ಕ್ರೈಂ

ಸುರತ್ಕಲ್-ಬಾಳದಲ್ಲಿ ನವವಿವಾಹಿತೆ ಆತ್ಮಹತ್ಯೆ!!

ಸಮಗ್ರ ನ್ಯೂಸ್: ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಬಾಳ ಒಟ್ಟೆ ಕಾಯರ್ ಎಂಬಲ್ಲಿ ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಉಳ್ಳಾಲ ಕೋಟೆಕಾರ್ ಮಾಡೂರು ನಿವಾಸಿ ಚಂದ್ರಶೇಖರ-ಗಿರಿಜಾ ದಂಪತಿ ಪುತ್ರಿ ದಿವ್ಯಾ(26) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆ ಒಂದೂವರೆ ವರ್ಷದ ಹಿಂದಷ್ಟೇ ಒಟ್ಟೆಕಾಯರ್ ನಿವಾಸಿ ಹರೀಶ್ ಎಂಬವರನ್ನು ಮದುವೆಯಾಗಿದ್ದರು.ದಂಪತಿ ಶನಿವಾರ ನೆರೆಮನೆಯಲ್ಲಿ ಜರುಗಿದ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ಜಗಳ ನಡೆದಿದ್ದು ದಿವ್ಯಾ ಬೇಸರಗೊಂಡು ವಾಪಸ್ ಮನೆಗೆ ಬಂದಿದ್ದರು. ಇದರಿಂದ ನೊಂದಿದ್ದ ದಿವ್ಯಾ ನಿನ್ನೆ […]

ಸುರತ್ಕಲ್-ಬಾಳದಲ್ಲಿ ನವವಿವಾಹಿತೆ ಆತ್ಮಹತ್ಯೆ!! Read More »

ಕಡಬ: ಕುಮಾರಧಾರಾ ನದಿಯಲ್ಲಿ ತೆಪ್ಪ ಮಗುಚಿ ಮಹಿಳೆ‌ ಸಾವು

ಸಮಗ್ರ ನ್ಯೂಸ್: ಕುಮಾರಧಾರ ನದಿಯಲ್ಲಿ ತೆಪ್ಪ ಮಗುಚಿ ಮಹಿಳೆಯೋರ್ವರು ಮೃತಪಟ್ಟ ಘಟನೆ ‌‌ಕಡಬ ತಾಲೂಕಿನ ಕೊಯಿಲ‌ ಎಂಬಲ್ಲಿ ನಡೆದಿದೆ. ಇಲ್ಲಿನ ಏಣಿತ್ತಡ್ಕ ನಿವಾಸಿ ಬಾಳಪ್ಪ ನಾಯ್ಕ ಎಂಬುವವರ ಪತ್ನಿ ಗೀತಾ(46) ಮೃತ ಮಹಿಳೆ. ಇವರು ಕುಮಾರಧಾರ ಹೊಳೆಯ ಇನ್ನೊಂದು ಮಗ್ಗುಲಲ್ಲಿರುವ ಅರೆಲ್ತಡ್ಕ ಎಂಬಲ್ಲಿಂದ ಹುಲ್ಲು ಸಂಗ್ರಹಿಸಿ ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ತುಂಬಿಸಿಕೊಂಡು ಹೊಳೆಯನ್ನು ತೆಪ್ಪದ ಮುಖಾಂತರ ದಾಟುತ್ತಾ ನದಿಯ ಮದ್ಯ ಭಾಗಕ್ಕೆ ಬಂದಾಗ ಜೊರಾದ ಗಾಳಿ ಬೀಸಿದ್ದು ಈ ವೇಳೆ ತೆಪ್ಪ ಮಗುಚಿ ಬಿದ್ದಿದೆ. ತೆಪ್ಪದಲ್ಲಿದ್ದ ಇನ್ನಿಬ್ಬರು

ಕಡಬ: ಕುಮಾರಧಾರಾ ನದಿಯಲ್ಲಿ ತೆಪ್ಪ ಮಗುಚಿ ಮಹಿಳೆ‌ ಸಾವು Read More »

ಮೂಲ್ಕಿ: ಬೆಳ್ಳಾಯರು-ಕೆರೆಕಾಡು ಪರಿಸರದಲ್ಲಿ ವಾಮಾಚಾರ!!

ಸಮಗ್ರ ನ್ಯೂಸ್: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಯರು, ತೋಕೂರು, ಕೆರೆಕಾಡು ಪರಿಸರದ ಮುಖ್ಯ ರಸ್ತೆಗಳಲ್ಲಿ ಅಮಾವಾಸ್ಯೆ, ಹುಣ್ಣಿಮೆಯಂದು ವಾಮಾಚಾರ ಪ್ರಯೋಗ ನಡೆಸಲಾಗುತ್ತಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತೋಕೂರು ಬಸ್ ನಿಲ್ದಾಣ ಬಳಿಯ ಕೂಡು ರಸ್ತೆ, ಟಿ ಎ ಬೋರ್ಡ್ ಬಳಿಯ ರಸ್ತೆ, ಬೆಳ್ಳಾಯರು ಮುಖ್ಯರಸ್ತೆಗಳಲ್ಲಿ ಮಧ್ಯರಾತ್ರಿಯ ವೇಳೆ ಬೈಕ್, ಸ್ಕೂಟರ್, ಕಾರ್, ರಿಕ್ಷಾಗಳು ಸಂಶಯಾಸ್ಪದವಾಗಿ ಸಂಚಾರ ನಡೆಸುತ್ತಿದ್ದು ಶನಿವಾರ ಬೆಳ್ಳಾಯರು ಟಿಎ ಬೋರ್ಡ್ ಪ್ಲೈವುಡ್ ಫ್ಯಾಕ್ಟರಿ ಬಳಿ ಇದೇ ರೀತಿ ಮಂತ್ರಿಸಿದ ನಿಂಬೆಹಣ್ಣು, ತೆಂಗಿನಕಾಯಿ

ಮೂಲ್ಕಿ: ಬೆಳ್ಳಾಯರು-ಕೆರೆಕಾಡು ಪರಿಸರದಲ್ಲಿ ವಾಮಾಚಾರ!! Read More »

ಸುಳ್ಯ: ಔಷಧಿಗೆಂದು ಆಸ್ಪತ್ರೆಗೆ ಹೋದ ಮಹಿಳೆ ನಾಪತ್ತೆ

ಸಮಗ್ರ ನ್ಯೂಸ್: ಔಷಧಿ ತರಲು ಆಸ್ಪತ್ರೆಗೆ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿರು ಬಗ್ಗೆ ಸುಳ್ಯ ತಾಲೂಕು ಮರ್ಕಂಜ ಗ್ರಾಮದಿಂದ ವರದಿಯಾಗಿದೆ. ಮರ್ಕಂಜದ ರಾಜಶೇಖರ ಎಂಬವರ ಪತ್ನಿ ನವ ವಿವಾಹಿತೆ ಕೀರ್ತಿಶ್ರೀ (26) ನಾಪತ್ತೆಯಾದವರು. ಇವರು ಜ.21ರಂದು ಎಲಿಮಲೆಯಲ್ಲಿರುವ ಆಸ್ಪತ್ರೆ ಔಷಧಿಗೆ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಆರೋಗ್ಯ ಸರಿ ಇಲ್ಲವೆಂದು ನನ್ನ ಪತ್ನಿ ನನ್ನ ಬಳಿ ಹೇಳಿದ್ದು ನಾನು ಆಕೆಯನ್ನು ಆಸ್ಪತ್ರೆಗೆ ಹೋಗಲೆಂದು ನನ್ನ ಮನೆಯಿಂದ ನನ್ನ ಜೀಪಿನಲ್ಲಿ ಬೆಳಿಗ್ಗೆ 10 ಗಂಟೆಗೆಕರೆದುಕೊಂಡು ಹೋಗಿದ್ದು

ಸುಳ್ಯ: ಔಷಧಿಗೆಂದು ಆಸ್ಪತ್ರೆಗೆ ಹೋದ ಮಹಿಳೆ ನಾಪತ್ತೆ Read More »

ಮಂಗಳೂರು: ರೈಲು ಹಳಿ ಮೇಲೆ ಅಪರಿಚಿತ ಯುವಕನ ಶವ ಪತ್ತ

ಸಮಗ್ರ ನ್ಯೂಸ್ : ಅಪರಿಚಿತ ಯುವಕನೊಬ್ಬನ ಮೃತದೇಹವು ಕುಳಾಯಿಗುಡ್ಡೆ ರೈಲ್ವೆ ಸೇತುವೆಯಿಂದ ಸುರತ್ಕಲ್ ಕಡೆಗೆ 200 ಮೀಟರ್ ದೂರದಲ್ಲಿರುವ ರೈಲ್ ಹಳಿಗಳ ಮೇಲೆ ಪತ್ತೆಯಾಗಿದೆ. ವ್ಯಕ್ತಿಯ ವಯಸ್ಸು ಸುಮಾರು 30 ವರ್ಷ ಎಂದು ಅಂದಾಜಿಸಲಾಗಿದ್ದು, ಈತ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿಯು ಕಪ್ಪು ನೈಟ್ ಪ್ಯಾಂಟ್, ಹಳದಿ ಬಣ್ಣದ ಪೂರ್ಣ ತೋಳಿನ ಶರ್ಟ್ ಮತ್ತು ಕಪ್ಪು ಜರ್ಕಿನ್ ಧರಿಸಿರುತ್ತಾರೆ. ಮೃತ ವ್ಯಕ್ತಿಯ ಸಂಬಂಧಿಕರು ಸುರತ್ಕಲ್ ಪೊಲೀಸ್ ಠಾಣೆಯನ್ನು 0824-2220540 ಗೆ ಸಂಪರ್ಕಿಸಲು ಕೋರಲಾಗಿದೆ.

ಮಂಗಳೂರು: ರೈಲು ಹಳಿ ಮೇಲೆ ಅಪರಿಚಿತ ಯುವಕನ ಶವ ಪತ್ತ Read More »

ತಂದೆ ಸಾವನ್ನಪ್ಪಿದ ಸುದ್ದಿ ತಿಳಿದು ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ ಮಗಳು

ಸಮಗ್ರ ನ್ಯೂಸ್: ತಂದೆ ಹೃದಯಾಘಾತದಿಂದ ಸಾವಿಗೀಡಾದ ಸುದ್ದಿ ತಿಳಿದು ಪುತ್ರಿ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯ ಬರ್ಖೇಡ ಜಾಗಿರ್ ಎಂಬ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರು ಶುಕ್ರವಾರ ಬೆಳಗ್ಗೆ ತೀವ್ರತರವಾದ ಎದೆನೋವಿಗೆ ತುತ್ತಾಗಿದ್ದರು. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಸ್ಪತ್ರೆಗೆ ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತಪಡಿಸಿದ್ದರು. ಆಸ್ಪತ್ರೆಯಲ್ಲಿದ್ದವರು ಮೊಬೈಲ್‌ ಫೋನ್ ಮೂಲಕ ಕರೆ ಮಾಡಿ ಕುಟುಂಬಸ್ಥರಿಗೆ ಈ ವಿಚಾರ ತಿಳಿಸಿದ್ದಾರೆ.

ತಂದೆ ಸಾವನ್ನಪ್ಪಿದ ಸುದ್ದಿ ತಿಳಿದು ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ ಮಗಳು Read More »

ಮೈಸೂರು: ಚಿರತೆ ದಾಳಿಗೆ ಬಾಲಕ ಬಲಿ

ಸಮಗ್ರ ನ್ಯೂಸ್: ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ನರಭಕ್ಷಕ ಚಿರತೆ ದಾಳಿಗೆ 11 ವರ್ಷದ ಬಾಲಕ ಬಲಿಯಾಗಿರುವ ಘಟನೆ ನಡೆದಿದೆ. ಟಿ.ನರಸೀಪುರ ತಾಲೂಕಿನ ಹೊರಹಳ್ಳಿಯಲ್ಲಿ ನಿನ್ನೆ ರಾತ್ರಿಯಿಂದ 11 ವರ್ಷದ ಬಾಲಕ ಸಂಜಯ್ ಕಾಣೆಯಾಗಿದ್ದ. ಬಳಿಕ ಇಂದು ಬೆಳಗ್ಗೆ ಬಾಲಕನ ರುಂಡವಿಲ್ಲದ ಮೃತದೇಹ ಪತ್ತೆಯಾಗಿದ್ದು, ನರಭಕ್ಷಕ ಚಿರತೆ ದಾಳಿ ಮಾಡಿ ಬಾಲಕನನ್ನು ಕೊಂದು ರುಂಡವನ್ನು ತಿಂದು ಹಾಕಿದೆ. ರಾತ್ರಿಯಿಂದ ಬಾಲಕ ಸಂಜಯ್ ಕಾಣೆಯಾಗಿದ್ದು, ಗ್ರಾಮಸ್ಥರು ರಾತ್ರಿಯೆಲ್ಲ ಬಾಲಕನಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಇಂದು

ಮೈಸೂರು: ಚಿರತೆ ದಾಳಿಗೆ ಬಾಲಕ ಬಲಿ Read More »

ಕಾಸರಗೋಡು: ನಾಪತ್ತೆಯಾಗಿದ್ದ ಅನ್ಯಕೋಮಿನ ಜೋಡಿ ಲಾಡ್ಜ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಸಮಗ್ರ ನ್ಯೂಸ್: ನಾಪತ್ತೆಯಾಗಿದ್ದ ವಿವಿಧ ಧರ್ಮಗಳಿಗೆ ಸೇರಿದ ಜೋಡಿಯೊಂದು ಕಾಸರಗೋಡಿನ ಲಾಡ್ಜ್‌ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತರನ್ನು ರಾಜಾಪುರ ಕಲ್ಲಾರು ಒಕ್ಲಾವು ನಿವಾಸಿ ಕೆ.ಎಂ. ಮಹಮ್ಮದ್ ಶರೀಫ್ (40) ಮತ್ತು ಕಲ್ಲಾರು ಅಡಕಂ ಪುಲಿಕುಳಿಯ ಸಿಂಧು (36) ಎಂದು ಗುರುತಿಸಲಾಗಿದೆ. ಜನವರಿ 7ರಂದು ಇಬ್ಬರೂ ನಾಪತ್ತೆಯಾಗಿದ್ದರು. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ರಾಜಾಪುರ ಪೊಲೀಸರು ಜೋಡಿಗಾಗಿ ಹುಡುಕಾಟ ನಡೆಸಿದ್ದರು. ಇದೀಗ ಗುರುವಾಯೂರು ಪಡಿಯಾರ ನಾಡೆಯ ಲಾಡ್ಜ್‌ನ ಕೊಠಡಿಯೊಳಗೆ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರೂ ಪತ್ತೆಯಾಗಿದ್ದಾರೆ.

ಕಾಸರಗೋಡು: ನಾಪತ್ತೆಯಾಗಿದ್ದ ಅನ್ಯಕೋಮಿನ ಜೋಡಿ ಲಾಡ್ಜ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ Read More »

ನೀರಿನ ಟ್ಯಾಂಕ್ ಗೆ ಬಿದ್ದು ವಾಟರ್ ಮ್ಯಾನ್ ಸಾವು

ಸಮಗ್ರ ನ್ಯೂಸ್: ಗ್ರಾಮ ಪಂಚಾಯತ್ ನ ವಾಟರ್ ಮ್ಯಾನ್ ಕೆಲಸ ನಿರ್ವಹಿಸುತ್ತಿರುವ ಯುವಕನೋರ್ವ ಆಕಸ್ಮಿಕವಾಗಿ ಕಾಲು ಜಾರಿ ಕುಡಿಯುವ ನೀರಿನ ಟ್ಯಾಂಕ್ ಒಳಗಡೆ ಬಿದ್ದು ಮೃತಪಟ್ಟ ಘಟನೆ ಮಡಿಕೇರಿ ತಾಲೂಕಿನ ಚೆಂಬು ಗ್ರಾಮದಿಂದ ವರದಿಯಾಗಿದೆ. ಯು.ಚೆಂಬು ಗ್ರಾಮದ ಮಾರ್ಪಡ್ಕ ನಿವಾಸಿ ಬೊಳುಗಲ್ಲು ಆನಂದ ರವರ ಪುತ್ರ ನಿತಿನ್ (26) ಮೃತಪಟ್ಟ ದುರ್ದೈವಿ. ಈತ ಪಂಚಾಯತ್ ಟ್ಯಾಂಕ್ ನಿಂದ ನೀರು ಬಿಡಲು ತೆರಳಿದ್ದು, ಬಾರದೇ ಇದ್ದುದರಿಂದ ಅನುಮಾನಗೊಂಡು ಹುಡುಕಿಕೊಂಡು ಹೋದ ವೇಳೆ ಘಟನೆ ಬೆಳಕಿಗೆ ಬಂದಿದೆ. ಮೃತರು ತಂದೆ,ತಾಯಿ,ಹಾಗೂ

ನೀರಿನ ಟ್ಯಾಂಕ್ ಗೆ ಬಿದ್ದು ವಾಟರ್ ಮ್ಯಾನ್ ಸಾವು Read More »

ಓವರ್ ಲೋಡ್ ನಿಂದ ಮುಳುಗಿದ ಮೋಟಾರ್ ಬೋಟ್| 145 ಮಂದಿ ಜಲಸಮಾದಿ

ಸಮಗ್ರ ನ್ಯೂಸ್: 200 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮೋಟಾರ್ ಬೋಟ್ ಓವರ್ ಲೋಡ್ ನಿಂದಾಗಿ ಮುಳುಗಡೆಯಾದ ಘಟನೆ ಕಾಂಗೋ ದೇಶದ ಲುಲೋಂಗಾ ನದಿಯಲ್ಲಿ ನಡೆದಿದೆ .ಈ ಅವಘಡದಲ್ಲಿ 145 ಮಂದಿ ಸಾವನ್ನಪ್ಪಿದ್ದು, ಉಳಿದ 55 ಮಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರೆಲ್ಲರೂ ತಮ್ಮ ಸರಕು ಮತ್ತು ಜಾನುವಾರುಗಳೊಂದಿಗೆ ರಿಪಬ್ಲಿಕ್ ಆಫ್ ಕಾಂಗೋಗೆ ತೆರಳುತ್ತಿದ್ದಾಗ ಬಸಾಂಕುಸು ಪಟ್ಟಣದ ಬಳಿ ಮಂಗಳವಾರ ರಾತ್ರಿ ಅಪಘಾತ ಸಂಭವಿಸಿದೆ. ಪ್ರಯಾಣಿಕರು, ಸರಕುಗಳು ಮತ್ತು ಜಾನುವಾರುಗಳು ತುಂಬಿದ್ದ ದೋಣಿ ನದಿಯಲ್ಲಿ ಮುಳುಗಿದೆ.

ಓವರ್ ಲೋಡ್ ನಿಂದ ಮುಳುಗಿದ ಮೋಟಾರ್ ಬೋಟ್| 145 ಮಂದಿ ಜಲಸಮಾದಿ Read More »