ಕರಾವಳಿ

ಮಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸಭೆಗಳ ನೇರ ಪ್ರಸಾರ ಸ್ಥಗಿತ

ಸಮಗ್ರ ನ್ಯೂಸ್ : ಮಹತ್ವದ ನಿರ್ಧಾರವೊಂದರಲ್ಲಿ, ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರು ಸಿಂಡಿಕೇಟ್ ಸಭೆಗಳ ನೇರ ಪ್ರಸಾರವನ್ನು ತಕ್ಷಣವೇ ನಿಲ್ಲಿಸಲು ನಿರ್ಧರಿಸಿದ್ದಾರೆ. ಫೆಬ್ರುವರಿ 2 ರಂದು ನಡೆದ ಸಿಂಡಿಕೇಟ್ ಸಭೆಯ ನಂತರ ಈ ನಿರ್ಧಾರವು ಬಂದಿದೆ, ಇದು ವಿಶೇಷವಾಗಿ ನೇರ ಪ್ರಸಾರವನ್ನು ಹೊಂದಿಲ್ಲ. ಲೈವ್ ಸ್ಟ್ರೀಮಿಂಗ್ ಅನ್ನು ಸ್ಥಗಿತಗೊಳಿಸುವ ಕ್ರಮವು ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಆಡಳಿತಾತ್ಮಕ ಪಾರದರ್ಶಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ‘ಸುಶಾಸನ’ ಎಂಬ ಉಪಕ್ರಮದ ಅಡಿಯಲ್ಲಿ ಡಿಸೆಂಬರ್ 2022 ರಲ್ಲಿ ಪರಿಚಯಿಸಲಾದ ಹಿಂದಿನ

ಮಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸಭೆಗಳ ನೇರ ಪ್ರಸಾರ ಸ್ಥಗಿತ Read More »

ಮಂಗಳೂರು : ಆನ್‌ಲೈನ್ ಜಾಲತಾಣಕ್ಕೆ ಸಿಲುಕಿ ವ್ಯಕ್ತಿಯೊಬ್ಬರಿಗೆ ಲ.ರೂ ವಂಚನೆ

ಸಮಗ್ರ ನ್ಯೂಸ್: ಆನ್‌ಲೈನ್ ಸ್ಟಾಕ್ ಟ್ರೇಡಿಂಗ್ ಆ್ಯಪ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ವಂಚಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಅಶೋಕ ನಗರದ ನಿವಾಸಿಯೋರ್ವರು ಫೇಸ್‌ಬುಕ್ ನೋಡುತ್ತಿದ್ದಾಗ ಅದರಲ್ಲಿ ಆನ್‌ಲೈನ್ ಸ್ಟಾಕ್ ಟ್ರೇಡಿಂಗ್ ಆ್ಯಪ್ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ ಹೆಚ್ಚಿನ ಲಾಭಾಂಶ ಗಳಿಸಬಹುದು ಎಂಬ ಸಂದೇಶವಿತ್ತು. ಅದರಲ್ಲಿದ್ದ ಲಿಂಕ್ ತೆರೆದು ವಾಟ್ಸ್ ಆ್ಯಪ್ ಗ್ರೂಪ್‌ವೊಂದಕ್ಕೆ ಸೇರ್ಪಡೆಗೊಂಡಿದ್ದರು. ಬಳಿಕ ಅದರಲ್ಲಿ ಬಂದ ಸೂಚನೆಯಂತೆ ಹಂತ ಹಂತವಾಗಿ ಹಣ ಹೂಡಿಕೆ ಮಾಡಿದ್ದರು. ಆದರೆ ಯಾವುದೇ ಲಾಭಾಂಶ ನೀಡಲಿಲ್ಲ. ಈ ಬಗ್ಗೆ

ಮಂಗಳೂರು : ಆನ್‌ಲೈನ್ ಜಾಲತಾಣಕ್ಕೆ ಸಿಲುಕಿ ವ್ಯಕ್ತಿಯೊಬ್ಬರಿಗೆ ಲ.ರೂ ವಂಚನೆ Read More »

ದ.ಕ. – ಉಡುಪಿ ಗಡಿಯಲ್ಲಿ ಚೆಕ್‌ಪೋಸ್ಟ್ ಕಾರ್ಯಾರಂಭ

ಸಮಗ್ರ ನ್ಯೂಸ್ : ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದು, ಚುನಾವಣೆ ಅಕ್ರಮಗಳ ನಿಗ್ರಹಕ್ಕಾಗಿ ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ದ.ಕ. ಮತ್ತು ಉಡುಪಿ ಜಿಲ್ಲೆಗಳ ಗಡಿಭಾಗವಾಗಿರುವ ಹೆಜ ಮಾಡಿಯಲ್ಲಿ ಈಗಾಗಲೇ ಚೆಕ್‌ಪೋಸ್ಟ್ ಕಾರ್ಯಾರಂಭ ಮಾಡಿದೆ. ಇದೇ ವೇಳೆ ಟೋಲ್‌ಗೇಟ್ ತಪ್ಪಿಸಿ ಸಾಗಲು ವಾಹನ ಸವಾರರು ಬಳಸಿಕೊಳ್ಳುತ್ತಿದ್ದ ದ.ಕ. ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಪಲಿಮಾರು – ಕರ್ನಿರೆ ಭಾಗ ದಲ್ಲೂ ಚೆಕ್‌ಪೋಸ್ಟ್ ನಿರ್ಮಾಣಕ್ಕೆ ಸೂಕ್ತ ಜಾಗದ ಪರಿಶೀಲನೆ ಅಂತಿಮ ಘಟ್ಟದಲ್ಲಿದೆ. ಪಲಿಮಾರು ಗ್ರಾಮದಿಂದ ಕರ್ನಿರೆ, ಬಳ್ಕುಂಜೆ ಮಾರ್ಗವಾಗಿ ದ.ಕ. ಜಿಲ್ಲೆಯ ಮೂಲ್ಕಿಯನ್ನು

ದ.ಕ. – ಉಡುಪಿ ಗಡಿಯಲ್ಲಿ ಚೆಕ್‌ಪೋಸ್ಟ್ ಕಾರ್ಯಾರಂಭ Read More »

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ಕಾಡ್ಗಿಚ್ಚು

ಸಮಗ್ರ ನ್ಯೂಸ್ : ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬೆಳ್ತಂಗಡಿ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಬೆಂಕಿಯನ್ನು ಹತೋಟಿಗೆ ತರಲು ಅರಣ್ಯ ಇಲಾಖೆ ಹರಸಾಹಸ ಪಡುವ ಆತಂಕದ ಕ್ಷಣಗಳು ಉಂಟಾಗಿವೆ. ಭಾನುವಾರ ಸಂಜೆ ಕುದುರೆಮುಖ ಶಿಖರದ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ನಾವೂರು ಗ್ರಾಮದ ತೊಳಲಿ ಏಳುಸುಟ್ಟು ಎಂಬ ಸ್ಥಳಕ್ಕೆ ಬೆಂಕಿ ವ್ಯಾಪಿಸಿದೆ. ಬಿಸಿಲಿನ ತಾಪ ಹಾಗೂ ಗಾಳಿಯ ರಭಸಕ್ಕೆ ಹಲವು ಗಿಡಗಳು ಒಣಗಿ ಬೆಂಕಿ ವ್ಯಾಪಿಸಿದ್ದು ನಿಯಂತ್ರಣಕ್ಕೂ ಕಷ್ಟವಾಗಿದೆ. ನಾವೂರು ಮುಖ್ಯರಸ್ತೆಯಿಂದ ಸುಮಾರು 10 ಕಿ.ಮೀ

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶದಲ್ಲಿ ಕಾಡ್ಗಿಚ್ಚು Read More »

ದ.ಕ – ಕೊಡಗು ಗಡಿಭಾಗದಲ್ಲಿ ನಕ್ಸಲ್ ಶಂಕೆ ಹಿನ್ನಲೆ| ಕೂಂಬಿಂಗ್ ಆರಂಭಿಸಿದ ಎಎನ್ಎಫ್

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ, ಕೊಡಗು ಗಡಿ ಪ್ರದೇಶವಾದ ಕೂಜಿಮಲೆ ಭಾಗದಲ್ಲಿ ನಕ್ಸಲರ ತಂಡ ಭೇಟಿ ನೀಡಿದ್ದಾರೆ ಎಂಬ ಶಂಕೆಯ ಹಿನ್ನಲೆಯಲ್ಲಿ ನಕ್ಸಲ್ ನಿಗ್ರಹ ಪಡೆ (ಎಎನ್ಎಫ್) ಆಗಮಿಸಿ, ಕೂಂಬಿಂಗ್ ಆರಂಭಿಸಿದ್ದಾರೆ‌. ಕಾರ್ಕಳದಿಂದ ಆಗಮಿಸಿದ ಎಎನ್ಎಫ್ ತಂಡ ಕೂಜಿಮಲೆ ಸಮೀಪದ ಮೂರು ಕಡೆಗಳಾದ ಬಾಳುಗೋಡಿನ ಉಪ್ಪುಕಳ, ಕೂಜಿಮಲೆ, ಕಡಮಕಲ್ಲು ಪ್ರದೇಶಕ್ಕೆ ತೆರಳಿ ಕೂಂಬಿಂಗ್ ನಡೆಸಲು ತಯಾರಿ ನಡೆಸಿದ್ದಾರೆ. ಕೂಜಿಮಲೆಯಿಂದ ಎಎನ್ಎಫ್ ತಂಡ ಕೂಂಬಿಂಗ್ ಆರಂಭಿಸಿದರು. ಕೂಜಿಮಲೆಯ ಅಂಗಡಿಯೊಂದರಿಂದ ತಂಡ ಭೇಟಿ ನೀಡಿ ದಿನಸಿ ಸಾಮಗ್ರಿ ಪಡೆದುಕೊಂಡಿದ್ದು, ನಕ್ಸಲರೆಂಬ

ದ.ಕ – ಕೊಡಗು ಗಡಿಭಾಗದಲ್ಲಿ ನಕ್ಸಲ್ ಶಂಕೆ ಹಿನ್ನಲೆ| ಕೂಂಬಿಂಗ್ ಆರಂಭಿಸಿದ ಎಎನ್ಎಫ್ Read More »

ತಲಪಾಡಿ: ಪಾದಚಾರಿಗೆ ಬೈಕ್ ಢಿಕ್ಕಿ|ವ್ಯಕ್ತಿ ಮೃತ್ಯು

ಸಮಗ್ರ ನ್ಯೂಸ್ : ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದ ಘಟನೆಯೊಂದು ತಲಪಾಡಿಯಲ್ಲಿ ನಡೆದಿದೆ. ರಾಜೇಶ್ ಶೆಟ್ಟಿ (49) ಮೃತಪಟ್ಟ ವ್ಯಕ್ತಿ. ರಾಜೇಶ್ ಅವರಿಗೆ ತಲಪಾಡಿ ಹಳೆ ಬಸ್ ತಂಗುದಾಣದ ಬಳಿ ಬೇಕರಿ ಇದೆ. ಎದುರು ಭಾಗದಲ್ಲೇ ಹೆದ್ದಾರಿ ಸಮೀಪ ಮನೆ ಕೂಡಾ ಇದೆ. ಭಾನುವಾರ ತಲಪಾಡಿ ದೇವಿಪುರದಲ್ಲಿ ರಥೋತ್ಸವ ಇದ್ದ ಕಾರಣ ರಾಜೇಶ್ ಅವರು ತಮ್ಮ ಮನೆಗೆ ಬಂದಿದ್ದ ನೆಂಟರನ್ನು ಉಪಚರಿಸಿದ್ದು, ಮಧ್ಯಾಹ್ನದ ಸಮಯದಲ್ಲಿ

ತಲಪಾಡಿ: ಪಾದಚಾರಿಗೆ ಬೈಕ್ ಢಿಕ್ಕಿ|ವ್ಯಕ್ತಿ ಮೃತ್ಯು Read More »

ಬಂಟ್ವಾಳ: ಕೆಎಸ್ಸಾರ್ಟಿಸಿ ಬಸ್ – ಲಾರಿ ಢಿಕ್ಕಿ

ಸಮಗ್ರ ನ್ಯೂಸ್ : ಬಿ.ಸಿ.ರೋಡಿನ ಕೈಕಂಬದಲ್ಲಿ ಇತ್ತೀಚೆಗೆ ಕೆಎಸ್ಸಾರ್ಟಿಸಿ ಬಸ್ ಹಾಗೂ ಲಾರಿ ಢಿಕ್ಕಿ ಹೊಡೆದುಕೊಂಡ ಪರಿಣಾಮ ಬಸ್ ಪ್ರಯಾಣಿಕ ತೆಲಂಗಾಣದ ಸಿಕಂದರ್‌ಬಾದ್ ಮಲ್ಕಜ್‌ಗಿರಿ ನಿವಾಸಿ ಆರ್. ದೇದೀಪ್ ಶರ್ಮಾ ಗಾಯಗೊಂಡಿದ್ದು, ಅವರನ್ನು ಬಿ.ಸಿ. ರೋಡ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ಬಸ್ಸನ್ನು ಚಾಲಕ ಅಂಬರೀಷ್ ದುಡುಕುತನ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಹೋಗಿ ಕೈಕಂಬದಲ್ಲಿ ಲಾರಿಗೆ ಢಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ದೂರು ನೀಡಲಾಗಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ: ಕೆಎಸ್ಸಾರ್ಟಿಸಿ ಬಸ್ – ಲಾರಿ ಢಿಕ್ಕಿ Read More »

ಕಾರ್ಕಳ: ಆನ್‌ಲೈನ್ ವಂಚನೆ- ಲಕ್ಷಾಂತರ ರೂ ಕಳೆದಕೊಂಡ ಯುವಕ

ಸಮಗ್ರ ನ್ಯೂಸ್ : ಬೈಕ್ ಖರೀದಿಯ ಕನಸು ಕಂಡ ಕಾರ್ಕಳದ ಯುವಕನೊಬ್ಬ ಓಎಲ್‌ಎಕ್ಸ್ ನಲ್ಲಿ ಇದ್ದ ಮೊಬೈಲ್ ನಂಬರ್‌ಗೆ ಕರೆ ಮಾಡಿ ಮೋಸದ ಜಾಲಕ್ಕೆ ಬರೋಬರಿ ರೂ. 1,18,139 ಕಳೆದುಕೊಂಡು ನ್ಯಾಯ ಕೋರಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಮೆಟ್ಟಲೇರಿದ ಘಟನೆ ನಡೆದಿದೆ. ಇರ್ಫಾನ್ (27) ಎಂಬಾತ ಮೋಸ ಹೋದ ವ್ಯಕ್ತಿ. ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ದಾಖಲಿಸಿದ್ದಾರೆ. ಇವರು ಬೈಕ್ ಖರೀದಿ ಮಾಡಲು ಸಾಮಾಜಿಕ ಜಾಲತಾಣವಾದ olx ನಲ್ಲಿ ಹುಡುಕಾಟ ನಡೆಸುತ್ತಿರುವ ಸಮಯ

ಕಾರ್ಕಳ: ಆನ್‌ಲೈನ್ ವಂಚನೆ- ಲಕ್ಷಾಂತರ ರೂ ಕಳೆದಕೊಂಡ ಯುವಕ Read More »

ಬಿಸಿಲ ಬೇಗೆಗೆ ತಂಪೆರೆದ ವರುಣ| ಮಲೆನಾಡು ಸೇರಿ ಹಲವೆಡೆ ಮಳೆ ಸಿಂಚನ

ಸಮಗ್ರ ನ್ಯೂಸ್: ಬರ ಮತ್ತು ಬಿಸಿಲಿನ ಬೇಗೆಯಿಂದ ತತ್ತರಿಸಿದ ರಾಜ್ಯದ ಕೆಲವು ಭಾಗದಲ್ಲಿ ಮಾರ್ಚ್ ನಲ್ಲಿಯೇ ಮಳೆಯಾಗಿದೆ. ಚಿಕ್ಕಮಗಳೂರು ತಾಲೂಕಿನ ಬಸವನಹಳ್ಳಿ, ಐದಳ್ಳಿ, ಮಾಕೋಡು, ಹುಣಸೆಹಳ್ಳಿ ಮೊದಲಾದ ಕಡೆ ಮಳೆಯಾಗಿದೆ. ಬೀದರ್ ಜಿಲ್ಲೆಯ ಔರಾದ, ಬಾಲ್ಕಿ ತಾಲೂಕಿನ ಹಲವು ಕಡೆ ಭಾನುವಾರ ಮಳೆಯಾಗಿದೆ. ಬೆಂಗಳೂರು ಸೇರಿದಂತೆ ಹಲವು ಕಡೆ ಇನ್ನೊಂದು ವಾರ ಹಗುರದಿಂದ ಕೂಡಿದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ 24 ಗಂಟೆಯಲ್ಲಿ ಬೀದರ್, ಧಾರವಾಡ, ವಿಜಯಪುರ, ಕಲಬುರಗಿ ಸೇರಿದಂತೆ ವಿವಿಧೆಡೆ ಮಳೆ

ಬಿಸಿಲ ಬೇಗೆಗೆ ತಂಪೆರೆದ ವರುಣ| ಮಲೆನಾಡು ಸೇರಿ ಹಲವೆಡೆ ಮಳೆ ಸಿಂಚನ Read More »

ಪುತ್ತೂರು: ಶಾಸಕ ಅಶೋಕ್ ರೈ ಬೆಂಬಲಿಗರಿಂದ ದಾಂಧಲೆ ಪ್ರಕರಣ| 15ಮಂದಿ ವಿರುದ್ಧ ಕೇಸು ದಾಖಲು

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಜಯಾನಂದ ಕೆ. ಅವರ ಮನೆಗೆ ಶಾಸಕ ಅಶೋಕ್ ರೈ ಬೆಂಬಲಿಗರು ನುಗ್ಗಿ ಪುಂಡಾಟ ಮೆರೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ತಾರಿಗುಡ್ಡೆಯಲ್ಲಿರುವ ಜಯಾನಂದ ಮನೆಗೆ ರೌಡಿಶೀಟರ್ ಪ್ರಜ್ವಲ್ ರೈ ಮತ್ತು ಕಾಂಗ್ರೆಸ್ ಬೆಂಬಲಿಗರು ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದಾರೆ. ಘಟನೆ ಕುರಿತು ಪುತ್ತೂರು ನಗರ ಠಾಣೆಯಲ್ಲಿ ಮೊಕದ್ದಮೆ‌ ದಾಖಲಾಗಿದೆ. ಅನುದಾನ ಹಂಚಿಕೆ ವಿಚಾರದಲ್ಲಿ ಕಿರಿಕ್ ನಡೆದಿದ್ದು ಪುತ್ತೂರು ಶಾಸಕರು ಅತೀ ಹೆಚ್ಚು

ಪುತ್ತೂರು: ಶಾಸಕ ಅಶೋಕ್ ರೈ ಬೆಂಬಲಿಗರಿಂದ ದಾಂಧಲೆ ಪ್ರಕರಣ| 15ಮಂದಿ ವಿರುದ್ಧ ಕೇಸು ದಾಖಲು Read More »