ಲಾರಿಗೆ ಡಿಕ್ಕಿ ಹೊಡೆದ ಕಾರು; ಐವರು ಸಾವು

ಸಮಗ್ರ ನ್ಯೂಸ್: ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಕೇರಳದ ಅಲಪ್ಪುಳ ಜಿಲ್ಲೆಯ ಅಂಬಲಪುಳ ಬಳಿ ಸೋಮವಾರ ನಸುಕಿನ ವೇಳೆ ನಡೆದಿದೆ.

. Ad Widget . Ad Widget

ಇವರಲ್ಲಿ ನಾಲ್ವರು ತಿರುವನಂತಪುರಂ ಮೂಲದವರಾಗಿದ್ದು, ನಗರದ ಇಸ್ರೋ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ 1.30ರ ಸುಮಾರಿಗೆ ಈ ಘಟನೆ ನಡೆದಿದೆ.

. Ad Widget . . Ad Widget . Ad Widget

ಆಂಧ್ರಪ್ರದೇಶದಿಂದ ಅಕ್ಕಿ ಸಾಗಿಸುತ್ತಿದ್ದ ಲಾರಿ ಹಾಗೂ ಐವರು ಪ್ರಯಾಣಿಸುತ್ತಿದ್ದ ಕಾರು ಪರಸ್ಪರ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡಿದ್ದ ಮತ್ತೊಬ್ಬರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಅಂಬಲಪುಳ ಪೊಲೀಸರ ಪ್ರಕಾರ, ಐವರು ಕಾರಿನಲ್ಲಿದ್ದರು. ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರು ಇಸ್ರೋ ಕ್ಯಾಂಟೀನ್ ನಡೆಸುತ್ತಿದ್ದು, ಅವರಲ್ಲಿ ನಾಲ್ವರು ತಿರುವನಂತಪುರಂ ಮೂಲದವರು ಮತ್ತು ಒಬ್ಬರು ಕೇರಳದ ಕೊಲ್ಲಂ ಜಿಲ್ಲೆಯವರು. ಮೃತರನ್ನು ಪ್ರಸಾದ್, ಶಿಜು, ಅಮಲ್, ಸಚಿನ್ ಮತ್ತು ಸುಮೋದ್ ಎಂದು ಗುರುತಿಸಲಾಗಿದೆ.

Leave a Comment

Your email address will not be published. Required fields are marked *