ಅನ್ವಿತಾ ಶೆಟ್ಟಿ ಯೋಗಾಸನದಲ್ಲಿ ವಿಶ್ವ ದಾಖಲೆ
ಸಮಗ್ರ ನ್ಯೂಸ್: ಯೋಗಾಸನದಲ್ಲಿ ಅಂತಾರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ ನಲ್ಲಿ ಅನ್ವಿತಾ ಶೆಟ್ಟಿ ಹೆಸರು ದಾಖಲಿಸಿಕೊಂಡಿದ್ದಾರೆ. ರಾಮದೂತಾಸನದಲ್ಲಿ 1ಗಂಟೆ 1ನಿಮಿಷ 20ಸೆಕೆಂಡ್ ಒಂದೇ ಸ್ಥಿತಿಯಲ್ಲಿ ಇರುವ ಮೂಲಕ ದಾಖಲೆ ಮಾಡಿದ್ದಾರೆ. ನಿರಂತರ ಯೋಗ ಕೇಂದ್ರ ಪಂಜದ ಯೋಗ ಶಿಕ್ಷಕ ಶರತ್ ಮರ್ಗಿಲಡ್ಕರವರ ಜೊತೆ ಮಾರ್ಗದರ್ಶನ ಪಡೆಯುತ್ತಿದ್ದಾರೆ. ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಶಾಲೆ ಕಡಬದಲ್ಲಿ 4ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇವರು ಪಲ್ಲೋಡಿ(ಪಂಜ) ಜಗನ್ನಾಥ ಶೆಟ್ಟಿ ಮತ್ತು ಜಯಲಕ್ಷ್ಮಿ ಜೆ. ಶೆಟ್ಟಿ ಅವರ ಪುತ್ರಿ.
ಅನ್ವಿತಾ ಶೆಟ್ಟಿ ಯೋಗಾಸನದಲ್ಲಿ ವಿಶ್ವ ದಾಖಲೆ Read More »









