ಸಮಗ್ರ ಸಮಾಚಾರ

ಅಹಿಂಸೆಯ ಪರಮಾವತಾರಿ ಬುದ್ಧ- ಜಗವೆಲ್ಲ ಮಲಗಿರಲು ಅವನೆದ್ದ

ಸಮಾಚಾರ.ಕಾಂ.ಮೇ26: ಇಂದು ಬುದ್ಧ ಪೂರ್ಣಿಮೆ. ಗೌತಮ ಬುದ್ಧನ ಜನ್ಮ ಆಚರಣೆ. ಬುದ್ಧನ ಜನ್ಮದಿನವನ್ನು ಬುದ್ಧ ಪೂರ್ಣಿಮಾ ಅಥವಾ ವೈಶಾಖಿ ಬುದ್ಧ ಪೂರ್ಣಿಮಾ ಅಥವಾ ವೆಸಾಕ್ ಎಂದೂ ಕರೆಯುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಬುದ್ಧ ಜಯಂತಿ ವೈಶಾಖ್ ತಿಂಗಳಲ್ಲಿ ಹುಣ್ಣಿಮೆಯ ದಿನದಂದು ಬರುತ್ತದೆ (ಇದು ಸಾಮಾನ್ಯವಾಗಿ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಬರುತ್ತದೆ). ಬುದ್ಧನ 2583 ನೇ ಜನ್ಮ ದಿನಾಚರಣೆ ಏಷ್ಯನ್ ಲೂನಿಸೋಲಾರ್ ಕ್ಯಾಲೆಂಡರ್ ಅನ್ನು ಆಧರಿಸಿದೆ, ಅದಕ್ಕಾಗಿಯೇ ಪ್ರತಿವರ್ಷ ದಿನಾಂಕಗಳು ಬದಲಾಗುತ್ತವೆ. ಭಗವಾನ್ ಬುದ್ಧ (Gautam Buddha)ರಾಜಕುಮಾರ […]

ಅಹಿಂಸೆಯ ಪರಮಾವತಾರಿ ಬುದ್ಧ- ಜಗವೆಲ್ಲ ಮಲಗಿರಲು ಅವನೆದ್ದ Read More »

ನಾಳೆ ವರ್ಷದ ಮೊದಲ ಚಂದ್ರಗ್ರಹಣ | ಭಾರತದಲ್ಲಿ ಗೋಚರವಾಗುತ್ತಾ? ಹೇಗಿದೆ ಇದರ ಪ್ರಭಾವ..!!

ಬೆಂಗಳೂರು.ಮೇ 25. ನಾಳೆ.(ಮೇ.26) ಈ ವರ್ಷದಲ್ಲಿ ಗೋಚರವಾಗುವ ಮೊದಲ ಸೂಪರ್ ಚಂದ್ರ ಹಾಗೂ ಕೆಂಪು ಚಂದ್ರನನ್ನು ನೋಡಲು ಇಡೀ ಜಗತ್ತೇ ಸಜ್ಜಾಗಿದೆ. ಇದು ಆಗ್ನೇಯ ಏಷ್ಯಾದ ಪ್ರದೇಶಗಳಲ್ಲಿ, ಆಸ್ಟ್ರೇಲಿಯ, ಓಷಿಯಾನಿಯಾದ ಪ್ರದೇಶಗಳಲ್ಲಿ, ಅಲಾಸ್ಕಾ ಮತ್ತು ಕೆನಡಾದ ಹೆಚ್ಚಿನ ಭಾಗಗಳಲ್ಲಿ, ಯುಎಸ್‍ಎಯ ಬಹುಪಾಲು ಸ್ಥಳಗಳು, ಹವಾಯಿ, ಮೆಕ್ಸಿಕೊ ಮತ್ತು ಮಧ್ಯ ಅಮೆರಿಕಾ ಮತ್ತು ದಕ್ಷಿಣ ಅಮೆರಿಕದ ಬಹುಪಾಲು ಪ್ರದೇಶಗಳಲ್ಲಿ ಗೋಚರಿಸಲಿದೆ. ಈ ಅರೆನೆರಳಿನ ಗ್ರಹಣವು ಜಾಗತಿಕ ಕಾಲಮಾನದ ಪ್ರಕಾರ, 08:47:39ರಲ್ಲಿ (ಯುಟಿಸಿ) ಪ್ರಾರಂಭವಾಗಿ, ಮೇ 26 ರಂದು 13:49:44

ನಾಳೆ ವರ್ಷದ ಮೊದಲ ಚಂದ್ರಗ್ರಹಣ | ಭಾರತದಲ್ಲಿ ಗೋಚರವಾಗುತ್ತಾ? ಹೇಗಿದೆ ಇದರ ಪ್ರಭಾವ..!! Read More »

ಅದ್ಧೂರಿ ಮದುವೆಗೆ ಅಧಿಕಾರಿಗಳ ರೈಡ್ | ವಧುವನ್ನು ಬಿಟ್ಟು ವರ ಪರಾರಿ….!

ಕಡೂರು: ಲಾಕ್ಡೌನ್ ನಡುವೆ ನಡೆಯುತ್ತಿದ್ದ ಅದ್ಧೂರಿ ಮದುವೆಗೆ ದಾಳಿ ನಡೆದಿದ್ದು, ಅಧಿಕಾರಿಗಳನ್ನು ನೋಡಿದ ವರ ವಧುವನ್ನು ಮಂಟಪದಲ್ಲಿಯೇ ಬಿಟ್ಟು ಪರಾರಿಯಾದ ಪ್ರಸಂಗ ತಾಲೂಕಿನ ಕರಿಕಲ್ಲಳ್ಳಿಯಲ್ಲಿ ನಡೆದಿದೆ. ಕೋವಿಡ್ ಹರಡುವಿಕೆ ತಡೆಯುವ ಹಿನ್ನಲೆಯಲ್ಲಿ ಹೇರಿದ್ದ ನಿಯಮ ಉಲ್ಲಂಘಿಸಿ ಅದ್ಧೂರಿ ಮದುವೆ ಆಯೋಜಿಸಲಾಗಿತ್ತು. ಶಾಸ್ತ್ರೊತ್ತರಗಳು ಸರಾಗವಾಗಿ ನಡೆಯುತ್ತಿರುವಾಗಲೇ ಕಲ್ಯಾಣ ಮಂಟಪಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ಅಧಿಕಾರಿಗಳನ್ನು ನೋಡುತ್ತಲೇ ವರ ಸೇರಿದಂತೆ ಜನರು ಸ್ಥಳದಿಂದ ತೆರಳಿದ್ದಾರೆ. ಮದುವೆಗೆ ಕೇವಲ 10 ಜನರಿಗೆ ಅನುಮತಿ ಪಡೆದು ನೂರಾರು ಜನರನ್ನು ಸೇರಿಸಲಾಗಿತ್ತು. ಸ್ಥಳಕ್ಕೆ ಜೋಡಿಹೋಚಿಹಳ್ಳಿ

ಅದ್ಧೂರಿ ಮದುವೆಗೆ ಅಧಿಕಾರಿಗಳ ರೈಡ್ | ವಧುವನ್ನು ಬಿಟ್ಟು ವರ ಪರಾರಿ….! Read More »

ಕರಾವಳಿಯಲ್ಲಿ ನಡೆಯಿತು ಪಿಡಿಓ ಗೆ ಕಪಾಲ ಮೋಕ್ಷ | ಬುದ್ದಿಮಾತು ಹೇಳಿದ್ರೆ ಯಾಕಿಂಗೆ ಮಾಡಿದ್ರು?

ಮಂಗಳೂರು.:ಮೇ 25: ಮಾಸ್ಕ್ ಧರಿಸದೇ ಇರುವುದನ್ನು ಪ್ರಶ್ನಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೇಲೆ ಹಲ್ಲೆಗೈದ ಘಟನೆ ನಗರ ಹೊರವಲಯದ ಮಲ್ಲೂರಿನಲ್ಲಿ ನಡೆದಿದೆ. ಉಳಾಯಿಬೆಟ್ಟು ಗ್ರಾಮ ಪಂಚಾಯತಿ ಪಿಡಿಓ ರಾಜೇಂದ್ರ ಶೆಟ್ಟಿ ಹಲ್ಲೆಗೆ ಒಳಗಾದವರು. ಮಲ್ಲೂರು ಬಳಿಯ ಬದ್ರಿಯಾನಗರದ ಕ್ರಿಕೆಟ್ ಮೈದಾನದಲ್ಲಿ ಗುಂಪು ಸೇರಿದ್ದ ಯುವಕರಿಗೆ ಮಾಸ್ಕ್ ಹಾಕುವಂತೆ ಅಧಿಕಾರಿ ಸೂಚಿಸಿದ್ದರು. ಆದರೆ ಅಧಿಕಾರಿಯ ಮಾತು ಕೇಳದೇ ಅದೇ ಯುವಕರು ಬಳಿಕ ಮಲ್ಲೂರು ಗ್ರಾಮ ಪಂಚಾಯತ್ ಕಚೇರಿ ಆವರಣದಲ್ಲಿ ಸೇರಿದ್ದರು. ಪಂಚಾಯತ್ ಕಚೇರಿ ಆವರಣದಲ್ಲಿ ಮಾಸ್ಕ್ ಹಾಕದೆ ಗುಂಪು

ಕರಾವಳಿಯಲ್ಲಿ ನಡೆಯಿತು ಪಿಡಿಓ ಗೆ ಕಪಾಲ ಮೋಕ್ಷ | ಬುದ್ದಿಮಾತು ಹೇಳಿದ್ರೆ ಯಾಕಿಂಗೆ ಮಾಡಿದ್ರು? Read More »

ಒಮ್ಮೆಲೆ ಉಕ್ಕಿ ಬಂದ ನೀರು: ಮುಳುಗಿದ ಪಿಕ್ ಅಪ್

ಉಜಿರೆ: ಪಿಕ್ ಅಪ್ ವಾಹನವೊಂದು ನದಿ ದಾಟಲು ನದಿಗೆ ಇಳಿಯುತ್ತಿದ್ದಂತೆ ನೀರು ಒಮ್ಮೆಲೆ ಉಕ್ಕಿ ಬಂದ ಪರಿಣಾಮ ವಾಹನ ಮುಳುಗಡೆಯಾಗಿ, ಅದರಲ್ಲಿದ್ದ ಜನರನ್ನು ಸ್ಥಳೀಯರು ರಕ್ಷಿಸಿದ ಘಟನೆ ಚಾರ್ಮಾಡಿ ಬೆಳಿಯ ಚಿಬಿದ್ರೆ ಉರ್ಪೆಲ್ ಗುಡ್ಡೆ ಎಂಬಲ್ಲಿ ಇಂದು ಸಂಜೆ ನಡೆದಿದೆ. ಅಳದಂಗಡಿಯ ಮನೆಯೊಂದಕ್ಕೆ ಪಿಕಪ್ ವಾಹನದಲ್ಲಿ ಸೆಂಟ್ರಿಂಗ್ ಪರಿಕರಗಳನ್ನು ಕೊಂಡೈೂದು ತಿರುಗಿ ಬರುವಾಗ, ಇಂದು ಎಡೆಬಿಡದೆ ಮಳೆಯಾದ ಪರಿಣಾಮ ಮೃತ್ಯುಂಜಯ ನದಿಯಲ್ಲಿ ಒಮ್ಮೆಲೆ ನೆರೆನೀರು ಉಕ್ಕಿಬಂದು ಈ ಘಟನೆ ನಡೆದಿದೆ. ಪಿಕಪ್‌ನಲ್ಲಿದ್ದ ಚಾಲಕ ಮತ್ತು ಇನ್ನೊಬ್ಬ ವ್ಯಕ್ತಿಯನ್ನು

ಒಮ್ಮೆಲೆ ಉಕ್ಕಿ ಬಂದ ನೀರು: ಮುಳುಗಿದ ಪಿಕ್ ಅಪ್ Read More »

ಮಡಿಕೇರಿ | ಕೊರೋನಾ ಆಸ್ಪತ್ರೆಯ ಮೊಬೈಲ್ ಕಳ್ಳ ಅರೆಸ್ಟ್!

ಮಡಿಕೇರಿ: ಪುಟ್ಟ ಬಾಲಕಿಯೊಬ್ಬಳು ಕೋವಿಡ್ ನಿಂದಾಗಿ ತನ್ನ ತಾಯಿಯನ್ನು ಕಳೆದುಕೊಂಡು ಜಿಲ್ಲಾಡಳಿತ ಹಾಗೂ ಶಾಸಕರಿಗೆ ಪತ್ರ ಬರೆದು ಆಸ್ಪತ್ರೆಯಲ್ಲಿ ಕಳೆದುಹೋಗಿರುವ ನನ್ನ ತಾಯಿಯ ನೆನಪುಗಳು ಇರುವ ಮೊಬೈಲ್‌ ಪೋನ್‌‌‌ ಅನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಳು. ಇದು ವೈರಲ್ ಆಗಿದ್ದು, ಎಲ್ಲರ ಮನ ಮಿಡಿದಿತ್ತು. ಇದೀಗ ಕೊರೊನಾ ಕೇಂದ್ರದಿಂದ ಮೊಬೈಲ್ ಎಗರಿಸುತ್ತಿದ್ದಂತ ಕಳ್ಳ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಮಡಿಕೇರಿಯ ಕೊರೋನಾ ಆಸ್ಪತ್ರೆಯಲ್ಲಿ ಅನೇಕರ ಮೊಬೈಲ್ ಕಳ್ಳತನವಾಗುತ್ತಿದ್ದು, ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಕೂಡ ದಾಖಲಾಗಿದ್ದವು. ಅದರಲ್ಲಿಯೂ

ಮಡಿಕೇರಿ | ಕೊರೋನಾ ಆಸ್ಪತ್ರೆಯ ಮೊಬೈಲ್ ಕಳ್ಳ ಅರೆಸ್ಟ್! Read More »

ಹಾಸಿಗೆ‌ ಬ್ಲಾಕ್ ನಿಂದ ಹೇಸಿಗೆ ಮಾಡಿಕೊಂಡ್ರಾ ಸತೀಶ್‌ರೆಡ್ಡಿ.? ಶಾಸಕರ ಆಪ್ತ ಅಂದರ್

ಬೆಂಗಳೂರು: ಬೆಡ್ ಬ್ಲಾಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತ ಬಾಬು ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಬಿಬಿಎಂಪಿ ವಾರ್ ರೂಂ ನಲ್ಲಿ ನಡೆದ ಬೆಡ್ ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬಾಬು ಎಂಬಾತನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಕೋವಿಡ್ ನಿಂದ ಗುಣಮುಖರಾಗುತ್ತಿದ್ದಂತೆ ಬಾಬುರನ್ನು ಬಂಧಿಸಿರುವ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ ವಿಚಾರಣೆಗಾಗಿ ಕಸ್ಟಡಿಗೆ ಪಡೆದಿದ್ದಾರೆ.ಪ್ರಕರಣ ಸಂಬಂಧ ಈ ಹಿಂದೆ ಬಂಧನಕ್ಕೀಡಾಗಿದ್ದ ಮಹಿಳೆ, ಬಾಬು ಮೂಲಕ

ಹಾಸಿಗೆ‌ ಬ್ಲಾಕ್ ನಿಂದ ಹೇಸಿಗೆ ಮಾಡಿಕೊಂಡ್ರಾ ಸತೀಶ್‌ರೆಡ್ಡಿ.? ಶಾಸಕರ ಆಪ್ತ ಅಂದರ್ Read More »

ಮತ್ತೆ ನಡೆಯಲಿದೆ ಐಪಿಎಲ್ 14ರ ಉಳಿದ ಪಂದ್ಯಗಳು

ದೆಹಲಿ: ಆಟಗಾರರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅರ್ಧಕ್ಕೆ ನಿಂತಿದ್ದ ಜಗತ್ತಿನ ಶ್ರೀಮಂತ ಕ್ರಿಕೆಟ್ ಟೂರ್ನಿ ಐಪಿಎಲ್ ಮತ್ತೆ ಆರಂಭವಾಗಲಿದೆ. ಐಪಿಎಲ್ ನ 14ನೇ ಸೀಸನ್ ದ್ವಿತೀಯಾರ್ಧ ಬಾಕಿ ಇರುವಂತೆ ಕೋವಿಡ್ ಹಾವಳಿಗೆ ತುತ್ತಾಗಿ ಮೊಟಕುಗೊಂಡಿತ್ತು. ಇದೀಗ ಉಳಿದ ಪಂದ್ಯಗಳನ್ನು ದುಬೈನಲ್ಲಿ ಮುಂದುವರೆಸಲು ಬಿಸಿಸಿಐ ಚಿಂತನೆ ನಡೆಸಿದೆ. ಅದರಂತೆ 2021 ರ ಸೆಪ್ಟೆಂಬರ್ 18ರಂದು ಆರಂಭಿಸಿ ಅಕ್ಟೋಬರ್ 10ಕ್ಕೆ ಟೂರ್ನಿ ಕೊನೆಗೊಳಿಸಲು ನಿರ್ಧರಿಸಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಐಪಿಎಲ್ ಅರ್ಧಕ್ಕೆ ನಿಂತಿರುವುದು ಅಭಿಮಾನಿ ಬಳಗದಲ್ಲಿ ನಿರಾಸೆ ಮೂಡಿಸಿತ್ತು,

ಮತ್ತೆ ನಡೆಯಲಿದೆ ಐಪಿಎಲ್ 14ರ ಉಳಿದ ಪಂದ್ಯಗಳು Read More »

ಎಚ್‌ಪಿಸಿಎಲ್ ಸ್ಥಾವರದಲ್ಲಿ ಭಾರೀ ಸ್ಫೋಟ

ವಿಶಾಖಪಟ್ಟಣಂ: ಇಲ್ಲಿನ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಸ್ಥಾವರದಲ್ಲಿ ಭಾರೀ ಸ್ಫೋಟ ಸಂಭವಿಸಿದ್ದು, ದೊಡ್ಡ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಎಚ್‌ಪಿಸಿಎಲ್‌ನ ಯುನಿಟ್ -3 ಸ್ಥಾವರದಲ್ಲಿ ಸ್ಫೋಟ ಸಂಭವಿಸಿದೆ. ಐದು ಅಗ್ನಿಶಾಮಕ ದಳಗಳು ಸ್ಥಳಕ್ಕೆ ದೌಡಾಯಿಸಿವೆ. ಹೆಚ್ಚಿನ ಅಗ್ನಿಶಾಮಕ ಟೆಂಡರ್‌ಗಳನ್ನು ರವಾನಿಸಲಾಗುತ್ತಿದೆ. ಘಟನೆಗೆ ಇನ್ನೂ ಸ್ಪಷ್ಟ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಎಚ್‌ಪಿಸಿಎಲ್ ಸ್ಥಾವರದಲ್ಲಿ ಭಾರೀ ಸ್ಫೋಟ Read More »

ಕೇರಳಕ್ಕೆ ಹೋಗುವವರಿಗೆ ನಕಲಿ ಕೋವಿಡ್ ರಿಪೋರ್ಟ್ | ಸಿದ್ದಾಪುರದ ಪತ್ರಕರ್ತ ಅರೆಸ್ಟ್

ಸಿದ್ದಾಪುರು: ವಿಶ್ವದಾದ್ಯಂತ ಕೊರೋನಾ ರಣಕೇಕೆ ಹಾಕುತ್ತಿರುವಾಗ, ಸಮಾಜದಲ್ಲಿ ಜಾಗೃತಿ ಮೂಡಿಸುತ್ತಾ ಸಮಾಜಮುಖಿ ಕೆಲಸ ಮಾಡಬೇಕಾದ ಪತ್ರಕರ್ತರೋರ್ವರು, ಸಾರ್ವಜನಿಕರಿಗೆ ಅಕ್ರಮವಾಗಿ ನಕಲಿ ಕೋವಿಡ್ ಪ್ರಮಾಣಪತ್ರ ನೀಡಿ ಸಿಕ್ಕಿಬಿದ್ದ ಘಟನೆ ವರದಿಯಾಗಿದೆ. ಕರ್ನಾಟಕದಿಂದ ಕೇರಳಕ್ಕೆ ಹೋಗುವವರಿಗೆ ಕೊರೋನಾ ನೆಗೆಟೀವ್ ರಿಪೋರ್ಟ್ ಕಡ್ಡಾಯವಾಗಿದ್ದು,  ಸಿದ್ಧಾಪುರದ ವಿಜಯವಾಣಿ ಪತ್ರಿಕೆಯ ವರದಿಗಾರ ಅಬ್ದುಲ್ ಅಜೀಜ್ ಎಂಬಾತ ಕೇರಳಕ್ಕೆ  ಹೋಗುವವರಿಗೆ  ತನ್ನ ಸ್ಟುಡಿಯೋದಲ್ಲಿಯೇ ಕೂತು ಯಾವುದೇ ಟೆಸ್ಟ್ ಮಾಡಿಸದೇ, ನೆಗಟೀವ್ ರಿಪೋರ್ಟ್ ಕೊಟ್ಟು ಹಣಪಡೆದು ಸಿಕ್ಕಿಬಿದ್ದಿದ್ದಾನೆ. ಆತನ ಈ ಕೃತ್ಯಕ್ಕೆ ಇಡೀ ಪತ್ರಿಕಾ ವಲಯ ತಲೆ

ಕೇರಳಕ್ಕೆ ಹೋಗುವವರಿಗೆ ನಕಲಿ ಕೋವಿಡ್ ರಿಪೋರ್ಟ್ | ಸಿದ್ದಾಪುರದ ಪತ್ರಕರ್ತ ಅರೆಸ್ಟ್ Read More »