ಪುತ್ತೂರು : ಬಹುನಿರೀಕ್ಷಿತ ಕಿರುಚಿತ್ರ ‘ಯುವ-2’ ವಿನ ಕಿರುದೃಶ್ಯ ಬಿಡುಗಡೆ| ನಟ ಪುನೀತ್ ರಾಜ್ ಕುಮಾರ್ ಗೆ ಅರ್ಪಣೆ ಮಾಡಿದ ಚಿತ್ರತಂಡ

Ad Widget ... ..

ಪುತ್ತೂರು : ಬಹುನಿರೀಕ್ಷಿತ ಕಿರುಚಿತ್ರ ‘ಯುವ-2’ ಅನ್ನು ನಿರ್ಮಿಸುತ್ತಿರುವ ಪುತ್ತೂರಿನ ತಂಡವು ಹೊಸವರ್ಷದ ಪ್ರಯುಕ್ತ ಈ ಚಿತ್ರದ ಒಂದು ಕಿರುದೃಶ್ಯವನ್ನು Firstfly creations ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಗೊಳಿಸಿದೆ.

Ad Widget

ಕರ್ನಾಟಕದ ಕಿರುಚಿತ್ರ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ವಿಭಿನ್ನ ಶೈಲಿಯ ಕಥಾಹಂದರದ ಮೂಲಕ ಹೊಸ ದಾಖಲೆ ನಿರ್ಮಿಸುವತ್ತ ಪುತ್ತೂರಿನ ಈ ತಂಡ ಮುನ್ನಡೆಯುತ್ತಿದೆ. ಯುವ-2 ಈಗಾಗಲೇ ಚಿತ್ರೀಕರಣ ಹಂತದಲ್ಲಿದ್ದು, ಇನ್ನು ಕೆಲವು ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ.

ಕನ್ನಡ ಚಿತ್ರರಂಗದ ಅನುಭವಿ ಕಲಾವಿದರನ್ನು ಒಳಗೊಂಡಿರುವ ಈ ತಂಡವು ಸಿನಿಪ್ರಿಯರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಜುಲೈ ಅಥವಾ ಆಗಸ್ಟ್ ವೇಳೆಯಲ್ಲಿ ಚಿತ್ರ ಬಿಡುಗಡೆಯಾಗಬಹುದು ಎಂಬ ಮಾಹಿತಿ ಲಭ್ಯವಾಗಿದೆ.

ವಿಶೇಷವೇನೆಂದರೆ, ಯುವ-2 ಕಿರುಚಿತ್ರವನ್ನು ತಂಡವು, ಅಗಲಿದ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಅರ್ಪಿಸಿದೆ.

Leave a Comment

Your email address will not be published. Required fields are marked *