ರಾಜಕೀಯ

ಪಿಯುಸಿ‌ ಪರೀಕ್ಷೆ ಹಿನ್ನಲೆ| ಮಾ.9ಕ್ಕೆ ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಕರೆನೀಡಿದ್ದ ಕರ್ನಾಟಕ ಬಂದ್ ವಾಪಾಸ್

ಸಮಗ್ರ ನ್ಯೂಸ್: ಸರ್ಕಾರದ ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಗುರುವಾರ ಬಂದ್ ಗೆ ಕರೆ ಕೊಟ್ಟಿತ್ತು. ಆದರೆ ದ್ವಿತೀಯ ಪಿಯುಸಿ ಪರೀಕ್ಷೆ ಸೇರಿದಂತೆ ರಾಜ್ಯಾದ್ಯಂತ ಶಾಲಾ- ಕಾಲೇಜುಗಳ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬಂದ್ ನ ಹಿಂಪಡೆಯಲು ನಿರ್ಧರಿಸಿದೆ. ದ್ವಿತೀಯ ಪಿಯುಸಿ ಪರೀಕ್ಷೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಒತ್ತಡದ ಮೇರೆಗೆ ನಾಳೆ ನಡೆಸಬೇಕಿದ್ದ ಸಾಂಕೇತಿಕ ಕರ್ನಾಟಕ ಬಂದ್ ಅನ್ನು ವಾಪಸ್ ತೆಗೆದುಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ. ಭ್ರಷ್ಟಾಚಾರ ವಿರೋಧಿಸಿ […]

ಪಿಯುಸಿ‌ ಪರೀಕ್ಷೆ ಹಿನ್ನಲೆ| ಮಾ.9ಕ್ಕೆ ಭ್ರಷ್ಟಾಚಾರ ವಿರೋಧಿಸಿ ಕಾಂಗ್ರೆಸ್ ಕರೆನೀಡಿದ್ದ ಕರ್ನಾಟಕ ಬಂದ್ ವಾಪಾಸ್ Read More »

ಮಾ.9ರಂದು ಕರ್ನಾಟಕ ಬಂದ್ ಗೆ ಕಾಂಗ್ರೆಸ್ ಕರೆ

ಸಮಗ್ರ ನ್ಯೂಸ್: ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಖಂಡಿಸಿ ಮಾರ್ಚ್‌ 9ರಂದು ರಾಜ್ಯ ಬಂದ್‌ಗೆ ಕಾಂಗ್ರೆಸ್ ಕರೆ ನೀಡಿದೆ. ಮಾರ್ಚ್ 9ರಂದು ಬೆಳಿಗ್ಗೆ 9ರಿಂದ 11 ಗಂಟೆ ವರೆಗೆ ಬಂದ್‌ ಮಾಡಲಾಗುವುದು. ಶಾಲೆ, ಕಾಲೇಜು, ಆಸ್ಪತ್ರೆಗಳಿಗೆ ತೊಂದರೆಯಾಗದಂತೆ ಪ್ರತಿಭಟನೆ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿಳಿಸಿದರು. ಕೊರಟಗೆರೆ ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ‘ವ್ಯಾಪಾರಿಗಳು ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು‌. ಭ್ರಷ್ಟಾಚಾರ ಮುಕ್ತ ರಾಜ್ಯ ನಿರ್ಮಾಣಕ್ಕೆ ಎಲ್ಲರ ಸಹಕಾರ ಅಗತ್ಯ. ಮುಂದಿನ ದಿನಗಳಲ್ಲಿ ಉತ್ತಮ ಆಡಳಿತ

ಮಾ.9ರಂದು ಕರ್ನಾಟಕ ಬಂದ್ ಗೆ ಕಾಂಗ್ರೆಸ್ ಕರೆ Read More »

ನಾಳೆ(ಫೆ.27) ರಾಜ್ಯಕ್ಕೆ ಮತ್ತೊಮ್ಮೆ ಪಿಎಂ ಮೋದಿ ಭೇಟಿ| ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆ| ಬೆಳಗಾವಿಯಲ್ಲಿ ಕಿಸಾನ್ ಸಮ್ಮಾನ್ ಕಂತು ಬಿಡುಗಡೆ

ಸಮಗ್ರ ನ್ಯೂಸ್: ಫೆಬ್ರವರಿ 27ರಂದು ರಾಜ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಬೆಳಗ್ಗೆ 11:35ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಬೆಳಗ್ಗೆ 11:45 ರಿಂದ 11:55 ರ ವರೆಗೆ ಶಿವಮೊಗ್ಗದಲ್ಲಿ ಟರ್ಮಿನಲ್ ಬಿಲ್ಡಿಂಗ್ ವೀಕ್ಷಣೆ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ 1.15 ರವರೆಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಧ್ಯಾಹ್ನ 1:30 ಕ್ಕೆ ಶಿವಮೊಗ್ಗದಿಂದ ಬೆಳಗಾವಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 2.20 ಕ್ಕೆ ಬೆಳಗಾವಿ ವಿಮಾನ

ನಾಳೆ(ಫೆ.27) ರಾಜ್ಯಕ್ಕೆ ಮತ್ತೊಮ್ಮೆ ಪಿಎಂ ಮೋದಿ ಭೇಟಿ| ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆ| ಬೆಳಗಾವಿಯಲ್ಲಿ ಕಿಸಾನ್ ಸಮ್ಮಾನ್ ಕಂತು ಬಿಡುಗಡೆ Read More »

‘ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ’ – ಬಿ.ಎಸ್ ಯಡಿಯೂರಪ್ಪ ಘೋಷಣೆ

ಸಮಗ್ರ ನ್ಯೂಸ್: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆಸಿಸುವ ಮಾತೇ ಇಲ್ಲ ಎಂದು . ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುವೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಬಿ.ಎಸ್. ಯಡಿಯೂರಪ್ಪ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ತರಲು ಪ್ರಯತ್ನಿಸಲಾಗುವುದು. ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸುವೆ ಎಂದು ಹೇಳಿದ್ದಾರೆ. ನಮ್ಮೆಲ್ಲರಿಗೂ ಹೆಚ್.ದೇವೇಗೌಡರೇ ಆದರ್ಶವಾಗಿದ್ದಾರೆ. ಇದು ನನ್ನ ಕೊನೆಯ ಅಧಿವೇಶನ. ಮುಂದಿನ ಚುನಾವಣೆಯಲ್ಲಿ ನಾನು

‘ಮುಂದಿನ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ’ – ಬಿ.ಎಸ್ ಯಡಿಯೂರಪ್ಪ ಘೋಷಣೆ Read More »

ಬಿಜೆಪಿ ನಾಯಕರು ಬೆಳಿಗ್ಗೆ ಮುಸ್ಲಿಮರನ್ನು ಟೀಕಿಸಿ ಸಂಜೆ ಮನೆಗೆ ಭೇಟಿ ನೀಡ್ತಾರೆ – ಯು.ಟಿ ಖಾದರ್

ಸಮಗ್ರ ನ್ಯೂಸ್: ಬಿಜೆಪಿ ನಾಯಕರು ಸಾರ್ವಜನಿಕ ಸಭೆಗಳಲ್ಲಿ ಬೆಳಗ್ಗೆ ಮೈಕ್ ಮುಂದೆ ಮುಸ್ಲಿಮರನ್ನು ಟೀಕಿಸಿ, ಸಂಜೆ ಮನೆಗೆ ಗುಟ್ಟಾಗಿ ಬಂದು ಮಾತುಕತೆ ನಡೆಸುತ್ತಾರೆ ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಟೀಕಿಸಿದ್ದಾರೆ. ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪ ವೇಳೆ ಕಾಂಗ್ರೆಸ್ ಸದಸ್ಯ ಡಾ.ರಂಗನಾಥ್ ವಿಷಯ ಪ್ರಸ್ತಾಪಿಸಿ, ‘ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳು ನಮಗೆ ಬೇಡ ಎಂದು ಬಹಿರಂಗವಾಗಿ ಬಿಜೆಪಿಗರು ಹೇಳುತ್ತಾರೆ. ಇವರು ಮಾನವೀಯತೆ ಮರೆತಿರುವ ಹಾಗೆಯೇ ವರ್ತನೆ ಮಾಡುತ್ತಾರೆ’ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಖಾದರ್ ಅವರು,

ಬಿಜೆಪಿ ನಾಯಕರು ಬೆಳಿಗ್ಗೆ ಮುಸ್ಲಿಮರನ್ನು ಟೀಕಿಸಿ ಸಂಜೆ ಮನೆಗೆ ಭೇಟಿ ನೀಡ್ತಾರೆ – ಯು.ಟಿ ಖಾದರ್ Read More »

ಇವರೇನು ಮನುಷ್ಯರಾ? ಅಥವಾ ರಾಕ್ಷಸರಾ? ಅಶ್ವಥ್ ನಾರಾಯಣ ಹೇಳಿಕೆಗೆ ಸಿದ್ದು ಕಿಡಿ

ಸಮಗ್ರ ನ್ಯೂಸ್: ಮಾಜಿ ಸಿಎಂ ಸಿದ್ಧರಾಮಯ್ಯ ಅವರನ್ನು ಟಿಪ್ಪುವಿನಂತೆ ಹೊಡೆದು ಹಾಕಬೇಕು ಎಂಬುದಾಗಿ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಹೇಳಿದ್ದರು. ಅವರು ಮನುಷ್ಯನೋ ರಾಕ್ಷಸನೋ ನೀವೇ ತಿಳಿದುಕೊಳ್ಳಿ ಎಂಬುದಾಗಿ ಸಿದ್ಧರಾಮಯ್ಯ ಖಡಕ್ ತಿರುಗೇಟು ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಅಶ್ವತ್ಥ ನಾರಾಯಣ ಅವರ ಹೇಳಿಕೆಯಿಂದಲೇ ಅವರ ವ್ಯಕ್ತಿತ್ವ ಎಂಥದ್ದು ಎಂಬುದು ಗೊತ್ತಾಗುತ್ತದೆ. ನೀವೇ ಅವರು ಮನುಷ್ಯರೋ, ರಾಕ್ಷಸರೋ ಎಂಬುದನ್ನು ತಿಳಿದುಕೊಳ್ಳಿ ಎಂದರು. ನಾನು ಟಿಪ್ಪು, ಬಸವಣ್ಣ, ಬುದ್ಧ ಎಲ್ಲರನ್ನು

ಇವರೇನು ಮನುಷ್ಯರಾ? ಅಥವಾ ರಾಕ್ಷಸರಾ? ಅಶ್ವಥ್ ನಾರಾಯಣ ಹೇಳಿಕೆಗೆ ಸಿದ್ದು ಕಿಡಿ Read More »

ಟಿಪ್ಪು ಸುಲ್ತಾನ್ ಮಾದರಿಯಲ್ಲೇ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು| ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಅಶ್ವತ್ಥ್ ನಾರಾಯಣ

ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಹೀಗಾಗಿ ರಾಜಕೀಯ ನಾಯಕರ ಪ್ರಚಾರದ ಭರಾಟೆ ಜೋರಾಗಿದೆ. ಈ ನಡುವೆ ಬಿಜೆಪಿ- ಕಾಂಗ್ರೆಸ್ ನಾಯಕ ನಡುವೆ ಮಾತಿನ ವಾಕ್ಸಮರ ಉಂಟಾಗಿದೆ. ಕಾಂಗ್ರೆಸ್ ಮೊದಲಿನಿಂದಲೂ ಟಿಪ್ಪು ಪರವಾಗಿ ಮಾತನಾಡುತ್ತಲೇ ಬಂದಿದ್ದರೆ, ಬಿಜೆಪಿ ಆತ ಒಬ್ಬ ದೇಶದ್ರೋಹಿ ಎಂದು ವಿರೋಧಿಸುತ್ತಲೇ ಬಂದಿದೆ. ಆದರೆ ಇದೀಗ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನ್ ಮಾದರಿಯಲ್ಲೇ ಹೊಡೆದು ಹಾಕಬೇಕು ಎಂದು ಹೇಳಿಕೆ ನೀಡಿದ್ದಾರೆ.

ಟಿಪ್ಪು ಸುಲ್ತಾನ್ ಮಾದರಿಯಲ್ಲೇ ಸಿದ್ದರಾಮಯ್ಯರನ್ನು ಹೊಡೆದು ಹಾಕಬೇಕು| ವಿವಾದಾತ್ಮಕ ಹೇಳಿಕೆ ನೀಡಿದ ಸಚಿವ ಅಶ್ವತ್ಥ್ ನಾರಾಯಣ Read More »

ಯಾರಾಗಬೇಕು ಕರ್ನಾಟಕದ ಮುಂದಿನ ಸಿಎಂ? ಟ್ವಿಟರ್ ಸಮೀಕ್ಷೆಯಲ್ಲಿ ಸಿದ್ದರಾಮಯ್ಯ ಫಸ್ಟ್, ಬೊಮ್ಮಾಯಿ ಲಾಸ್ಟ್

ಸಮಗ್ರ ನ್ಯೂಸ್: ಟ್ವಿಟ್ಟರ್‌ನಲ್ಲಿ ಕರ್ನಾಟಕದ ಮುಂದಿನ ಸಿಎಂ ಯಾರಾಗಬೇಕು? ಎಂದು ಇತ್ತೀಚೆಗೆ ಮತಗಣನೆ ನಡೆದಿತ್ತು. ಪಿಎಲ್‌ಇ ಕರ್ನಾಟಕದ ಖಾತೆಯಿಂದ ನಡೆದ ಈ ಜನ ಮತಗಣನೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅತ್ಯಧಿಕ ಜನರು ಒಲವು ತೋರಿದ್ದಾರೆ. ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರಿಗೆ ಅತ್ಯಂತ ಕಡಿಮೆ ಮತಗಳು ಬಿದ್ದಿವೆ. ಫೆಬ್ರವರಿ 3ರಂದು ಪಿಎಲ್‌ಇ ಕರ್ನಾಟಕ ಆರಂಭಿಸಿದ ಈ ಮತಗಣನೆಯಲ್ಲಿ ಬಹುತೇಕರು ಸಿದ್ದರಾಮಯ್ಯ ಪರ ಒಲವು ತೋರಿದ್ದಾರೆ. ಈ ಖಾತೆಗೆ ಹತ್ತು ಸಾವಿರ ಫಾಲೋವರ್ಸ್‌ ಇದ್ದು, ಸುಮಾರು 2 ಸಾವಿರ

ಯಾರಾಗಬೇಕು ಕರ್ನಾಟಕದ ಮುಂದಿನ ಸಿಎಂ? ಟ್ವಿಟರ್ ಸಮೀಕ್ಷೆಯಲ್ಲಿ ಸಿದ್ದರಾಮಯ್ಯ ಫಸ್ಟ್, ಬೊಮ್ಮಾಯಿ ಲಾಸ್ಟ್ Read More »

‘ದಕ್ಷಿಣ ಕನ್ನಡದವರು ಬ್ಯಾಂಕ್ ಕಟ್ಟಿ ಬೆಳೆಸಿದರು; ಗುಜರಾತ್ ನವರು ನುಂಗಿ ನೀರು ಕುಡಿದರು’| ಅಮಿತ್ ಶಾ ಹೇಳಿಕೆಗೆ ಟ್ವೀಟ್ ಮೂಲಕ ಸಿದ್ದು ಲೇವಡಿ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡದವರು ಬೆವರು ಸುರಿಸಿ ಅಡಿಕೆ ಬೆಳೆದರೆ ಗುಜರಾತ್ ನವರು ಅಡಿಕೆ ತಿಂದು ಬೆವರು ಸುರಿಸುತ್ತಾರೆ ಎಂಬ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮೂಲಕ ಲೇವಡಿ ಮಾಡಿದ್ದಾರೆ. ಅಮಿತ್ ಶಾ ಹೇಳಿಕೆಗೆ ಟ್ವೀಟ್ ಮಾಡಿರುವ ಅವರು ದಕ್ಷಿಣ ಕನ್ನಡದವರು ವಿಜಯ ಬ್ಯಾಂಕ್‌, ಸಿಂಡಿಕೇಟ್ ಬ್ಯಾಂಕ್‌ಗಳನ್ನು ಕಟ್ಟಿ ಬೆಳೆಸಿದರು. ಗುಜರಾತ್‌ನವರು ಈ ಬ್ಯಾಂಕ್‌ಗಳನ್ನು ನುಂಗಿ ನೀರು ಕುಡಿದರು. ನಮ್ಮವರಿಗೆ ಕಟ್ಟುವುದು, ಬೆಳೆಸುವುದು ಗೊತ್ತು, ನಿಮಗೆ ಮಾರುವುದು, ಮುಳುಗಿಸುವುದು ಮಾತ್ರ

‘ದಕ್ಷಿಣ ಕನ್ನಡದವರು ಬ್ಯಾಂಕ್ ಕಟ್ಟಿ ಬೆಳೆಸಿದರು; ಗುಜರಾತ್ ನವರು ನುಂಗಿ ನೀರು ಕುಡಿದರು’| ಅಮಿತ್ ಶಾ ಹೇಳಿಕೆಗೆ ಟ್ವೀಟ್ ಮೂಲಕ ಸಿದ್ದು ಲೇವಡಿ Read More »

“ನನ್ ಮೇಲೆ ನಂಬಿಕೆ ಇದೆಯಲ್ವಾ? ಹಾಗಾದ್ರೆ ಬಿಜೆಪಿಗೆ ಓಟು ಹಾಕಿ” | ಮಾತಿನ ಭರದಲ್ಲಿ ಎಡವಟ್ಟು ಮಾಡಿಕೊಂಡ ಸಿದ್ದರಾಮಯ್ಯ| ವಿಡಿಯೋ ವೈರಲ್

ಸಮಗ್ರ ನ್ಯೂಸ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಯಿ ತಪ್ಪಿ ಏನಾದರೂ ಒಂದು ಯಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತಾರೆ. ನಿನ್ನೆಯೂ ಕೂಡ ಬಾಯಿತಪ್ಪಿ ಬಿಜೆಪಿಗೆ ಮತ ಹಾಕಿ ಅಂದಿರುವ ಭಾಷಣದ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಬ್ಬರದ ಪ್ರಜಾ ಧ್ವನಿ ಯಾತ್ರೆ ನಡೆಯಿತು. ಸಿದ್ದರಾಮಯ್ಯ ಇಂಡಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಜನರು ಅದ್ದೂರಿ ಸ್ವಾಗತ ಕೋರಿದ್ದಾರೆ. ಯಾತ್ರೆಯಲ್ಲಿ ಅಪಾರ ಪ್ರಮಾಣದಲ್ಲಿ ಜನಸ್ತೋಮ ನೆರೆದಿದ್ದು, ಅಭೂತಪೂರ್ವ ಬೆಂಬಲ ದೊರಕಿದೆ.

“ನನ್ ಮೇಲೆ ನಂಬಿಕೆ ಇದೆಯಲ್ವಾ? ಹಾಗಾದ್ರೆ ಬಿಜೆಪಿಗೆ ಓಟು ಹಾಕಿ” | ಮಾತಿನ ಭರದಲ್ಲಿ ಎಡವಟ್ಟು ಮಾಡಿಕೊಂಡ ಸಿದ್ದರಾಮಯ್ಯ| ವಿಡಿಯೋ ವೈರಲ್ Read More »