ಕ್ರೈಂ

ಟಯರ್ ಬದಲಿಸುವ ವೇಳೆ ಜಾಕ್ ಮುರಿದು ಇಬ್ಬರು ದುರ್ಮರಣ

ಸಮಗ್ರ‌ ನ್ಯೂಸ್: ಟ್ರ್ಯಾಕ್ಟರ್ ಟೈರ್ ಬದಲಿಸುವಾಗ ಜಾಕ್ ಮುರಿದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ನಡೆದಿದೆ. ಕೊಪ್ಪ ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ಟ್ರ್ಯಾಕ್ಟರ್ ಟೈರ್ ಬದಲಾಯಿಸುವಾಗ ಜಾಕ್ ಮುರಿದ ಪರಿಣಾಮ ಟ್ರ್ಯಾಕ್ಟರ್ ನ ಟ್ರಾಲಿ ಕೆಳಗೆ ಸಿಲುಕಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಸುಬ್ರಹ್ಮಣ್ಯ (30) ಹಾಗೂ ಸುನೀಲ್ (27) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಹರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಯರ್ ಬದಲಿಸುವ ವೇಳೆ ಜಾಕ್ ಮುರಿದು ಇಬ್ಬರು ದುರ್ಮರಣ Read More »

ಸ್ಕೂಟರ್ ನಲ್ಲಿ ತೆರಳುತ್ತಿದ್ದ ಮಹಿಳೆಗೆ ಗುಂಡಿಕ್ಕಿ ಹತ್ಯೆ

ಸಮಗ್ರ ನ್ಯೂಸ್: ದೆಹಲಿಯ ಪಶ್ಚಿಮ ವಿಹಾರ್‌ ನಲ್ಲಿ ಸೋಮವಾರ 32 ವರ್ಷದ ಮಹಿಳೆಯೊಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.ಪೊಲೀಸರ ಪ್ರಕಾರ, ಮೃತರನ್ನು ಜ್ಯೋತಿ ಎಂದು ಗುರುತಿಸಲಾಗಿದ್ದು, ಘಟನೆ ಸಂಭವಿಸಿದಾಗ ಸಂಜೆ 7:30 ರ ಸುಮಾರಿಗೆ ತನ್ನ ಕಚೇರಿಯಿಂದ ಹಿಂತಿರುಗುತ್ತಿದ್ದರು. ಮಹಿಳೆ ಫ್ಲಿಪ್‌ ಕಾರ್ಟ್‌ ನ ಕೊರಿಯರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಮೃತಳ ಪತಿ ದೀಪಕ್ ಅವರು ತಮ್ಮ ಮನೆಗೆ ಹೋಗುತ್ತಿದ್ದಾಗ ಇಬ್ಬರು ವ್ಯಕ್ತಿಗಳು ಬೈಕ್‌ ನಲ್ಲಿ ಬಂದಿದ್ದು, ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾರೆ. ಘಟನೆಯ ನಂತರ ಡಿಸಿಪಿ ಹರೇಂದ್ರ

ಸ್ಕೂಟರ್ ನಲ್ಲಿ ತೆರಳುತ್ತಿದ್ದ ಮಹಿಳೆಗೆ ಗುಂಡಿಕ್ಕಿ ಹತ್ಯೆ Read More »

ಬೆಳ್ತಂಗಡಿ: ವೈಯಕ್ತಿಕ ವೀಡಿಯೋ ವೈರಲ್ ಬೆದರಿಕೆ|ಭಯಗೊಂಡ ವಿದ್ಯಾರ್ಥಿ ಆತ್ಮಹತ್ಯೆ

ಸಮಗ್ರ ನ್ಯೂಸ್: ವೈಯಕ್ತಿಕ ವೀಡಿಯೋ ವೈರಲ್ ಮಾಡೋದಾಗಿ ಅಪರಿಚಿತ ವ್ಯಕ್ತಿ ಬೆದರಿಕೆ ಹಾಕಿದ್ದರಿಂದ ಭಯಗೊಂಡ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿಯ ಖಾಸಗಿ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಹರ್ಷಿತ್ ಮೃತ ವ್ಯಕ್ತಿ. ಈತನಿಗೆ ಇನ್ ಸ್ಟಾಗ್ರಾಂ ನಲ್ಲಿ  ಅಪರಿಚಿತ ವ್ಯಕ್ತಿ ಪರಿಚಯವಾಗಿದ್ದು, ಇವರು ಚಾಟ್ ಮಾಡುತ್ತಿದ್ದಲ್ಲದೆ  ವೀಡಿಯೋಕಾಲ್ ಮಾಡಿ ಮಾತನಾಡುತ್ತಿದ್ದರೆನ್ನಲಾಗಿದೆ.  ಈ ನಡುವೆ ಅಪರಿಚಿತ  ತನ್ನ ಬಳಿ  ನಿನ್ನ ವೈಯುಕ್ತಿಕ ವೀಡಿಯೋ ಇದೆ, ಹಣ ನೀಡದಿದ್ದಲ್ಲಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಆದರೆ ಹಣ ನೀಡಲು ಸಾಧ್ಯವಾಗದ ವಿದ್ಯಾರ್ಥಿ ಭಯಗೊಂಡು ಮನೆಯಲ್ಲಿ ಜ.24 ರಂದು ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮನೆಯವರು ಇದನ್ನು ಗಮನಿಸಿದ್ದು ಕೂಡಲೇ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ . ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಳ್ತಂಗಡಿ: ವೈಯಕ್ತಿಕ ವೀಡಿಯೋ ವೈರಲ್ ಬೆದರಿಕೆ|ಭಯಗೊಂಡ ವಿದ್ಯಾರ್ಥಿ ಆತ್ಮಹತ್ಯೆ Read More »

ಕಾರ್ಕಳ: ಟೈಮಿಂಗ್ ವಿಚಾರದಲ್ಲಿ ಸರ್ಕಾರಿ ಬಸ್ ಚಾಲಕ, ಖಾಸಗಿ ಬಸ್ ಕಂಡಕ್ಟರ್ ನಡುವೆ ಮಾರಾಮಾರಿ

ಸಮಗ್ರ ನ್ಯೂಸ್: ಟೈಮಿಂಗ್ ವಿಚಾರದಲ್ಲಿ ಸರ್ಕಾರಿ ಬಸ್ ಚಾಲಕ ಹಾಗೂ ಖಾಸಗಿ ಬಸ್ ನಡುವೆ ನಿರ್ವಾಹಕ ಹೊಡೆದಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ಬಸ್ ನಿಲ್ದಾಣದಲ್ಲಿ ನಡೆದಿದೆ. ಸರಕಾರಿ ಬಸ್ ಚಾಲಕ ಮೊಹಮ್ಮದ್ ಸೈಯದ್ ಮತ್ತು ಖಾಸಗಿ ಬಸ್ ಕಂಡಕ್ಟರ್ ಟೈಮಿಂಗ್ ವಿಚಾರದಲ್ಲಿ ಮೊದಲು ಜಗಳವಾಡಿದ್ದು, ನಂತರ ಜಗಳ ತಾರಕಕ್ಕೆ ಏರಿ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಅಲ್ಲದೇ ಸರ್ಕಾರಿ ಬಸ್ ಚಾಲಕ ಖಾಸಗಿ ಬಸ್ ನಿರ್ವಾಹಕನಿಗೆ ಚಪ್ಪಲಿ ಏಟು ನೀಡಿದ ಘಟನೆಯೂ ನಡೆಯಿತು. ಸದ್ಯ ಇಬ್ಬರೂ ಬಡಿದಾಡಿಕೊಂಡ ವಿಡಿಯೋ

ಕಾರ್ಕಳ: ಟೈಮಿಂಗ್ ವಿಚಾರದಲ್ಲಿ ಸರ್ಕಾರಿ ಬಸ್ ಚಾಲಕ, ಖಾಸಗಿ ಬಸ್ ಕಂಡಕ್ಟರ್ ನಡುವೆ ಮಾರಾಮಾರಿ Read More »

ಖ್ಯಾತ ಸಾಹಿತಿ ಕೆ.ವಿ ತಿರುಮಲೇಶ್ ಇನ್ನಿಲ್ಲ

ಸಮಗ್ರ ನ್ಯೂಸ್: ಕನ್ನಡದ ಖ್ಯಾತ ಕತೆಗಾರ, ಕವಿ ವಿಮರ್ಶಕ ಕೆ.ವಿ. ತಿರುಮಲೇಶ್ (82) ಕೆಲಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಇಂದು(ಜ.30) ಮುಂಜಾನೆ ಹೈದರಾಬಾದಿನ ತಮ್ಮ ಮಗಳ ನಿವಾಸದಲ್ಲಿ ನಿಧನರಾಗಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ಕಾರಡ್ಕ ಗ್ರಾಮದಲ್ಲಿ 1940ರ ಸೆಪ್ಟೆಂಬರ್ 12ರಂದು ಜನಿಸಿದ ತಿರುಮಲೇಶ್ ಇವರು ಕನ್ನಡ ಭಾಷೆಯ ಬಹು ಮುಖ್ಯ ಕವಿ, ಕತೆಗಾರ, ಭಾಷಾ ವಿಜ್ಞಾನಿ, ವಿದ್ವಾಂಸ ಹಾಗೂ ವಿಮರ್ಶಕರಾಗಿ ಗುರುತಿಸಿಕೊಂಡಿದ್ದರು. ಕೆ.ವಿ. ತಿರುಮಲೇಶ್ ಕನ್ನಡದ ನವ್ಯಸಾಹಿತ್ಯದ ಸಂದರ್ಭದಲ್ಲಿ ಬರೆಯಲು ತೊಡಗಿದವರು. ಸುಮಾರು ಐದು ದಶಕಗಳ ಕಾಲ ಕವಿತೆ,

ಖ್ಯಾತ ಸಾಹಿತಿ ಕೆ.ವಿ ತಿರುಮಲೇಶ್ ಇನ್ನಿಲ್ಲ Read More »

ಒಡಿಶಾ ಗುಂಡಿನ ದಾಳಿ ಪ್ರಕರಣ|ಸಾವು ಬದುಕಿನ ನಡುವೆ ಹೋರಾಡಿ ಅಸುನೀಗಿದ ಸಚಿವ ನಬಾ ದಾಸ್

ಸಮಗ್ರ ನ್ಯೂಸ್: ಗುಂಡಿನ ದಾಳಿಗೊಳಗಾದ ಕೆಲವೇ ಗಂಟೆಗಳ ನಂತರ, ಒಡಿಶಾ ಆರೋಗ್ಯ ಸಚಿವ ನಬಾ ದಾಸ್ ಭಾನುವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪಾಯಿಂಟ್ ಬ್ಲಾಂಕ್ ರೇಂಜ್ ನಿಂದ ಅವರ ಮೇಲೆ ಗುಂಡು ಹಾರಿಸಿದ ನಂತರ ಸಚಿವರಿಗೆ ಗಂಭೀರ ಗಾಯಗಳಾಗಿತ್ತು. ಜಾರ್ಸುಗುಡ ಜಿಲ್ಲೆಯ ಬ್ರಜರಾಜನಗರದ ಪಶ್ಚಿಮ ಒಡಿಶಾ ಪಟ್ಟಣದ ಜನನಿಬಿಡ ಚೌಕದಲ್ಲಿ ಈ ಘಟನೆ ನಡೆದಿತ್ತು. “ದಾಳಿಯಲ್ಲಿ, ಒಂದೇ ಗುಂಡು ದೇಹವನ್ನು ಪ್ರವೇಶಿಸಿ ನಿರ್ಗಮಿಸಿತ್ತು, ಹೃದಯ ಮತ್ತು ಎಡ ಶ್ವಾಸಕೋಶಕ್ಕೆ ಹಾನಿಯಾಗಿತ್ತು

ಒಡಿಶಾ ಗುಂಡಿನ ದಾಳಿ ಪ್ರಕರಣ|ಸಾವು ಬದುಕಿನ ನಡುವೆ ಹೋರಾಡಿ ಅಸುನೀಗಿದ ಸಚಿವ ನಬಾ ದಾಸ್ Read More »

ಬೈಕ್‌ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ| ತಂದೆ- ಮಗಳು ಸಾವು

ಸಮಗ್ರ ನ್ಯೂಸ್: ಬೈಕ್ ಹಾಗೂ ಖಾಸಗಿ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ ಮತ್ತು ಮಗಳು ಮೃತಪಟ್ಟಿರುವ ದಾರುಣ ಘಟನೆ ಕುಣಿಗಲ್ ನ ಬನ್ನಿಮರದಕಟ್ಟೆ ಸಮೀಪ ಭಾನುವಾರ ರಾತ್ರಿ ಸಂಭವಿಸಿದೆ. ಮೂಲತಃ ಗುಬ್ಬಿ ತಾಲೂಕು ಸಿಎಸ್ ಪುರ ಹೋಬಳಿ ನಟ್ಟಿಗೆರೆ ಗ್ರಾಮದ, ಈಗ ಬೆಂಗಳೂರಿನ ಸುಂಕದಕಟ್ಟೆ ವಾಸಿ ತಿರುಮಲೇಗೌಡ( 50) ಮತ್ತು ಪುತ್ರಿ ಚಂದನ (20) ಮೃತಪಟ್ಟ ದುರ್ದೈವಿಗಳು. ತಿರುಮಲೇಗೌಡ ತನ್ನ ಸ್ವಗ್ರಾಮ ನಟ್ಟಿಗೆರೆ ಗ್ರಾಮಕ್ಕೆ ಹಬ್ಬಕ್ಕೆ ಬಂದು ಹಬ್ಬ ಮುಗಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಬೆಂಗಳೂರಿನ

ಬೈಕ್‌ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ| ತಂದೆ- ಮಗಳು ಸಾವು Read More »

“ನಾನು ಕೋಮುವಾದಿಯಲ್ಲ, ನನಗೆ ರಾಷ್ಟ್ರಭಕ್ತರ ವೋಟ್ ಮಾತ್ರ ಸಾಕು”
-ಡಾ. ಭರತ್ ಶೆಟ್ಟಿ

ಸಮಗ್ರ ನ್ಯೂಸ್ : “ನಾನು ಕೋಮುವಾದಿಯಲ್ಲ, ನಾನು ಯಾರನ್ನೂ ದ್ವೇಷಿಸುವುದಿಲ್ಲ. ನನಗೆ ಎಲ್ಲಾ ಧರ್ಮವೂ ಒಂದೇ, ನನಗೆ ರಾಷ್ಟ್ರಭಕ್ತರ ವೋಟ್ ಸಿಕ್ಕಿದ್ರೆ ಸಾಕು, ರಾಷ್ಟ್ರಭಕ್ತರ ವೋಟ್ ನಾನು ಕೇಳುತ್ತೇನೆ ಎಂದು ಭರತ್ ಶೆಟ್ಟಿ ಹೇಳಿದರು. ಹಿಂದೆ ಕೃಷ್ಣಾಪುರದ ಯುವಕ ಗೋಸಾಗಾಟ ಮಾಡುತ್ತಿದ್ದಾಗ ಪೊಲೀಸ್ ಗುಂಡೇಟಿಗೆ ಬಲಿಯಾದಾಗ ಆತನ ಕುಟುಂಬಕ್ಕೆ 15 ಲಕ್ಷ ಹಣವನ್ನು ಸರಕಾರದಿಂದ ಕೊಡಿಸಿದ್ದ ಮಾಜಿ ಶಾಸಕರು ಈಗ ಹಿಂದೂಗಳ ಮನೆಗೆ ಹೋಗಿ ಕಣ್ಣೀರು ಒರೆಸುವ ನಾಟಕವಾಡುತ್ತಿದ್ದಾರೆ. ಗೋಹತ್ಯೆ, ಲವ್ ಜಿಹಾದ್ ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ.

“ನಾನು ಕೋಮುವಾದಿಯಲ್ಲ, ನನಗೆ ರಾಷ್ಟ್ರಭಕ್ತರ ವೋಟ್ ಮಾತ್ರ ಸಾಕು”
-ಡಾ. ಭರತ್ ಶೆಟ್ಟಿ
Read More »

ಪುತ್ತೂರು: ಕಂಬಳ ಕಾರ್ಯಕ್ರಮದಲ್ಲಿ ನಟಿ ಸಾನ್ಯಾ ಅಯ್ಯರ್ ಕೈಹಿಡಿದೆಳೆದ ಅಭಿಮಾನಿ| ಮುಜುಗರಕ್ಕೊಳಗಾದ ಬಿಗ್ ಬಾಸ್ ತಾರೆ

ಸಮಗ್ರ ನ್ಯೂಸ್: ಕರಾವಳಿಯ ಪುತ್ತೂರಿನಲ್ಲಿ ನಡೆಯುತ್ತಿರುವ ಕಂಬಳದಲ್ಲಿ ಬಿಗ್​ಬಾಸ್ ಖ್ಯಾತಿಯ ನಟಿ ಸಾನ್ಯಾ ಐಯ್ಯರ್ ಅವರ ಕೈ ಹಿಡಿದು ಎಳೆದ ಘಟನೆ ನಡೆದಿದೆ. ನಟಿ ಭಾಷಣ ಮಾಡುತ್ತಿದ್ದ ಸಮಯದಲ್ಲಿ ಐ ಲವ್ ಯೂ ಎಂದು ಹೇಳಿ ಕಿರುಚುತ್ತಿದ್ದ ಅಭಿಮಾನಿ ಬಳಿಕ ವೇದಿಕೆಯಿಂದ ಇಳಿದ ನಟಿಯ ಕೈ ಹಿಡಿದಿದ್ದಾನೆ. ಈ ದಿಢೀರ್ ಘಟನೆಯಿಂದ ನಟಿ ಮುಜುಗರಕ್ಕೊಳಗಾಗಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅದ್ಧೂರಿ ಕಂಬಳ ನಡೆಯುತ್ತಿದೆ. ಜಾತ್ರೆಯಂತೆ ಅದ್ಧೂರಿಯಾಗಿ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ವೀಕ್ಷಿಸಲು ನೆರೆಯ ಕೇರಳದಿಂದಲೂ ಜನರು ಹೆಚ್ಚಿನ

ಪುತ್ತೂರು: ಕಂಬಳ ಕಾರ್ಯಕ್ರಮದಲ್ಲಿ ನಟಿ ಸಾನ್ಯಾ ಅಯ್ಯರ್ ಕೈಹಿಡಿದೆಳೆದ ಅಭಿಮಾನಿ| ಮುಜುಗರಕ್ಕೊಳಗಾದ ಬಿಗ್ ಬಾಸ್ ತಾರೆ Read More »

ಬೆಳ್ತಂಗಡಿ: ಮನೆಯ ಶೌಚಾಲಯದಲ್ಲಿ ಬಾಲಕಿಯ ಶವ..?

ಸಮಗ್ರ ನ್ಯೂಸ್: ಮನೆಯ ಶೌಚಾಲಯದಲ್ಲಿ ವಿದ್ಯಾರ್ಥಿನಿಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಕಳಿಯಾ ಗ್ರಾಮದಲ್ಲಿ ಜ. 28ರ ಶನಿವಾರ ನಡೆದಿದೆ. ಕಣಿಯೂರು ಗ್ರಾಮದ ಕಜೆ ಮನೆ ನಿವಾಸಿ ಅಬ್ದುಲ್‌ ರಜಾಕ್‌ ಅವರ ಪುತ್ರಿ ಆಫೀಫಾ (16) ಸಾವನ್ನಪ್ಪಿದ ಬಾಲಕಿ. ಕಳಿಯಾ ಗ್ರಾಮದ ಐಮನ್‌ ಆರ್ಕೆಡ್‌ನ‌ಲ್ಲಿರುವ ಹಸೈನಾರ್‌ ಅವರ ಮನೆಯ ಶೌಚಾಲಯದೊಳಗೆ ಬಾಲಕಿ ಮೃತಪಟ್ಟಿದ್ದಾಳೆ. ಶನಿವಾರ ಗೇರುಕಟ್ಟೆಯಲ್ಲಿರುವ ಶಾಲೆಗೆ ತಂದೆಯೊಂದಿಗೆ ಈಕೆ ಬಂದಿದ್ದಳು. ತಂದೆಗೆ ಬೇರೆ ಕೆಲಸವಿದ್ದ ಕಾರಣ ಬಾಲಕಿಯನ್ನು ಕುಪ್ಪೆಟ್ಟಿಯಲ್ಲಿ ಬಿಟ್ಟು ಮಂಗಳೂರಿಗೆ ತೆರಳಿದ್ದರು. ಈ ವೇಳೆ ಬಾಲಕಿ

ಬೆಳ್ತಂಗಡಿ: ಮನೆಯ ಶೌಚಾಲಯದಲ್ಲಿ ಬಾಲಕಿಯ ಶವ..? Read More »