ಕರಾವಳಿ

ಉಡುಪಿಯ ನಂ.1 ಬೀಡಿ ಮಾಲೀಕ ಟಿ.ಕೃಷ್ಣಪ್ಪ ನಿಧನ

ಸಮಗ್ರ ನ್ಯೂಸ್:‌ ನಂ.1 ಬೀಡಿ ಮಾರ್ಕಿನ ಮಾಲೀಕ ತಾಂಗದಗಡಿ ನಿವಾಸಿ ಟಿ.ಕೃಷ್ಣಪ್ಪ ಅವರು ಇಂದು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 78 ವಯಸ್ಸಾಗಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ ಟಿ.ಕೃಷ್ಣಪ್ಪ ಅವರು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರು‌ 51 ವರ್ಷಗಳ ಹಿಂದೆ ನಂ.1 ಬೀಡಿಯನ್ನು ಕರಾವಳಿಗೆ ಪರಿಚಯಿಸಿದ್ದರು. ಅಂದಿನಿಂದ ಇಂದಿನಿಂದವರೆಗೂ ನಂ.1 ಬೀಡಿ ಕರಾವಳಿಯಾದ್ಯಂತ ಪ್ರಖ್ಯಾತಿ ಪಡೆದಿದೆ. ಮೃತರು ಪತ್ನಿ, ಇಬ್ಬರು ಗಂಡು, ಮೂವರು ಹೆಣ್ಣು ಮಕ್ಕಳನ್ನು

ಉಡುಪಿಯ ನಂ.1 ಬೀಡಿ ಮಾಲೀಕ ಟಿ.ಕೃಷ್ಣಪ್ಪ ನಿಧನ Read More »

ಉಡುಪಿ: ಗೂಗಲ್ ಪೇ ಕಸ್ಟಮರ್ ಕೇರ್ ಹೆಸರಿನಲ್ಲಿ ಸಾವಿರಾರು ರೂ. ವಂಚನೆ

ಸಮಗ್ರ ನ್ಯೂಸ್‌ : ಗೂಗಲ್ ಪೇ ಕಸ್ಟಮರ್ ಕೇರ್ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ವಂಚಿಸಿರುವ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಮಾರ್ ಎಂಬವರು ಮಾರ್ಚ್ 14ರಂದು ತನ್ನ ವ್ಯವಹಾರದ 6000ರೂ. ಹಣವನ್ನು ಗೂಗಲ್ ಪೇನಲ್ಲಿ ಕೈತಪ್ಪಿನಿಂದ ಬೇರೊಂದು ನಂಬರಿಗೆ ಕಳುಹಿಸಿದ್ದು, ಈ ಸಂಬಂಧ ಗೂಗಲ್‌ನಲ್ಲಿ ಸಿಕ್ಕಿದ ಕಸ್ಟಮರ್ ಕೇರ್‌ಗೆ ಕರೆ ಮಾಡಿದ್ದರು. ಹಣವನ್ನು ಹಿಂದಕ್ಕೆ ಪಡೆಯಲು 5 ಡಿಜಿಟ್‌ಗಳ ಸಂಖ್ಯೆಗಳ ಆ್ಯಪ್‌ನಲ್ಲಿ ನಮೂದಿಸುವಂತೆ ತಿಳಿಸಿದ್ದರು. ಅದರಂತೆ ನಂಬರ್ ನಮೂದಿಸಿದ ಬಳಿಕ ಇವರ ಖಾತೆಯಿಂದ

ಉಡುಪಿ: ಗೂಗಲ್ ಪೇ ಕಸ್ಟಮರ್ ಕೇರ್ ಹೆಸರಿನಲ್ಲಿ ಸಾವಿರಾರು ರೂ. ವಂಚನೆ Read More »

ಮಣಿಪಾಲ: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ

ಸಮಗ್ರ ನ್ಯೂಸ್:‌ ಸುಮಾರು 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇದೀಗ ಮಣಿಪಾಲ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಪಂಜಾಬ್‌ ರಾಜ್ಯದ ಫಿರೋಜಿಪುರ ಜಿಲ್ಲೆಯ ತಾರಾಚಂದ್ ಬಂಧಿತ ಆರೋಪಿ. ಮೇಲಾಧಿಕಾರಿಗಳ ಆದೇಶದಂತೆ ಮಣಿಪಾಲ ಪೊಲೀಸ್ ಉಪ ನಿರೀಕ್ಷಕ ರಾಘವೇಂದ್ರ ಹಾಗೂ ಸಿಬ್ಬಂದಿಗಳಾದ ಥಾನ್, ಶರಣಬಸವ ಆರೋಪಿಯನ್ನು ಪಂಜಾಬ್ ರಾಜ್ಯದಲ್ಲಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ

ಮಣಿಪಾಲ: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ Read More »

ಉಡುಪಿ: ಚುನಾವಣೆ ಹಿನ್ನಲೆ ಉಡುಪಿ ಜಿಲ್ಲೆಯ 14 ಕಡೆಗಳಲ್ಲಿ ಪೊಲೀಸ್ ಚೆಕ್‌ಪೋಸ್ಟ್

ಸಮಗ್ರ ನ್ಯೂಸ್‌ : ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಒಟ್ಟು 14 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊಲ್ಲೂರು, ಶಿರೂರು, ಹೊಸಂಗಡಿ, ಕುಂದಾಪುರ ಕ್ಷೇತ್ರದ ಸಾಬರಕಟ್ಟೆ, ಉಡುಪಿ ಕ್ಷೇತ್ರದ ಗುಡ್ಡೆಯಂಗಡಿ, ಮಣಿಪುರ ಉದ್ಯಾವರ, ಕಾಪು ಕ್ಷೇತ್ರದ ಹೆಜಮಾಡಿ, ಫಲಿಮಾರು, ಕಾರ್ಕಳದ ಮಾಳ, ಮುಂಡೂರು, ಸಚ್ಚರಿ ಪೇಟೆ, ಸೋಮೇಶ್ವರ, ಮುಡಾರು, ಬಜಗೋಳಿ, ಸಾಣೂರು, ಹೊಸ್ಮಾರು ನಲ್ಲೂರುಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ವ್ಯಾಪಕ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯ ಗಡಿ ಪ್ರದೇಶಗಳಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಜಿಲ್ಲೆ

ಉಡುಪಿ: ಚುನಾವಣೆ ಹಿನ್ನಲೆ ಉಡುಪಿ ಜಿಲ್ಲೆಯ 14 ಕಡೆಗಳಲ್ಲಿ ಪೊಲೀಸ್ ಚೆಕ್‌ಪೋಸ್ಟ್ Read More »

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ/ 50ರಷ್ಟು ವಿಧದ `ನಂದಿನಿ’ ಐಸ್‍ಕ್ರೀಂ ಉತ್ಪನ್ನಗಳನ ಬಿಡುಗಡೆ

ಮಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ ಉತ್ಪಾದಿಸುವ ಸುಮಾರು 50ರಷ್ಟು ವಿಧದ `ನಂದಿನಿ’ ಐಸ್‍ಕ್ರೀಂ ಉತ್ಪನ್ನಗಳನ್ನು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಐಸ್‍ಕ್ರೀಂ ಸಂಗ್ರಹದ ಕೋಲ್ಡ್ ಸ್ಟೋರೇಜ್ ಘಟಕ ಉದ್ಘಾಟನೆ ಹಾಗೂ ಐಸ್‍ಕ್ರೀಂ ಬಿಡುಗಡೆಯನ್ನು ನೆರವೇರಿಸಿದರು. ‘ಹಾಲು ಮಹಾಮಂಡಳವು ಒಕ್ಕೂಟವನ್ನು ಐಸ್‍ಕ್ರೀಂ ಮಾರಾಟಕ್ಕೆ ಸೂಪರ್ ಸ್ಟಾಕಿಸ್ಟ್ ಆಗಿ ನೇಮಿಸಿದೆ. ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಾರಂಭಿಕ ಹಂತದಲ್ಲಿ ನಂದಿನಿ 157 ಶ್ರೇಣಿಯ ಐಸ್‍ಕ್ರೀಂಗಳಲ್ಲಿ 50 ಶ್ರೇಣಿಗಳನ್ನು

ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ/ 50ರಷ್ಟು ವಿಧದ `ನಂದಿನಿ’ ಐಸ್‍ಕ್ರೀಂ ಉತ್ಪನ್ನಗಳನ ಬಿಡುಗಡೆ Read More »

ಮಂಗಳೂರು: ದಾಖಲೆ ಇಲ್ಲದೆ ಕಾರಿನಲ್ಲಿ ಹಣ ಸಾಗಾಟ|ಚುನಾವಣಾಧಿಕಾರಿಗಳ ವಶ

ಸಮಗ್ರ ನ್ಯೂಸ್ : ನಗರದ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತೋಡಾರ್-ಎಡಪದವು ಚೆಕ್‌ಪೋಸ್ಟ್ನಲ್ಲಿ ಸೂಕ್ತ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಲಕ್ಷಾಂತರ ರೂ. ಹಣವನ್ನು ಚುನಾವಣಾಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡಿದೆ. ದೇಶಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಚೆಕ್‌ಪೋಸ್ಟ್ನಲ್ಲಿ ಚುನಾವಣಾಧಿಕಾರಿಗಳ ತಂಡ ವಾಹನಗಳ ತಪಾಸಣೆ ನಡೆಸುತ್ತಿದೆ. ಭಾನುವಾರ ರಾತ್ರಿ 11ರ ಸುಮಾರಿಗೆ ಕೈಕಂಬ ನಿವಾಸಿಯೊಬ್ಬರು ಕಾರಿನಲ್ಲಿ ಆಗಮಿಸಿದ್ದು, ಅವರ ಕಾರನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕಾರಿನಲ್ಲಿ ದಾಖಲೆ ಇಲ್ಲದ 1.32 ಲಕ್ಷ ರೂ.ಗಳಿದ್ದು ಈ ಹಣವನ್ನು

ಮಂಗಳೂರು: ದಾಖಲೆ ಇಲ್ಲದೆ ಕಾರಿನಲ್ಲಿ ಹಣ ಸಾಗಾಟ|ಚುನಾವಣಾಧಿಕಾರಿಗಳ ವಶ Read More »

ಹವಾಮಾನ ವರದಿ|ಕರಾವಳಿ, ಮಲೆನಾಡು ಪ್ರದೇಶದಲ್ಲಿ ಮಳೆ ಸಾಧ್ಯತೆ

ಸಮಗ್ರ ನ್ಯೂಸ್ : ರಾಜ್ಯದ ಕರಾವಳಿ ಪ್ರದೇಶ ಹಾಗೂ ಮಲೆನಾಡು ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾ. 21 ರಿಂದ ಮಾ. 24ರವರೆಗೆ ಕರಾವಳಿ, ಮಲೆನಾಡು ಪ್ರದೇಶ ಹಾಗೂ ಉತ್ತರ ಕನ್ನಡ ಪ್ರದೇಶದಲ್ಲಿ ಸಾಧಾರಣದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ವರದಿ|ಕರಾವಳಿ, ಮಲೆನಾಡು ಪ್ರದೇಶದಲ್ಲಿ ಮಳೆ ಸಾಧ್ಯತೆ Read More »

ಮಂಗಳೂರು ಹಾಗೂ ರಾಮೇಶ್ವರಂ ನಡುವೆ ಹೊಸ ರೈಲು/ ರೈಲ್ವೆ ಸಚಿವಾಲಯದ ಗ್ರೀನ್ ಸಿಗ್ನಲ್

ಸಮಗ್ರ ನ್ಯೂಸ್: ಮಂಗಳೂರು ಹಾಗೂ ರಾಮೇಶ್ವರಂ ನಡುವೆ ಹೊಸ ಸಾಪ್ತಾಹಿಕ ರೈಲು ಓಡಾಟಕ್ಕೆ ರೈಲ ಸಚಿವಾಲಯ ಗ್ರೀನ್ ಸಿಗ್ನಲ್ ನೀಡಿದ್ದು, ದಿನಾಂಕ ಶೀಘ್ರವೇ ಪ್ರಕಟಗೊಳ್ಳುವ ನಿರೀಕ್ಷೆಯಿದೆ. ಶನಿವಾರ ಸಂಜೆ 7.30ಕ್ಕೆ ಮಂಗಳೂರಿನಿಂದ ಹೊರಡುವ ರೈಲು ಭಾನುವಾರ ಬೆಳಗ್ಗೆ 11.45ಕ್ಕೆ ರಾಮೇಶ್ವರಂ ತಲುಪಲಿದೆ. ಭಾನುವಾರ ಮಧ್ಯಾಹ್ನ 2 ಗಂಟೆಗೆ ರಾಮೇಶ್ವರದಿಂದ ಹೊರಡುವ ಈ ರೈಲು ಸೋಮವಾರ ಬೆಳಗ್ಗೆ 5.50ಕ್ಕೆ ಮಂಗಳೂರು ತಲುಪಲಿದೆ. ನೂತನ ರೈಲು ಕಾಸರಗೋಡು, ಕಣ್ಣೂರು, ಕೋಯಿಕ್ಕೋಡ್, ಶೋರ್ನೂರು, ಪಾಲಕ್ಕಾಡ್, ಪೆÇಲ್ಲಾಚಿ, ಪಳನಿ, ದಿಂಡಿಗಲ್, ಮಧುರೈ ಮತ್ತು

ಮಂಗಳೂರು ಹಾಗೂ ರಾಮೇಶ್ವರಂ ನಡುವೆ ಹೊಸ ರೈಲು/ ರೈಲ್ವೆ ಸಚಿವಾಲಯದ ಗ್ರೀನ್ ಸಿಗ್ನಲ್ Read More »

ಮಂಗಳೂರು: ಮಾದಕ ವಸ್ತು ಕೋಕೆನ್ ಪತ್ತೆ- ಆರೋಪಿಗಳು ಸಿಸಿಬಿ ಪೊಲೀಸರ ವಶ

ಸಮಗ್ರ ನ್ಯೂಸ್ : ಗೋವಾ ರಾಜ್ಯದಿಂದ ಮಂಗಳೂರು ನಗರ ಹಾಗೂ ಕೇರಳಕ್ಕೆ ನಿಷೇಧಿತ ಮಾದಕ ವಸ್ತುವಾದ ಕೋಕೇನ್ ನ್ನು ಸಾಗಾಟ/ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹಾಗೂ 35 ಗ್ರಾಂ ಕೋಕೆನ್ ನ್ನು ಮಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಅಂಬ್ಲ ಮೊಗರು, ಸಣ್ಣಮದಕ, ಕೊಳಂಜೆ ಹಿಟ್ಟು ಮನೆ ನಿವಾಸಿ ಸದಕತ್.ಯು ಯಾನೆ ಶಾನ್ ನವಾಜ್(31), ಹಾಗೂ ಮಂಗಳೂರಿನ ಅಂಬ್ಲ ಮೊಗರು, ಮದಕ, ಸೇನರಬೆಟ್ಟು ಮನೆ ನಿವಾಸಿ ಮಹಮ್ಮದ್ ಅಶ್ಫಕ್ ಯಾನೆ ಅಶ್ಫಾ(25) ಬಂಧಿತ ಆರೋಪಿಗಳು. ಆರೋಪಿಗಳು

ಮಂಗಳೂರು: ಮಾದಕ ವಸ್ತು ಕೋಕೆನ್ ಪತ್ತೆ- ಆರೋಪಿಗಳು ಸಿಸಿಬಿ ಪೊಲೀಸರ ವಶ Read More »

ಲೋಕಸಭೆ ಚುನಾವಣೆ ಮುನ್ನ ಮಂಗಳೂರು ಪೊಲೀಸರಿಂದ ಮುಂಜಾಗ್ರತಾ ಕ್ರಮ

ಸಮಗ್ರ ನ್ಯೂಸ್ :ಮುಂಬರುವ ಲೋಕಸಭಾ ಚುನಾವಣೆಯನ್ನು ಸುಗಮವಾಗಿ ನಡೆಸಲು ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಕ್ರಿಮಿನಲ್ ಹಿನ್ನೆಲೆಯುಳ್ಳ ಏಳು ವ್ಯಕ್ತಿಗಳ ವಿರುದ್ಧ ಕರ್ನಾಟಕ ಪೊಲೀಸ್ ಕಾಯಿದೆಯಡಿ ಬಹಿರ್ದೆಸೆಗೆ ಆದೇಶ ಹೊರಡಿಸುವುದಾಗಿ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಪ್ರಕಟಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಅವರ ಬಹಿರ್ದೆಸೆಯ ಅವಧಿ ಮೂರು ತಿಂಗಳುಗಳು. ಬಹಿಷ್ಕಾರದ ಆದೇಶಗಳ ಜೊತೆಗೆ, ಶಾಂತಿಯನ್ನು ಉಲ್ಲಂಘಿಸುವ ಸಾಧ್ಯತೆಯಿರುವ ಅಭ್ಯಾಸದ ಅಪರಾಧಿಗಳೆಂದು ಗುರುತಿಸಲಾದ 286 ವ್ಯಕ್ತಿಗಳಿಗೆ ಒಂದು ವರ್ಷದ ಅವಧಿಗೆ

ಲೋಕಸಭೆ ಚುನಾವಣೆ ಮುನ್ನ ಮಂಗಳೂರು ಪೊಲೀಸರಿಂದ ಮುಂಜಾಗ್ರತಾ ಕ್ರಮ Read More »