ಕರಾವಳಿ

ಸುಳ್ಯ: ತೆಂಗಿನ ಮರದಿಂದ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವು

ಸುಳ್ಯ: ಇಲ್ಲಿನ ಸಮೀಪದ ಪೆರಾಜೆಯ ವ್ಯಕ್ತಿಯೋರ್ವರು 25ರಂದು ತನ್ನ ಮನೆಯ ದುರಸ್ತಿ ಕಾರ್ಯದ ಸಂದರ್ಭ ತೆಂಗಿನ ಮರದಿಂದ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಪೆರಾಜೆ ಬಂಗಾರಕೋಡಿಯ ಹರೀಶ್ ಎಂಬ ವ್ಯಕ್ತಿ ತಮ್ಮ ಹಳೆ ಮನೆಯನ್ನು ಕೆಡವಿ ಹೊಸ ಮನೆ ಕಟ್ಟಲು ಜಾಗ ಸಮತಟ್ಟು ಮಾಡಲು ಬಂದ ಜೆಸಿಬಿಯ ಚಾಲಕರಿಗೆ ಕುಡಿಯಲೆಂದು ಬೊಂಡ ತೆಗೆಯಲು ತೆಂಗಿನ ಮರ ಏರಿದ್ದರು. ಈ ಸಂದರ್ಭದಲ್ಲಿ ತೆಂಗಿನ ಮರದಿಂದ ಆಯತಪ್ಪಿ ಅವರು ಬಿದ್ದು ಗಂಭೀರ ಗಾಯಗೊಂಡರು.

ಸುಳ್ಯ: ತೆಂಗಿನ ಮರದಿಂದ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವು Read More »

ಉಡುಪಿ: ಕೇಸರಿ ಶಾಲು v/s ಸ್ಕಾರ್ಫ್ ಕಿತ್ತಾಟ| ಕಾಲೇಜು ವಿದ್ಯಾರ್ಥಿಗಳ ನಡುವೆ ಮುಸುಕಿನ ಗುದ್ದಾಟ| ನಾ ಕೊಡೆ, ನೀ ಬಿಡೆ…!

ಕಿನ್ನಿಗೋಳಿ: ಉಡುಪಿ, ಚಿಕ್ಕಮಗಳೂರಿನ ಕಾಲೇಜುಗಳಲ್ಲಿ ಸ್ಕಾರ್ಫ್-ಕೇಸರಿ ಶಲ್ಯ ವಿವಾದಗಳು ಹಸಿಯಾಗಿರುವಾಗಲೇ, ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆ ಪೊಂಪೈ ಕಾಲೇಜಿನಲ್ಲಿ ಸ್ಕಾರ್ಪ್ ವಿವಾದ ಪ್ರಾರಂಭವಾಗಿದೆ. ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಗಳು ಸ್ಕಾರ್ಪ್ ಹಾಕಿ ತರಗತಿ ಹಾಜರಾದ ಕಾರಣ, ಹಿಂದೂ ವಿದ್ಯಾರ್ಥಿ -ವಿದ್ಯಾರ್ಥಿನಿಯರು ಕೇಸರಿ ಶಾಲು ಹಾಕಿ ತರಗತಿ ಹಾಜರಾಗಿದ್ದಾರೆ. ವಿದ್ಯಾರ್ಥಿಗಳು ಸ್ಕಾರ್ಪ್ ವಿಚಾರ ಕುರಿತು ಶಾಲಾ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದು, ಆಡಳಿತ ಮಂಡಳಿ ಸಭೆ ನಡೆದಿದೆ ಎನ್ನಲಾಗಿದೆ. ಮುಸ್ಲಿಂ

ಉಡುಪಿ: ಕೇಸರಿ ಶಾಲು v/s ಸ್ಕಾರ್ಫ್ ಕಿತ್ತಾಟ| ಕಾಲೇಜು ವಿದ್ಯಾರ್ಥಿಗಳ ನಡುವೆ ಮುಸುಕಿನ ಗುದ್ದಾಟ| ನಾ ಕೊಡೆ, ನೀ ಬಿಡೆ…! Read More »

ಮಂಗಳೂರು: ದ.ಕ ಜಿಲ್ಲೆಯಲ್ಲಿ ಹೀಗಿರಲಿದೆ ವೀಕೆಂಡ್ ಕರ್ಪ್ಯೂ|

ಮಂಗಳೂರು: ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದ್ದು, ಈ ಸಂದರ್ಭ ದ.ಕ. ಜಿಲ್ಲೆಯಲ್ಲಿ ಈ ವಾರದ ವೀಕೆಂಡ್‌ನಲ್ಲಿ ಹೊರಾಂಗಣದಲ್ಲಿ 200 ಜನರಿಗೆ (ಒಳಾಂಗಣ 100) ಸೀಮಿತಗೊಳಿಸಿ ಮದುವೆ, ಯಕ್ಷಗಾನ ಸೇರಿದಂತೆ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿರಲಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳ ಬಗ್ಗೆ ಅವರು ಮಾಹಿತಿ ನೀಡಿದರು. ಮದುವೆ, ಯಕ್ಷಗಾನ ಸೇರಿದಂತೆ ಪೂರ್ವ ನಿಗದಿತ ಸಾರ್ವಜನಿಕ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಹೀಗಿರಲಿದೆ ವೀಕೆಂಡ್ ಕರ್ಪ್ಯೂ| Read More »

ಕುಕ್ಕೆ: ಕೋವಿಡ್ ಮಾರ್ಗಸೂಚಿ ಹಿನ್ನೆಲೆ| ಜ.6ರಿಂದ ಎಲ್ಲಾ ಸೇವೆಗಳು ರದ್ದು, ದರ್ಶನಕ್ಕಷ್ಟೇ ಅವಕಾಶ|

ಕುಕ್ಕೆಸುಬ್ರಹ್ಮಣ್ಯ: ರಾಜ್ಯದಲ್ಲಿ ಮತ್ತೆ ಕೋವಿಡ್ ವೈರಸ್​ ತಲ್ಲಣ ಮೂಡಿಸಿದೆ. ಈ ಹಿನ್ನೆಲೆ​ ಸರ್ಕಾರದಿಂದ ಕೋವಿಡ್​ ಮಾರ್ಗಸೂಚಿ ಬಿಡುಗಡೆಯಾದ ಬೆನ್ನಲ್ಲೇ ನಾಳೆಯಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂಜಾ ಸೇವೆಗಳನ್ನು ರದ್ದುಪಡಿಸಲಾಗಿದೆ. ಈ ಕುರಿತಂತೆ ಜಿಲ್ಲಾಡಳಿತ ಪ್ರಕಟಣೆ ಹೊರಡಿಸಿದೆ. ಕೋವಿಡ್​​ ತಡೆಗಟ್ಟುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಆದೇಶದಂತೆ ಜ.6 ರಿಂದ ಮುಂದಿನ ಆದೇಶದವರೆಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತಾದಿಗಳಿಗಾಗಿ ಯಾವುದೇ ಪೂಜಾ ಸೇವೆಗಳನ್ನು ನಡೆಸಲ್ಪಡುವುದಿಲ್ಲ ಎಂದು ದೇಗುಲದ ವತಿಯಿಂದ ಪ್ರಕಟಣೆ ಹೊರಡಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೇವೆಗಳು ರದ್ದು

ಕುಕ್ಕೆ: ಕೋವಿಡ್ ಮಾರ್ಗಸೂಚಿ ಹಿನ್ನೆಲೆ| ಜ.6ರಿಂದ ಎಲ್ಲಾ ಸೇವೆಗಳು ರದ್ದು, ದರ್ಶನಕ್ಕಷ್ಟೇ ಅವಕಾಶ| Read More »

ಪುತ್ತೂರು: ಕ್ರಿಸ್ಮಸ್ ಗೋದಲಿ ಸ್ಫರ್ದೆಯ ಫಲಿತಾಂಶ ಪ್ರಕಟ

ಪುತ್ತೂರು : ಬಂಟ್ವಾಳ ತಾಲೂಕಿನ ಪೆರುವಾಯಿ ಫಾತಿಮ ಚರ್ಚ್ ಮುಚ್ಚಿರಪದವು ಅಧೀನದಲ್ಲಿ ಕ್ರಿಸ್ಮಸ್ ಹಬ್ಬದ ದಿನದಂದು ಗೋದಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಇದರ ಫಲಿತಾಂಶ ಪ್ರಕಟಗೊಂಡಿದೆ. ರಾಜೇಶ್ ಪ್ರಕಾಶ್ ಡಿಸೋಜ ಮುಳಿಯ ಪೆರುವಾಯಿ ಪ್ರಥಮ ಬಹುಮಾನ, ದ್ವಿತೀಯ ಬಹುಮಾನವನ್ನು ರೋಶನ್ ಡಿಸೋಜ ಅಂಗರಕುಮೇರ್ ಶಾಲೋಮ್ ನಿವಾಸ್ ಪಡೆದುಕೊಂಡರು. ಇವರಿಗೆ ಡಿಸೆಂಬರ್ 31 ರಂದು ರೆl ಫಾದರ್ ವಿಶಾಲ್ ಮೋನಿಸ್ ಅವರ ಉಪಸ್ಥಿಯಲ್ಲಿ ಪೆರುವಾಯಿ ಚರ್ಚ್ ನಲ್ಲಿ ಬಹುಮಾನವನ್ನ ವಿತರಿಸಲಾಯಿತು.

ಪುತ್ತೂರು: ಕ್ರಿಸ್ಮಸ್ ಗೋದಲಿ ಸ್ಫರ್ದೆಯ ಫಲಿತಾಂಶ ಪ್ರಕಟ Read More »

ಉಪ್ಪಿನಂಗಡಿ ಲಾಠಿಚಾರ್ಜ್ ಪ್ರಕರಣ| ಬಂಧಿತ 10 ಮಂದಿಗೆ ಜಾಮೀನು|

ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ನಡೆದಿದ್ದ ಪ್ರತಿಭಟನೆ ಮತ್ತು ಲಾಠಿಚಾರ್ಜ್ ವೇಳೆ ದಾಖಲಾದ ಕೇಸ್ ಗಳಲ್ಲಿ ಬಂಧಿತರಾದ 10 ಮಂದಿ ಆರೋಪಿಗಳಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಕೋರ್ಟ್ ಜಾಮೀನು ನೀಡಿದೆ. ಮೊಹಮ್ಮದ್ ತ್ವಾಹಿರ್, ಸಾಧಿಕ್, ಅಬ್ದುಲ್ ಮುಬಾರಕ್, ಅಬ್ದುಲ್, ಮೊಹಮ್ಮದ್ ಜಾಹಿದ್, ಸ್ವಾಜೀರ್ ಮೊಹಮ್ಮದ್ ಫೈಝಲ್, ಮೊಹಮ್ಮದ್ ಹನೀಫ್, ಎನ್. ಕಾಸಿಂ, ಮೊಹಮ್ಮದ್ ಆಶೀಫ್, ತೌಫೀಲ್ ಮೊಹಮ್ಮದ್, ಜಾಮೀನು ಪಡೆದುಕೊಂಡವರು. ಡಿಸೆಂಬರ್ 14ರಂದು ಉಪ್ಪಿನಂಗಡಿ ಠಾಣಾ ಮುಂಭಾಗದಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ಪ್ರತಿಭಟನಾ ನಿರತರ

ಉಪ್ಪಿನಂಗಡಿ ಲಾಠಿಚಾರ್ಜ್ ಪ್ರಕರಣ| ಬಂಧಿತ 10 ಮಂದಿಗೆ ಜಾಮೀನು| Read More »

ಕಾನೂನು ಪ್ರಾಧಿಕಾರ ಮಧ್ಯಸ್ಥಿಕೆ| ಮತ್ತೆ ಒಂದಾದ ಸತಿ-ಪತಿಗಳು|

ಮಂಗಳೂರು: ಕೌಟುಂಬಿಕ ಕಲಹಗಳಿಂದಾಗಿ ಮನನೊಂದು ಬೇರ್ಪಟ್ಟಿದ್ದ ಸತಿ-ಪತಿ ಹಾಗೂ ಮಕ್ಕಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮಧ್ಯಸ್ಥಿಕೆಯಲ್ಲಿ ಒಂದಾದ ಘಟನೆ ಮಂಗಳವಾರ ನಡೆದಿದೆ. ಕೌಟುಂಬಿಕ ಜೀವನದಲ್ಲಿ ಕಂಡುಬಂದ ಹಲವಾರು ಸಮಸ್ಯೆಗಳಿಂದ ಮನನೊಂದಿದ್ದ ನಾರಾಯಣ್‌ (48) (ಹೆಸರು ಬದಲಾಯಿಸಲಾಗಿದೆ) ಮತ್ತು ಸರಳಾ (46) (ಹೆಸರು ಬದಲಾಯಿಸಲಾಗಿದೆ) ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ನಡೆಸಿದ ಕೌನ್ಸೆಲಿಂಗ್‌ನಲ್ಲಿ ಸಂಸಾರದ ಜವಾಬ್ದಾರಿ, ಅದರ ಮಹತ್ವಗಳನ್ನು ಅರಿತುಕೊಂಡು ಸತಿ-ಪತಿಯ ಮನಪರಿವರ್ತನೆಯಾಗಿ ಪುನಃ ಒಂದಾಗಿದ್ದಾರೆ. ಕೌಟುಂಬಿಕ ಕಲಹಗಳಿಂದಾಗಿ ಮನ ನೊಂದು ಬೇರೆಯಾಗಲು ನಿರ್ಧರಿಸಿದ್ದರು. ನಾರಾಯಣ್‌ ಬಿ.ಫಾರ್ಮ್

ಕಾನೂನು ಪ್ರಾಧಿಕಾರ ಮಧ್ಯಸ್ಥಿಕೆ| ಮತ್ತೆ ಒಂದಾದ ಸತಿ-ಪತಿಗಳು| Read More »

ವಿಟ್ಲದ ಯುವಕ ಬೆಂಗಳೂರಿನಲ್ಲಿ ಸಾವು

ವಿಟ್ಲ: ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿರುವ ಪುಣಚ ನಿವಾಸಿ ಪ್ರದೀಪ್ ಕುಲಾಲ್(25) ಅವರು ಜ.5 ರಂದು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಪ್ರದೀಪ್ ಅವರು ಪುಣಚ ನಿವಾಸಿಯಾಗಿದ್ದು, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ಪೂರೈಸಿ, ಬೆಂಗಳೂರಿನ ಸ್ಟಾರ್ ಹೆಲ್ತ್ ಇನ್ಸೂರೆನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು.

ವಿಟ್ಲದ ಯುವಕ ಬೆಂಗಳೂರಿನಲ್ಲಿ ಸಾವು Read More »

ಸುಳ್ಯ: ಚಿಲ್ಲರೆಗಾಗಿ‌ ನಿರ್ವಾಹಕನಿಗೆ ಹಲ್ಲೆಗೈದ ಪ್ರಯಾಣಿಕ| ದೂರು ದಾಖಲು

ಸುಳ್ಯ: ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕ ಚಿಲ್ಲರೆ ಕೊಡಲು ವಿಳಂಬ ಮಾಡಿದ ಕಾರಣಕ್ಕೆ ಸಿಟ್ಟಿಗೆದ್ದ ಪ್ರಯಾಣಿಕನೋರ್ವ ಕಂಡಕ್ಟರ್ ಮೇಲೆಯೇ ಹಲ್ಲೆ ನಡೆಸಿದ ಘಟನೆ ಬೆಳ್ಳಾರೆ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಸುಳ್ಯದಿಂದ ಬೆಳ್ಳಾರೆ ಕಡೆಗೆ ತೆರಳುತ್ತಿದ್ದ ಬಸ್ ಗೆ ಐವರ್ನಾಡು ಎಂಬಲ್ಲಿ ಪುರುಷೋತ್ತಮ ಎಂಬವರು ಹತ್ತಿ, ಟಿಕೆಟ್ ಶುಲ್ಕವಾಗಿ ನೂರು ರೂಪಾಯಿಯನ್ನು ಕಂಡಕ್ಟರ್ ಗೆ ನೀಡಿದ್ದರು. ಬಳಿಕ ಟಿಕೆಟ್ ಹಿಂದೆ 90 ರೂ. ಎಂದು ಬರೆದು ನಂತರ ಹಿಂತಿರುಗಿಸುವುದಾಗಿ ತಿಳಿಸಿದ್ದರು. ಬಸ್ ಬೆಳ್ಳಾರೆ ತಲುಪಿದಾಗ ಕಂಡಕ್ಟರ್ ಬಳಿ ಪುರುಷೋತ್ತಮ್ ಅವರು

ಸುಳ್ಯ: ಚಿಲ್ಲರೆಗಾಗಿ‌ ನಿರ್ವಾಹಕನಿಗೆ ಹಲ್ಲೆಗೈದ ಪ್ರಯಾಣಿಕ| ದೂರು ದಾಖಲು Read More »

ಉಪ್ಪಿನಂಗಡಿ ಗಲಭೆ ಪ್ರಕರಣ| ಇಬ್ಬರು ಆರೋಪಿಗಳಿಗೆ ಜಾಮೀನು

ಉಪ್ಪಿನಂಗಡಿ: ಉಪ್ಪಿನಂಗಡಿಯಲ್ಲಿ ಹಿಂದೂ ಮುಖಂಡರ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದ ಇಬ್ಬರು ಎಸ್.ಡಿ.ಪಿ.ಐ ನಾಯಕರಿಗೆ ಜಾಮೀನು ಮಂಜೂರಾಗಿದೆ. ಡಿ.6 ರಂದು ಸಂಜೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಸುಬ್ರಹ್ಮಣ್ಯ ಕ್ರಾಸ್ ನ ಅಶೋಕ್ ಶೆಟ್ಟಿ ಮಾಲಕತ್ವದ ಹಸಿ ಮೀನು ಮಾರುಕಟ್ಟೆಗೆ ಆರು ಜನರ ತಂಡ ಬೈಕ್ ನಲ್ಲಿ ಬಂದು ತಲವಾರು ದಾಳಿ ಮಾಡಿದೆ. ಅಂಗಡಿಯಲ್ಲಿದ್ದ ಅಶೋಕ್ ಶೆಟ್ಟಿ ಮೋಹನ್ ದಾಸ್ ಶೆಟ್ಟಿ ಮತ್ತು ಮಹೇಶ್ ಎಂಬ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ತಲವಾರು ದಾಳಿ

ಉಪ್ಪಿನಂಗಡಿ ಗಲಭೆ ಪ್ರಕರಣ| ಇಬ್ಬರು ಆರೋಪಿಗಳಿಗೆ ಜಾಮೀನು Read More »