ಕ್ರೈಂ

ಅಣ್ಣನನ್ನೆ ಕೊಡಲಿಯಿಂದ ಕೊಚ್ಚಿ ಬರ್ಬರ ಕೊಲೆಮಾಡಿದ ತಮ್ಮ

ಸಮಗ್ರ ನ್ಯೂಸ್: ತಮ್ಮ ತನ್ನ ಅಣ್ಣನನ್ನೆ ಕೊಡಲಿಯಿಂದ ಕೊಚ್ಚಿ ಬರ್ಬರ ಕೊಲೆ ಮಾಡಿದ ಘಟನೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಸೋನಿಯಾ ಗಾಂಧಿ ನಗರದಲ್ಲಿ ನಡೆದಿದೆ. ಪರಿಕ್ಷತ್ ತಾಜ್ (25) ಕೊಲೆಯಾದ ಯುವಕ. ನಿತ್ಯ ಕುಡಿದು ಹಣ ಕೊಡುವಂತೆ ಮನೆಯಲ್ಲಿ ಕಾಟ ಕೊಡುತ್ತಿದ್ದ. ಇದರಿಂದಅಣ್ಣನ ಕಿರುಕುಳ ತಾಳಲಾರದೆ ತಮ್ಮನೆ ಅಣ್ಣನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಸುದ್ದಿ ತಿಳಿದ ಮಾನ್ವಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಭೀಮನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಅಣ್ಣನನ್ನೆ ಕೊಡಲಿಯಿಂದ ಕೊಚ್ಚಿ ಬರ್ಬರ ಕೊಲೆಮಾಡಿದ ತಮ್ಮ Read More »

ಹಿಮಾಚಲದ ಹಲವೆಡೆ ಲಘು ಭೂಕಂಪನ

ಸಮಗ್ರ ನ್ಯೂಸ್: ಹಿಮಾಚಲ ಪ್ರದೇಶದ ಹಲವೆಡೆ ಲಘು ಭೂಕಂಪ ಸಂಭವಿಸಿದೆ. ಬೆಳಗ್ಗೆ 5.17 ಕ್ಕೆ ಭೂಮಿ ಕಂಪಿಸಿದ ಅನುಭವ ಆಗಿದೆ. ಧರ್ಮಶಾಲಾ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೂಮಿ ಕಂಪಿಸಿದೆ. ಭೂಕಂಪನದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದ್ದು, ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿದ್ದಾಗಿ ವರದಿಗಳು ತಿಳಿಸಿವೆ. ಇಂದು ಮುಂಜಾನೆ 5:17 ಕ್ಕೆ ಹಿಮಾಚಲ ಪ್ರದೇಶದ ಧರ್ಮಶಾಲಾದಿಂದ 22 ಕಿಮೀ ಪೂರ್ವಕ್ಕೆ ರಿಕ್ಟರ್ ಮಾಪಕದಲ್ಲಿ 3.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅದು ಹೇಳಿದೆ.

ಹಿಮಾಚಲದ ಹಲವೆಡೆ ಲಘು ಭೂಕಂಪನ Read More »

ಬಾಲಕಿಯನ್ನು ಅಪಹರಿಸಿ ಒಂದು ತಿಂಗಳು ಅತ್ಯಾಚಾರ ಎಸಗಿದ ಅಪ್ರಾಪ್ತ

ಸಮಗ್ರ ನ್ಯೂಸ್: 17 ವರ್ಷದ ಅಪ್ರಾಪ್ತನೊಬ್ಬ 15 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ ಒಂದು ತಿಂಗಳ ಕಾಲ ಅತ್ಯಾಚಾರವೆಸಗಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಎಂಬಲ್ಲಿ ನಡೆದಿದೆ. ಒಂದು ತಿಂಗಳ ಹಿಂದೆ ಅದೇ ಗ್ರಾಮದ 17 ವರ್ಷದ ಹುಡುಗ 15 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿಯ ತಂದೆಯ ದೂರಿನ ಮೇರೆಗೆ ಡಿಸೆಂಬರ್ 25 ರಂದು ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ. ಹುಡುಗ ಹುಡುಗಿಯನ್ನು ಗುಜರಾತ್‌ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎಂದು ದೂರಲಾಗಿದೆ.

ಬಾಲಕಿಯನ್ನು ಅಪಹರಿಸಿ ಒಂದು ತಿಂಗಳು ಅತ್ಯಾಚಾರ ಎಸಗಿದ ಅಪ್ರಾಪ್ತ Read More »

ತಂದೆಯ ಆಸ್ತಿ ಹಂಚಿಕೊಳ್ಳುವ ಮಗ ತಂದೆಯ ಸಾಲಕ್ಕೂ ಜವಾಬ್ದಾರ| ಸಾಲ ತೀರಿಸುವುದಕ್ಕೂ ಮಗನೇ ಹೊಣೆಗಾರ – ಹೈಕೋರ್ಟ್

ಸಮಗ್ರ ನ್ಯೂಸ್: ತಂದೆಯ ಆಸ್ತಿಯನ್ನ ಹಂಚಿಕೊಳ್ಳುವ ಮಗ ಸಾಲವನ್ನೂ ತೀರಿಸಬೇಕು ಎಂದು ರಾಜ್ಯ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ನ್ಯಾಯಮೂರ್ತಿ ಕೆ.ನಟರಾಜನ್ ಅವರು ತಮ್ಮ ತಂದೆ ಸಾಲ ಪಡೆದಿರುವುದರಿಂದ ಕಾನೂನು ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂಬ ಆರೋಪಿ ಬಿ.ಟಿ.ದಿನೇಶ್ ಅವರ ವಾದವನ್ನ ತಳ್ಳಿಹಾಕಿದರು. ತಂದೆಯ ಸಾಲವನ್ನ ಮಗ ತೀರಿಸಬೇಕು ಎಂದು ಹೈಕೋರ್ಟ್ ಆದೇಶ ನೀಡಿದೆ. ಪ್ರಕರಣದ ವಿವರಗಳನ್ನ ಗಮನಿಸಿದರೆ ಭರಮಪ್ಪ ಎಂಬ ವ್ಯಕ್ತಿ ತನ್ನ ವ್ಯಾಪಾರ ಹಾಗೂ ಕುಟುಂಬದ ಅಗತ್ಯಗಳಿಗಾಗಿ ಪ್ರಸಾದ್ ರಾಯ್ಕಾರ್ ಎನ್ನುವವರಲ್ಲಿ 2,60,000 ರೂಪಾಯಿ

ತಂದೆಯ ಆಸ್ತಿ ಹಂಚಿಕೊಳ್ಳುವ ಮಗ ತಂದೆಯ ಸಾಲಕ್ಕೂ ಜವಾಬ್ದಾರ| ಸಾಲ ತೀರಿಸುವುದಕ್ಕೂ ಮಗನೇ ಹೊಣೆಗಾರ – ಹೈಕೋರ್ಟ್ Read More »

ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಕೊನೆಗೂ ಬಂಧನ

ಸಮಗ್ರ ನ್ಯೂಸ್ : ಕಳೆದ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರಶಿಯನ್ 11 ದಿನದ ಬಳಿಕ ಕರ್ನಾಟಕ ಪೊಲೀಸರು ಬಂಧಿಸಿದ್ದಾರೆ. ಸ್ಯಾಂಟ್ರೋ ರವಿಯನ್ನು ಗುಜರಾತ್ ನಲ್ಲಿ ಬಂಧಿಸಿದ ಪೊಲೀಸರು ಮೈಸೂರಿಗೆ ಕರೆತರುತ್ತಿದ್ದಾರೆ. ಮೈಸೂರಿನಲ್ಲಿ ಕೇಸ್ ಮೇಲೆ ಕೇಸ್ ದಾಖಲಾಗುತ್ತಿದ್ದಂತೆ ಸ್ಯಾಂಟ್ರೋ ರವಿ ರಾಜ್ಯದಿಂದಲೇ ಎಸ್ಕೇಪ್ ಆಗಿದ್ದ. ಈ ವೇಳೆ ಸ್ಯಾಂಟ್ರೋ ರವಿ ವಿದೇಶಕ್ಕೆ ಹಾರಿರಬಹುದು ಎನ್ನುವ ಬಗ್ಗೆಯೂ ಶಂಕಿಸಲಾಗಿತ್ತು. ಆದರೆ ಇದೀಗ ಸ್ಯಾಂಟ್ರೋ ರವಿಯನ್ನು ಗುಜರಾತ್‌ನಲ್ಲಿ ಬಂಧಿಸಲಾಗಿದೆ.

ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಕೊನೆಗೂ ಬಂಧನ Read More »

ಚೆಕ್ ಬೌನ್ಸ್ ಹಿನ್ನೆಲೆ; ನಿರ್ದೇಶಕ ಗುರುಪ್ರಸಾದ್ ಅರೆಸ್ಟ್

ಸಮಗ್ರ ನ್ಯೂಸ್: ಕನ್ನಡದ ‘ಮಠ’ ಚಿತ್ರದ ಖ್ಯಾತ ನಿರ್ದೇಶಕ ಗುರುಪ್ರಸಾದ್ ಅವರನ್ನು ಬೆಂಗಳೂರಿನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ.‌ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಗುರುಪ್ರಸಾದ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ. ಶ್ರೀನಿವಾಸ್ ಎಂಬುವವರಿಗೆ ಹಣ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಗುರುಪ್ರಸಾದ್ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಗುರುಪ್ರಸಾದ್ ವಿರುದ್ಧ ವಂಚನೆ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ನಿರ್ದೇಶಕ ಗುರುಪ್ರಸಾದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಚೆಕ್ ಬೌನ್ಸ್ ಹಿನ್ನೆಲೆ; ನಿರ್ದೇಶಕ ಗುರುಪ್ರಸಾದ್ ಅರೆಸ್ಟ್ Read More »

ಮಂಜೇಶ್ವರ:ಶಾಲಾ ವಾಹನಕ್ಕೆ ಬೈಕ್ ಢಿಕ್ಕಿ |ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ್ಯು

ಸಮಗ್ರ ನ್ಯೂಸ್: ಶಾಲಾ ವಾಹನಕ್ಕೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಜೇಶ್ವರ ಸಮೀಪದ ಮೀಂಜ ಬಾಳಿಯೂರು ಬಳಿ ಸಂಭವಿಸಿದೆ. ಮೃತಪಟ್ಟವರನ್ನು ಮಿಯಾಪದವು ದರ್ಬೆಯ ಹರೀಶ್ ರವರ ಪುತ್ರ ಪ್ರೀತೇಶ್ ಶೆಟ್ಟಿ (19) ಮತ್ತು ಬೆಜ್ಜಂಗಳ ಸುರೇಶ್ ರವರ ಪುತ್ರ ಅಭಿಷೇಕ್ ಎಂ (19) ಮೃತ ಪಟ್ಟವರು. ಪ್ರೀತೇಶ್ ಮಂಗಳೂರಿನ ದೇವಿ ಕಾಲೇಜು ಹಾಗೂ ಅಭಿಷೇಕ್ ಪ್ರೇರಣಾ ಕಾಲೇಜಿನ ಡಿಗ್ರಿ ವಿದ್ಯಾರ್ಥಿಗಳಾಗಿದ್ದರು. ವಿದ್ಯಾರ್ಥಿಗಳನ್ನು ಕೊಂಡೊಯ್ಯುತ್ತಿದ್ದ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದ್ದು,

ಮಂಜೇಶ್ವರ:ಶಾಲಾ ವಾಹನಕ್ಕೆ ಬೈಕ್ ಢಿಕ್ಕಿ |ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತ್ಯು Read More »

ಶಿರಢಿಗೆ ಹೊರಟಿದ್ದ ಟ್ರಕ್ ಗೆ ಬಸ್ ಡಿಕ್ಕಿ: 10 ಮಂದಿ ಸಾವು…!!

ಸಮಗ್ರ ನ್ಯೂಸ್: ಶಿರಢಿಗೆ ಹೊರಟಿದ್ದ ಬಸ್ ಒಂದು ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಮಂದಿ ಸಾವನಪ್ಪಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಥಾಣೆ ಜಿಲ್ಲೆಯ ಅಂಬರನಾಥದಿಂದ ಹೊರಟಿದ್ದ ಖಾಸಗಿ ಐಷಾರಾಮಿ ಬಸ್ ಅಹಮದ್‌ನಗರ ಜಿಲ್ಲೆಯ ಶಿರಡಿಗೆ ಹೋಗುತ್ತಿತ್ತು ಎಂದು ಅವರು ಹೇಳಿದರು. ಮುಂಬೈನಿಂದ ಸುಮಾರು 180 ಕಿ.ಮೀ ದೂರದಲ್ಲಿರುವ ನಾಸಿಕ್‌ನ ಸಿನ್ನಾರ್ ತೆಹಸಿಲ್‌ನ ಪಥರೆ ಶಿವಾರ್ ಬಳಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು

ಶಿರಢಿಗೆ ಹೊರಟಿದ್ದ ಟ್ರಕ್ ಗೆ ಬಸ್ ಡಿಕ್ಕಿ: 10 ಮಂದಿ ಸಾವು…!! Read More »

ಬೆಂಗಳೂರಿನ ಪಿಜಿಯಲ್ಲಿ ಕನ್ನಡತಿ ಮೇಲೆ‌ ಕೇರಳದ‌ ಯುವತಿಯಿಂದ ಹಲ್ಲೆ

ಸಮಗ್ರ ನ್ಯೂಸ್: ನಡುರಾತ್ರಿಯಲ್ಲಿ ಮೊಬೈಲ್​ ಬಳಸಿದ ಆರೋಪದ ಮೇಲೆ ವೈದ್ಯೆಯೊಬ್ಬಳಿಗೆ ಕೇರಳ ಮೂಲದ ಯುವತಿ ಥಳಿಸಿರುವ ಘಟನೆ ಬಿಟಿಎಂ ಲೇಔಟ್​ನ ಪಿಜಿಯೊಂದರಲ್ಲಿ ನಡೆದಿದೆ. ಜನವರಿ 10 ರಂದು ನಡುರಾತ್ರಿ ವೈದ್ಯೆ ಮೇಲೆ ಹಲ್ಲೆ ಮಾಡಿದ್ದು, ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಂದಿರಾ ನಗರ ಖಾಸಗಿ ಕಂಪೆನಿಯಲ್ಲಿ ಹೆಚ್.ಆರ್. ಮ್ಯಾನೇಜರ್ ಆಗಿರುವ ಆರೋಪಿತ ಯುವತಿ ಅಶೀಲ ಎಂಬಾಕೆ ಬಿಬಿಎಂಪಿ ವೈದ್ಯೆಯಾಗಿರುವ ಡಾ.ಸೃಷ್ಟಿ ನಡುವೆ ನಡುರಾತ್ರಿ ಮೊಬೈಲ್​ ಬಳಸುವ ಕಾರಣಕ್ಕೆ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಗಲಾಟೆ ತಾರಕಕ್ಕೆ

ಬೆಂಗಳೂರಿನ ಪಿಜಿಯಲ್ಲಿ ಕನ್ನಡತಿ ಮೇಲೆ‌ ಕೇರಳದ‌ ಯುವತಿಯಿಂದ ಹಲ್ಲೆ Read More »

ಮಾಜಿ ಕೇಂದ್ರ ಸಚಿವ ಶರದ್ ಯಾದವ್ ವಿಧಿವಶ

ಸಮಗ್ರ ನ್ಯೂಸ್: ಮಾಜಿ ಕೇಂದ್ರ ಸಚಿವ, ಆರ್ ಜೆಡಿ ನಾಯಕ ಶರದ್‌ ಯಾದವ್‌ ಇಂದು ನಿಧನರಾಗಿದ್ದಾರೆ. ಅವರ ನಿಧನದ ಕುರಿತು ಅವರ ಪುತ್ರಿ ಶುಭಾಶಿನಿ ಶರದ್‌ ಯಾದವ್‌ ಸಾಮಾಜಿಕ ತಾಣದಲ್ಲಿ ಮಾಹಿತಿ ನೀಡಿದ್ದಾರೆ. 1974ರಲ್ಲಿ‌ ಮಧ್ಯಪ್ರದೇಶದ ಜಬಲ್‌ಪುರದಿಂದ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾದರು . ಜೆಪಿ ಚಳವಳಿಯು ಉತ್ತುಂಗದಲ್ಲಿದ್ದ ಸಮಯ ಮತ್ತು ಹಲ್ದಾರ್ ಕಿಸಾನ್‌ನ ಚುನಾವಣಾ ಚಿಹ್ನೆಯ ಮೇಲೆ ರಾಜಕೀಯ ಕ್ಷೇತ್ರಕ್ಕೆ ಶ್ರೀ ಜೈ ಪ್ರಕಾಶ್ ನಾರಾಯಣ್ ಅವರು ಆಯ್ಕೆ ಮಾಡಿದ ಮೊದಲ ಅಭ್ಯರ್ಥಿ. 1977ರಲ್ಲಿ

ಮಾಜಿ ಕೇಂದ್ರ ಸಚಿವ ಶರದ್ ಯಾದವ್ ವಿಧಿವಶ Read More »