ಬೆಳ್ತಂಗಡಿ: 1700 ಅಡಿ ಎತ್ತರದ ಗಡಾಯಿಕಲ್ಲು ಏರಿದ ಕೋತಿರಾಜ್| ಎರಡೇ ಗಂಟೆಗಳಲ್ಲಿ ಸಾಹಸ ಪ್ರದರ್ಶನ
ಸಮಗ್ರ ನ್ಯೂಸ್: ಚಿತ್ರದುರ್ಗದ ಜ್ಯೋತಿರಾಜ್ ಯಾನೆ ಕೋತಿರಾಜ್ ಅವರು ಭಾನುವಾರ (ಫೆ.12) ಎರಡೇ ತಾಸುಗಳಲ್ಲಿ ಬರೀ ಕೈಗಳ ಸಹಾಯದಿಂದ ಗಡಾಯಿಕಲ್ಲು (ಜಮಾಲಾಬಾದ್/ ನರಸಿಂಹಗಡ) ಏರಿ ಸಾಹಸ ಮೆರೆದಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಅವರು ಸೊಂಟಕ್ಕೆ ರೋಪ್ ಅಳವಡಿಸಿಕೊಂಡಿದ್ದರು. ಸಮುದ್ರ ಮಟ್ಟದಿಂದ 1700 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲನ್ನು ಮೆಟ್ಟಿಲುಗಳ ಸಹಾಯವಿಲ್ಲದೆ ನಿರಾತಂಕವಾಗಿ ಅವರು ಏರಿದರು. ಅರಣ್ಯ ಇಲಾಖೆಯ ಸೂಚನೆಯಂತೆ ಸೊಂಟಕ್ಕೆ ಕಟ್ಟಿದ ಬೆಲ್ಟ್ ಹಾಗೂ ಪಕ್ಕದಲ್ಲಿದ್ದ ರೋಪ್‌ಗೆ ಹುಕ್ ಮೂಲಕ ಸಂಪರ್ಕ ಕಲ್ಪಿಸಿ ಸುರಕ್ಷತೆ ದೃಷ್ಟಿಯಿಂದ ಮೇಲೇರಲು ಅವಕಾಶ ನೀಡಲಾಗಿತ್ತು.
ಬೆಳ್ತಂಗಡಿ: 1700 ಅಡಿ ಎತ್ತರದ ಗಡಾಯಿಕಲ್ಲು ಏರಿದ ಕೋತಿರಾಜ್| ಎರಡೇ ಗಂಟೆಗಳಲ್ಲಿ ಸಾಹಸ ಪ್ರದರ್ಶನ Read More »










