ಸುಳ್ಯ| ಹೊಳೆ ದಾಟುತ್ತಿದ್ದ ವೃದ್ದ ನೀರುಪಾಲು| ಕೈಗೆ ಸಿಕ್ಕಿದ ಬಳ್ಳಿಯಿಂದ ಉಳಿದ ಪ್ರಾಣ|
ಸುಳ್ಯ: ನಿರ್ಮಾಣದ ಹಂತದ ಸೇತುವೆಯ ಪಕ್ಕ ನಿರ್ಮಿಸಲಾದ ತಾತ್ಕಾಲಿಕ ರಸ್ತೆಯಲ್ಲಿ ಹೊಳೆ ದಾಟಲು ಯತ್ನಿಸಿದ ವೃದ್ದರೋರ್ವರು ಹೊಳೆಯಲ್ಲಿ ಕೊಚ್ಚಿ ಹೋದ ಘಟನೆ ಎಲಿಮಲೆ- ಮರ್ಕಂಜ ರಸ್ತೆಯ ಸೇವಾಜೆ ಎಂಬಲ್ಲಿ ನಡೆದಿದೆ. ವೃದ್ಧರ ಅದೃಷ್ಟದಿಂದ ಕೊಚ್ಚಿಹೋಗುತ್ತಿದ್ದ ಅವರ ಕೈಗೆ ಸಿಕ್ಕಿದ ಬಳ್ಳಿ ಅವರ ಪ್ರಾಣ ಉಳಿಸಿದೆ. ಎಲಿಮಲೆ – ಮರ್ಕಂಜ ರಸ್ತೆಯ ಸೇವಾಜೆ ನದಿಯನ್ನು ಅಲ್ಲಿನ ವೃದ್ಧ ಗೋಪಾಲ ಎಂಬವರು ಸಂಜೆ ದಾಟಲು ಪ್ರಯತ್ನಿಸಿದ್ದರು. ಅದಾಗಲೇ ಮಳೆ ಆರಂಭಗೊಂಡ ಕಾರಣ ಹೊಳೆಯಲ್ಲಿ ನೀರಿನ ಮಟ್ಟವೂ ಏರಿಕೆಯಾಗಿತ್ತು. ಈ ವೇಳೆ
ಸುಳ್ಯ| ಹೊಳೆ ದಾಟುತ್ತಿದ್ದ ವೃದ್ದ ನೀರುಪಾಲು| ಕೈಗೆ ಸಿಕ್ಕಿದ ಬಳ್ಳಿಯಿಂದ ಉಳಿದ ಪ್ರಾಣ| Read More »








