ಕ್ರೈಂ

ಒಡಿಶಾ ಆರೋಗ್ಯ ಸಚಿವರ ಎದೆಗೆ ಗುಂಡಿಕ್ಕಿದ ದುಷ್ಕರ್ಮಿಗಳು| ಸಚಿವ ನಬಾದಾಸ್ ಸ್ಥಿತಿ‌ ಚಿಂತಾಜನಕ

ಸಮಗ್ರ ನ್ಯೂಸ್: ಒಡಿಶಾ ಆರೋಗ್ಯ ಸಚಿವ ನಬಾ ದಾಸ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡು ಎದೆಗೆ ಬಿದ್ದಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ. ಅನಾಮಿಕರು ವ್ಯಕ್ತಿಗಳು ಹಾರಿಸಿದ ಗುಂಡು ಸಚಿವರ ಎದೆ ಹೊಕ್ಕಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ಸಚಿವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬ್ರಜರಾಜನಗರಕ್ಕೆ ತೆರಳುತ್ತಿದ್ದಾಗ ದಾಳಿ ನಡೆದಿದೆ. ನಬಾ ದಾಸ್ ಅವರು ವಾಹನದಿಂದ ಇಳಿಯುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಂಡಿನ ದಾಳಿಯ ಹಿಂದಿನ ನಿಖರವಾದ ಕಾರಣ

ಒಡಿಶಾ ಆರೋಗ್ಯ ಸಚಿವರ ಎದೆಗೆ ಗುಂಡಿಕ್ಕಿದ ದುಷ್ಕರ್ಮಿಗಳು| ಸಚಿವ ನಬಾದಾಸ್ ಸ್ಥಿತಿ‌ ಚಿಂತಾಜನಕ Read More »

ಮಡಿಕೇರಿ: ಪಿಕಪ್ ನ ಒಳತೂರಿದ ಮರದ ದಿಮ್ಮಿ| ಚಾಲಕ ಪವಾಡ ಸದೃಶ ಪಾರು

ಸಮಗ್ರ ನ್ಯೂಸ್: ಟಿಂಬರ್‌ ಸಾಗಾಟದ ಸಂದರ್ಭ ಮರದ ದಿಮ್ಮಿಯೊಂದು ಲಾರಿಯಿಂದ ಜಾರಿ ಪಿಕ್‌ಅಪ್‌ ಜೀಪಿನ ಗಾಜನ್ನು ಸೀಳಿ ಒಳಹೊಕ್ಕ ಘಟನೆ ಸಂಪಾಜೆ ರಸ್ತೆಯ ಜೋಡುಪಾಲ ಸಮೀಪ ಸಂಭವಿಸಿದೆ. ಶುಕ್ರವಾರ ರಾತ್ರಿ 14 ಚಕ್ರದ ಲಾರಿಯೊಂದರಲ್ಲಿ ಭಾರೀ ಗಾತ್ರದ‌ ಮರದ ದಿಮ್ಮಿಗಳನ್ನು ಮಂಗಳೂರು ಕಡೆಗೆ ಸಾಗಿಸಲಾಗುತ್ತಿತ್ತು. ಜೋಡುಪಾಲ ಸಮೀಪ ಹಗ್ಗ ತುಂಡರಿಸಲ್ಪಟ್ಟ ಪರಿಣಾಮ ದಿಮ್ಮಿಗಳು ರಸ್ತೆಗೆ ಉರುಳಿದವು. ಜೋಡುಪಾಲದಿಂದ ಮದೆನಾಡು ಕಡೆಗೆ ಬರುತ್ತಿದ್ದ ಪಿಕ್‌ಅಪ್‌ ವಾಹನಕ್ಕೆ ಮರದ ದಿಮ್ಮಿ ಅಪ್ಪಳಿಸಿ ಗಾಜನ್ನು ಸೀಳಿ ಒಳಹೊಕ್ಕಿತು. ಚಾಲಕ ಪವಾಡ ಸದೃಶ

ಮಡಿಕೇರಿ: ಪಿಕಪ್ ನ ಒಳತೂರಿದ ಮರದ ದಿಮ್ಮಿ| ಚಾಲಕ ಪವಾಡ ಸದೃಶ ಪಾರು Read More »

ಮಂಗಳೂರು: ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಪತ್ನಿಯ ನೋಡಲಾರದೆ ಸಾಯಿಸಿದ ಪತಿ| ಸತಿಯ ಹಿಂದೆಯೇ ಸಾವಿನ ದಾರಿ ಹಿಡಿದ ಗಂಡ| ಒಂದು ಕರುಣಾಜನಕ ಕಥೆ!!

ಸಮಗ್ರ ನ್ಯೂಸ್: ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಪತ್ನಿಯ ನರಳಾಟ ನೋಡಲಾಗದೇ, ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿದ ಪತಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಉರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿಜೈ ಕಾಪಿಕಾಡ್‌ ನಾಲ್ಕನೇ ರಸ್ತೆ ಬಳಿಯ ಪೂನಂ ಪಾರ್ಕ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿ ಶೈಲಜಾ ರಾವ್‌ (64) ಹಾಗೂ ಅವರ ಪತಿ ದಿನೇಶ್‌ ರಾವ್‌ (67)ಮೃತ‌ ದುರ್ದೈವಿಗಳು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದು, ಒಬ್ಬಾಕೆ ಮದುವೆಯ ಬಳಿಕ ಅಮೆರಿಕದಲ್ಲಿ ನೆಲೆಸಿದ್ದು, ಇನ್ನೊಬ್ಬ

ಮಂಗಳೂರು: ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಪತ್ನಿಯ ನೋಡಲಾರದೆ ಸಾಯಿಸಿದ ಪತಿ| ಸತಿಯ ಹಿಂದೆಯೇ ಸಾವಿನ ದಾರಿ ಹಿಡಿದ ಗಂಡ| ಒಂದು ಕರುಣಾಜನಕ ಕಥೆ!! Read More »

ಕಾಣೆಯಾದಾಕೆ ಪ್ರಿಯತಮನ ಜೊತೆಗೆ ಮದುವೆಯಾಗಿ ಠಾಣೆಗೆ ಹಾಜರ್

ಸಮಗ್ರ ನ್ಯೂಸ್: ಕಳೆದ ಜನವರಿ 16ರಂದು ಮಣಪ್ಪುರಂ ಫೈನಾನ್ಸ್ ಕೆಲಸಕ್ಕೆ ತೆರಳಿ ಮನೆಗೆ ಹಿಂತಿರುಗದೆ ನಾಪತ್ತೆಯಾಗಿದ್ದ ಶಿವಾನಿ(20) ಪ್ರೀತಿಸುತ್ತಿದ್ದ ಯುವಕನ ಜೊತೆಗೆ ಮದುವೆಯಾಗಿ ಠಾಣೆಗೆ ಹಾಜರಾದ ಘಟನೆ ನಡೆದಿದೆ. ಶಿವಾನಿ ಫೈನಾನ್ಸ್ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಡಿಜೆ ಆಪರೇಟರ್ ಆಗಿರುವ ಧನುಷ್ ಎಂಬಾತನನ್ನು ಪ್ರೀತಿಸುತ್ತಿದ್ದು ಆತನೊಂದಿಗೆ ಮನೆ ಬಿಟ್ಟು ತೆರಳಿದ್ದಳು. ಹಣವಿಲ್ಲದೆ ಜೋಡಿ ರೈಲಿನ ಮೂಲಕ ಮಡಗಾಂವ್ ಗೆ ಹೋಗಿ ಅಲ್ಲಿ ಮೊಬೈಲ್ ಒಂದನ್ನು ಮಾರಿಬಂದ ಹಣದಲ್ಲಿ ಖರ್ಚು ಮಾಡಿತ್ತು. ಅಲ್ಲಿಂದ ಮುಂದೆ ಜೋಡಿಯು ದೆಹಲಿಗೆ ಹೋಗಿದ್ದು

ಕಾಣೆಯಾದಾಕೆ ಪ್ರಿಯತಮನ ಜೊತೆಗೆ ಮದುವೆಯಾಗಿ ಠಾಣೆಗೆ ಹಾಜರ್ Read More »

ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ| ಹಿರಿಯ ನಟ ಮಂದೀಪ್ ರೈ ಇನ್ನಿಲ್ಲ

ಸಮಗ್ರ ನ್ಯೂಸ್: ಸ್ಯಾಂಡಲ್ ವುಡ್ ನ ಹಿರಿಯ ಹಾಸ್ಯ ನಟ ಮಂದೀಪ್ ರೈ (73) ಅವರು ತಡರಾತ್ರಿ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ಭೈರಸಂಧ್ರದ ನಿವಾಸದಲ್ಲಿ ಮಧ್ಯರಾತ್ರಿ 1.45 ರ ಸುಮಾರಿಗೆ ಮಂದೀಪ್ ರೈ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಇಂದು ಸಂಜೆ ಮಂದೀಪ್ ರಾಯ್ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಮಂದೀಪ್ ರಾಯ್ ಅವರು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅನಂತ್ ನಾಗ್ ಹಾಗೂ ಶಂಕರ್ ನಾಗ್

ಸ್ಯಾಂಡಲ್ ವುಡ್ ಗೆ ಮತ್ತೊಂದು ಆಘಾತ| ಹಿರಿಯ ನಟ ಮಂದೀಪ್ ರೈ ಇನ್ನಿಲ್ಲ Read More »

ಸುಖೋಯ್- ಮಿರಾಜ್ ಯುದ್ಧವಿಮಾನಗಳ ನಡುವೆ ಅಪಘಾತ| ಪೈಲಟ್ ಗಳು ಜಖಂ

ಸಮಗ್ರ ನ್ಯೂಸ್: ಮಧ್ಯಪ್ರದೇಶದ ಮೊರೆನಾ ಬಳಿ ಸುಖೋಯ್- ಮಿರಾಜ್ ಯುದ್ಧವಿಮಾನಗಳ ನಡುವೆ ಅಪಘಾತವಾಗಿದ್ದು, ಇಬ್ಬರು ಪೈಲಟ್ ಗಳು ಗಾಯಗೊಂಡಿರುವ ಘಟನೆ ನಡೆದಿದೆ. ಸುಖೋಯ್ -30 ಮತ್ತು ಮಿರಾಜ್ 2000 ವಿಮಾನಗಳು ಅಪಘಾತಕ್ಕೀಡಾಗಿವೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. ಘಟನೆಯಲ್ಲಿ ಇಬ್ಬರು ಪೈಲಟ್ ಗಳಿಗೆ ಗಾಯಗೊಂಡಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ವಾಲಿಯರ್ ವಾಯುನೆಲೆಯಿಂದ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಸುಖೋಯ್- ಮಿರಾಜ್ ಯುದ್ಧವಿಮಾನಗಳ ನಡುವೆ ಅಪಘಾತ| ಪೈಲಟ್ ಗಳು ಜಖಂ Read More »

ಸುಳ್ಯ: ಐಸಿಯು ನಲ್ಲಿದೆ ಅಂಬ್ಯುಲೆನ್ಸ್! ಸೂಕ್ತ ಚಿಕಿತ್ಸೆ ನೀಡಿ

ಸಮಗ್ರ ನ್ಯೂಸ್: ಸಾರ್ವಜನಿಕ ಸೇವೆಗೆಂದು ಮೀಸಲಾಗಿರುವ ಅಂಬ್ಯುಲೆನ್ಸ್ ಒಂದು ಸರಿಯಾದ ನಿರ್ವಹಣೆ ಇಲ್ಲದೆ ಪಾಳುಬಿದ್ದಿರುವ ಘಟನೆ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದಲ್ಲಿ ಕಂಡುಬರುತ್ತಿದೆ. ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಪಯೋಗಕ್ಕೆ ಲಭಿಸಲೆಂದು ಕೆಲವರ್ಷಗಳ ಹಿಂದೆ ಇಲ್ಲಿನ ಪಂಚಾಯತ್ ಗೆ ದಾನಿಗಳ ಸಹಾಯದಿಂದ ಅಂಬ್ಯುಲೆನ್ಸ್ ಒದಗಿಸಲಾಗಿತ್ತು. ಆದರೆ ನಿರ್ವಹಣೆ ಕೊರತೆ ಮತ್ತು ಸರಿಯಾದ ವ್ಯವಸ್ಥೆಗಳಿಲ್ಲದೆ ಅಂಬ್ಯುಲೆನ್ಸ್ ತುರ್ತು ಪರಿಸ್ಥಿತಿಯಲ್ಲಿದೆ. ಇದುವರೆಗೂ ಈ ಅಂಬ್ಯುಲೆನ್ಸ್ ನಿಂದ ಯಾರಿಗೂ ಉಪಯೋಗ ಲಭಿಸದಿದ್ದು, ಸದಾಕಾಲವೂ ಪಂಕ್ಚರ್ ಸ್ಥಿತಿಯಲ್ಲಿ ತುಕ್ಕುಹಿಡಿಯುತ್ತಿದೆ. ಸಂಬಂಧಪಟ್ಟವರು ಇದಕ್ಕೆ ಸೂಕ್ತ ಚಿಕಿತ್ಸೆ

ಸುಳ್ಯ: ಐಸಿಯು ನಲ್ಲಿದೆ ಅಂಬ್ಯುಲೆನ್ಸ್! ಸೂಕ್ತ ಚಿಕಿತ್ಸೆ ನೀಡಿ Read More »

ಪ್ರವೀಣ್ ನೆಟ್ಟಾರು ಹಂತಕರು ಸೌದಿಯಲ್ಲಿ ಪತ್ತೆ!? ಕಾರ್ಯಾಚರಣೆ ಚುರುಕು

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಅರೋಪಿಗಳು ಸೌದಿ ಅರೇಬಿಯಾದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ತನಿಖೆಯನ್ನು ಎನ್ ಐಎ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಇನ್ನಿಬ್ಬರು ಪ್ರಮುಖ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಈ ಮಧ್ಯೆ ತಲೆಮರೆಸಿಕೊಂಡಿರುವ ಇಬ್ಬರು ಪ್ರಮುಖ ಆರೋಪಿಗಳಾದ ಶರೀಫ್ ಹಾಗೂ ಕೆ.ಎ.ಮಸೂದ್ ಬಗ್ಗೆ ಸುಳಿವು ನೀಡಿದರೆ 10 ಲಕ್ಷ ನಗದು ಬಹುಮಾನ ನೀಡುವುದಾಗಿ ಎನ್ ಐ ಎ ಅಧಿಕಾರಿಗಳು

ಪ್ರವೀಣ್ ನೆಟ್ಟಾರು ಹಂತಕರು ಸೌದಿಯಲ್ಲಿ ಪತ್ತೆ!? ಕಾರ್ಯಾಚರಣೆ ಚುರುಕು Read More »

ಪೇಸ್ ಬುಕ್ ನಲ್ಲಿ ಪರಿಚಯವಾಗಿ ಮನೆಬಿಟ್ಟು ಬಂದಾಕೆ ಶವವಾಗಿ ಪತ್ತೆ

ಸಮಗ್ರ ನ್ಯೂಸ್: ಫೇಸ್​​ಬುಕ್​​ನಲ್ಲಿ ಪರಿಚಯವಾಗಿ ಎಂಟು ತಿಂಗಳ ಹಿಂದೆ ಬೆಂಗಳೂರು ಬಿಟ್ಟು ಹಾಸನಕ್ಕೆ ಬಂದವಳು ಇದೀಗ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾಳೆ. ಹಾಸನ ನಗರದ ಹೊರವಲಯದ ಗುಡ್ಡೇನಹಳ್ಳಿಯಲ್ಲಿ ಘಟನೆ ನಡೆದಿದ್ದು, ಬೆಂಗಳೂರಿನ ವಿಜಯನಗರದ ಸಿರಿಸ್​(22) ಮೃತ ಯುವತಿ. ಈಕೆಗೆ ಆದರ್ಶ್​ ಎಂಬಾತ ಫೇಸ್​​ಬುಕ್​​ನಲ್ಲಿ ಪರಿಚಯವಾಗಿದ್ದ. ಬಳಿಕ ಇವರಿಬ್ಬರು ಒಂದೇ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಮದುವೆ ಆಗಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗುಡ್ಡೇನಹಳ್ಳಿಯಲ್ಲಿ ಮಾಲೀಕರಿಗೆ ಮದುವೆಯಾಗಿದೆ ಎಂದು ಹೇಳಿ ಬಾಡಿಗೆ

ಪೇಸ್ ಬುಕ್ ನಲ್ಲಿ ಪರಿಚಯವಾಗಿ ಮನೆಬಿಟ್ಟು ಬಂದಾಕೆ ಶವವಾಗಿ ಪತ್ತೆ Read More »

ಹೃದಯಾಘಾತ; ಜೆಡಿಎಸ್ ಯುವಮುಂದಾಳು ಸಾವು

ಸಮಗ್ರ ನ್ಯೂಸ್: ಇತ್ತೀಚೆಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿ ಕೇಳಿಬರುತ್ತಿದ್ದು ಆತಂಕ ಸೃಷ್ಟಿಸಿದೆ. ಇಂತಹ ಮತ್ತೊಂದು ಆಘಾತಕಾರಿ ಪ್ರಕರಣದಲ್ಲಿ ತುಮಕೂರು ಜಿಲ್ಲೆಯ ಕುಣಿಗಲ್​ನಲ್ಲಿ ಜೆಡಿಎಸ್​​ನ ಯುವ ಮುಖಂಡ, ತಂದೆ-ತಾಯಿಯ ಏಕೈಕ ಪುತ್ರ ಹೃದಯಾಘಾತದಿಂದಾಗಿ ಸಾವಿಗಿಡಾಗಿದ್ದಾನೆ. ಮಲ್ಲಾಘಟ್ಟ ವಾರ್ಡ್ ನೀಲತ್ತಹಳ್ಳಿ ಗೇಟ್ ನಿವಾಸಿ, ಜೆಡಿಎಸ್ ಯುವ ಮುಖಂಡ ಎಂ.ಜಿ.ಶ್ರೀನಿವಾಸ್ (32) ಸಾವಿಗೀಡಾದ ಯುವಕ. ಈತ ಗುರುವಾರ ರಾತ್ರಿ 9 ಗಂಟೆಯಲ್ಲಿ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾನೆ. ಈತ ಗಂಗಾಧರಯ್ಯ ಮತ್ತು ಗಂಗಮ್ಮ ದಂಪತಿಯ ಏಕೈಕ ಪುತ್ರ. ಶ್ರೀನಿವಾಸ ಗುರುವಾರ ಸಂಜೆ ಸ್ನೇಹಿತರೊಂದಿಗೆ ಕುಣಿಗಲ್

ಹೃದಯಾಘಾತ; ಜೆಡಿಎಸ್ ಯುವಮುಂದಾಳು ಸಾವು Read More »