ಕರಾವಳಿ

ವಿಟ್ಲ: ನೇಣುಬಿಗಿದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ವಿಟ್ಲ: 10ನೇ ತರಗತಿಯ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅಳಿಕೆ ಗ್ರಾಮದ ನೆಕ್ಕಿತಪುಣಿ ಎಂಬಲ್ಲಿ ನಡೆದಿದೆ ಅಳಿಕೆ ಗ್ರಾಮದ ನೆಕ್ಕಿತಪುಣಿ ನಿವಾಸಿ ಸವರ್ ಡಿ ಸೋಜ ಅವರ ಪುತ್ರ ಸಂದೀಪ್ ಅನಿಸಿತ್ ಡಿಸೋಜ(15) ಆತ್ಮಹತ್ಯೆಗೆ ಶರಣಾದ ಬಾಲಕ.ಈತ 10ನೇ ತರಗತಿ ಕಲಿಯುತ್ತಿದ್ದು, ಸರಿಯಾಗಿ ಶಾಲೆ ಹೋಗುತ್ತಿರಲಿಲ್ಲ. ನಿನ್ನೆ ರಾತ್ರಿ ಕೋಣೆಯಲ್ಲಿ ಮಲಗಿದ್ದ ಈತ ಬೆಳಿಗ್ಗೆ ಮನೆಯವರು ನೋಡಿದಾಗ ಮೃತದೇಹ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ವಿಟ್ಲ: ನೇಣುಬಿಗಿದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು Read More »

ಆಡಿನ ಮರಿಯ ರಕ್ಷಣೆಗೆಂದು ತೆರಳಿದವನ ಪ್ರಾಣ ಕಸಿದ ರೈಲು| ಏಕೈಕ ಪುತ್ರನ ಕಳೆದುಕೊಂಡ ಕುಟುಂಬ ಅನಾಥ|

ಮಂಗಳೂರು: ಆಡಿನ ಮರಿಯೊಂದನ್ನು ರಕ್ಷಿಸಲು ಹೋಗಿ ಪ್ರಾಣವನ್ನೇ ಯುವಕನೊಬ್ಬ ಕಳೆದುಕೊಂಡಿರುವ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ. 2021 ಆಗಸ್ಟ್ 28ರಂದು ಜೋಕಟ್ಟೆ ಪರಿಸರದಲ್ಲಿ ರೈಲ್ವೆ ಹಳಿಗೆ ಆಡಿನ ಮರಿಯೊಂದು ಸಿಲುಕಿತ್ತು. ಅತ್ತ ಕಡೆಯಿಂದ ರೈಲಿನ ಶಬ್ದವಾಗುತ್ತಿತ್ತು. ಆದರೆ ಹಳಿಯಲ್ಲಿ ಮರಿಯ ಕಾಲು ಸಿಲುಕಿ ಒದ್ದಾಡುತ್ತಿತ್ತು. ಅಲ್ಲಿಂದಲೇ ಹೋಗುತ್ತಿದ್ದ 21 ವರ್ಷದ ಜೋಕಟ್ಟೆ ಯುವಕ ಚೇತನ್ ಇದನ್ನು ನೋಡಿದ್ದಾನೆ. ಅವನಿಗೆ ಆಡಿನ ಮರಿಯ ಮೇಲೆ ಕನಿಕರ ಹುಟ್ಟಿದೆ. ಅದನ್ನು ಕಾಪಾಡಲು ಹೋಗಿದ್ದಾನೆ. ಅದನ್ನು ರಕ್ಷಿಸುತ್ತಿರುವಾಗಲೇ ರೈಲು ಬಂದುಬಿಟ್ಟಿದೆ. ಚೇತನ್‌

ಆಡಿನ ಮರಿಯ ರಕ್ಷಣೆಗೆಂದು ತೆರಳಿದವನ ಪ್ರಾಣ ಕಸಿದ ರೈಲು| ಏಕೈಕ ಪುತ್ರನ ಕಳೆದುಕೊಂಡ ಕುಟುಂಬ ಅನಾಥ| Read More »

ಸುಳ್ಯ: ಅಬಕಾರಿ ಇಲಾಖೆಯ ಭರ್ಜರಿ ಬೇಟೆ| 11.5 ಕೆ.ಜಿ ಗಾಂಜಾ ಪತ್ತೆ, ಆರೋಪಿಗಳು‌ ವಶಕ್ಕೆ|

ಮಂಗಳೂರು: ಜಿಲ್ಲೆಯಲ್ಲಿ ಅಕ್ರಮ ಗಾಂಜಾ ಸಾಗಾಟ‌ ಮತ್ತು ವ್ಯಸನ ಜಾಸ್ತಿಯಾಗುತ್ತಿದ್ದು ಇಂದು ಮತ್ತೊಂದು ಪ್ರಕರಣ ಪತ್ತೆಯಾಗಿದೆ. ಸುಳ್ಯ ಮತ್ತು ಪುತ್ತೂರು ಅಬಕಾರಿ ಇಲಾಖೆಯವರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸುಳ್ಯ ನಗರದ ಅಂಬಟೆಡ್ಕದ ಬೆನಕ ಹಾಸ್ಟೆಲ್ ನಲ್ಲಿ ಬಾಡಿಗೆದಾರರೊಬ್ಬರು ತಮ್ಮ ಕೊಠಡಿಯಲ್ಲಿ ಸಂಗ್ರಹಿಸಿಟ್ಟ 11 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸುಳ್ಯದ ಬೆನಕ ಹಾಸ್ಟೆಲ್ ನಲ್ಲಿ ಪಲ್ಲತ್ತೂರಿನ ಮೊಯಿದ್ದೀನ್ ಕುಂಞಿ ಎಂಬವರು ಕೊಠಡಿ ಬಾಡಿಗೆ ಪಡೆದು ಕುಟುಂಬದೊಂದಿಗೆ ವಾಸವಿದ್ದರು. ಇಲ್ಲಿ ಗಾಂಜಾ ಸಂಗ್ರಹಿಸಿ‌ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ

ಸುಳ್ಯ: ಅಬಕಾರಿ ಇಲಾಖೆಯ ಭರ್ಜರಿ ಬೇಟೆ| 11.5 ಕೆ.ಜಿ ಗಾಂಜಾ ಪತ್ತೆ, ಆರೋಪಿಗಳು‌ ವಶಕ್ಕೆ| Read More »

ಸುಳ್ಯ : ಕಾಣೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ

ಸುಳ್ಯ : ಐವರ್ನಾಡು ಗ್ರಾಮದ ಬಾಂಜಿಕೋಡಿಯಲ್ಲಿ ಬಾವಿಯಲ್ಲಿ ಮೃತದೇಹ ಪತ್ತೆಯಾದ ಘಟನೆ ಜ. 2 ರಂದು ನಡೆದಿದೆ . ಮೃತ ದೇಹವು ಬಾಂಜಿಕೋಡಿ ನಿವಾಸಿ ದಿವಂಗತ ಮಾಧವ ರವರ ಪುತ್ರ ಅರುಣ್ ಕುಮಾರ್ ಬಾಂಜಿಕೋಡಿಯವರದ್ದೆಂದು ಗುರುತಿಸಲಾಗಿದೆ. ಇವರು ಡಿ .31 ರಿಂದ ಮನೆಯಿಂದ ಕಾಣೆಯಾಗಿದ್ದು ಸ್ಥಳೀಯರು ಮತ್ತು ಕುಟುಂಬಸ್ಥರು ಇವರನ್ನು ಹುಡುಕಾಟದಲ್ಲಿ ತೊಡಗಿಕೊಂಡಿದ್ದರು. ಆದರೆ ಇಂದು ಮುಂಜಾನೆ ರವಿಕುಮಾರ್ ರವರ ಮನೆಯ ಮುಂಭಾಗದಲ್ಲಿರುವ ಬಾವಿಯಲ್ಲಿ ಇವರ ಮೃತದೇಹ ಕುಟುಂಬಸ್ಥರಿಗೆ ಕಂಡು ಬಂದಿದೆ. ಅರುಣ್ ಕುಮಾರ್ ರವರು ಉಪ್ಪಿನಂಗಡಿಯಲ್ಲಿ

ಸುಳ್ಯ : ಕಾಣೆಯಾಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ Read More »

ಮಾಣಿ : ಯುವಕನಿಗೆ ಮಾರಣಾಂತಿಕ ಹಲ್ಲೆ

ಮಾಣಿ: ಯುವಕನೋರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಟ್ಲದ ಮಾಣಿಯಲ್ಲಿ ನಡೆದಿದೆ. ಹುಸೇನ್ ಹಲ್ಲೆಗೊಳಗಾದ ಯುವಕ. ಅಂಗಡಿ ಕಟ್ಟಡವನ್ನು ಬಾಡಿಗೆಗೆ ಕೊಟ್ಟ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಈತನ ಮೇಲೆ ಬುಡೋಳಿಯ ಅಶ್ರಫ್ ಅನ್ವರ್, ಖಾದರ್ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಗಾಯಾಳು ಪುತ್ತೂರಿನ ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಕುರಿತು ವಿಟ್ಲ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಮಾಣಿ : ಯುವಕನಿಗೆ ಮಾರಣಾಂತಿಕ ಹಲ್ಲೆ Read More »

ಬಂಟ್ವಾಳ: ರಸ್ತೆ ಬದಿ ಕೊಳೆಯುತ್ತಿದೆ ರಾಶಿ ರಾಶಿ ತ್ಯಾಜ್ಯ| ದುರ್ಗಂಧ, ಗಬ್ಬು ವಾಸನೆಯ ತಾಣವಾಗ್ತಿದೆ ಈ ಊರು| ಇದಕ್ಕೆ ಯಾರು ಹೊಣೆ?

ಬಂಟ್ವಾಳ: ಇಲ್ಲಿನ ಚರ್ಚ್ ಬಳಿ ತ್ಯಾಜ್ಯಗಳ ರಾಶಿಯಿಂದ ಗಬ್ಬು ವಾಸನೆ ಬರುತ್ತಿದ್ದು ಸಾರ್ವಜನಿಕರು ಸಂಚರಿಸುವುದಕ್ಕೆ ತೊಂದರೆಯುಂಟಾಗಿದೆ. ಗೋಳ್ತಮಜಲು ಗ್ರಾಮ ಪಂಚಾಯ್ತ ವ್ಯಾಪ್ತಿಯ ಅಮ್ಟೂರು ಚರ್ಚ್ ಬಳಿ ಸಾರ್ವಜನಿಕರು ಸಂಚಾರಿಸುವ ರಸ್ತೆ ಬದಿಯಲ್ಲಿ ತ್ಯಾಜ್ಯ ವಸ್ತುಗಳನ್ನು ಎಸೆದಿದ್ದು ಇಲ್ಲಿನ ಪ್ರದೇಶ ಗಬ್ಬು ವಾಸನೆಯಿಂದ ಬರುತ್ತಿದೆ. ಕಸದ ಬುಟ್ಟಿ ಸೇರಬೇಕಾದ ಗಲೀಜು ವಸ್ತುಗಳು ಸೇರಿದಂತೆ ಎಲ್ಲವನ್ನು ರಸ್ತೆ ಬದಿಯಲ್ಲಿ ಎಸೆಯಲ್ಪಟ್ಟಿದ್ದು ಸಾರ್ವಜನಿಕರು ಈ ರಸ್ತೆಯಲ್ಲಿ ಸಂಚರಿಸುವುದಕ್ಕೆ ಬಹಳ ಹಿಂಜರಿಯುವಂತೆ ಮಾಡಿದೆ. ಇನ್ನೂ ದೇಶದೆಲ್ಲೆಡೆ ಸ್ವಚ್ಚಭಾರತ ಮಂತ್ರ ಪಠಿಸುತ್ತಿದ್ದರೆ ಗೋಳ್ತಮಜಲು ಗ್ರಾಮ

ಬಂಟ್ವಾಳ: ರಸ್ತೆ ಬದಿ ಕೊಳೆಯುತ್ತಿದೆ ರಾಶಿ ರಾಶಿ ತ್ಯಾಜ್ಯ| ದುರ್ಗಂಧ, ಗಬ್ಬು ವಾಸನೆಯ ತಾಣವಾಗ್ತಿದೆ ಈ ಊರು| ಇದಕ್ಕೆ ಯಾರು ಹೊಣೆ? Read More »

ಮಂಗಳೂರು : ಪಾದಚಾರಿಗೆ ಬಸ್ ಢಿಕ್ಕಿ -ದೇಹದ ಭಾಗಗಳು ರಸ್ತೆಯಲ್ಲೆ ಚೆಲ್ಲಾಪಿಲ್ಲಿ

ಮಂಗಳೂರು: ಖಾಸಗಿ‌ ಬಸ್ ಢಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಶನಿವಾರ ಸಂಜೆ ಮೂಳೂರಿನಲ್ಲಿ ನಡೆದಿದೆ. ಮೂಳೂರು ಬೀಚ್ ಬಳಿಯ ನಿವಾಸಿ ರಮೇಶ್ ಬಂಗೇರ ಅಲಿಯಾಸ್ ಹರಿ ಓಂ (65) ಎಂಬವರು ಮೃತ ವ್ಯಕ್ತಿ. ರಾಷ್ಟ್ರೀಯ ಹೆದ್ದಾರಿ 66 ರ ಮೂಳೂರು ಬಸ್ ನಿಲ್ದಾಣ ದ ಬಳಿ ರಸ್ತೆ ದಾಟುತ್ತಿದ್ದಗ ಅವರಿಗೆ ಮಂಗಳೂರಿನಿಂದ ಉಡುಪಿ‌ ಕಡೆಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್ ಬಸ್ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ರಮೇಶ್ ಬಂಗೇರ ಅವರ

ಮಂಗಳೂರು : ಪಾದಚಾರಿಗೆ ಬಸ್ ಢಿಕ್ಕಿ -ದೇಹದ ಭಾಗಗಳು ರಸ್ತೆಯಲ್ಲೆ ಚೆಲ್ಲಾಪಿಲ್ಲಿ Read More »

ಪುತ್ತೂರು : ಬಹುನಿರೀಕ್ಷಿತ ಕಿರುಚಿತ್ರ ‘ಯುವ-2’ ವಿನ ಕಿರುದೃಶ್ಯ ಬಿಡುಗಡೆ| ನಟ ಪುನೀತ್ ರಾಜ್ ಕುಮಾರ್ ಗೆ ಅರ್ಪಣೆ ಮಾಡಿದ ಚಿತ್ರತಂಡ

ಪುತ್ತೂರು : ಬಹುನಿರೀಕ್ಷಿತ ಕಿರುಚಿತ್ರ ‘ಯುವ-2’ ಅನ್ನು ನಿರ್ಮಿಸುತ್ತಿರುವ ಪುತ್ತೂರಿನ ತಂಡವು ಹೊಸವರ್ಷದ ಪ್ರಯುಕ್ತ ಈ ಚಿತ್ರದ ಒಂದು ಕಿರುದೃಶ್ಯವನ್ನು Firstfly creations ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಿದೆ. ಕರ್ನಾಟಕದ ಕಿರುಚಿತ್ರ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ವಿಭಿನ್ನ ಶೈಲಿಯ ಕಥಾಹಂದರದ ಮೂಲಕ ಹೊಸ ದಾಖಲೆ ನಿರ್ಮಿಸುವತ್ತ ಪುತ್ತೂರಿನ ಈ ತಂಡ ಮುನ್ನಡೆಯುತ್ತಿದೆ. ಯುವ-2 ಈಗಾಗಲೇ ಚಿತ್ರೀಕರಣ ಹಂತದಲ್ಲಿದ್ದು, ಇನ್ನು ಕೆಲವು ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ. ಕನ್ನಡ ಚಿತ್ರರಂಗದ ಅನುಭವಿ ಕಲಾವಿದರನ್ನು ಒಳಗೊಂಡಿರುವ ಈ ತಂಡವು

ಪುತ್ತೂರು : ಬಹುನಿರೀಕ್ಷಿತ ಕಿರುಚಿತ್ರ ‘ಯುವ-2’ ವಿನ ಕಿರುದೃಶ್ಯ ಬಿಡುಗಡೆ| ನಟ ಪುನೀತ್ ರಾಜ್ ಕುಮಾರ್ ಗೆ ಅರ್ಪಣೆ ಮಾಡಿದ ಚಿತ್ರತಂಡ Read More »

ಮಂಗಳೂರು:ಸತ್ಯಕ್ಷೇತ್ರಗಳ ಅಪವಿತ್ರಗೊಳಿಸಿದ ದೇಸಾಯಿಗೆ ಶ್ರದ್ಧಾಂಜಲಿ ‌ಬ್ಯಾನರ್ ಅಳವಡಿಸಿದ ಭಜರಂಗದಳ

ಮಂಗಳೂರು: ದೈವ ದೇವಸ್ಥಾನ ಹಾಗೂ ಮಸೀದಿಗಳ ಕಾಣಿಕೆ ಹುಂಡಿಯಲ್ಲಿ ವಿಕೃತಿ ಮೆರೆದ ಆರೋಪಿಯ ಭಾವಚಿತ್ರ ಹಾಕಿ ಬಜರಂಗದಳದ ಶಾಖೆ ಯವರಿಂದ ಶ್ರದ್ಧಾಂಜಲಿ ಬ್ಯಾನರ್ ಹಾಕಲಾಗಿದೆ. ಮಂಗಳೂರು ಹೊರವಲಯದ ಬೀರಿ ಜಂಕ್ಷನ್ ನಲ್ಲಿ ಈ ಬ್ಯಾನರ್ ಅಳವಡಿಸಲಾಗಿದೆ. ಅದೇ ರೀತಿ ದೇವದಾಸ್ ದೇಸಾಯಿ ಹೆಸರನ್ನು ಡೇವಿಡ್ ದೇಸಾಯಿ ಎಂದು ಬ್ಯಾನರ್ ನಲ್ಲಿ ಬಜರಂಗದಳದವರು ಬರೆಸಿದ್ದಾರೆ. ಮಂಗಳೂರು ನಗರದ ಸುಮಾರು 18 ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಿದ ಆರೋಪಿ ದೇವದಾಸ್ ಕ್ರಿಶ್ಚಿಯನ್ ಧರ್ಮದ ಅನುಯಾಯಿ ಆಗಿದ್ದರು ಎಂದು ತಿಳಿದುಬಂದಿದೆ.

ಮಂಗಳೂರು:ಸತ್ಯಕ್ಷೇತ್ರಗಳ ಅಪವಿತ್ರಗೊಳಿಸಿದ ದೇಸಾಯಿಗೆ ಶ್ರದ್ಧಾಂಜಲಿ ‌ಬ್ಯಾನರ್ ಅಳವಡಿಸಿದ ಭಜರಂಗದಳ Read More »

ನಂದಿನಿ ಹಾಲಿನ ಪ್ಯಾಕೆಟ್ ನಲ್ಲಿ ಪುನೀತ್ ಬಾವಚಿತ್ರ| ಬ್ರಾಂಡ್ ಅಂಬಾಸಿಡರ್ ಗೆ ಗೌರವ ಸಲ್ಲಿಸಿದ ಕೆಎಂಎಪ್

ಬೆಂಗಳೂರು : ಕನ್ನಡ ಚಿತ್ರರಂಗದ ರಾಜರತ್ನ ಹಾಗೂ ಅಭಿಮಾನಿಗಳ ನಗು ಮುಖದ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಿಧನರಾಗಿ ಎರಡು ತಿಂಗಳು ಕಳೆದಿವೆ. ಆದರೆ, ಅವರಿಗೆ ಇದ್ದ ಪರಿಸರ ಕಾಳಜಿ, ಸಮಾಜದ ಮೇಲೆ ಇದ್ದ ಪ್ರೀತಿ ಹಾಗೂ ದೊಡ್ಡವರ ಮೇಲೆ ಇದ್ದ ಗೌರವ ಎಲ್ಲರನ್ನೂ ಮೂಕ ವಿಸ್ಮಿತರನ್ನಾಗಿಸುತ್ತೆ.ಅದರಂತೆ ಇದೀಗ ಕೆಎಂಎಫ್ ವತಿಯಿಂದ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗಿದೆ. ನಂದಿನ ಹಾಲಿನ ಪ್ಯಾಕೆಟ್ ಮೇಲೆ ಪುನೀತ್ ರಾಜ್​ಕುಮಾರ್ ಭಾವಚಿತ್ರವನ್ನ ಮುದ್ರಿಸುವ ಮೂಲಕ ವಿಶೇಷ ಗೌರವವನ್ನ ತೋರಿಸಲಾಗಿದೆ. ಇನ್ನು

ನಂದಿನಿ ಹಾಲಿನ ಪ್ಯಾಕೆಟ್ ನಲ್ಲಿ ಪುನೀತ್ ಬಾವಚಿತ್ರ| ಬ್ರಾಂಡ್ ಅಂಬಾಸಿಡರ್ ಗೆ ಗೌರವ ಸಲ್ಲಿಸಿದ ಕೆಎಂಎಪ್ Read More »