“ಐಡಿಯಲ್ ಐಸ್ ಕ್ರೀಂ” ಸಂಸ್ಥಾಪಕ ಪ್ರಭಾಕರ ಕಾಮತ್ ವಿಧಿವಶ

ಮಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ನಗರದ ಖ್ಯಾತ ಐಡಿಯಲ್ ಐಸ್ ಕ್ರೀಮ್ ನ ಸಂಸ್ಥಾಪಕ ಪ್ರಭಾಕರ್ ಕಾಮತ್ ಅವರು ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ. ನಗರದಲ್ಲಿ ‘ಪಬ್ಬ ಮಾಮ್’ ಎಂದೇ ಕರೆಯಲ್ಪಡುತ್ತಿದ್ದ ಪ್ರಭಾಕರ್ ಕಾಮತ್ ಅವರು ಮೊದಲ ಐಡಿಯಲ್ ಐಸ್ ಕ್ರೀಮ್ ಮಳಿಗೆಯನ್ನು 1975ರಲ್ಲಿ ಮಂಗಳೂರಿನಲ್ಲಿ ಆರಂಭಿಸಿದ್ದರು. 14 ಫ್ಲೇವರ್ ಗಳೊಂದಿಗೆ ಮೊದಲ ಬಾರಿಗೆ ಐಡಿಯಲ್ ಐಸ್ ಕ್ರೀಮ್ ಮಳಿಗೆಯನ್ನು ಪ್ರಾರಂಭಿಸಿದ್ದ ಪ್ರಭಾಕರ್ ಕಾಮತ್ ಅವರು ಸ್ವತಃ ಐಸ್ ಕ್ರೀಮ್ ತಯಾರಿ ನಡೆಸುತ್ತಿದ್ದರು.

. Ad Widget . Ad Widget . Ad Widget

ಐಡಿಯಲ್ ಐಸ್ ಕ್ರೀಮ್ ಕರಾವಳಿ ಭಾಗದಲ್ಲಿ ಅತ್ಯಂತ ಜನಪ್ರಿಯ ಐಸ್ ಕ್ರೀಮ್ ಆಗಿದ್ದು, ಮಂಗಳೂರು ನಗರದಲ್ಲಿ ಐದು ಮಳಿಗೆಗಳನ್ನು ಹೊಂದಿದೆ. ಮತ್ತು ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ‌ಮಾರುಕಟ್ಟೆಯನ್ನು ಹೊಂದಿದೆ

. Ad Widget .

Leave a Comment

Your email address will not be published. Required fields are marked *