ಬೆಳ್ತಂಗಡಿ: ಮನೆಯೊಳಗೆ ಕಾಳಿಂಗನ ಕಾರುಬಾರು| ಟೇಬಲ್ ಮೇಲೆ ಬೆಚ್ಚನೆ ಮಲಗಿದ ನಾಗರಾಜ!!

ಸಮಗ್ರ ನ್ಯೂಸ್: ಕಾಳಿಂಗ ಸರ್ಪವೊಂದು ಮನೆಯ ಟೇಬಲ್ ಪ್ಯಾನ್ ಕಳೆಗೆ ಹಾಯಾಗಿ ಮಲಗಿರುವ ಘಟನೆ ಬೆಳ್ತಂಗಡಿ‌ ತಾಲೂಕಿ‌ನ ಹತ್ಯಡ್ಕ ಎಂಬಲ್ಲಿ ನಡೆದಿದ್ದು, ಉರಗ ತಜ್ಞರೊಬ್ಬರು ಅದನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

. Ad Widget . Ad Widget . Ad Widget

ಅರಸಿನಮಕ್ಕಿ ಹತ್ಯಡ್ಕ ನಿವಾಸಿಯಾಗಿರುವ ಉಮೇಶ್ ಎಂಬವರ ಮನೆಯ ರೂಂನ ಟೇಬಲ್ ಫ್ಯಾನ್ ಪಕ್ಕದಲ್ಲಿ ಸುಮಾರು 10 ಅಡಿ ಉದ್ದದ ಕಾಳಿಂಗ ಸರ್ಪವೊಂದು ಮಲಗಿರುವುದನ್ನು ಗಮನಿಸಿದ ಮನೆಯ ಸದಸ್ಯರು ಕ್ಷಣ ಕಾಲ ಗಾಬರಿಗೊಂಡು, ಸ್ಥಳೀಯ ಉರಗ ತಜ್ಞರಾದ ಸ್ನೇಕ್ ಅಶೋಕ್ ಲಾಯಿಲ ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಉಮೇಶ್ ಮನೆಗೆ ಆಗಮಿಸಿದ ಸ್ನೇಕ್ ಅಶೋಕ್ ಅವರು ಕಾಳಿಂಗವನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.

. Ad Widget .

Leave a Comment

Your email address will not be published. Required fields are marked *