ಕರಾವಳಿ

ಸುಬ್ರಹ್ಮಣ್ಯ: ತಪ್ಪಿದ ರೈಲು ದುರಂತ – ಅರ್ಲಟಾಗಿದ್ದ ಚಾಲಕನಿಗೆ ವ್ಯಾಪಕ ಪ್ರಶಂಸೆ

ಸುಬ್ರಹ್ಮಣ್ಯ: ಸುಬ್ರಮಣ್ಯ-ಮಂಗಳೂರು ರೈಲ್ವೆಯ ಸುಬ್ರಹ್ಮಣ್ಯ ಸಮೀಪ ಸೋಮವಾರ ಹಳಿ ಬಿರುಕು ಬಿಟ್ಟಿದ್ದು, ರೈಲು ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅವಘಡ ತಪ್ಪಿದೆ ಘಟನೆ ನಡೆದಿದೆ.ಮುಂಜಾನೆ ಸಂಚರಿಸುವ ಬೆಂಗಳೂರು-ಕಾರವಾರ ರೈಲು ನೆಟ್ಟಣದಿಂದ ಮುಂದಕ್ಕೆ ಎಡಮಂಗಲ ಸಮೀಪ ತಲುಪಿದಾಗ ಹಳಿ ಬಿರುಕು ಬಿಟ್ಟಿರುವುದು ರೈಲಿನ ಒಂದು ಭೋಗಿ ಚಲಿಸಿದ ಬಳಿಕ ಚಾಲಕನ ಗಮನಕ್ಕೆ ಬಂದಿದೆ. ಕೂಡಲೇ ಸಮಯಪ್ರಜ್ಞೆ ಮೆರೆದ ಚಾಲಕ ರೈಲನ್ನು ನಿಯಂತ್ರಿಸಿ ನಿಲುಗಡೆ ಮಾಡಿ ಘಟನೆಯನ್ನು ಇಲಾಖೆಯ ಗಮನಕ್ಕೆ ತಂದಿದ್ದಾರೆ.ಆ ಬಳಿಕ ಕಾರ್ಯಾಚರಣೆ ನಡೆಸಿ ದುರಸ್ತಿ ನಡೆಸಿ ಸಂಚರಿಸಲು

ಸುಬ್ರಹ್ಮಣ್ಯ: ತಪ್ಪಿದ ರೈಲು ದುರಂತ – ಅರ್ಲಟಾಗಿದ್ದ ಚಾಲಕನಿಗೆ ವ್ಯಾಪಕ ಪ್ರಶಂಸೆ Read More »

ಪುತ್ತೂರು: ಅಪ್ರಾಪ್ತೆಗೆ ಕಿರುಕುಳ ನೀಡಿದ ಅನ್ಯಕೋಮಿನ ವ್ಯಕ್ತಿ, ಫೋಕ್ಸೋ ದಾಖಲು.

ಪುತ್ತೂರು : ತಾಲೂಕಿನ ಬಡಗನ್ನೂರು ಗ್ರಾಮದ ಮೈಂದಿನಡ್ಕ ಸಮೀಪ ಅನ್ಯಕೋಮಿನ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ವ್ಯಕ್ತಿಯೋರ್ವನ ವಿರುದ್ದ ಪೊಕ್ಸೋ ಪ್ರಕರಣ ದಾಖಲಾಗಿದೆ. ಸ್ಥಳೀಯ ನಿವಾಸಿ ಆದಂ (56) ಎಂಬಾತ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಯಾಗಿದ್ದು, ಬಾಲಕಿ ಬೀಡಿ ಬ್ರಾಂಚಿಗೆ ತೆರಳುತ್ತಿದ್ದ ಸಮಯದಲ್ಲಿ ಆಕೆಯ ಮೇಲೆ ಕೃತ್ಯ ಎಸಗಿರುವುದಾಗಿ ಆರೋಪಿಸಲಾಗಿದೆ.

ಪುತ್ತೂರು: ಅಪ್ರಾಪ್ತೆಗೆ ಕಿರುಕುಳ ನೀಡಿದ ಅನ್ಯಕೋಮಿನ ವ್ಯಕ್ತಿ, ಫೋಕ್ಸೋ ದಾಖಲು. Read More »

ಸುಳ್ಯ: ಶಾಲಾ ಮಕ್ಕಳಿಂದ ಹದಗೆಟ್ಟ ರಸ್ತೆ ದುರಸ್ತಿ| ಜಾಲತಾಣದಲ್ಲಿ ಫೋಟೋ ವೈರಲ್|

ಸುಳ್ಯ: ಶಾಲಾ ಕಾಲೇಜುಗಳು ಕೊನೆಗೂ ಪ್ರಾರಂಭವಾಗಿವೆ.ಆದರೆ ಅದಕ್ಕೆ ತಕ್ಕಂತೆ ನಮ್ಮೂರಿನ ಜನಪ್ರತಿನಿಧಿಗಳು ತಯಾರಾಗಿಲ್ಲ ಎನ್ನೋದಕ್ಕೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿ‌ನ ಬೆಳ್ಳಾರೆಯ ಮಂಡೇಪು ಎಂಬಲ್ಲಿ ಶಾಲಾ ಮಕ್ಕಳಿಬ್ಬರು ಮಾಡಿದ ಕೆಲಸವೇ ಸಾಕ್ಷಿ. ಈ ಪುಟ್ಟ ಮಕ್ಕಳು ಶಾಲೆಗೆ ತೆರಳುವ ಹಾದಿಯ ಹದಗೆಟ್ಟ ರಸ್ತೆಯನ್ನು ತಾವೇ ಹಾರೆ ಹಿಡಿದು ಸರಿಪಡಿಸಿದ್ದು, ಈ ಫೋಟೋಗಳು ವೈರಲ್ ಆಗಿದೆ. ಏನಿದು ಘಟನೆ? ಸೋಮವಾರ ಶಾಲೆ ಆರಂಭವಾಗಿದೆ. ಎಲ್ಲ ಮಕ್ಕಳು ಸರಿ ಸುಮಾರು ಎರಡು ವರ್ಷದ ನಂತರ ಶಾಲೆಗಳಿಗೆ ತೆರಳುತ್ತಿದ್ದಾರೆ. ಹೀಗೆ ಖುಷಿಯಲ್ಲಿದ್ದ

ಸುಳ್ಯ: ಶಾಲಾ ಮಕ್ಕಳಿಂದ ಹದಗೆಟ್ಟ ರಸ್ತೆ ದುರಸ್ತಿ| ಜಾಲತಾಣದಲ್ಲಿ ಫೋಟೋ ವೈರಲ್| Read More »

ಮಂಗಳೂರು: ಬೆಳಿಗ್ಗೆ ಆಟವಾಡುತ್ತಿದ್ದ ಬಾಲಕಿ ಮಧ್ಯಾಹ್ನ ಶವವಾಗಿ ಪತ್ತೆ!!

ಮಂಗಳೂರು: ಭಾನುವಾರ ಕುದ್ರೋಳಿಯ ಹೈದರಾಲಿ ರಸ್ತೆಯಲ್ಲಿದ್ದ ಮನೆಯೊಂದರಿಂದ ಏಕಾಏಕಿ ನಾಪತ್ತೆಯಾಗಿದ್ದ ಬಾಲಕಿಯ ಮೃತದೇಹ ಮನೆ ಸಮೀಪದ ನದಿಯಲ್ಲಿ ಮಧ್ಯಾಹ್ನದ ವೇಳೆಗೆ ಪತ್ತೆಯಾಗಿರುವ ಆಘಾತಕಾರಿ ಘಟನೆ ನಡೆದಿದೆ.ಹೈದರಲಿ ರಸ್ತೆಯ ನಿವಾಸಿ ಸಲಾಂ ಎಂಬವರ ಮಗಳು ಮುಫೀದಾ(11) ಮೃತಪಟ್ಟ ಬಾಲಕಿ. ಭಾನುವಾರ ಬೆಳಗ್ಗೆ ಎಂದಿನಂತೆ ಎಲ್ಲರ ಜೊತೆ ಖುಷಿಯಲ್ಲಿ ಆಟವಾಡಿತ್ತಿದ್ದಳು, ಬಳಿಕ ಮನೆಯಿಂದ ದಿಢೀರ್ ನಾಪತ್ತೆಯಾಗಿದ್ದಳು. ಈ ಹಿನ್ನಲೆ ಆಕೆಗಾಗಿ ಸ್ಥಳೀಯರು ಎಲ್ಲಾ ಕಡೆ ಹುಡುಕಾಟ ನಡೆಸಿದ್ದರು.ಬಳಿಕ ಮನೆ ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ಮನೆಯಿಂದ ಸುಮಾರು 200

ಮಂಗಳೂರು: ಬೆಳಿಗ್ಗೆ ಆಟವಾಡುತ್ತಿದ್ದ ಬಾಲಕಿ ಮಧ್ಯಾಹ್ನ ಶವವಾಗಿ ಪತ್ತೆ!! Read More »

ವಕೀಲ ರಾಜೇಶ್ ಭಟ್ ನಿಂದ ಲೈಂಗಿಕ ದೌರ್ಜನ್ಯ| ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ಸಂತ್ರಸ್ತೆ| ಘಟನೆ ಕುರಿತಂತೆ ಎಲ್ಲವನ್ನೂ ಬಿಚ್ಚಿಟ್ಟ ಯುವತಿ|

ಮಂಗಳೂರು: ಮಂಗಳೂರಿನ ಖ್ಯಾತ ವಕೀಲ ರಾಜೇಶ್ ಭಟ್ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿ ವಾರ ಕಳೆದಿದೆ. ಆದರೂ ಈವರೆಗೂ ರಾಜೇಶ್ ಭಟ್ ಬಂಧನ ಆಗಿಲ್ಲ. ಪೊಲೀಸರು ನಾಲ್ಕು ವಿಶೇಷ ತಂಡಗಳನ್ನು ರಚಿಸಿ, ರಾಜೇಶ್ ಭಟ್ ಪತ್ತೆಗಾಗಿ ಬಲೆ ಬೀಸಿದ್ದಾರೆ. ಈ ನಡುವೆ ಸಂತ್ರಸ್ತ ಯುವತಿ ಮಾಧ್ಯಮಗಳ ಮುಂದೆ ಘಟನೆಯ ಸಂಪೂರ್ಣ ಮಾಹಿತಿ ನೀಡಿದ್ದಾಳೆ.ಮಾಧ್ಯಮಗಳ ಜೊತೆ ಮಾತನಾಡಿದ ಯುವತಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾಳೆ. ಮಂಗಳೂರಿನ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ವಿದ್ಯಾಭ್ಯಾಸ ಮಾಡುತ್ತಿರುವ ಯುವತಿ ತರಬೇತಿಗೆಂದು

ವಕೀಲ ರಾಜೇಶ್ ಭಟ್ ನಿಂದ ಲೈಂಗಿಕ ದೌರ್ಜನ್ಯ| ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ಸಂತ್ರಸ್ತೆ| ಘಟನೆ ಕುರಿತಂತೆ ಎಲ್ಲವನ್ನೂ ಬಿಚ್ಚಿಟ್ಟ ಯುವತಿ| Read More »

ಸುಳ್ಯ: ಅಂದು ಬಿಕಿನಿಯೊಂದಿಗೆ ಚೆಲ್ಲಾಟ| ಇಂದು ಹಂದಿ ಫಾರ್ಮ್ ನಿಂದ ತೊಳಲಾಟ| ತೊಡಿಕಾನ ಮಲ್ಲಿಕಾರ್ಜುನನ ಪವಿತ್ರತೆಗೆ ಸ್ಥಳೀಯರಿಂದಲೇ ಧಕ್ಕೆ| ಏನಿದು ಸ್ಟೋರಿ, ಇಲ್ಲಿದೆ ಸಂಪೂರ್ಣ ‌ಸುದ್ದಿ..

ಪುತ್ತೂರು : ಇತಿಹಾಸ ಪ್ರಸಿದ್ಧ ಹಾಗೂ ಪುರಾತನ ಕ್ಷೇತ್ರವೊಂದಕ್ಕೆ ಹಂದಿ ಫಾರ್ಮ್ ಒಂದರಿಂದ ಅಪಚಾರವಾಗುತ್ತಿದೆ. ದೇವಸ್ಥಾನಕ್ಕೆ ಸಂಬಂಧಪಟ್ಟ ಗುಡಿಗೆ ಪಕ್ಕದಲ್ಲೇ ಈ ಹಂದಿ ಫಾರ್ಮ್ ಕಾರ್ಯಾಚರಿಸುತ್ತಿದ್ದು, ಇದರಿಂದಾಗಿ ದೇವಸ್ಥಾನದ ಪಾವಿತ್ಯಕ್ಕೆ ಧಕ್ಕೆಯಾಗುತ್ತಿದೆ ಎನ್ನುವ ಆರೋಪ ಕೇಳಿ ಬರಲಾರಂಭಿಸಿದೆ. ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ತೋಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಹೊಸತೋಟ ಎಂಬಲ್ಲಿನ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಸ್ಥಳೀಯ ವ್ಯಕ್ತಿಯೋರ್ವರು ಹಂದಿಯ ಫಾರ್ಮ್ ಆರಂಭಿಸಿದ್ದು, ಈ ಫಾರ್ಮ್ ಆರಂಭಕ್ಕೆ ಮೊದಲೇ ಸ್ಥಳೀಯರು ಆಕ್ಷೇಪ ಸಲ್ಲಿಸಿದ್ದಾರೆ. ಈ ಸಂಬಂಧ

ಸುಳ್ಯ: ಅಂದು ಬಿಕಿನಿಯೊಂದಿಗೆ ಚೆಲ್ಲಾಟ| ಇಂದು ಹಂದಿ ಫಾರ್ಮ್ ನಿಂದ ತೊಳಲಾಟ| ತೊಡಿಕಾನ ಮಲ್ಲಿಕಾರ್ಜುನನ ಪವಿತ್ರತೆಗೆ ಸ್ಥಳೀಯರಿಂದಲೇ ಧಕ್ಕೆ| ಏನಿದು ಸ್ಟೋರಿ, ಇಲ್ಲಿದೆ ಸಂಪೂರ್ಣ ‌ಸುದ್ದಿ.. Read More »

ಧರ್ಮಸ್ಥಳ: ಅ.24ರಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ 54ನೇ ವರ್ಷದ ಪಟ್ಟಾಭಿಷೇಕ ವರ್ಧಂತಿ

ಬೆಳ್ತಂಗಡಿ: ಧರ್ಮಸ್ಥಳದ ಧರ್ಮಾಧಿಕಾರಿಯಾಗಿರುವ ಡಾ| ಡಿ. ವೀರೇಂದ್ರ ಹೆಗ್ಗಡೆಯವರ 54ನೇ ವರ್ಷದ ಪಟ್ಟಾಭಿಷೇಕ ವರ್ಧಂತಿ ಆಚರಣೆ ಅ. 24ರಂದು ರವಿವಾರ ಸರಳವಾಗಿ ನಡೆಯಲಿದೆ. ಆ ಪ್ರಯುಕ್ತ ದಿನ ಭಗವಾನ್‌ ಶ್ರೀ ಚಂದ್ರನಾಥ ಸ್ವಾಮಿ ಬಸದಿ ಹಾಗೂ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಲಿದೆ. ಬಳಿಕ ಸಂಜೆ 5ಕ್ಕೆ ಮಹೋತ್ಸವ ಸಭಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ತುಮಕೂರಿನ ನಿವೃತ್ತ ಜಿಲ್ಲಾಧಿಕಾರಿ ಸಿ. ಸೋಮಶೇಖರ್‌ ಅಭಿನಂದನ ಭಾಷಣ ಮಾಡುವರು. ಆ ಬಳಿಕ ಡಾ| ಹೆಗ್ಗಡೆಯವರು ಮುಂದಿನ ವರ್ಷದ ಹೊಸ

ಧರ್ಮಸ್ಥಳ: ಅ.24ರಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ 54ನೇ ವರ್ಷದ ಪಟ್ಟಾಭಿಷೇಕ ವರ್ಧಂತಿ Read More »

ಮುಂಬೈಯಲ್ಲಿ ರಸ್ತೆ ಅಪಘಾತ| ಉಡುಪಿ ಮೂಲದ ವ್ಯಕ್ತಿ ಮೃತ್ಯು..!!

ಮುಂಬೈ : ಏಳು ವರ್ಷಗಳಿಂದ ಮುಂಬೈ‌ನ ಶಿಪ್ ಯಾರ್ಡ್‌ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ, ಉಡುಪಿ ಕೊಳಲಗಿರಿ ಮೂಲದ ವ್ಯಕ್ತಿಯೋರ್ವರು ಮಹಾರಾಷ್ಟ್ರದ ಚೆಂಬೂರ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಘಟನೆ ಸಂಭವಿಸಿದೆ.ಮೃತರನ್ನು ರೋಶನ್ ಡಿ ಸೋಜಾ(33) ಗುರುತಿಸಲಾಗಿದೆ. ಇವರು ರಾತ್ರಿ 10 ಗಂಟೆಗೆ ಕೆಲಸ ಮುಗಿಸಿ ಮನೆಗೆ ತನ್ನ ಬೈಕಿನಲ್ಲಿ ಬರುತ್ತಿದ್ದ ವೇಳೆ ಹಿಂಬದಿಯಿಂದ ಟ್ರಕ್ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮುಂಬೈಯಲ್ಲಿ ರಸ್ತೆ ಅಪಘಾತ| ಉಡುಪಿ ಮೂಲದ ವ್ಯಕ್ತಿ ಮೃತ್ಯು..!! Read More »

ಬೆಳ್ತಂಗಡಿ : ಅಪ್ಪ ಮಗ ನಕ್ಸಲ್ ನಂಟು ಆರೋಪ |9 ವರ್ಷದ ಬಳಿಕ ಹೊರಬಿದ್ದ ತೀರ್ಪು|

ಮಂಗಳೂರು: ದೇಶಾದ್ಯಂತ ಭಾರೀ ಚರ್ಚೆ ಹುಟ್ಟು ಹಾಕಿದ್ದ ಬೆಳ್ತಂಗಡಿಯ ವಿಠಲ್ ಮಲೆಕುಡಿಯ ಹಾಗೂ ಆತನ ತಂದೆ ನಕ್ಸಲ್ ನಂಟು ಹೊಂದಿದ್ದ ಆರೋಪದ ತೀರ್ಪು 9 ವರ್ಷಗಳ ಬಳಿ ನಿನ್ನೆ ಪ್ರಕಟವಾಗಿದೆ. ಬೆಳ್ತಂಗಡಿ ತಾಲೂಕಿನ ಕುತ್ಲೂರು ನಿವಾಸಿ ವಿಠಲ ಮಲೆಕುಡಿಯ ಮಂಗಳೂರು ವಿವಿಯ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದು, 2012ರ ಮಾರ್ಚ್ 03ರಂದು ನಕ್ಸಲ್ ನಿಗ್ರಹ ಪಡೆಯಿಂದ ವಿಠಲ ಮಲೆಕುಡಿಯ ಮತ್ತು ಆತನ ತಂದೆ ಬಂಧನವಾಗಿತ್ತು. ಇದೀಗ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಿಂದ ಅಂತಿಮ ತೀರ್ಪು ಪ್ರಕಟಿಸಿದದ್ದು ಇಬ್ಬರೂ ನಿರಪರಾಧಿಗಳು

ಬೆಳ್ತಂಗಡಿ : ಅಪ್ಪ ಮಗ ನಕ್ಸಲ್ ನಂಟು ಆರೋಪ |9 ವರ್ಷದ ಬಳಿಕ ಹೊರಬಿದ್ದ ತೀರ್ಪು| Read More »

ಕಾರ್ಕಳ: ದನದ ಕಾಲು ಕಡಿದು ವಾರಸುದಾರರಿಗೆ ಜೀವ ಬೆದರಿಕೆ, ದೂರು ದಾಖಲು

ಕಾರ್ಕಳ: ಗದ್ದೆಗೆ ಬಂದು ಮೇಯುತ್ತಿದ್ದ ದನವೊಂದರ ಕಾಲು ಕಡಿದ ಘಟನೆ ಎರ್ಲಪ್ಪಾಡಿ ಗ್ರಾಮದಲ್ಲಿ ನಡೆದಿದ್ದು, ಪ್ರಕರಣದ ಭಾಗಿಯಾಗಿದ್ದ ಆರೋಪಿಯ ಮಕ್ಕಳು ದೂರುದಾರರಿಗೆ ಜೀವ ಬೆದರಿಕೆಯೊಡ್ಡಿದ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಎರ್ಲಪ್ಪಾಡಿಯ ಸಂತೋಷ್ ಹೆಗ್ಡೆ ದೂರು ನೀಡಿದವರು. ಸಾಕು ದನಗಳನ್ನು ಮೇಯಲೆಂದು ಬೈಲು ಗದ್ದೆಗೆ ಬಿಟ್ಟಿದ್ದರು. ಮೇವಿಗಾಗಿ ಬಿಟ್ಟ ದನವೊಂದು ಅಮಣ್ಣಿ ಹೆಗ್ಡೆ ಎಂಬವರ ಗದ್ದೆಗೆ ಹೋಗಿದ್ದು, ಇದರಿಂದ ಕುಪಿತಗೊಂಡ ಅಮಣ್ಣಿ ಕತ್ತಿಯಿಂದ ದನದ ಕಾಲು ಕಡಿದಿದ್ದಾರೆ. ಇನ್ನು ಇದೇ ವಿಚಾರವನ್ನು ಮುಂದಿಟ್ಟು ದೂರುದಾರ

ಕಾರ್ಕಳ: ದನದ ಕಾಲು ಕಡಿದು ವಾರಸುದಾರರಿಗೆ ಜೀವ ಬೆದರಿಕೆ, ದೂರು ದಾಖಲು Read More »