹಾಸ ಮೆರೆದ ನರಭಕ್ಷಕ| ರೈತನ ಮೇಲೆ ಏಕಾಏಕಿ ದಾಳಿ

ಸಮಗ್ರ ನ್ಯೂಸ್: ಕೆಲ ದಿನಗಳ ಹಿಂದೆ ಚಿರತೆಯೊಂದು ಯುವತಿಯ ಮೇಲೆ ದಾಳಿ ನಡೆಸಿ ಯುವತಿ ಸಾವನ್ನು ಕೂಡ ಅಪ್ಪಿದ್ದ ಪ್ರಕರಣ ಹಸಿಯಾಗಿರುವಾಗಲೇ, ಮೈಸೂರು ಜಿಲ್ಲೆಯ ಟಿ.ನರಸೀಪುರದಲ್ಲಿ ರೈತನ ಮೇಲೆ ಚಿರತೆ ಅಟ್ಟಹಾಸ ಮೆರೆದಿದೆ. ರೈತ ಚಿರತೆ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ಮೈಸೂರು ಜಿಲ್ಲೆಯ ಟಿ.ನರಸೀಪುರದ ನುಗ್ಗಳ್ಳಿಕೊಪ್ಪಲು ಗ್ರಾಮದ ರೈತ ಸತೀಶ್ ತನ್ನ ಕಬ್ಬಿನ ಗದ್ದೆಗೆ ನೀರು ಹಾಯಿಸಲು ತೆರಳಿದ್ದರು. ಈ ವೇಳೆ ಹಿಂದಿನಿಂದ ಬಂದಿರುವಂತ ಚಿರತೆ ದಿಢೀರ್ ದಾಳಿ ನಡೆಸಿದೆ. ಏಕಾಏಕಿ ಚಿರತೆ ದಾಳಿಯಿಂದಾಗಿ

ಮೈಸೂರು: ಮತ್ತೆ ಅಟ್ಟಹಾಸ ಮೆರೆದ ನರಭಕ್ಷಕ| ರೈತನ ಮೇಲೆ ಏಕಾಏಕಿ ದಾಳಿ Read More »

ಬೆಳ್ತಂಗಡಿ: ದಲಿತನನ್ನು ಬರ್ಭರವಾಗಿ ಕೊಂದು ಬೆತ್ತಲೆಗೊಳಿಸಿ ದೋಚಿದ ದುಷ್ಕರ್ಮಿಗಳು| ನಾಲ್ವರ ವಿರುದ್ಧ ಪ್ರಕರಣ ದಾಖಲು

ಸಮಗ್ರ ನ್ಯೂಸ್: ದಲಿತ ವ್ಯಕ್ತಿಗೆ ಮಾರಣಾಂತಿಕ ಹಲ್ಲೆ ಮಾಡಿದಲ್ಲದೆ , ಹಲ್ಲೆಗೊಳಗಾಗಿ ವಿಶ್ರಾಂತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಕೊಠಡಿಯಲ್ಲಿ ಕೊಲೆ ಮಾಡಿ ಬೆತ್ತಲೆಗೊಳಿಸಿ ನಂತರ ತೋಟದಲ್ಲಿ ಹಾಕಿ ಕೊಲೆಯಾದವನ ಬಳಿ ಇದ್ದ ಹಣವನ್ನು ದೋಚಿ ಪರಾರಿಯಾದ ಘಟನೆ ಶಿಬಾಜೆಯಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎಸಿ ಕುರಿಯನ್ ಮಾಲೀಕತ್ವದ ಸಾರ ಫಾರ್ಮ್ ತೋಟದಲ್ಲಿ ಮೇಲ್ವಿಚಾರನಾಗಿ ಕೆಲಸ ಮಾಡುತ್ತಿದ್ದ ಶ್ರೀಧರ (30) ಎಂಬಾತನನ್ನು ಡಿ17ರಂದು ಸಂಜೆ ತೋಟದ ಕಚೇರಿ ಎದುರು ಇರುವ ಸರ್ವಜನಿಕ ರಸ್ತೆಯ ಬದಿಯಲ್ಲಿ

ಬೆಳ್ತಂಗಡಿ: ದಲಿತನನ್ನು ಬರ್ಭರವಾಗಿ ಕೊಂದು ಬೆತ್ತಲೆಗೊಳಿಸಿ ದೋಚಿದ ದುಷ್ಕರ್ಮಿಗಳು| ನಾಲ್ವರ ವಿರುದ್ಧ ಪ್ರಕರಣ ದಾಖಲು Read More »

ಮಂಗಳೂರು: ಬಾಲಕಿಯೊಂದಿಗೆ ಅಸಭ್ಯ ವರ್ತನೆ| ಯುವಕನ ಕಟ್ಟಿ‌ಹಾಕಿ ಥಳಿಸಿದ ಗ್ರಾಮಸ್ಥರು

ಸಮಗ್ರ‌ ನ್ಯೂಸ್: ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿ, ಆಕೆಗೆ ಕಿರುಕುಳ ನೀಡುತ್ತಿದ್ದ ಯುವಕನನ್ನು ಹಿಡಿದು ಪೋಷಕರು ಹಾಗೂ ಗ್ರಾಮಸ್ಥರು ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕರೆನಾಡು ಪ್ರದೇಶದ ಯುವಕ ಪ್ರತಿದಿನ ಬಾಲಕಿಯೊಬ್ಬಳಿಗೆ ಕಿರುಕುಳ ನೀಡುತ್ತಿದ್ದ. ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬರುತ್ತಿದ್ದ. ಈ ಬಗ್ಗೆ ಬಾಲಕಿ ಪೋಷಕರಿಗೆ ಹೇಳಿದ್ದಳು. ಯುವಕನನ್ನು ಹಿಡಿದ ಪೋಷಕರು ಆತನನ್ನು ಕಂಬಕ್ಕೆ ಕಟ್ಟಿಹಾಕಿ ಮನ ಬಂದಂತೆ ಹೊಡೆದಿದ್ದಾರೆ. ಪೋಷಕರಿಗೆ ಸ್ಥಳೀಯರು ಸಾಥ್ ನೀಡಿದ್ದಾರೆ.

ಮಂಗಳೂರು: ಬಾಲಕಿಯೊಂದಿಗೆ ಅಸಭ್ಯ ವರ್ತನೆ| ಯುವಕನ ಕಟ್ಟಿ‌ಹಾಕಿ ಥಳಿಸಿದ ಗ್ರಾಮಸ್ಥರು Read More »

ಬೆಳ್ತಂಗಡಿ: ಕದ್ದ ಬೈಕ್ ನಲ್ಲಿ ಯುವಜೋಡಿಯ ಜಾಲಿರೈಡ್

ಸಮಗ್ರ ನ್ಯೂಸ್: ಕದ್ದ ಬೈಕೊಂದರಲ್ಲಿ ಯುವ ಜೋಡಿಯೊಂದು ಜಾಲಿರೈಡ್ ನಡೆಸಿರುವ ಘಟನೆ ಬೆಳ್ಯಂಗಡಿ ತಾಲೂಕಿನ ಧರ್ಮಸ್ಥಳದಿಂದ ವರದಿಯಾಗಿದೆ. ಧರ್ಮಸ್ಥಳ ಗ್ರಾಮದ ಖಾಸಗಿ ಬಸ್‌ ನಿಲ್ದಾಣದ ಬಳಿ ಕಾಲೇಜು ವಿದ್ಯಾರ್ಥಿಯೋರ್ವ ನಿಲ್ಲಿಸಿದ್ದ ಬೈಕ್‌ ಕಳ್ಳತನ ಮಾಡಿದ ಘಟನೆ ಡಿ. 16ರಂದು ನಡೆದಿದೆ. ಮೂಡುಬಿದಿರೆ ಖಾಸಗಿ ಕಾಲೇಜೊಂದರ ವಿದ್ಯಾರ್ಥಿ ಶಿಶಿಲ ಗ್ರಾಮದ ಕಂಚಿನಡ್ಕ ನಿವಾಸಿ ಜೀವನ್‌ ಅವರು ಸಂಬಂಧಿಕರ ಮನೆಯಾದ ಧರ್ಮಸ್ಥಳದಿಂದ ಕಾಲೇಜಿಗೆ ತೆರಳುತ್ತಿದ್ದರು. ಡಿ. 16ರಂದು ಬೆಳಗ್ಗೆ ಧರ್ಮಸ್ಥಳದಲ್ಲಿ ತನ್ನ ಬೈಕ್‌ ಅನ್ನು ನಿಲುಗಡೆಗೊಳಿಸಿ ಕಾಲೇಜಿಗೆ ತೆರಳಿದ್ದರು. ಮಧ್ಯಾಹ್ನ

ಬೆಳ್ತಂಗಡಿ: ಕದ್ದ ಬೈಕ್ ನಲ್ಲಿ ಯುವಜೋಡಿಯ ಜಾಲಿರೈಡ್ Read More »