ಕರಾವಳಿ

ಪೆರ್ನಾಜೆ: ಮತ್ತೆ ಒಂಟಿ ಸಲಗ ಪುಂಡಾಟ| ಬಾಳೆ ಗಿಡ ಬಾಳೆ ದಿಗುಜ್ಜೆ ಗಿಡಗಳ ಮೇಲೆ ದಾಳಿ-ಹಾನಿ

ಸಮಗ್ರ ನ್ಯೂಸ್: ಪುತ್ತೂರು ಸುಳ್ಯ ಕೇರಳ ಗಡಿಭಾಗ ಆನೆಗುಂಡಿ ರಕ್ಷಿತಾರಣ್ಯದಿಂದ ಒಂಟಿ ಸಲಗವು ಜ.3ರಂದು ಮುಂಜಾನೆ ಕುಮಾರ್ ಪೆರ್ನಾಜೆ ಯವರ ತೋಟಕ್ಕೆ ನುಗ್ಗಿ ಹತ್ತು ಬಾಳೆ ನಾಲ್ಕು ದೀವಿ ಹಲಸು ಮರದ ಸಿಪ್ಪೆಗಳನ್ನೆಬ್ಬಿಸಿ, ಕೊಂಬೆಗಳನ್ನು ಮುರಿದು ತಿಂದಿದೆ. ಈಗಾಗಲೇ ಮಂಡೆಕೋಲು ಮೂರೂರು ಬೆಳ್ಳಿಪ್ಪಾಡಿ ಹಾಗೂ ಪಂಜಿಕಲ್ಲು ಪರಿಸರದಲ್ಲಿ ಕೃಷಿಕರ ತೋಟಗಳಿಗೆ ದಾಳಿ ನಡೆಸಿ ಒಂಟಿ ಸಲಗ ಒಂದು ಗುಂಪಿನಿಂದ ಬೇರ್ಪಟ್ಟು ಕನಕಮಜಲು ಮುಗೇರಿನಿಂದ ಪೆರ್ನಾಜೆಗೆ ಬಂದು ಹಾನಿಗೊಳಿಸಿ ಪುನಃ ಮುಗೇರಿನ ಕಡೆಗೆ ತೆರಳಿದೆ. ಈಗಾಗಲೇ, ಈ ಆನೆಯನ್ನು

ಪೆರ್ನಾಜೆ: ಮತ್ತೆ ಒಂಟಿ ಸಲಗ ಪುಂಡಾಟ| ಬಾಳೆ ಗಿಡ ಬಾಳೆ ದಿಗುಜ್ಜೆ ಗಿಡಗಳ ಮೇಲೆ ದಾಳಿ-ಹಾನಿ Read More »

ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಮಾಸಿಕ ಸಭೆ

ಸಮಗ್ರ ನ್ಯೂಸ್: ಸವಣೂರು,ಜ.2, ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಮಾಸಿಕ ಸಭೆಯು ಸವಣೂರಿನ ಅಂಬೇಡ್ಕರ್ ಭವನದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ರಝಾಕ್ ಕೆನರಾ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಕಡಬ ಪಟ್ಟಣ ಪಂಚಾಯತ್ ಚುನಾವಣೆಯ ಪೂರ್ವ ತಯಾರಿಯ ಬಗ್ಗೆ ಚರ್ಚಿಸಲಾಯಿತು. ಸುಳ್ಯದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆದ ಎರಡು ಪ್ರತ್ಯೇಕ ಕಾರ್ಯಕರ್ತರ ಸಮಾವೇಶದ ಯಶಸ್ಸಿನ ಬಗ್ಗೆ ಅವಲೋಕನವು ಕೂಡ ನಡೆಸಲಾಯಿತು. ಹಾಗೂ ಜನವರಿ ತಿಂಗಳಲ್ಲಿ ನಡೆಯುವ ಪಕ್ಷದ ಸದಸ್ಯತ್ವ

ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿಯ ಮಾಸಿಕ ಸಭೆ Read More »

ಕರಾವಳಿಯಲ್ಲಿ ಅಕಾಲಿಕ‌‌ ಮಳೆ| ಮೋಡ‌ ಕವಿದ ವಾತಾವರಣ

ಸಮಗ್ರ ನ್ಯೂಸ್: ದ.ಕ. ಮತ್ತು ಉಡುಪಿ ಜಿಲ್ಲೆಗಳ ಬಹುತೇಕ ಕಡೆಗಳಲ್ಲಿ ಇಂದು(ಜ.3) ನಸುಕಿನ ವೇಳೆ ಮಳೆ ಸುರಿದಿರುವುದು ವರದಿಯಾಗಿದೆ. ದ.ಕ. ಜಿಲ್ಲೆಯಲ್ಲಿ ಮಂಗಳವಾರ ಮುಸ್ಸಂಜೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂದಿತ್ತು. ಕೆಲವೆಡೆ ರಾತ್ರಿಯಿಂದಲೇ ತುಂತುರು ಮಳೆ ಸುರಿದಿದೆ. ಮಂಗಳೂರು ನಗರದಲ್ಲಿ ಬೆಳಗ್ಗೆ ಗುಡುಗು ಸಹಿತ ತುಂತುರು ಮಳೆಯಾಗಿದೆ. ನಗರ ಹೊರವಲಯದ ಉಳ್ಳಾಲ, ಕೊಣಾಜೆ, ಮುಡಿಪು, ಮಂಜನಾಡಿ ಸೇರಿದಂತೆ ಹಲವೆಡೆ ಇಂದು ಬೆಳಗ್ಗೆ ಉತ್ತಮ ಮಳೆಯಾಗಿರುವುದು ವರದಿಯಾಗಿದೆ. ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಸುಳ್ಯ ತಾಲೂಕಿನಾದ್ಯಂತ ತುಂತುರು ಮಳೆ ಸುರಿದಿದೆ.

ಕರಾವಳಿಯಲ್ಲಿ ಅಕಾಲಿಕ‌‌ ಮಳೆ| ಮೋಡ‌ ಕವಿದ ವಾತಾವರಣ Read More »

ನಮ್ಮದು ಒಕ್ಕೂಟ ವ್ಯವಸ್ಥೆಯ ಸರಕಾರಗಳು ಇರುವುದು ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ: ಎಂ ವೆಂಕಪ್ಪ ಗೌಡ

ಸಮಗ್ರ ನ್ಯೂಸ್: ವಿಕಸಿತ ಭಾರತ ಸಂಕಲ್ಪ ಯಾತ್ರೆಯ ಅಂಗವಾಗಿ ಜ. 2ರಂದು ಸುಳ್ಯ ನಗರ ಪಂಚಾಯತ್ ನಲ್ಲಿ ಮಾಹಿತಿ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಗರ ಪಂಚಾಯತ್ ಸದಸ್ಯ ಎಂ ವೆಂಕಪ್ಪ ಗೌಡರು ಈ ಯಾತ್ರೆ ಒಂದು ಒಳ್ಳೆಯ ಕಾರ್ಯಕ್ರಮ ಆದರೆ, ಕೇಂದ್ರ ಮತ್ತು ರಾಜ್ಯ ಎರಡೂ ಸರಕಾರಗಳ ಯೋಜನೆಯನ್ನು ಸಹ ಜನತೆಗೆ ತಲುಪಿಸಬೇಕು. ಕೇವಲ ಕೇಂದ್ರ ಸರಕಾರದ ಯೋಜನೆ ಎಂದರೆ ತಪ್ಪಾಗುತ್ತದೆ ಎಂದು ಹೇಳಿದರು. ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಫಸಲ್ ಭೀಮಾ,

ನಮ್ಮದು ಒಕ್ಕೂಟ ವ್ಯವಸ್ಥೆಯ ಸರಕಾರಗಳು ಇರುವುದು ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ: ಎಂ ವೆಂಕಪ್ಪ ಗೌಡ Read More »

ಸುಳ್ಯ: ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದ ಕಾರ್ಮಿಕ ಸಾವು

ಸಮಗ್ರ ನ್ಯೂಸ್: ಕಟ್ಟಡದಿಂದ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಕಾರ್ಮಿಕ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ಮುರುಳ್ಯದಿಂದ ವರದಿಯಾಗಿದೆ. ಮೃತನನ್ನು ಬಿಹಾರ ಮೂಲದ ರಾಜ್ ಕುಮಾರ್ ಪಾಸ್ವಾನ್ (32) ಎಂದು ಗುರುತಿಸಲಾಗಿದೆ. ಬಿಹಾರದಿಂದ 10 ದಿನಗಳ ಹಿಂದೆ ಕಟ್ಟಡ ನಿರ್ಮಾಣ,‌ ಸಾರಣೆ ಕೆಲಸಕ್ಕೆಂದು ಬಂದಿದ್ದ ಇಬ್ಬರು ಅಣ್ಣ ತಮ್ಮಂದಿರು ಬೇರೆ ಬೇರೆ ಕಡೆ ಕೆಲಸ ಮಾಡಿಕೊಂಡಿದ್ದರು. ಧರ್ಮೇಂದ್ರ ಪಾಸ್ವಾನ್ ಎಂಬವರು ಮುರುಳ್ಯದಲ್ಲಿ ಕಟ್ಟಡದ ಕೆಲಸ ಮಾಡಿಕೊಂಡಿದ್ದರು. ಅಲ್ಲಿಗೆ ಪಂಜದಲ್ಲಿ ಸಾರಣೆ ಕೆಲಸ ಮಾಡಿಕೊಂಡಿದ್ದ

ಸುಳ್ಯ: ಕಟ್ಟಡದಿಂದ ಬಿದ್ದು ಗಾಯಗೊಂಡಿದ್ದ ಕಾರ್ಮಿಕ ಸಾವು Read More »

ಕುಕ್ಕೆ ಸುಬ್ರಹ್ಮಣ್ಯ: ಕುಮಾರ ಪರ್ವತದಲ್ಲಿ ಕುಮಾರಪಾದ, ವಾಸುಕಿಗೆ ಪೂಜೆ| ಸಂಪನ್ನಗೊಂಡ ಕುಮಾರ ಯಾತ್ರೆ

ಸಮಗ್ರ ನ್ಯೂಸ್: ಸುಮಾರು 4 ಸಾವಿರ ಅಡಿ ಎತ್ತರವಿರುವ ಪವಿತ್ರ ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರನ ಪಾದಕ್ಕೆ ಮತ್ತು ಸಮೀಪದಲ್ಲಿರುವ ವಾಸುಕಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ವೇ|ಮೂ| ಸೀತಾರಾಮ ಯಡಪಡಿತ್ತಾಯ ಅವರು ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಮಾರ್ಗಶಿರ ಬಹುಳ ಷಷ್ಠಿಯ ದಿನವಾದ ಮಂಗಳವಾರ ಪೂಜೆ ನೆರವೇರಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ, ಶ್ರೀವತ್ಸ ಬೆಂಗಳೂರು, ಲೋಕೇಶ್‌ ಮುಂಡೋಕಜೆ, ಶೋಭಾ ಗಿರಿಧರ್‌,

ಕುಕ್ಕೆ ಸುಬ್ರಹ್ಮಣ್ಯ: ಕುಮಾರ ಪರ್ವತದಲ್ಲಿ ಕುಮಾರಪಾದ, ವಾಸುಕಿಗೆ ಪೂಜೆ| ಸಂಪನ್ನಗೊಂಡ ಕುಮಾರ ಯಾತ್ರೆ Read More »

ಸಂಪಾಜೆ: ಆಯುಷ್ಮಾನ್ ಭವ್ ಅಭಿಯಾನದಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಸಮಗ್ರ ನ್ಯೂಸ್: ಕೊಡಗು ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಡಿಕೇರಿ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ, ಪ್ರಾಥಮಿಕ ಆರೋಗ್ಯ ಕೇಂದ್ರ(ನಿರ್ವಹಣೆ: ಉದ್ಭವ ಶೈಕ್ಷಣಿಕ ಮತ್ತು ಗ್ರಾಮಾಭಿವೃದ್ಧಿ (ರಿ.) ಸಂಸ್ಥೆ ಬೆಂಗಳೂರು) ಆರೋಗ್ಯ ರಕ್ಷಾ ಸಮಿತಿ ಸಂಪಾಜೆ, ಲಯನ್ಸ್ ಕ್ಲಬ್ ಸಂಪಾಜೆ, ಗ್ರಾಮ ಪಂಚಾಯತ್ ಸಂಪಾಜೆ, ಬಾಲಂಬಿ, ಪೆರಾಜೆ, ಮದೆನಾಡು ಮತ್ತು ಸಾರ್ವಜನಿಕರ ಸಹಭಾಗಿತ್ವದೊಂದಿಗೆ ಆಯುಷ್ಮಾನ್ ಭವ್ ಅಭಿಯಾನದಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ ಸಭಾಭವನದಲ್ಲಿ ಜ.2ರಂದು

ಸಂಪಾಜೆ: ಆಯುಷ್ಮಾನ್ ಭವ್ ಅಭಿಯಾನದಡಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ Read More »

ಸುಳ್ಯ: ಜಾಲ್ಸೂರಿನಲೊಂದು ಗಲೀಜು ಶೌಚಾಲಯ| ನೀರಿಲ್ಲದೆ ಸಾರ್ವಜನಿಕರು ಪರದಾಟ | ಕ್ಯಾರೇ ಇಲ್ಲದ ಪಂಚಾಯತ್

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಜಾಲ್ಸೂರು ಗ್ರಾ.ಪಂ.ಗೆ ಸಂಬಂಧಿಸಿದ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಸರಿಯಾಗಿ ಇಲ್ಲದೆ ಸಾರ್ವಜನಿಕರು ಪರದಾಡುತ್ತಿರುವುದಲ್ಲದೆ ಶೌಚಾಲಯ ಗಬ್ಬು ನಾರುತ್ತಿದೆ. ಮಾಣಿ – ಮೈಸೂರು ಹೆದ್ದಾರಿಯಲ್ಲಿ ಸಿಗುವ ಜಾಲ್ಸೂರು ಪೇಟೆಯಲ್ಲಿ ಸಾವಿರಾರು ಮಂದಿ ಓಡಾಡುತ್ತಾರೆ. ಅಲ್ಲದೆ ಕೇರಳ, ತಮಿಳುನಾಡಿಗೆ ಹೋಗುವ ಪ್ರಯಾಣಿಕರು ಇದೇ ಗ್ರಾಮವನ್ನು ಹಾದು ಹೋಗುತ್ತಾರೆ. ಈ ಪೇಟೆಯಲ್ಲಿ ಹತ್ತಾರು ಅಂಗಡಿಗಳಿದ್ದು ಅಲ್ಲಿಯ ವ್ಯಾಪಾರಸ್ಥರಿಗೆ ಮತ್ತು ಸಾರ್ವಜನಿಕರಿಗಾಗಿ ಹೆದ್ದಾರಿಯ ಬದಿ ಶೌಚಾಲಯವನ್ನು ನಿರ್ಮಿಸಲಾಗಿತ್ತು. ಆದರೆ ಇತ್ತಿಚಿನ ಕೆಲ ದಿನಗಳಿಂದ ಆ ಶೌಚಾಲಯಕ್ಕೆ ಸರಿಯಾಗಿ

ಸುಳ್ಯ: ಜಾಲ್ಸೂರಿನಲೊಂದು ಗಲೀಜು ಶೌಚಾಲಯ| ನೀರಿಲ್ಲದೆ ಸಾರ್ವಜನಿಕರು ಪರದಾಟ | ಕ್ಯಾರೇ ಇಲ್ಲದ ಪಂಚಾಯತ್ Read More »

ಸುಳ್ಯ:ಶ್ರೀ ಕ್ಷೇತ್ರ ಬ್ರಹ್ಮರಗಯದಲ್ಲಿ 46ನೇ ವರ್ಷದ ಅಯ್ಯಪ್ಪ ದೀಪೋತ್ಸವ| ಶಾಸಕಿ ಭಾಗೀರಥಿ ಮರುಳ್ಯ ಭೇಟಿ

ಸಮಗ್ರ ನ್ಯೂಸ್: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಶ್ರೀ ಕ್ಷೇತ್ರ ಬ್ರಹ್ಮರಗಯದಲ್ಲಿ ಜ.1ರಂದು ನಡೆದ 46 ನೇ ವರ್ಷದ ದೀಪೋತ್ಸವ ಕಾರ್ಯಕ್ರಮದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು.ಭಾಗೀರಥಿ ಮರುಳ್ಯ ಅವರು ಕ್ಷೇತ್ರಕ್ಕೆ ಭೇಟಿ ನೀಡಿದರು. ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ಗಣೇಶ್ ಶಾಂತಿನಗರ ಮತ್ತು ಪದಾಧಿಕಾರಿಗಳು ಶಾಸಕಿಯವರನ್ನು ದೇವಸ್ಥಾನದ ಪರವಾಗಿ ಗೌರವಿಸಿದರು. ಬಳಿಕ‌ ಶಾಸಕರು ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ನಗರ

ಸುಳ್ಯ:ಶ್ರೀ ಕ್ಷೇತ್ರ ಬ್ರಹ್ಮರಗಯದಲ್ಲಿ 46ನೇ ವರ್ಷದ ಅಯ್ಯಪ್ಪ ದೀಪೋತ್ಸವ| ಶಾಸಕಿ ಭಾಗೀರಥಿ ಮರುಳ್ಯ ಭೇಟಿ Read More »

ಕುಕ್ಕೆ ಸುಬ್ರಹ್ಮಣ್ಯ: ನಿವೃತ್ತರಾದ ಮಾವುತ ಶ್ರೀನಿವಾಸರನ್ನ ಗೌರವಿಸಿ ಬೀಳ್ಕೊಟ್ಟ ‘ಯಶಸ್ವಿ’

ಸಮಗ್ರ ನ್ಯೂಸ್: ಮಹತೋಭಾರ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಆನೆ ‘ಯಶಸ್ವಿ’ಯ ಮಾವುತರಾಗಿದ್ದ ಶ್ರೀನಿವಾಸ ಗೌಡ ಧರ್ಮಸ್ಥಳ ಭಾನುವಾರ ನಿವೃತ್ತರಾದರು. ಯಶಸ್ವಿಯು ಶ್ರೀನಿವಾಸ ಅವರಿಗೆ ಹಾರ ಹಾಕಿ ಸೊಂಡಿಲನ್ನು ಅವರ ತಲೆಯ ಮೇಲಿರಿಸಿ ಗೌರವ ಸಲ್ಲಿಸಿತು. ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆನೆ ಮಾವುತರಾಗಿ ಸುಮಾರು 15ವರ್ಷ ಅವರು ಸೇವೆ ಸಲ್ಲಿಸಿದ್ದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶ್ರೀನಿವಾಸ ಅವರನ್ನು ಸನ್ಮಾನಿಸಿದರು. ದೇವಳದ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಇದ್ದರು.

ಕುಕ್ಕೆ ಸುಬ್ರಹ್ಮಣ್ಯ: ನಿವೃತ್ತರಾದ ಮಾವುತ ಶ್ರೀನಿವಾಸರನ್ನ ಗೌರವಿಸಿ ಬೀಳ್ಕೊಟ್ಟ ‘ಯಶಸ್ವಿ’ Read More »