ಕ್ರೈಂ

ಟರ್ಕಿ‌ ಭೂಕಂಪ; ಮೂತ್ರ ಕುಡಿದು 94 ಗಂಟೆಗಳ ಕಾಲ ಅವಶೇಷಗಳ ಅಡಿಯಲ್ಲಿ ಬದುಕುಳಿದ ಬಾಲಕ

ಸಮಗ್ರ ನ್ಯೂಸ್: ಟರ್ಕಿಯ ಭೀಕರ ಭೂಕಂಪದಲ್ಲಿ ಸಿಲುಕಿರುವವರ ರಕ್ಷಣೆ ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಹಲವರನ್ನು ರಕ್ಷಿಸಲಾಗುತ್ತಿದೆ. 94‌ ಗಂಟೆಗಳ ಕಾಲ ಅವಶೇಷಗಳಡಿಯಲ್ಲಿ ಸಿಲುಕಿದ್ದ ಅದ್ನಾನ್ ಮುಹಮ್ಮದ್ ಕೊರ್ಕುಟ್ ಎಂಬ 17 ವರ್ಷದ ಬಾಲಕನನ್ನು ರಕ್ಷಣಾ ತಂಡಗಳು ರಕ್ಷಿಸಿದ್ದು, ಆತನ ಕರುಣಾಜನಕ ಕತೆಯನ್ನು ಮಾಧ್ಯಮಗಳು ವರದಿ ಮಾಡಿದೆ. ಸುಮಾರು 94 ಗಂಟೆಗಳ ಕಾಲ ಅವಶೇಷಗಳಡಿಯಲ್ಲಿ ಸಿಲುಕಿಕೊಂಡಿದ್ದ ಆತ ತನ್ನ ಕುಟುಂಬದ ಮನೆಯಲ್ಲಿ ನಿದ್ರಿಸುತ್ತಿದ್ದ ವೇಳೆ ಭೂಕಂಪ ಸಂಭವಿಸಿದೆ. ಅವಶೇಷಗಳಡಿಯಲ್ಲಿ ಸಿಲುಕಿದ್ದ ಆತ ತನ್ನ ಸ್ವಂತ ಮೂತ್ರವನ್ನು ಕುಡಿದು ಬದುಕಿದ್ದೇನೆ

ಟರ್ಕಿ‌ ಭೂಕಂಪ; ಮೂತ್ರ ಕುಡಿದು 94 ಗಂಟೆಗಳ ಕಾಲ ಅವಶೇಷಗಳ ಅಡಿಯಲ್ಲಿ ಬದುಕುಳಿದ ಬಾಲಕ Read More »

ಸುಳ್ಯ: ನದಿಯಲ್ಲಿ ಮುಳುಗಿ ಯುವಕರಿಬ್ಬರು ದುರ್ಮರಣ

ಸಮಗ್ರ ನ್ಯೂಸ್: ಯುವಕರಿಬ್ಬರು ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸುಳ್ಯ ನಗರ ಸಮೀಪದ ದೊಡ್ಡೇರಿಯಲ್ಲಿ ನಡೆದಿದೆ. ಸ್ಥಳೀಯರು ಅವರನ್ನು ರಕ್ಷಿಸುವ ಪ್ರಯತ್ನ ಮಾಡಿದರಾದರೂ ಆ ವೇಳೆಗೆ ಅವರು ಕೊನೆಯುಸಿರೆಳೆದಿದ್ದರು. ಮೃತದೇಹಗಳನ್ನು ಸರಕಾರಿ ಆಸ್ಪತ್ರೆಗೆ ತರಲಾಗಿದೆ ಎಂದು ತಿಳಿದುಬಂದಿದೆ. ಪುತ್ತೂರಿನ ಕೌಡಿಚ್ಚಾರು ಪರಿಸರದ ಆರು ಯುವಕರು ಕಾರಿನಲ್ಲಿ ಸುಳ್ಯಕ್ಕೆ ಬಂದು ಓಡಬಾಯಿ ತೂಗು ಸೇತುವೆ ಬಳಿ ಕಾರು ನಿಲ್ಲಿಸಿ ದೊಡ್ಡೇರಿಯವರೆಗೆ ಹೋಗಿ ಬಂದು ಬಳಿಕ ಪಯಸ್ವಿನಿ ನದಿಗೆ ಈಜಲೆಂದು ಇಳಿದಿದ್ದರು. ಅವರಲ್ಲೋರ್ವ ನೀರುಪಾಲಾದಾಗ ರಕ್ಷಿಸಲು ಹೋದ ಮತ್ತೊಬ್ಬ ಕೂಡಾ

ಸುಳ್ಯ: ನದಿಯಲ್ಲಿ ಮುಳುಗಿ ಯುವಕರಿಬ್ಬರು ದುರ್ಮರಣ Read More »

ಕಬಡ್ಡಿ ಆಟದ ವೇಳೆ ಕೋರ್ಟ್ ನಲ್ಲೇ ಪ್ರಾಣಬಿಟ್ಟ ಆಟಗಾರ| ವಿಡಿಯೋ ವೈರಲ್

ಸಮಗ್ರ ನ್ಯೂಸ್: ಕಬಡ್ಡಿ ಆಡಲು ಹೋದ ಆಟಗಾರ ಶವವಾಗಿ ಮನೆಗೆ ಬಂದ ವಿದ್ರಾವಕ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು , ಈ ವಿಡಿಯೋ ವೈರಲ್ ಆಗಿದೆ. ಮುಂಬೈನ ಮಲಾದ್​​ನಲ್ಲಿ ಕಬಡ್ಡಿ ಟೂರ್ನಮೆಂಟ್ ನಡೆದಿತ್ತು. ಈ ಪಂದ್ಯಾಟದ ವೇಳೆ ಆಟಗಾರ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಾಣುವಂತೆ, ಸಾವನ್ನಪ್ಪಿರುವ ಆಟಗಾರ ಮೊದಲು ಎದುರಾಳಿ ತಂಡದ ಮೇಲೆ ರೈಡ್ ಮಾಡಲು ಮುಂದಾಗಿದ್ದ. ಈ ವೇಳೆ ಎದುರಾಳಿ ತಂಡದವರು ಆತನನ್ನು ಔಟ್ ಮಾಡಿದ್ದಾರೆ. ನಂತರ ಕೋಟ್ ನಿಂದ

ಕಬಡ್ಡಿ ಆಟದ ವೇಳೆ ಕೋರ್ಟ್ ನಲ್ಲೇ ಪ್ರಾಣಬಿಟ್ಟ ಆಟಗಾರ| ವಿಡಿಯೋ ವೈರಲ್ Read More »

ನೇಣುಬಿಗಿದು ಕಂಬಳ ಓಟಗಾರ ಆತ್ಮಹತ್ಯೆ

ಸಮಗ್ರ ನ್ಯೂಸ್: ಕಂಬಳ‌ ಓಟಗಾರ ಉಡುಪಿಯ ಶಿರೂರು ಟೋಲ್‌ಗೇಟ್‌ ಬಳಿಯ ನಿವಾಸಿ, ಸುರೇಶ ಕಾಡಿನತಾರು (37) ಅವರು ಫೆ. 9ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋರ್ಟ್ ಪ್ರೋಸೆಸ್ ಹುದ್ದೆಯಲ್ಲಿದ್ದ ಅವರು ಪ್ರಸ್ತುತ ಪ್ರಕರಣವೊಂದಕ್ಕೆ ಸಂಬಂಧಿಸಿ ಅಮಾನತುಗೊಂಡಿದ್ದರು. ಇದರಿಂದ ಮನನೊಂದು ಪತ್ನಿಗೆ ವಾಯ್ಸ್ ಮೆಸೇಜ್ ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಟೋಲ್‌ಗೇಟ್‌ ಹಿಂಬದಿಯ ಸರಕಾರಿ ಹಾಡಿಯಲ್ಲಿ ಸುರೇಶ್ ಅವರ ಮೃತದೇಹವು ಗೇರು ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುರೇಶ್ ಮೇಲೆ ಬೈಂದೂರು ಠಾಣೆಯಲ್ಲಿ ದಾಖಲಾಗಿದ್ದ

ನೇಣುಬಿಗಿದು ಕಂಬಳ ಓಟಗಾರ ಆತ್ಮಹತ್ಯೆ Read More »

ಸ್ಕಿಡ್ ಆಗಿ ಬಿದ್ದ ಬೈಕ್ ಸವಾರನ ಮೇಲೆ ಹರಿದ‌ ಅಪರಿಚಿತ ವಾಹನ| ವಿಟ್ಲದ ಯುವಕ ಸ್ಪಾಟ್ ಡೆತ್

ಸಮಗ್ರ ನ್ಯೂಸ್: ರಾ.ಹೆ.75ರ ಅಡ್ಯಾರ್ ಕಟ್ಟೆಯ ಬಳಿ ಶುಕ್ರವಾರ ರಾತ್ರಿ ಸ್ಕಿಡ್‌ ಆಗಿ ಬಿದ್ದ ಬೈಕ್ ಸವಾರನ ಮೇಲೆ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಮೃತಪಟ್ಟ ಬೈಕ್ ಸವಾರನನ್ನು ವಿಟ್ಲ ಸಮೀಪದ ಮಾಣಿಲ ಗ್ರಾಮದ ಪಕಳಕುಂಜ ಬಾಳೆಕಾನ ನಿವಾಸಿ ಗೋಪಾಲಕೃಷ್ಣ ಮಣಿಯಾಣಿ ಮತ್ತು ಸುಧಾಮಣಿ ದಂಪತಿಯ ಪುತ್ರ ಕಾರ್ತಿಕ್ ಮಣಿಯಾಣಿ (24) ಎಂದು ಗುರುತಿಸಲಾಗಿದೆ. ಮಂಗಳೂರು ನಗರದಲ್ಲಿ ಡೆಕೋರೇಷನ್ ಕೆಲಸ ಮಾಡುತ್ತಿದ್ದ ಕಾರ್ತಿಕ್ ತನ್ನ ಮನೆಗೆ ತೆರಳುತ್ತಿದ್ದಾಗ ಶುಕ್ರವಾರ

ಸ್ಕಿಡ್ ಆಗಿ ಬಿದ್ದ ಬೈಕ್ ಸವಾರನ ಮೇಲೆ ಹರಿದ‌ ಅಪರಿಚಿತ ವಾಹನ| ವಿಟ್ಲದ ಯುವಕ ಸ್ಪಾಟ್ ಡೆತ್ Read More »

ಬೈಕ್ ಗೆ ಡಿಕ್ಕಿಯಾದ ಅಪರಿಚಿತ ವಾಹನ| ಮೂವರು ಯುವಕರು ಸ್ಥಳದಲ್ಲೇ ಸಾವು

ಸಮಗ್ರ ನ್ಯೂಸ್: ಬೈಕ್ ಗೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ತಾಲೂಕಿನ ಆನಗೋಡು ಬಳಿ ತಡರಾತ್ರಿ ಒಂದೇ ಬೈಕ್ ನಲ್ಲಿ ತೆರಳುತ್ತಿದ್ದ ದಾವಣಗೆರೆಯ ರಾಮನಗರದ ಮೂವರು ಯುವಕರಿಗೆ ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ಯುವಕರನ್ನು ದಾವಣಗೆರೆಯ ರಾಮನಗರದ ನಿವಾಸಿಗಳು ಎಂದು ಗುರುತಿಸಲಾಗಿದ್ದು, ಪರಶುರಾಮ (24), ಸಂದೇಶ (23) ಹಾಗೂ ಶಿವು (26) ಮೃತ ದುರ್ದೈವಿಗಳು.

ಬೈಕ್ ಗೆ ಡಿಕ್ಕಿಯಾದ ಅಪರಿಚಿತ ವಾಹನ| ಮೂವರು ಯುವಕರು ಸ್ಥಳದಲ್ಲೇ ಸಾವು Read More »

ಮಂಗಳೂರು ಚಿನ್ನದಂಗಡಿ ಸಿಬ್ಬಂದಿ ಕೊಲೆ ಪ್ರಕರಣ| ಶಂಕಿತ ಆರೋಪಿಯ ಭಾವಚಿತ್ರ ಬಿಡುಗಡೆಗೊಳಿಸಿದ ಪೊಲೀಸರು

ಸಮಗ್ರ ನ್ಯೂಸ್: ಮಂಗಳೂರು ನಗರದ ಬಲ್ಮಠ ರಸ್ತೆಯ ಜುವೆಲ್ಲರ್ ಅಂಗಡಿಯೊಂದರಲ್ಲಿ ಫೆ.3ರಂದು ಅಪರಾಹ್ನ ಸಿಬ್ಬಂದಿಯೊಬ್ಬನನ್ನು ಚೂರಿಯಿಂದ ಇರಿದು ಕೊಲೆಗೈದ ಪ್ರಕರಣದ ಆರೋಪಿಯ ಭಾವಚಿತ್ರವನ್ನು ಪೊಲೀಸರು ಶುಕ್ರವಾರ ಬಿಡುಗಡೆಗೊಳಿಸಿದ್ದಾರೆ. ನಗರದ ಬಲ್ಮಠ-ಹಂಪನಕಟ್ಟೆ ರಸ್ತೆಯಲ್ಲಿರುವ ಜ್ಯುವೆಲ್ಲರಿ ಅಂಗಡಿಯಲ್ಲಿ ಸೇಲ್ಸ್‌ಮ್ಯಾನ್ ಆಗಿದ್ದ ಅತ್ತಾವರ ನಿವಾಸಿ ರಾಘವೇಂದ್ರ ಆಚಾರ್ಯ (54)ರನ್ನು ಒಂಟಿಯಾಗಿದ್ದ ವೇಳೆ ಆರೋಪಿಯು ಕತ್ತು ಸೀಳಿ ಕೊಲೆಗೈದಿದ್ದ. ಊಟಕ್ಕೆ ತೆರಳಿದ್ದ ಅಂಗಡಿ ಮಾಲಕರು ಮರಳಿ ಬರುವ ವೇಳೆ 12 ಗ್ರಾಂ ಚಿನ್ನದೊಂದಿಗೆ ಆರೋಪಿ ಪರಾರಿಯಾಗಿದ್ದ. ಆರೋಪಿಯು ಚಿನ್ನ ಖರೀದಿಸುವ ಗ್ರಾಹಕರ ಸೋಗಿನಲ್ಲಿ

ಮಂಗಳೂರು ಚಿನ್ನದಂಗಡಿ ಸಿಬ್ಬಂದಿ ಕೊಲೆ ಪ್ರಕರಣ| ಶಂಕಿತ ಆರೋಪಿಯ ಭಾವಚಿತ್ರ ಬಿಡುಗಡೆಗೊಳಿಸಿದ ಪೊಲೀಸರು Read More »

ಆತ ನನ್ನ ಬೆತ್ತಲೆ ಫೋಟೋಗಳನ್ನು‌ ತೆಗೆದು ಹಣಕ್ಕಾಗಿ ಮಾರುತ್ತಿದ್ದ| ಆದಿಲ್ ವಿರುದ್ದ ಹೊಸ ಆರೋಪ ಹೊರಿಸಿದ ರಾಖಿ ಸಾವಂತ್

ಸಮಗ್ರ ನ್ಯೂಸ್: ‘ಆದಿಲ್ ಖಾನ್‌ ನನ್ನ ನಗ್ನ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮಾಡಿ ಹಣಕ್ಕಾಗಿ ಮಾರಾಟ ಮಾಡಿದ್ದಾನೆ. ಸೈಬರ್ ಕ್ರೈಮ್ ಡಿಪಾರ್ಟ್‌ಮೆಂಟ್‌ ಈ ಕೇಸ್‌ನ ನಡೆಸುತ್ತಿದೆ. ಆದಿಲ್ ನನಗೆ ದೊಡ್ಡ ಮಟ್ಟದಲ್ಲಿ ಮೋಸ ಮಾಡಿರುವ ಕಾರಣ ಆತನಿಗೆ ಬೇಲ್ ಸಿಗಬಾರದು. ಹೀಗಾಗಿ ವೈಯಕ್ತಿಕವಾಗಿ ಪ್ರತಿಯೊಂದು ವಿಚಾರಣೆಯಲೂ ಭಾಗಿಯಾಗುತ್ತಿರುವೆ. ಮೆಡಿಕಲ್ ಟೆಸ್ಟ್‌ ಮಾಡಿಸಿಕೊಂಡು ಸಂಪೂರ್ಣ ರಿಪೋರ್ಟ್‌ ಸಲ್ಲಿಸಿರುವೆ. ಆದಿಲ್ ನನಗೆ ತುಂಬಾ ಟಾರ್ಚರ್‌ ಕೊಟ್ಟಿದ್ದಾನೆ ಅಲ್ಲದೆ ನನ್ನ ಮೊಬೈಲ್‌ನಿಂದ ಓಟಿಪಿ ಪಡೆದುಕೊಂಡು ಹಣ ಹೊಡೆದಿದ್ದಾನೆ’ ಎಂದು ರಾಖಿ

ಆತ ನನ್ನ ಬೆತ್ತಲೆ ಫೋಟೋಗಳನ್ನು‌ ತೆಗೆದು ಹಣಕ್ಕಾಗಿ ಮಾರುತ್ತಿದ್ದ| ಆದಿಲ್ ವಿರುದ್ದ ಹೊಸ ಆರೋಪ ಹೊರಿಸಿದ ರಾಖಿ ಸಾವಂತ್ Read More »

ನೀರಿನ ಟ್ಯಾಂಕ್ ಗೆ ಬಿದ್ದು ಅಂಗನವಾಡಿ ಪುಟಾಣಿ ಸಾವು

ಸಮಗ್ರ ನ್ಯೂಸ್: ಅಂಗನವಾಡಿ ಪುಟಾಣಿಯೊಬ್ಬಳು ಸೆಪ್ಟಿಕ್‌ ಟ್ಯಾಂಕ್‌ಗೆ ಬಿದ್ದು ಪ್ರಾಣ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ಬೀದರ್‌ ಜಿಲ್ಲೆಯಲ್ಲಿ ನಡೆದಿದೆ. ಬೀದರ್ ಜಿಲ್ಲೆಯ ಔರಾದ ಪಟ್ಟಣದ ಟೀಚರ್ ಕಾಲೋನಿಯಲ್ಲಿರುವ ಅಂಗನವಾಡಿಯಲ್ಲಿ ದುರಂತ ನಡೆದಿದ್ದು, ಸ್ಫೂರ್ತಿ ಎಂಬ ಬಾಲಕಿ ಮೃತಪಟ್ಟಿದ್ದಾಳೆ. ಅಂಗನವಾಡಿಯ ಪಕ್ಕದಲ್ಲೇ ಕೊಳಚೆ ನೀರಿನ ಸಂಗ್ರಹ ಮತ್ತು ವಿಲೇವಾರಿಗಾಗಿ ಈ ಸೆಪ್ಟಿಕ್‌ ಟ್ಯಾಂಕನ್ನು ನಿರ್ಮಿಸಲಾಗಿದೆ. ಬಾಲಕಿ ಅಂಗನವಾಡಿಯ ತರಗತಿಯಿಂದ ಹೊರಗೆ ಬಂದು ಆಟವಾಡುತ್ತಿದ್ದ ವೇಳೆ ಆಯತಪ್ಪಿ ಸೆಪ್ಟಿಕ್‌ ಟ್ಯಾಂಕ್‌ಗೆ ಬಿದ್ದಿದ್ದಾಳೆ ಎನ್ನಲಾಗಿದೆ. ಮಗು ಟ್ಯಾಂಕ್‌ಗೆ ಬಿದ್ದಿದ್ದನ್ನು ತಿಳಿದ

ನೀರಿನ ಟ್ಯಾಂಕ್ ಗೆ ಬಿದ್ದು ಅಂಗನವಾಡಿ ಪುಟಾಣಿ ಸಾವು Read More »

ಅಂಗನವಾಡಿಯಲ್ಲಿ ಕುಕ್ಕರ್ ಸ್ಪೋಟ; ಇಬ್ಬರು ಮಕ್ಕಳಿಗೆ ಗಾಯ

ಸಮಗ್ರ ನ್ಯೂಸ್: ಅಂಗನವಾಡಿಯಲ್ಲಿ ಅಡುಗೆ ಮಾಡುವ ವೇಳೆ ಕುಕ್ಕರ್ ಸ್ಫೋಟವಾಗಿ ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಸಾವಳಗಿ ಗ್ರಾಮದ ಸಮೀಪದ ಬ್ಯಾಡಗಿ ವಸ್ತಿಯಲ್ಲಿ ನಡೆದಿದೆ. ಸಮರ್ಥ (2), ಅದ್ವೀಕ್ (4) ಗಾಯಗೊಂಡ ಬಾಲಕರು. ಅಂಗನವಾಡಿಯಲ್ಲಿ ಬುಧವಾರ ಕುಕ್ಕರ್‌ ಬ್ಲಾಸ್ಟ್‌ ಆಗಿದೆ. ಈ ವೇಳೆ ಗಾಬರಿಯಿಂದ ಮಕ್ಕಳು ಹೊರಕ್ಕೆ ಓಡುವಾಗ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು ಜಮಖಂಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಜಮಖಂಡಿ ಸಿಡಿಪಿಒ ಅನುರಾಧ ಹಾದಿಮನಿ ಪ್ರತಿಕ್ರಿಯಿಸಿ, ಮಕ್ಕಳಿಬ್ಬರೂ ಆರೋಗ್ಯವಾಗಿದ್ದಾರೆ. ಕುಕ್ಕರ್ ಬ್ಲಾಸ್ಟ್‌ನಿಂದ

ಅಂಗನವಾಡಿಯಲ್ಲಿ ಕುಕ್ಕರ್ ಸ್ಪೋಟ; ಇಬ್ಬರು ಮಕ್ಕಳಿಗೆ ಗಾಯ Read More »