ಕರಾವಳಿ

ಕುಂದಾಪುರ: “ನನ್ನ ಸಾವಿಗೆ ಕಾರಣ ನಾನು ಮಾಡಿಕೊಂಡ ಸಾಲ”| ಹಾಗಿದ್ರೆ ಡೆತ್ ನೋಟ್ ನಲ್ಲಿ ಏನಿದೆ?

ಕುಂದಾಪುರ: ನನ್ನ ಸಾವಿಗೆ ಕಾರಣ ನಾನು ಮಾಡಿಕೊಂಡ ಸಾಲ ಎಂದು ಡೆತ್ ನೋಟ್ ಬರೆದಿಟ್ಟು ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಯುವಕನನ್ನು ಕುಂದಾಪುರದ ಹೆಮ್ಮಾಡಿಯ ವಿಘ್ನೇಶ್ ಎಂದು ಗುರುತಿಸಲಾಗಿದೆ. ಈತ ಎಂಎನ್ ಸಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ವಿಘ್ನೇಶ್ ಸ್ನೇಹಿತರೊಂದಿಗೆ ಬಿಸಿನೆಸ್ ಆರಂಭಿಸಲು ಮೊಬೈಲ್ ಆಪ್ ಮೂಲಕ ಸಾಲ ಮಾಡಿದ್ದು, ಸಾಲ ಮರುಪಾವತಿ ಮಾಡಲಾಗದೇ ಮನೆಯ ಮುಂಭಾಗದಲ್ಲಿರುವ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್ ನೋಟ್ ನಲ್ಲಿ ತಾನು ಸಾಲ ಮಾಡಿಕೊಂಡಿದ್ದಾಗಿ ಬರೆದಿರುವ

ಕುಂದಾಪುರ: “ನನ್ನ ಸಾವಿಗೆ ಕಾರಣ ನಾನು ಮಾಡಿಕೊಂಡ ಸಾಲ”| ಹಾಗಿದ್ರೆ ಡೆತ್ ನೋಟ್ ನಲ್ಲಿ ಏನಿದೆ? Read More »

ಕೊರಗಜ್ಜನ ಕಟ್ಟೆ ಅಪವಿತ್ರಗೊಳಿಸಿದಾತನಿಗೆ ಎಚ್ಚರಿಕೆ ನೀಡಿದ ಕ್ರಿಶ್ಚಿಯನ್ ವ್ಯಕ್ತಿ

ಮಂಗಳೂರು : ದಕ್ಷಿಣಕನ್ನಡ ಹೆಸರಾಂತ ಹಾಗೂ ಕಾರ್ಣಿಕದ ಕೊರಗಜ್ಜನ ಕ್ಷೇತ್ರವನ್ನು ಅಪವಿತ್ರಗೊಳಿಸಿದ ಆರೋಪಿಯ ವಿರುದ್ಧ ಇದೀಗ ಕ್ರಿಶ್ಚಿಯನ್ ವ್ಯಕ್ತಿಯೊಬ್ಬರು ಗುಡುಗಿದ್ದು, ಭಾರಿ ಎಚ್ಚರಿಕೆಯನ್ನೇ ನೀಡಿದ್ದಾರೆ. ಜೈಲಿನಲ್ಲಿರುವ ಆರೋಪಿ ಹೊರಗೆ ಬಂದರೆ ಆತನ ಕೈ-ಕಾಲು ಕಡಿಯುತ್ತೇನೆ ಎಂಬುದಾಗಿ ಹೇಳಿದ್ದಾರೆ. ಕೊರಗಜ್ಜ ಕ್ಷೇತ್ರವನ್ನು ಅಪವಿತ್ರಗೊಳಿಸಿದ್ದ ಆರೋಪದ ಮೇಲೆ ಮಿತ್ರನಗರ ನಿವಾಸಿ ದೇವದಾಸ್ ದೇಸಾಯಿಯನ್ನು ಪೊಲೀಸರು ನಿನ್ನೆ ಬಂಧಿಸಿದ್ದರು. ಆ ಆರೋಪಿ ವಿರುದ್ಧ ರೋಶನ್ ಡಿಸೋಜ ಎಂಬವರು ಆಕ್ರೋಶ ವ್ಯಕಪಡಿಸಿದ್ದಾರೆ. ಮಂಗಳೂರು ನಗರದ 18 ಧಾರ್ಮಿಕ ಕೇಂದ್ರಗಳನ್ನು ಅಪವಿತ್ರಗೊಳಿಸಿದ್ದ ಆರೋಪಿ ದೇವದಾಸ್,

ಕೊರಗಜ್ಜನ ಕಟ್ಟೆ ಅಪವಿತ್ರಗೊಳಿಸಿದಾತನಿಗೆ ಎಚ್ಚರಿಕೆ ನೀಡಿದ ಕ್ರಿಶ್ಚಿಯನ್ ವ್ಯಕ್ತಿ Read More »

ಸುಳ್ಯ: ಬೆಳ್ಳಂಬೆಳಗ್ಗೆ ಹೊತ್ತಿ ಉರಿದ ಬೈ ಹುಲ್ಲು ಲಾರಿ

ಸುಳ್ಯ: ಹೈಟೆನ್ಶನ್ ವಿದ್ಯುತ್ ತಂತಿ ಸ್ಪರ್ಶಿಸಿ ಬೈ ಹುಲ್ಲು ಲಾರಿಯೊಂದು ಬೆಂಕಿಗಾಹುತಿಯಾದ ಘಟನೆ ಜಾಲ್ಸೂರು-ಸುಬ್ರಹ್ಮಣ್ಯ ರಸ್ತೆಯ ಕಂದಡ್ಕ ಎಂಬಲ್ಲಿ ನಡೆದಿದೆ. ಮುಂಜಾನೆ 4 ಗಂಟೆ ಸುಮಾರಿಗೆ ಹೆಚ್ ಟಿ ವಿದ್ಯುತ್ ಲೈನ್ ಗೆ ಡಿಕ್ಕಿಯಾಗಿ ಲಾರಿಗೆ ಬೆಂಕಿ ತಗುಲಿದ್ದು, ಲಾರಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಚಾಲಕ ಅಪಾಯದಿಂದ ಪಾರಾಗಿದ್ದು, ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದು, ಅಪಾರ ನಷ್ಟವಾಗಿದೆ.

ಸುಳ್ಯ: ಬೆಳ್ಳಂಬೆಳಗ್ಗೆ ಹೊತ್ತಿ ಉರಿದ ಬೈ ಹುಲ್ಲು ಲಾರಿ Read More »

ಹೊಸ ವರ್ಷಾಚರಣೆ ಹಿನ್ನಲೆ: ಅವಳಿ ಜಿಲ್ಲೆಗಳ ಬೀಚ್ ಗಳಿಗೆ ಸಂಜೆ ಪ್ರವೇಶ ನಿಷೇಧ

ಮಂಗಳೂರು: ಕೊರೊನಾ ರೂಪಾಂತರಿ ಓಮಿಕ್ರಾನ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರಿನ ಪಣಂಬೂರು, ತಣ್ಣೀರುಬಾವಿ, ಸುರತ್ಕಲ್‌ ಸೇರಿದಂತೆ ಪ್ರಮುಖ ಬೀಚ್‌ಗಳಿಗೆ ಡಿ.31ರ ಶುಕ್ರವಾರದಂದು ಸಂಜೆ 7 ಗಂಟೆಯ ಬಳಿಕ ಹೋಗುವುದು ಹಾಗೂ ಅಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಮಾಡುವುದನ್ನು ನಿಷೇಧಿಸಲಾಗಿದೆ” ಎಂದು ದ.ಕ. ಜಿಲ್ಲಾಧಿಕಾರಿ ಡಾ ರಾಜೇಂದ್ರ ಕೆ. ವಿ ಹೇಳಿದ್ದಾರೆ. ಈಗಾಗಲೇ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದ್ದು, ರಾತ್ರಿ 10 ರಿಂದ ಬೆಳಿಗ್ಗೆ 5 ಗಂಟೆವರೆಗೆ ಜನ ಸಂಚಾರಕ್ಕೆ ನಿಷೇಧ ವಿಧಿಸಲಾಗಿದೆ.‌ ಆದರೆ

ಹೊಸ ವರ್ಷಾಚರಣೆ ಹಿನ್ನಲೆ: ಅವಳಿ ಜಿಲ್ಲೆಗಳ ಬೀಚ್ ಗಳಿಗೆ ಸಂಜೆ ಪ್ರವೇಶ ನಿಷೇಧ Read More »

ಸುಳ್ಯ: ಶಿಸ್ತು ಉಲ್ಲಂಘನೆ ನೆಪದಲ್ಲಿ ವಿದ್ಯಾರ್ಥಿಗೆ ಹಲ್ಲೆ| ಮನಬಂದಂತೆ ಥಳಿಸಿದ ಆಡಳಿತ ಮಂಡಳಿಯ ಸದಸ್ಯ|

ಸುಳ್ಯ: ಇಲ್ಲಿನ ಗೂನಡ್ಕದ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಆಡಳಿತ ಮಂಡಳಿಯ ಸದಸ್ಯನೋರ್ವ ಶಿಸ್ತು ಉಲ್ಲಂಘನೆ ನೆಪದಲ್ಲಿ ವಿದ್ಯಾರ್ಥಿಗೆ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಮೂರನೆಯ ತರಗತಿಯ ವಿದ್ಯಾರ್ಥಿಗೆ ಹಲ್ಲೆ ನಡೆಸಿದ್ದು, ಘಟನೆಯಿಂದ ಬಾಲಕನ ಬೆನ್ನು ಮತ್ತು ಕಾಲಿನ ಭಾಗಗಳಿಗೆ ಏಟಾಗಿದ್ದು, ಗಾಯಗಳು ಕಂಡುಬರುತ್ತಿದೆ. ವಿದ್ಯಾರ್ಥಿ ಶಾಲೆ ಬಿಟ್ಟು ಮನೆಗೆ ತೆರಳಿ ಬಟ್ಟೆ ಬದಲಿಸುವ ವೇಳೆ ಈ ಗಾಯದ ಗುರುತು ಕಾಣಿಸಿದ್ದು ವಿದ್ಯಾರ್ಥಿಯ ತಾಯಿ ಕೇಳಿದಾಗ ಮೊದಲು ಸತ್ಯವನ್ನು ಹೇಳಲು ಹಿಂಜರಿದಿದ್ದು, ಒತ್ತಾಯಿಸಿದಾಗ ಘಟನೆಯ

ಸುಳ್ಯ: ಶಿಸ್ತು ಉಲ್ಲಂಘನೆ ನೆಪದಲ್ಲಿ ವಿದ್ಯಾರ್ಥಿಗೆ ಹಲ್ಲೆ| ಮನಬಂದಂತೆ ಥಳಿಸಿದ ಆಡಳಿತ ಮಂಡಳಿಯ ಸದಸ್ಯ| Read More »

ಮೆಹಂದಿ ಕಾರ್ಯಕ್ರಮದಲ್ಲಿ ಲಾಠಿಚಾರ್ಜ್| ಪಿಎಸ್ಐ ಅಮಾನತು

ಕುಂದಾಪುರ: ಇಲ್ಲಿನ ಕೋಟತಟ್ಟು ಕೊರಗ ಕಾಲೋನಿಯ ಮೆಹೆಂದಿ ಕಾರ್ಯಕ್ರಮದಲ್ಲಿ ಪೊಲೀಸ್ ಲಾಟಿ ಚಾರ್ಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಠಾಣೆ ಪಿಎಸ್‌ಐ ಸಂತೋಷ್ ಬಿ.ಪಿ‌ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಈ‌ ಬಗ್ಗೆ ಉಡುಪಿ ಎಸ್ಪಿ ವಿಷ್ಣುವರ್ಧನ್ ಅವರು‌ ಮಾಹಿತಿ ನೀಡಿದ್ದು, ಕೋಟದಲ್ಲಿ ನಡೆದ ಕೊರಗ ಸಮುದಾಯದವರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ವರದಿ ಆಧಾರದಲ್ಲಿ ಕೋಟ ಪಿಎಸ್‌ಐ ಅವರನ್ನು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಯವರು ಅಮಾನತು ಮಾಡಿದ್ದಾರೆ

ಮೆಹಂದಿ ಕಾರ್ಯಕ್ರಮದಲ್ಲಿ ಲಾಠಿಚಾರ್ಜ್| ಪಿಎಸ್ಐ ಅಮಾನತು Read More »

ಅಧ್ಯಯನಶೀಲತೆಯಿಂದ ಪರಿಪೂರ್ಣ ವರದಿಗಾರಿಕೆ ಸಾಧ್ಯ: ಮನೋಹರ ಪ್ರಸಾದ್

ಮಂಗಳೂರು:: ಪತ್ರಕರ್ತರು ಬಳಸುವ ಭಾಷೆ ಶುದ್ಧ, ಸರಳವಾಗಿದ್ದಾಗ ವರದಿಗಳು ಜನ ಸಮುದಾಯವನ್ನು ಸುಲಭವಾಗಿ ತಲುಪಲು ಸಾಧ್ಯ. ಇದಕ್ಕೆ ತಿಳಿದುಕೊಳ್ಳುವ ಆಸಕ್ತಿ ಜತೆ ಅಧ್ಯಯನ ಶೀಲತೆ ಅತೀ ಅಗತ್ಯ ಎಂದು ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅಭಿಪ್ರಾಯಿಸಿದ್ದಾರೆ.ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದಜಿಲ್ಲಾ ಪತ್ರಕರ್ತರ ಸಮ್ಮೇಳನ‘ಸಾಧನೆ ಸಂಭ್ರಮ-2021’ ದ ಸರ್ವಾಧ್ಯಕ್ಷರಾಗಿ ಮಾತನಾಡಿದರು.ಭಾಷಾ ಶುದ್ದಿ, ಸರಳ ಭಾಷೆ ಬಗ್ಗೆ ಯುವ ಪತ್ರಕರ್ತರು ಗಮನ ಹರಿಸಬೇಕು ಎಂದು ಹೇಳಿದ ಅವರು ಸಂಘದ ನೇತೃತ್ವದಲ್ಲಿ ಭಾ಼ಷಾ

ಅಧ್ಯಯನಶೀಲತೆಯಿಂದ ಪರಿಪೂರ್ಣ ವರದಿಗಾರಿಕೆ ಸಾಧ್ಯ: ಮನೋಹರ ಪ್ರಸಾದ್ Read More »

ಕಡಬ: ಚೂರಿ ಇರಿತಕ್ಕೆ ವ್ಯಕ್ತಿ ಗಂಭೀರ, ಆರೋಪಿಯ ಬಂಧನ

ಕಡಬ: ಇಲ್ಲಿನ ಸಮೀಪದ ಮರ್ದಾಳದಲ್ಲಿ ಚೂರಿ ಇರಿತ ಗೊಂಡು ರಬ್ಬರ್ ಟ್ಯಾಪರ್ ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಡಿ.28 ರ ತಡರಾತ್ರಿ ನಡೆದ ಬಗ್ಗೆ ವರದಿಯಾಗಿದೆ. ಕೇರಳ ಮೂಲದ ಪ್ರಸ್ತುತ ಮರ್ದಾಳದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿರುವ ಪ್ರಸಾದ್(57ವ) ಎಂಬವರು ಚೂರಿ ಇರಿತಕೊಳಗಾದ ವ್ಯಕ್ತಿ. ಪ್ರಸಾದ್ ಅವರಿಗೆ ಸ್ಥಳೀಯ ಇನ್ನೋರ್ವ ರಬ್ಬರ್ ಟ್ಯಾಪರ್ ಶಿವಪ್ರಸಾದ್ ಎಂಬಾತ ಚೂರಿಯಿಂದ ತಿವಿದ್ದಿದ್ದಾನೆ ಎನ್ನಲಾಗಿದೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಡಬ: ಚೂರಿ ಇರಿತಕ್ಕೆ ವ್ಯಕ್ತಿ ಗಂಭೀರ, ಆರೋಪಿಯ ಬಂಧನ Read More »

ಕುಂದಾಪುರ: ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸರಿಂದ ದಾಂಧಲೆ| ಲಾಠಿಚಾರ್ಜ್ ಆರೋಪ ಎದುರಿಸುತ್ತಿರುವ ಕೋಟ ಪೊಲೀಸರು|

ಕುಂದಾಪುರ: ಕೋಟ ತಟ್ಟು ಗ್ರಾಮದ ಕೊರಗ ಸಮುದಾಯದವರ ಮೆಹೆಂದಿ ಮನೆಗೆ ನುಗ್ಗಿ ಕೋಟ ಠಾಣೆಯ ಪೊಲೀಸರು ನುಗ್ಗಿ ದಾಂಧಲೆ ನಡೆಸಿ ಲಾಠಿ ಚಾರ್ಜ್‌ ನಡೆಸಿದ ಆರೋಪವನ್ನು ಎದುರಿಸುತ್ತಿದ್ದಾರೆ. ಸೋಮವಾರ ಸಂಜೆ ಕೋಟ ತಟ್ಟು ಗ್ರಾಮದಲ್ಲಿ ಕೊರಗ ಸಮುದಾಯದವರೊಬ್ಬರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದಲ್ಲಿ ಡಿಜೆ ಹಾಕಿರುವುದನ್ನು ಆಕ್ಷೇಪಿಸಿ ಸ್ಥಳೀಯರು 112 ಗೆ ಕರೆ ಮಾಡಿ ತಿಳಿಸಿದ್ದರು. ಅದರಂತೆ ಕೋಟ ಪೊಲೀಸರು ಸ್ಥಳಕ್ಕೆ ಹೋಗಿ ಕಾರ್ಯಕ್ರಮದಲ್ಲಿ ಇದ್ದವರಿಗೆ ಮನಬಂದಂತೆ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಮದುಮಗ

ಕುಂದಾಪುರ: ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸರಿಂದ ದಾಂಧಲೆ| ಲಾಠಿಚಾರ್ಜ್ ಆರೋಪ ಎದುರಿಸುತ್ತಿರುವ ಕೋಟ ಪೊಲೀಸರು| Read More »

ಮಂಗಳೂರು: ಕೊರಗಜ್ಜನ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್| ಹಿಂದೂ ಸಂಘಟನೆಗಳಿಂದ ಆಕ್ರೋಶ|

ಮಂಗಳೂರು: ಮಂಗಳೂರಿನಲ್ಲಿ ಮತ್ತೊಮ್ಮೆ ಕೊರಗಜ್ಜನ ಗುಡಿಯನ್ನು ದುಷ್ಕರ್ಮಿಗಳು ಅಪವಿತ್ರಗೊಳಿಸಿದ್ದಾರೆ. ಮಂಗಳೂರಿನ ಮಾರ್ನಮಿಕಟ್ಟೆಯಲ್ಲಿರುವ ಕೊರಗಜ್ಜನ‌ಗುಡಿಯಲ್ಲಿ ಕಾಂಡೋಮ್ ಹಾಕಿರುವುದು ಇಂದು ಬೆಳಕಿಗೆ ಬಂದಿದೆ. ಕೊರಗಜ್ಜನ ಗುಡಿಯ ಕಲ್ಲಿನ ಮೂರ್ತಿ ಮೇಲೆ ದುಷ್ಕರ್ಮಿಗಳು ಉಪಯೋಗಿಸಿದ ಕಾಂಡೋಮ್ ಹಾಕಿದ್ದಾರೆ. ಈ ವಿಚಾರ ತಿಳಿದ ಭಕ್ತರು ಮತ್ತು ಹಿಂದೂ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವರ್ಷದ ಜನವರಿ ಫೆಬ್ರವರಿ ತಿಂಗಳಿ‌ನಲ್ಲಿಯೂ ಇಂತಹದೆ ದುಷ್ಕೃತ್ಯವನ್ನು ಮಂಗಳೂರಿನಲ್ಲಿ ನಡೆಸಲಾಗಿತ್ತು.

ಮಂಗಳೂರು: ಕೊರಗಜ್ಜನ ಕಾಣಿಕೆ ಹುಂಡಿಯಲ್ಲಿ ಕಾಂಡೋಮ್| ಹಿಂದೂ ಸಂಘಟನೆಗಳಿಂದ ಆಕ್ರೋಶ| Read More »