ಪುತ್ತೂರು ಶಾಸಕ ಸಂಜೀವ ಮಠಂದೂರಿಗೆ ಬಿಸಿತುಪ್ಪವಾದ “ಅಣಬೆ” ಹೇಳಿಕೆ| ಬಿಜೆಪಿ ಕಾರ್ಯಕರ್ತರಿಂದ ಶಾಸಕರಿಗೆ ನಡುರಸ್ತೆಯಲ್ಲೇ ತರಾಟೆ
ಸಮಗ್ರ ನ್ಯೂಸ್: ಪುತ್ತೂರು ಶಾಸಕ ಸಂಜೀವ ಮಠಂದೂರು ಅಣಬೆ ಹೇಳಿಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಗೃಹ ಸಚಿವ ಅಮಿತ್ ಷಾ ಕಾರ್ಯಕ್ರಮದ ಬಗ್ಗೆ ಆಮಂತ್ರಣ ಪತ್ರಿಕೆ ಹಂಚಲು ಪುತ್ತೂರಿನಲ್ಲಿ ಕಾಲ್ನಡಿಗೆ ಜಾಥಾ ನಡೆಸುತ್ತಿದ್ದಾಗ ಬಿಜೆಪಿ ಕಾರ್ಯಕರ್ತರೇ ಎರಡು ಗುಂಪುಗಳಾಗಿ ಮಾತಿನ ಚಕಮಕಿ ನಡೆಸಿದ್ದು ಕೈ ಕೈ ಮಿಲಾಯಿಸಲು ಮುಂದಾಗಿದ್ದಾರೆ. ಅಮಿತ್ ಷಾಗೆ ಸ್ವಾಗತ ಕೋರಿ ಹಿಂದು ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಬ್ಯಾನರ್ ಅಳವಡಿಸಿದ್ದರು. ಚುನಾವಣೆ ಸಂದರ್ಭದಲ್ಲಿ ಪ್ರತ್ಯೇಕ ಬ್ಯಾನರ್ ಹಾಕಿದ್ದ ವಿಚಾರದಲ್ಲಿ ಮಾಧ್ಯಮದ ಪ್ರಶ್ನೆಗೆ










