ಕರಾವಳಿ

ಕೊಡಗು ದಕ್ಷಿಣ ಕನ್ನಡ ಗಡಿಭಾಗವಾದ ಕೂಜಿಮಲೆ ವ್ಯಾಪ್ತಿಯಲ್ಲಿ  ನಕ್ಸಲರು ಪ್ರತ್ಯಕ್ಷ|5 ವರ್ಷದ ಬಳಿಕ ಮತ್ತೆ ಅದೇ ಭಾಗದಲ್ಲಿ  ಪ್ರತ್ಯಕ್ಷಗೊಂಡ ಕೆಂಪು ಉಗ್ರರು

ಸಮಗ್ರ ನ್ಯೂಸ್: ಮಡಿಕೇರಿ ತಾಲೂಕು ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ನಕ್ಸಲರು ಕಾಣಿಸಿಕೊಂಡಿದ್ದಾರೆ8 ಜನರ ನಕ್ಸಲ್ ತಂಡ ಮಾ.16ರಂದು ಸಂಜೆ ಕೂಜಿಮಲೆ, ಕಲ್ಮುಖರ್  ಅಂಗಡಿಯೊಂದರಿಂದ 3500 ಸಾವಿರದಷ್ಟು ದಿನಸಿ ಖರಿದಿಸಿದ್ದಾರೆ.ನಗದುಹಣ ನೀಡಿ ಸಾಮಗ್ರಿಗಳನ್ನು  ಖರೀದಿಸಿದ ನಕ್ಸಲರ ತಂಡದಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ವಿಕ್ರಂ ಗೌಡ ಇರಬಹುದಾದ ಸಾಧ್ಯತೆ ಇದೆ ಎಂದು ಹೇಳಲಾಗಿದೆ. *ಕಾಲೂರು ಗ್ರಾಮದ ಗಡಿ ಗ್ರಾಮ ಕೂಜಿಮಲೆ* ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕಾಲೂರು ಗ್ರಾಮದ ಗಡಿ ಪ್ರದೇಶವಾದ ಕೂಜಿಮಲೆಯಲ್ಲಿ ಮಾ.16

ಕೊಡಗು ದಕ್ಷಿಣ ಕನ್ನಡ ಗಡಿಭಾಗವಾದ ಕೂಜಿಮಲೆ ವ್ಯಾಪ್ತಿಯಲ್ಲಿ  ನಕ್ಸಲರು ಪ್ರತ್ಯಕ್ಷ|5 ವರ್ಷದ ಬಳಿಕ ಮತ್ತೆ ಅದೇ ಭಾಗದಲ್ಲಿ  ಪ್ರತ್ಯಕ್ಷಗೊಂಡ ಕೆಂಪು ಉಗ್ರರು Read More »

ಮಂಗಳೂರು: ಖಾಸಗಿ ಬಸ್ ಚಾಲಕನಿಗೆ ಹಲ್ಲೆ: ಆರೋಪಿಗಳ ಸೆರೆ

ಸಮಗ್ರ ನ್ಯೂಸ್ : ಖಾಸಗಿ ಬಸ್ ಚಾಲಕನಿಗೆ ಒಂದು ತಂಡದಿಂದ ಹಲ್ಲೆ ನಡೆದಿರುವ ಘಟನೆ ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣದಲ್ಲಿ ನಡೆದಿದೆ. ಭಾಸ್ಕರ್ ಹಲ್ಲೆಗೊಳಗಾದ ಬಸ್ ಚಾಲಕ ಎಂದು ತಿಳಿದುಬಂದಿದೆ. ರಾತ್ರಿ 8ರ ಸುಮಾರಿಗೆ ಬಸ್‌ನಲ್ಲಿ ಚಾಲಕನು ಹುಡುಗಿಯ ಜತೆ ಮಾತನಾಡುತ್ತಿದ್ದನೆಂಬ ಕಾರಣಕ್ಕೆ ಕೆಲವರು ಆಯುಧದಿಂದ ಕೂಡ ಹಲ್ಲೆ ನಡೆಸಿದ್ದು, ಚಾಲಕ ಮತ್ತು ಹುಡುಗಿ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಘಟನೆ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳೂರು: ಖಾಸಗಿ ಬಸ್ ಚಾಲಕನಿಗೆ ಹಲ್ಲೆ: ಆರೋಪಿಗಳ ಸೆರೆ Read More »

ಪುತ್ತೂರು: ಅನುದಾನ ಹಂಚಿಕೆ ವಿಚಾರದಲ್ಲಿ ಕಿರಿಕ್| ಬಿಜೆಪಿ ಜಾಲತಾಣ ಪ್ರಮುಖ್ ಮನೆಗೆ ತೆರಳಿ ಶಾಸಕ ರೈ ಬೆಂಬಲಿಗರ ದಾಂಧಲೆ!?

ಸಮಗ್ರ ನ್ಯೂಸ್: ಕ್ಷೇತ್ರಕ್ಕೆ ಅತೀ ಹೆಚ್ಚು ಅನುದಾನ ತಂದು ಅಭಿವೃದ್ಧಿ ಕಾರ್ಯ ನಡೆಸಿರುವುದಾಗಿ ಜಾಲತಾಣಗಳಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಬೆಂಬಲಿಗರು‌ ಹಾಕಿರುವ ಪೋಸ್ಟ್ ಗಳ ಬಗ್ಗೆ ಅನುದಾನ ಬಳಕೆ ಕುರಿತು ಸ್ಪಷ್ಟನೆ ನೀಡುವಂತೆ ಬಿಜೆಪಿ ಕಾರ್ಯಕರ್ತರು ಕೇಳಿಕೊಂಡಿದ್ದು, ಇದೇ ವಿಚಾರವಾಗಿ ಶಾಸಕ ಅಶೋಕ್ ರೈ ಬೆಂಬಲಿಗರೆನ್ನಲಾದ ತಂಡ ದಾಂಧಲೆ ನಡೆಸಿರುವ ಘಟನೆ ಪುತ್ತೂರಿನಿಂದ ವರದಿಯಾಗಿದೆ. ದಕ್ಷಿಣ ಕನ್ನಡ ಬಿಜೆಪಿ ಸಾಮಾಜಿಕ ಜಾಲತಾಣದ ಮುಖ್ಯಸ್ಥ ಜಯಾನಂದ ಬಂಗೇರ ಮನೆಗೆ ತೆರಳಿ ಕಾಂಗ್ರೆಸ್ ಕಾರ್ಯಕರ್ತರು ಕಿರಿಕ್ ಮಾಡಿದ್ದು, ಚುನಾವಣಾ

ಪುತ್ತೂರು: ಅನುದಾನ ಹಂಚಿಕೆ ವಿಚಾರದಲ್ಲಿ ಕಿರಿಕ್| ಬಿಜೆಪಿ ಜಾಲತಾಣ ಪ್ರಮುಖ್ ಮನೆಗೆ ತೆರಳಿ ಶಾಸಕ ರೈ ಬೆಂಬಲಿಗರ ದಾಂಧಲೆ!? Read More »

ಬಂಟ್ವಾಳ: ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಮುಖಾಮುಖಿ ಢಿಕ್ಕಿ

ಸಮಗ್ರ ನ್ಯೂಸ್ : ಸರಕಾರಿ ಬಸ್ ಮತ್ತು ಕಾರು ಢಿಕ್ಕಿಯಾಗಿ ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ಬಂಟ್ವಾಳ-ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ತಾಲೂಕಿನ ಬಾಂಬಿಲ ಎಂಬಲ್ಲಿ ಸಂಭವಿಸಿದೆ. ಕಾರು ಚಾಲಕ, ಕಾವಳಪಡೂರು ಗ್ರಾಮದ ಮಧ್ವಪಲ್ಕೆ ನಿವಾಸಿ ಸಿರಿಲ್ ಡಿಸೋಜ ಅವರು ಗಾಯಾಳುವಾಗಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳ್ತಂಗಡಿ ಕಡೆಗೆ ಸಾಗುತ್ತಿದ್ದ ಬಸ್, ವಗ್ಗ ಕಡೆಗೆ ಸಾಗುತ್ತಿದ್ದ ಕಾರ್‌ಗೆ ಬಾಂಬಿಲ ಸೇತುವೆ ಬಳಿಯ ತಿರುವಿನಲ್ಲಿ ಢಿಕ್ಕಿಯಾಗಿದೆ. ಅಪಘಾತದ ತೀವ್ರತೆಯಲ್ಲಿ ಕಾರಿನ ಮುಂಭಾಗ ಬಸ್‌ನ

ಬಂಟ್ವಾಳ: ಕೆಎಸ್‌ಆರ್‌ಟಿಸಿ ಬಸ್ ಮತ್ತು ಕಾರು ಮುಖಾಮುಖಿ ಢಿಕ್ಕಿ Read More »

ಮಂಗಳೂರು: ಮೊಹಮ್ಮದ್ ಫಾಜಿಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು

ಸಮಗ್ರ ನ್ಯೂಸ್ : ಮಂಗಲಪೇಟೆ ನಿವಾಸಿ ಮೊಹಮ್ಮದ್ ಫಾಝಿಲ್ ಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಜೈಲಿನಲ್ಲಿದ್ದ ಮೂವರು ಪ್ರಮುಖ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸುರತ್ಕಲ್ ಪೊಲೀಸರು ಈ ಮೂವರನ್ನು ಎ1, ಎ2, ಎ3 ಆರೋಪಿಗಳೆಂದು ಗುರುತಿಸಿ ಮಂಗಳೂರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಪ್ರಮುಖ ಆರೋಪಿಗಳಾದ ಬಂಟ್ವಾಳ ತಾಲೂಕಿನ ಕಾವಳಮಾಡೂರು ಗ್ರಾಮದ ಸುಹೇಲ್ ಶೆಟ್ಟಿ ಅಲಿಯಾಸ್ ಸುಭಾಷ್, ಕಾಟಿಪಳ್ಳ 3ನೇ ಬ್ಲಾಕ್ ನಿವಾಸಿ ಅಭಿಫೀಕ್ ಯಾನೆ ಮತ್ತು ಕುಳಾಯಿ ನಿವಾಸಿ ಮೋಹನ್ ಸಿಂಗ್

ಮಂಗಳೂರು: ಮೊಹಮ್ಮದ್ ಫಾಜಿಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು Read More »

ವಿಟ್ಲ: ಬೈಕ್ ಮತ್ತು ಕಾರು ನಡುವೆ ಅಪಘಾತ| ಬೈಕ್ ಸವಾರ ಗಂಭೀರ

ಸಮಗ್ರ ನ್ಯೂಸ್ : ಬೈಕ್ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಸಮೀಪದ ಬದನಾಜೆಯಲ್ಲಿ ನಡೆದಿದೆ. ವಿಟ್ಲ ಸಮೀಪದ ಬದನಾಜೆ ಎಂಬಲ್ಲಿ ಎಬ್ಸಿ ಬೈಕ್ ಮತ್ತು ಆಲ್ಟೋ ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದ ತೀವ್ರತೆಗೆ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡಿದ್ದ ಬೈಕ್ ಸವಾರನ ಸ್ಥಿತಿ ಚಿಂತಾಜನಕವಾಗಿದೆ. ಕಾರಿನಲ್ಲಿ ಪ್ರಯಾಣಿಕರಿಗೂ ಗಾಯಗಳಾಗಿದ್ದು, ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅತೀ ವೇಗದ ಚಾಲನೆಯಿಂದ ಈ ಅಪಘಾತ

ವಿಟ್ಲ: ಬೈಕ್ ಮತ್ತು ಕಾರು ನಡುವೆ ಅಪಘಾತ| ಬೈಕ್ ಸವಾರ ಗಂಭೀರ Read More »

ಕಾರ್ಕಳ: ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು

ಸಮಗ್ರ ನ್ಯೂಸ್ : ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಕಾರ್ಕಳ ಕುಕ್ಕುಂದೂರು ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಕುಕ್ಕುಂದೂರು ಗ್ರಾಮದ ಸದಾನಂದ ಪೂಜಾರಿ (40) ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ಮನೆಯಲ್ಲಿ ಮಲಗಿದ್ದ ಸದಾನಂದ ಅವರ ಮೃತದೇಹ ಶನಿವಾರ ಬೆಳಿಗ್ಗೆ ಮನೆ ಎದುರಿನ ತೆರೆದ ಬಾವಿಯಲ್ಲಿ ಪತ್ತೆಯಾಗಿತ್ತು. ರಾತ್ರಿ ನಿದ್ದೆಯಿಂದ ಎದ್ದು ಮನೆ ಹೊರಗಡೆ ಬಂದ ಸದಾನಂದರು ಆಕಸ್ಮಿಕವಾಗಿ ಬಾವಿಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಬೆAಗಳೂರಿನಲ್ಲಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಸಿಬ್ಬಂದಿಯಾಗಿದ್ದ ಸದಾನಂದ ಅವರು

ಕಾರ್ಕಳ: ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು Read More »

ಬೆಳ್ಳಾರೆ : ಸುಲಿದು ಇಟ್ಟಿದ್ದ 5 ಗೋಣಿ ಅಡಿಕೆ ಕಳವು

ಸಮಗ್ರ ನ್ಯೂಸ್ : ಮನೆಯಲ್ಲಿ ಯಾರೂ ಇಲ್ಲದ ವೇಳೆ ಸುಲಿದು ದಾಸ್ತಾನು ಇಟ್ಟಿದ್ದ 5 ಗೋಣಿ ಅಡಿಕೆ ಕಳವಾಗಿರುವ ಘಟನೆ ಸುಳ್ಯದ ಕುಳ್ಳಂಪಾಡಿ ಎಂಬಲ್ಲಿ ನಡೆದಿದೆ. ಕುಳ್ಳಂಪಾಡಿ ಗ್ರಾಮ ನಿವಾಸಿ ಹಿರಿಯಣ್ಣ ಗೌಡ (54) ಎಂಬವರು ಮಾರ್ಚ್ 14 ರಂದು ಸಂಜೆ ತನ್ನ ಕುಟುಂಬ ಸಮೇತ ಪುತ್ತೂರು ತಾಲೂಕು ಮಾಡಾವಿನಲ್ಲಿರುವ ತನ್ನ ಅಕ್ಕನ ಮನೆಗೆ ಹೋದವರು ರಾತ್ರಿ ವಾಪಾಸು ಮನೆಗೆ ಬಂದಿದ್ದು, ಮರುದಿನ ಬೆಳಿಗ್ಗೆ ಎದ್ದು, ಕೊಟ್ಟಿಗೆಗೆ ಹೋಗಿ ನೋಡಿದಾಗ ಕೊಟ್ಟಿಗೆಯಲ್ಲಿ ಸುಮಾರು ಒಂದು ವಾರಗಳಿಂದ ಸುಲಿದು

ಬೆಳ್ಳಾರೆ : ಸುಲಿದು ಇಟ್ಟಿದ್ದ 5 ಗೋಣಿ ಅಡಿಕೆ ಕಳವು Read More »

ಬೆಳ್ತಂಗಡಿ: ರಸ್ತೆಗೆ ಓಡಿಬಂದ ಮಗುವಿಗೆ ರಿಕ್ಷಾ ಢಿಕ್ಕಿಯಾಗಿ ಮೃತ್ಯು

ಸಮಗ್ರ ನ್ಯೂಸ್ : ಆಟೋ ರಿಕ್ಷಾ ಢಿಕ್ಕಿಯಾಗಿ ಮೂರು ವರ್ಷದ ಕಂದಮ್ಮ ಸಾವನ್ನಪ್ಪಿರುವ ಘಟನೆ ಸೋಣಂದೂರು ಪಣಕಜೆಯಲ್ಲಿ ನಡೆದಿದೆ. ಪಣಕಜೆ ಮುಂಡಾಡಿ ನಿವಾಸಿ ಚಂದ್ರಶೇಖರ್ ಮತ್ತು ಉಷಾ ದಂಪತಿಯ ಪುತ್ರ ಕೌಶಿಕ್ ಮೃತಪಟ್ಟ ಮಗು. ಮುಂಡಾಡಿಯಲ್ಲಿ ಚಂದ್ರಶೇಖರ್ ಅವರ ಮನೆ ರಸ್ತೆಯ ಹತ್ತಿರವಿದ್ದು, ಮನೆಯಲ್ಲಿದ್ದ ಮಗು ಓಡಿ ರಸ್ತೆಗೆ ಬಂದಿದೆ. ಈ ವೇಳೆ ಅದೇ ಸಮಯಕ್ಕೆ ಬಂದ ಮಗುವಿಗೆ ರಿಕ್ಷಾ ತಾಗಿ ಗಂಭೀರ ಗಾಯಗೊಂಡಿದ್ದು, ಮಗುವನ್ನು ಕೂಡಲೇ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ

ಬೆಳ್ತಂಗಡಿ: ರಸ್ತೆಗೆ ಓಡಿಬಂದ ಮಗುವಿಗೆ ರಿಕ್ಷಾ ಢಿಕ್ಕಿಯಾಗಿ ಮೃತ್ಯು Read More »

ಉಡುಪಿ: ಈಶ್ವರಪ್ಪನವರಿಗೆ ಪಕ್ಷ ಸೂಕ್ತ ಸ್ಥಾನಮಾನ ನೀಡಲಿದೆ; ಯಶ್ ಪಾಲ್ ಸುವರ್ಣ

ಸಮಗ್ರ ನ್ಯೂಸ್ : ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬಿಜೆಪಿಯ ಹಿರಿಯ ನಾಯಕರು. ಸಾಕಷ್ಟು ಜವಾಬ್ದಾರಿ ನಿಭಾಯಿಸಿ ಪಕ್ಷಕ್ಕೆ ಕೊಡುಗೆ ನೀಡಿದ್ದಾರೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಈಶ್ವರಪ್ಪನವರು ಬೇಸರಗೊಂಡಿರಬಹುದು. ಆದರೆ ಪಕ್ಷ ಅವರಿಗೆ ಸೂಕ್ತ ಸ್ಥಾನಮಾನ ನೀಡಲಿದೆ ಎಂದು ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು. ಈಶ್ವರಪ್ಪ ಅವರು ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಅವರು, ಮುಂದಿನ ದಿನಗಳಲ್ಲಿ ಬೇಸರ ಶಮನಗೊಂಡು 28 ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಈಶ್ವರಪ್ಪ ಕೆಲಸ ಮಾಡಲಿದ್ದಾರೆ. ಪ್ರಧಾನಿ ನರೇಂದ್ರ

ಉಡುಪಿ: ಈಶ್ವರಪ್ಪನವರಿಗೆ ಪಕ್ಷ ಸೂಕ್ತ ಸ್ಥಾನಮಾನ ನೀಡಲಿದೆ; ಯಶ್ ಪಾಲ್ ಸುವರ್ಣ Read More »