ಕ್ರೈಂ

ಸುರತ್ಕಲ್ ಚೂರಿ ಇರಿತ ಪ್ರಕರಣ| ಗಾಯಾಳು ಚಿಕಿತ್ಸೆ ಫಲಿಸದೆ ಸಾವು

ಸಮಗ್ರ ನ್ಯೂಸ್: ಸುರತ್ಕಲ್ ಸಮೀಪದ ಕೃಷ್ಣ ಪುರ ನೈತಂಗಡಿ ಪ್ರದೇಶದಲ್ಲಿ ಯುವಕನೊಬ್ಬನಿಗೆ ಚೂರಿ ಇರಿತವಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ. ಮೃತ ಯುವಕನನ್ನು ಕೃಷ್ಣಾಪುರ 4ನೇ ಬ್ಲಾಕ್ ನಿವಾಸಿ ಜಲೀಲ್ ಎಂದು ಗುರುತಿಸಲಾಗಿದ್ದು, ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಳಿ ನಡೆಸಿದ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದು, ಚೂರಿ ಇರಿತಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಕಳೆದ ಕೆಲ ತಿಂಗಳುಗಳ ಹಿಂದೆ ಸುರತ್ಕಲ್ ನಲ್ಲಿ ಫಾಝಿಲ್ ಎಂಬ ಯುವಕನೊಬ್ಬನನ್ನು ಸಂಜೆ ವೇಳೆಗೆ ಅಂಗಡಿಯೊಂದರ ಮುಂಭಾಗದಲ್ಲೇ ಕಾರಿನಲ್ಲಿ […]

ಸುರತ್ಕಲ್ ಚೂರಿ ಇರಿತ ಪ್ರಕರಣ| ಗಾಯಾಳು ಚಿಕಿತ್ಸೆ ಫಲಿಸದೆ ಸಾವು Read More »

ಮಂಗಳೂರು: ಯುವಕನ ಮೇಲೆ ಚೂರಿ ಇರಿದು ಪರಾರಿಯಾದ ದುಷ್ಕರ್ಮಿಗಳು

ಸಮಗ್ರ ನ್ಯೂಸ್: ಸುರತ್ಕಲ್ ನಲ್ಲಿ ದುಷ್ಕರ್ಮಿಗಳು ಮತ್ತೆ ಅಟ್ಟಹಾಸಗೈದಿದ್ದು, ಯುವಕನೊಬ್ಬನಿಗೆ ಇಂದು ಸಂಜೆ ಚಾಕು ಇರಿದ ಘಟನೆ ಸುರತ್ಕಲ್ ಕಾಟಿಪಳ್ಳದ ನೈತಂಗಡಿ ಎಂಬಲ್ಲಿ ನಡೆದಿದೆ. ಕೃಷ್ಣಪುರ 4ನೇ ಬ್ಲಾಕ್ ನ ನಿವಾಸಿ ಜಲೀಲ್ ಚೂರಿ ಇರಿತಕ್ಕೊಳಗಾದ ಯುವಕ ಎಂದು ಗುರುತಿಸಲಾಗಿದೆ. ಯುವಕನ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಚೂರಿ ಇರಿತಕ್ಕೆ ಒಳಗಾದ ಯುವಕನ ಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

ಮಂಗಳೂರು: ಯುವಕನ ಮೇಲೆ ಚೂರಿ ಇರಿದು ಪರಾರಿಯಾದ ದುಷ್ಕರ್ಮಿಗಳು Read More »

ಬೆಳ್ತಂಗಡಿ: ಶಾಲಾ ವಾಹನ ಡಿಕ್ಕಿ ಹೊಡೆದು ಗೂಡ್ಸ್ ವಾಹನ ಚಾಲಕ ಸಾವು

ಸಮಗ್ರ ನ್ಯೂಸ್: ಶಾಲಾ ವಾಹನ ಢಿಕ್ಕಿ ಹೊಡೆದ ಪರಿಣಾಮ ಗೂಡ್ಸ್ ವಾಹನ ಚಾಲಕನೋರ್ವ ಮೃತಪಟ್ಟ ಘಟನೆ ಕೊಯ್ಯೂರು ಮಲೆಬೆಟ್ಟು ಸಮೀಪ ಶನಿವಾರ ನಡೆದಿರುವುದಾಗಿ ವರದಿಯಾಗಿದೆ. ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ನಿವಾಸಿ ರಝಾಕ್ (50) ಸಾವನ್ನಪ್ಪಿದವರು. ಕುವೆಟ್ಟು ಗ್ರಾಮದ ಪಿಲಿಚಾಮುಂಡಿಕಲ್ಲು ನಿವಾಸಿ ಹನೀಫ್ (48), ಪಣಕಜೆ ನಿವಾಸಿ ಕೆ.ಮುಹಮ್ಮದ್(57) ಗಂಭೀರ ಗಾಯಗೊಂಡವರು ಎಂದು ತಿಳಿದುಬಂದಿದೆ. ಗೂಡ್ಸ್ ರಿಕ್ಷಾಕ್ಕೆ ಶಾಲಾ ಮಕ್ಕಳ ಬಸ್ ಮುಖಾಮುಖಿಯಾಗಿ ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಗೂಡ್ಸ್ ರಿಕ್ಷಾ ಸಂಪೂರ್ಣ ನುಜ್ಜು ಗುಜ್ಜಾಗಿದೆ.

ಬೆಳ್ತಂಗಡಿ: ಶಾಲಾ ವಾಹನ ಡಿಕ್ಕಿ ಹೊಡೆದು ಗೂಡ್ಸ್ ವಾಹನ ಚಾಲಕ ಸಾವು Read More »

ಮಂಗಳೂರು: ಅಕ್ರಮ ಕಸಾಯಿಖಾನೆಗೆ ಹಿಂಜಾವೇ ದಾಳಿ

ಸಮಗ್ರ ನ್ಯೂಸ್: ಅಕ್ರಮ ಕಸಾಯಿ ಖಾನೆಗೆ ಹಿಂದೂ ಜಾಗರಣಾ ವೇದಿಕೆ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಅಲಂಗಾರು ಬಳಿ ನಡೆದಿದೆ. ಅಲಂಗಾರು ಆಶ್ರಯ ಕಾಲೋನಿಯಲ್ಲಿರುವ ಗಿಲ್ಬರ್ಟ್ ಮಿರಾಂದ ಎಂಬವನ ಅಕ್ರಮ ಕಸಾಯಿ ಖಾನೆ ಮೇಲೆ ಬೆಳಿಗ್ಗೆ 4 ಗಂಟೆಗೆ ಹಿಂಜಾವೇ ಕಾರ್ಯಕರ್ತರು ದಾಳಿ ನಡೆಸಿದ್ದು, ವಧೆ ಮಾಡಲು ತಂದಿದ್ದ 4 ಗೋವು ಮತ್ತು ಭಾರೀ ಪ್ರಮಾಣ ಮಾಂಸ, ದನದ ತಲೆ ಭಾಗಗಳು ಪತ್ತೆಯಾಗಿವೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲಾಗಿದ್ದು,

ಮಂಗಳೂರು: ಅಕ್ರಮ ಕಸಾಯಿಖಾನೆಗೆ ಹಿಂಜಾವೇ ದಾಳಿ Read More »

ಗರ್ಭಿಣಿಯಾದ 8ನೇ ತರಗತಿ ವಿದ್ಯಾರ್ಥಿನಿ| ಮೂವರಿಂದ ಅತ್ಯಾಚಾರ ಶಂಕೆ

ಸಮಗ್ರ ನ್ಯೂಸ್: ಎಂಟನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿಯಾಗಿರುವ ಆಘಾತಕಾರಿ ಘಟನೆ ಕೊಪ್ಪಳ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿ ಮೇಲೆ ಮೂವರಿಂದ ಅತ್ಯಾಚಾರ ನಡೆದಿರುವ ಅನುಮಾನಗಳು ವ್ಯಕ್ತವಾಗಿವೆ. ಕೊಪ್ಪಳ ತಾಲೂಕಿನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿನಿ ಭಯದಿಂದ ತನ್ನ ಮೇಲಾದ ಅತ್ಯಾಚಾರವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಆರು ತಿಂಗಳ ನಂತರ ಆಕೆ ಗರ್ಭಿಣಿಯಾಗಿದ್ದರಿಂದ ಈ ವಿಷಯ ಪೋಷಕರಿಗೆ ಗೊತ್ತಾಗಿದೆ. ಈ ಸಂಬಂಧ ವಿದ್ಯಾರ್ಥಿನಿ ಪೋಷಕರು ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೋಕ್ಸೋ ಅಡಿ ಪ್ರಕರಣ

ಗರ್ಭಿಣಿಯಾದ 8ನೇ ತರಗತಿ ವಿದ್ಯಾರ್ಥಿನಿ| ಮೂವರಿಂದ ಅತ್ಯಾಚಾರ ಶಂಕೆ Read More »

ಪ್ರಪಾತಕ್ಕೆ ಉರುಳಿದ ವಾಹನ| 8 ಮಂದಿ ಶಬರಿಮಲೆ ಯಾತ್ರಾರ್ಥಿಗಳು ದುರ್ಮರಣ

ಸಮಗ್ರ ನ್ಯೂಸ್: ಇರುಮುಡಿ ಹೊತ್ತು ಶಬರಿಮಲೆಗೆ ಸಾಗುತ್ತಿದ್ದ ಯಾತ್ರಾರ್ಥಿಗಳಿದ್ದ ವಾಹನ ಪ್ರಪಾತಕ್ಕೆ ಉರುಳಿ ಬಿದ್ದು 8 ಮಂದಿ ಭಕ್ತರು ಮೃತಪಟ್ಟ ಘಟನೆ ಕೇರಳದ‌ ಇಡುಕ್ಕಿ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 11 ಗಂಟೆಗೆ ನಡೆದಿದೆ. ಶಬರಿಮಲೆಗೆ ಹೋಗುವ ಕುಮಿಲಿ- ಕಂಬಂ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಭಕ್ತರಿದ್ದ ವಾಹನ ರಾತ್ರಿ ವೇಳೆ ಸಂಚರಿಸುತ್ತಿದ್ದಾಗ ಅಚಾನಕ್ಕಾಗಿ ರಸ್ತೆಯ ಪಕ್ಕದ ಕಂದಕಕ್ಕೆ ಉರುಳಿ ಬಿದ್ದಿದೆ. ದುಘರ್ಟನೆಯಲ್ಲಿ 8 ಮಂದಿ ಈವರೆಗೆ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ವಿಷಯ

ಪ್ರಪಾತಕ್ಕೆ ಉರುಳಿದ ವಾಹನ| 8 ಮಂದಿ ಶಬರಿಮಲೆ ಯಾತ್ರಾರ್ಥಿಗಳು ದುರ್ಮರಣ Read More »

ಪ್ರತ್ಯೇಕ ಬೈಕ್ ಅಪಘಾತದಲ್ಲಿ ಮೂವರು ದುರ್ಮರಣ

ಸಮಗ್ರ ನ್ಯೂಸ್: ಪ್ರತ್ಯೇಕವಾಗಿ ಸಂಭವಿಸಿದ ಎರಡು ಅಪಘಾತಗಳಲ್ಲಿ ಒಬ್ಬ ಕಾಲೇಜು ವಿದ್ಯಾರ್ಥಿ ಸೇರಿದಂತೆ ಮೂವರು ದಾರುಣವಾಗಿ ಪ್ರಾಣ ಕಳೆದುಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದಿದೆ. ಸಾಗರ ತಾಲೂಕಿನ ಖೈರಾ ಸಮೀಪ ಬೈಕ್‌ ನಿಯಂತ್ರಣ ತಪ್ಪಿ ಉರುಳಿ ಬಿದ್ದು ವಿದ್ಯಾರ್ಥಿ ಮೃತಪಟ್ಟಿದ್ದಾನೆ. ಸಾಗರದ ಪಾಲಿಟೆಕ್ನಿಕ್ ಕಾಲೇಜ್ ವಿದ್ಯಾರ್ಥಿ ಎಲ್ಡ್ರನ್ ಫರ್ನಾಂಡಿಸ್ (17 ) ಮೃತ ದುರ್ದೈವಿ. ಈತ ಆನಂದಪುರ ಸಮೀಪದ ಯಡೆಹಳ್ಳಿಯ ನಿವಾಸಿ. ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಘಟನೆ ನಡೆದಿದ್ದು, ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ

ಪ್ರತ್ಯೇಕ ಬೈಕ್ ಅಪಘಾತದಲ್ಲಿ ಮೂವರು ದುರ್ಮರಣ Read More »

ಶಾಲೆಗೆ ಚಕ್ಕರ್ ಹಾಕಿ ಶಿಕ್ಷಕರ ಎಣ್ಣೆ ಪಾರ್ಟಿ| ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸ್ಸು

ಸಮಗ್ರ ನ್ಯೂಸ್: ಶಾಲೆಗೆ ಚಕ್ಕರ್ ಹಾಕಿ ಶಿಕ್ಷಕರು ಎಣ್ಣೆ ಪಾರ್ಟಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಶಿಕ್ಷಕರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಕಾಲೇಜಿನ ಪ್ರಾಂಶುಪಾಲ ಮುರಳಿಧರ ಕುಲಕರ್ಣಿ, ಸಹ ಶಿಕ್ಷಕರಾದ ಲಿಂಗಪ್ಪ ಪೂಜಾರ್, ಕೇಶವಕುಮಾರ್, ಅಬ್ದುಲ್ ಅಜಿಜ್, ಚೆನ್ನಪ್ಪ ರಾಥೋಡ್ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ರಾಯಚೂರು ಡಿಡಿಪಿಐ ವೃಷಭೇಂದ್ರಯ್ಯ ಕಲಬುರ್ಗಿಯ ಶಿಕ್ಷಣ ಆಯುಕ್ತರಿಗೆ ಪತ್ರ ಬರೆದು ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ. ಶಾಲಾ ಅವಧಿಯಲ್ಲಿ ಮಕ್ಕಳನ್ನು ಮನೆಗೆ ಕಳುಹಿಸುವ ಶಿಕ್ಷಕರು ಡಾಬಾದಲ್ಲಿ ಚಿಕನ್, ಮಟನ್

ಶಾಲೆಗೆ ಚಕ್ಕರ್ ಹಾಕಿ ಶಿಕ್ಷಕರ ಎಣ್ಣೆ ಪಾರ್ಟಿ| ಶಿಸ್ತು ಕ್ರಮ ಕೈಗೊಳ್ಳಲು ಶಿಫಾರಸ್ಸು Read More »

ಸುಳ್ಯ: ಗಂಡನ ಮನೆಯವರ ವಿರುದ್ಧ ಕಳ್ಳತನದ ದೂರು ನೀಡಿದ ಪತ್ನಿ

ಸಮಗ್ರ ನ್ಯೂಸ್: ಚಿನ್ನಾಭರಣ ಉದ್ಯಮಿ ನವೀನ್ ಕಾಮಧೇನು ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್ ತಾಯಿ ಮೇಲೆ ಚಿನ್ನಾಭರಣ ಕಳ್ಳತನ ಪ್ರಕರಣ ದಾಖಲಾದ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದೆ. ಉದ್ಯಮಿ ನವೀನ್ ಪತ್ನಿ ಸ್ಪಂದನ ಅವರು ಬೆಳ್ಳಾರೆ ಕಾವಿನ ಮೂಲೆಯಲ್ಲಿ ಮನೆಯಿಂದ ಚಿನ್ನಾಭರಣ ಕಳವು ಆಗಿರುವುದಾಗಿ ಪೊಲೀಸ್ ದೂರು ನೀಡಿದ್ದಾರೆ. ದೂರಿನಲ್ಲಿ ನವೀನ್ ಪತ್ನಿ ಸ್ಪಂದನ ತನ್ನ ಗಂಡ ಮದ್ಯವ್ಯಸನಿ ಎಂದು ಉಲ್ಲೇಖಿಸಿದ್ದಾರೆ.ಇದರಿಂದಾಗಿ ವೈವಾಹಿಕ ಜೀವನದಲ್ಲಿ ನೊಂದು ಬೇಸತ್ತಿದ್ದೇನೆ. ಕಳೆದ ಕೆಲವು ತಿಂಗಳುಗಳಿಂದ ಇವರ ಮದ್ಯವ್ಯಸನದಿಂದ ಸಹಿಸಲು

ಸುಳ್ಯ: ಗಂಡನ ಮನೆಯವರ ವಿರುದ್ಧ ಕಳ್ಳತನದ ದೂರು ನೀಡಿದ ಪತ್ನಿ Read More »

ಮಂಗಳೂರು: ಮಾದಕವಸ್ತು ಸಾಗಾಟ ಮಾಡುತ್ತಿದ್ದ ಇಬ್ಬರು ಬಂಧನ

ಸಮಗ್ರ ನ್ಯೂಸ್: ಮಾದಕ ನಿದ್ರಾಜನಕ ವಸ್ತುವಾದ ಎಂ.ಡಿ.ಎಂ.ಎ. ಸಾಗಾಟ ಮಾಡುತ್ತಿದ್ದ ಪ್ರಕರಣವೊಂದರಲ್ಲಿ ಗುರುವಾರ ಬಂಟ್ವಾಳ ನಗರ ಠಾಣಾ ಪೊಲೀಸರು ಇಬ್ಬರನ್ನು ಬಿ.ಸಿ.ರೋಡ್ ರೈಲ್ವೆ ನಿಲ್ದಾಣದ ಬಳಿ ಗೂಡಿನಬಳಿಗೆ ಹೋಗುವ ರಸ್ತೆಯಲ್ಲಿ ಬಂಧಿಸಿದ್ದಾರೆ. ಬಿಕಸ್ಟಾ ಗ್ರಾಮದ ಬಾರೆಕಾಡು ನಿವಾಸಿ ಇರ್ಷಾದ್ (25) ಮತ್ತು ಕಾಸರಗೋಡು ಮಂಜೇಶ್ವರ ತಾಲೂಕಿನ ದೀಕ್ಷಿತ್ ಯಾನೆ ಅಪ್ಪೂಸ್ (19) ಎಂಬಿಬ್ಬರು ಬಂಧಿತರು. ಬಂಟ್ವಾಳ ನಗರ ಠಾಣಾಧಿಕಾರಿ ಅವಿನಾಶ್ ಅವರು ಸಿಬ್ಬಂದಿ ಜೊತೆ ಗಸ್ತಿನಲ್ಲಿದ್ದ ವೇಳೆ ಸಂಜೆ ಸುಮಾರು ಸಂಜೆ 5 ಗಂಟೆಯ ವೇಳೆಗೆ ಬಿ,ಮೂಡ

ಮಂಗಳೂರು: ಮಾದಕವಸ್ತು ಸಾಗಾಟ ಮಾಡುತ್ತಿದ್ದ ಇಬ್ಬರು ಬಂಧನ Read More »