ಸಮಗ್ರ ಸಮಾಚಾರ

ಮೋದಿ ಸಂಪುಟ ಸೇರ್ತಾರಾ ಡಾ. ದೇವಿಪ್ರಸಾದ್ ಶೆಟ್ಟಿ: ಕೊರೊನ ಟಾಸ್ಕ್ ಫೋರ್ಸ್ ಕಮಿಟಿ ಅಧ್ಯಕ್ಷರಿಗೆ ಮಂತ್ರಿಗಿರಿ!?

ಬೆಂಗಳೂರು -ಮೇ.25:  ಕೇಂದ್ರ ಸಚಿವ ಸಂಪುಟ ಸದ್ಯದಲ್ಲೇ ಪುನರ್ ರಚನೆಯಾಗಲಿದ್ದು, ಬೆಂಗಳೂರಿನ ನಾರಾಯಣ ಹೆಲ್ತ್ ಕೇರ್ ಅಧ್ಯಕ್ಷ ಡಾ.ದೇವಿ ಪ್ರಸಾದ್ ಶೆಟ್ಟಿ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಸದ್ಯ ಕೋವಿಡ್‌ ಮೂರನೇ ಅಲೆಯ ಟಾಸ್ಕ್‌ಫೋರ್ಸ್‌ ಕಮಿಟಿ ಅಧ್ಯಕ್ಷರಾಗಿರುವ ಅವರನ್ನು ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಸಂಪುಟ ದರ್ಜೆಯ ಸಚಿವರಾಗಿ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಕೇಂದ್ರದ ಹಾಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾಗಿರುವ ಡಾ.ಹರ್ಷವರ್ಧನ್ ಕೋವಿಡ್ ಎರಡನೇ ಆಲೆಯ ಸಂದರ್ಭದಲ್ಲಿ […]

ಮೋದಿ ಸಂಪುಟ ಸೇರ್ತಾರಾ ಡಾ. ದೇವಿಪ್ರಸಾದ್ ಶೆಟ್ಟಿ: ಕೊರೊನ ಟಾಸ್ಕ್ ಫೋರ್ಸ್ ಕಮಿಟಿ ಅಧ್ಯಕ್ಷರಿಗೆ ಮಂತ್ರಿಗಿರಿ!? Read More »

ಕೊರೋನಾ ಓಡಿಸಲು ನೂರಾರು ಕೆಜಿ ಅನ್ನ ಮಣ್ಣಿಗೆ ಸುರಿದರು….! ಮತ್ತೆ ಮತ್ತೆ ಮೂಢನಂಬಿಕೆಯಲ್ಲಿ ಮುಳುಗುತ್ತಿದ್ದಾರೆ ಜನ

ಬಳ್ಳಾರಿ: ಗ್ರಾಮ ಗ್ರಾಮಕ್ಕೂ ಸೋಂಕು ನುಗ್ಗಿ ಮರಣ ಮೃದಂಗ ಭಾರಿಸುತ್ತಿದ್ದರೂ, ಕೊರೋನಾ ಹೋಗಲಾಡಿಸಲು ವೈಜ್ಞಾನಿಕ ಮುನ್ನೆಚ್ಟರಿಕೆ ವಹಿಸುವ ಬದಲು, ಮೌಢ್ಯದ ಕಡೆ ಮುಖ ಮಾಡಿದ ಗ್ರಾಮೀಣ ಭಾಗದ ಜನ, ಇದೀಗ ನೂರಾರು ಕೆಜಿ ಅನ್ನ ಮಣ್ಣುಪಾಲು ಮಡಿರುವ ಘಟನೆ ತಾಲೂಕಿನ ಡಿ ಕಗ್ಗಲ್ಲು ಗ್ರಾಮದಲ್ಲಿ ನಡೆದಿದೆ. ತಿನ್ನೋ ಅನ್ನ ಮಣ್ಣುಪಾಲು ಮಾಡಿದರೆ ಕೊರೊನಾ ದೂರವಾಗಲಿದೆ ಎಂಬ ಮೂಡನಂಬಿಕೆಯಲ್ಲಿ ಮುಳುಗಿರುವ ಜನ, ನೂರಾರು ಕೆಜಿ ಅನ್ನ ಮಣ್ಣುಪಾಲು ಮಾಡಿದ್ದಾರೆ. ಮನೆ ಮನೆಯಲ್ಲಿ ಅನ್ನ ಮಾಡಿಸಿ ರಾತ್ರಿ ವೇಳೆಯಲ್ಲಿ ಊರ

ಕೊರೋನಾ ಓಡಿಸಲು ನೂರಾರು ಕೆಜಿ ಅನ್ನ ಮಣ್ಣಿಗೆ ಸುರಿದರು….! ಮತ್ತೆ ಮತ್ತೆ ಮೂಢನಂಬಿಕೆಯಲ್ಲಿ ಮುಳುಗುತ್ತಿದ್ದಾರೆ ಜನ Read More »

ತಹಶೀಲ್ದಾರ್ ಕಛೇರಿ ಎದುರೇ ಆರು ಕುರಿ ಕಡಿದು ಹರಕೆ ತೀರಿಸಿದರು

ರಾಯಚೂರು: ಲಾಕ್ಡೌನ್ ನಿಯಮಗಳನ್ನು ಗಾಳಿಗೆ ತೂರಿ ಊರ ಜನ ತಹಶೀಲ್ದಾರ್ ಕಚೇರಿ ಮುಂದೆಯೇ ಕುರಿಬಲಿ ಕೊಟ್ಟು ದೇವರ ಹರಕೆ ತೀರಿಸಿದ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಹೇರಿದ್ದರೂ, ಜನ ತಲೆಕೆಡಿಸಿಕೊಳ್ಳದೇ ತಮ್ಮಪಾಡಿಗೆ ತಾವು ಓಡಾಡಿಕೊಂಡಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಆರು ಕುರಿಗಳ ತಲೆ ಕಡಿದು ಹಬ್ಬ ಆಚರಿಸಿದ್ದಾರೆ. ಬೆಳಗಿನ ಜಾವ ಡೊಳ್ಳು, ನಗಾರಿ ಸಹಿತ ಮೆರವಣಿಗೆ ಬಂದು ಕುರಿಗಳನ್ನು ಬಲಿ ನೀಡಿ ದೇವರಿಗೆ ಹರಕೆ ತೀರಿಸಿದ್ದಾರೆ. ಲಾಕ್‍ಡೌನ್ ವೇಳೆ ಧಾರ್ಮಿಕ ಆಚರಣೆಗಳಿಗೆ ನಿಷೇಧವಿದ್ದರೂ ನಿಷೇಧಿತ

ತಹಶೀಲ್ದಾರ್ ಕಛೇರಿ ಎದುರೇ ಆರು ಕುರಿ ಕಡಿದು ಹರಕೆ ತೀರಿಸಿದರು Read More »

ಸನ್ನಿ ಲಿಯೋನ್‍ ಝಿಪ್ ಹಾಕುವಲ್ಲಿ ಸುಸ್ತಾದ ಡ್ರೆಸ್ಸಿಂಗ್ ಆರ್ಮಿ | ಇಲ್ಲಿದೆ ವೀಡಿಯೋ

ಮುಂಬೈ: ಪದೇ ಪದೇ ನಾನಾ ವಿಚಾರಕ್ಕೆ ಸುದ್ದಿಯಾಗುತ್ತಿರುವ ಮಾದಕ ನಟಿ ಸನ್ನಿ ಲಿಯೋನ್ ಇದೀಗ ಮತ್ತೆ ಮುನ್ನಲೆಗೆ ಬಂದಿದ್ದಾರೆ. ಬೇಬಿ ಡಾಲ್ ಗೆ ಬಟ್ಟೆ ತೊಡಿಸಲು ಡ್ರೆಸ್ಸಿಂಗ್ ತಂಡವೊಂದು ಕಷ್ಟ ಪಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಬಾಲಿವುಡ್‍ನ ಜನಪ್ರಿಯ ರಿಯಾಲಿಟಿ ಶೋ ಒಂದರಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿರುವ ಸನ್ನಿ ಲಿಯೋನ್. ಇದೀಗ ಈ ಕಾರ್ಯಕ್ರಮಕ್ಕೆ ತಯಾರಾಗುತ್ತಿರುವಾಗ ತನಗೆ ಕಾಸ್ಟ್ಯೂಮ್ ತೊಡಿಸಲು ಕಷ್ಟ ಪಟ್ಟ ತಂಡವೊಂದರ ಚಿತ್ರವನ್ನು ಸನ್ನಿ ಲಿಯೋನ್ ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.

ಸನ್ನಿ ಲಿಯೋನ್‍ ಝಿಪ್ ಹಾಕುವಲ್ಲಿ ಸುಸ್ತಾದ ಡ್ರೆಸ್ಸಿಂಗ್ ಆರ್ಮಿ | ಇಲ್ಲಿದೆ ವೀಡಿಯೋ Read More »

ಅಕ್ರಮ ಮದ್ಯ ಮಾರಾಟ | ಓರ್ವನ ಬಂಧನ

ಹೆಬ್ರಿ: ಹೆಬ್ರಿಯಲ್ಲಿ ಅಕ್ರಮ ಮದ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಮೇ. 26 ರಂದು ನಡೆದಿದೆ. ಪೊಲೀಸರು ವಶಕ್ಕೆ ಪಡೆದ ಆರೋಪಿ ‌ಉಪೇಂದ್ರ ನಾಯಕ್ (48) ಎಂಬವರು ಎಂದು ತಿಳಿದುಬಂದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹೆಬ್ರಿ ಠಾಣಾ ಪೊಲೀಸರು ಶಿವಪುರ ಗ್ರಾಮದ ಮುಳ್ಳುಗುಡ್ಡೆ ಕಾಳಾಯಿ ಎಂಬಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು, ಆತನ ಬಳಿ ಇದ್ದ ಸುಮಾರು 1300 ರೂ. ಮೌಲ್ಯದ ಮದ್ಯ ತುಂಬಿರುವ

ಅಕ್ರಮ ಮದ್ಯ ಮಾರಾಟ | ಓರ್ವನ ಬಂಧನ Read More »

ಆಸ್ತಿ ವಿವಾದ ಮಾರಾಮಾರಿ ನಾಲ್ವರ ಕೊಲೆಯಲ್ಲಿ ಅಂತ್ಯ

ಹೊಳೆನರಸೀಪುರ: ತಾಲ್ಲೂಕಿನ ಮಾರಗೌಡನಹಳ್ಳಿ ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ನಡೆದ ಸಂಬಂಧಿಕರ ನಡುವಿನ ಘರ್ಷಣೆಯು ನಾಲ್ವರ ಸಾವಿನಲ್ಲಿ ಅಂತ್ಯವಾಗಿದೆ. ಗ್ರಾಮದ ಮಲ್ಲೇಶ್ ಹಾಗೂ ಸ್ವಾಮಿಗೌಡ ಎಂಬವರ ನಡುವೆ ಜಮೀನು ವಿಚಾರವಾಗಿ ಹಿಂದೆಯೂ ಗಲಾಟೆ ನಡೆಯುತ್ತಿತ್ತು. ನಿನ್ನೆ ಮಧ್ಯಾಹ್ನ ಮತ್ತೆ ಜಮೀನಿನ ಬಳಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಹರಿತವಾದ ಆಯುಧದಿಂದ ಇರಿದ ಪರಿಣಾಮ ಮಲ್ಲೇಶ ( 60 ), ಮಲ್ಲೇಶನ ಚಿಕ್ಕಪ್ಪನ ಮಗ ಮಂಜೇಶ ( 35 ), ಮಲ್ಲೇಶನ ಅಳಿಯ ರವಿ ( 35 )

ಆಸ್ತಿ ವಿವಾದ ಮಾರಾಮಾರಿ ನಾಲ್ವರ ಕೊಲೆಯಲ್ಲಿ ಅಂತ್ಯ Read More »

ಮೂಡಿಗೆರೆಯ ಮೂತ್ರ ಕುಡಿಸಿದ ಪ್ರಕರಣ: ಯುವಕನ ವಿರುದ್ಧ ಎಫ್ಐಆರ್ ದಾಖಲು | ವಿವಾಹಿತ ಮಹಿಳೆ ಜೊತೆಗಿನ ಫೋನ್ ಸಂಭಾಷಣೆ ವೈರಲ್

ಮೂಡಿಗೆರೆ: ಕಳೆದೆರಡು ವಾರಗಳಿಂದ ರಾಜ್ಯದಾದ್ಯಂತ ಧೂಳೆಬ್ಬಿಸಿರುವ ಮೂಡಿಗೆರೆಯಲ್ಲಿ ಪಿಎಸ್ ಐ, ದಲಿತ ಯುವಕನೋರ್ವನಿಗೆ ಮೂತ್ರ ಕುಡಿಸಿದ್ದರು ಎನ್ನಲಾದ ಪ್ರಕರಣ ದಿನ ಕಳೆದಂತೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಪಿಎಸ್ಎ ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ದೂರು ನೀಡಿದ್ದ ಯುವಕನ ಮೇಲೆಯೂ ಎಫ್ಐಆರ್ ದಾಖಲಾಗಿದೆ. ಕಿರುಗುಂದ ವಿವಾಹಿತ ಮಹಿಳೆಯೋರ್ವರ ದೂರಿನ ಆಧಾರದ ಮೇಲೆ ಬಂಧಿತನಾಗಿದ್ದ ಅದೇ ಗ್ರಾಮದ ದಲಿತ ಯುವಕ ಪುನೀತ್, ಗೋಣಿಬೀಡು ಪಿಎಸ್ಐ ವಿಚಾರಣೆ ವೇಳೆ ನನಗೆ  ಮೂತ್ರ ಕುಡಿಸಿ, ಜಾತಿ ನಿಂದನೆ ಮಾಡಿ, ಹಲ್ಲೆ ನಡೆಸಿದ್ದಾರೆ.

ಮೂಡಿಗೆರೆಯ ಮೂತ್ರ ಕುಡಿಸಿದ ಪ್ರಕರಣ: ಯುವಕನ ವಿರುದ್ಧ ಎಫ್ಐಆರ್ ದಾಖಲು | ವಿವಾಹಿತ ಮಹಿಳೆ ಜೊತೆಗಿನ ಫೋನ್ ಸಂಭಾಷಣೆ ವೈರಲ್ Read More »

ಬಡ ಕೂಲಿ ಕಾರ್ಮಿಕರಿಗೆ ಸದ್ಯದಲ್ಲೇ ಇನ್ನೊಂದು ಪ್ಯಾಕೇಜ್: ಸಿಎಂ ಬಿಎಸ್ ವೈ

ಬೆಂಗಳೂರು: ಇನ್ನೊಂದು ವಾರದಲ್ಲಿ ರಾಜ್ಯದ ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಅನುಕೂಲವಾಗುವಂತೆ ಇನ್ನೊಂದು ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದ್ದಾರೆ. ಬೆಂಗಳೂರಿನ ಬಿಬಿಎಂಪಿ ಕೋವಿಡ್ ವಾರ್ ರೂಮ್ ಗಳಿಗೆ ನಿನ್ನೆ ಭೇಟಿ ನೀಡಿದ ಸಿಎಂ ಪತ್ರಕರ್ತರನ್ನುದ್ದೇಶಿಸಿ ಮಾತನಾಡುವಾಗ, ರಾಜ್ಯದ ಜನತೆಯ ಕಷ್ಟ ನಮಗೂ ಅರ್ಥವಾಗುತ್ತದೆ ರಾಜ್ಯದ ಹಣಕಾಸಿನ ಇತಿಮಿತಿಯಲ್ಲಿ ಈ ಹಿಂದೆ ಆರ್ಥಿಕ ಪ್ಯಾಕೇಜ್ ಒಂದನ್ನು ಘೋಷಣೆ ಮಾಡಿದ್ದೆವು. ಇದೀಗ ಇನ್ನೊಂದು ಪ್ಯಾಕೇಜ್ ಘೋಷಣೆ ಮಾಡುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು

ಬಡ ಕೂಲಿ ಕಾರ್ಮಿಕರಿಗೆ ಸದ್ಯದಲ್ಲೇ ಇನ್ನೊಂದು ಪ್ಯಾಕೇಜ್: ಸಿಎಂ ಬಿಎಸ್ ವೈ Read More »

ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ನಡೆಯುತ್ತಿದೆ ಅಮಾನವೀಯ ಘಟನೆಗಳು |ಮೃತಪಟ್ಟವರ ಬೆಲೆಬಾಳುವ ವಸ್ತುಗಳು ಮಂಗಮಾಯ…!

ಮಡಿಕೇರಿ: ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾಗೆ ತುತ್ತಾಗಿ ಮೃತಪಟ್ಟವರ ಬೆಲೆಬಾಳುವ ವಸ್ತುಗಳು ಕಾಣೆಯಾಗುತ್ತಿರುವ ಪ್ರಕರಣಗಳು ಆಗಾಗ ಕೇಳಿಬರುತ್ತಿವೆ. ಇದೀಗ ಕೊರೋನಾ ಕಾರಣದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರ ಲಕ್ಷಾಂತರ ರೂ. ಬೆಲೆಬಾಳುವ ಮಾಂಗಲ್ಯ ಸರ ನಾಪತ್ತೆಯಾಗಿದೆ. ಕುಶಾಲನಗರ ತಾಲೂಕಿನ ರಸಲ್ ಪುರ ಗ್ರಾಮದ ಕಮಲ ಎಂಬ ಮಹಿಳೆ ಮೇ 1 ರಂದು ಕೊರೋನಾ ಸೋಂಕಿಗೆ ಒಳಗಾಗಿ ಮಡಿಕೇರಿಯ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಮರುದಿನ ಅವರಿಗೆ ಅನಾರೋಗ್ಯ ಉಲ್ಬಣಗೊಂಡ ಕಾರಣ ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಗಿತ್ತು. ಆ ವೇಳೆ

ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ನಡೆಯುತ್ತಿದೆ ಅಮಾನವೀಯ ಘಟನೆಗಳು |ಮೃತಪಟ್ಟವರ ಬೆಲೆಬಾಳುವ ವಸ್ತುಗಳು ಮಂಗಮಾಯ…! Read More »

‘ಯಾಸ್’ ಚಂಡಮಾರುತದ ಎಫೆಕ್ಟ್ | ಒಡಿಶಾದ ಕರಾವಳಿಯಲ್ಲಿ ಭಾರೀ ಮಳೆ

ಭುವನೇಶ್ವರ: ಯಾಸ್ ಚಂಡಮಾರುತವು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದು, ಇದರ ಪರಿಣಾಮ ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ ಎಂದು ತಿಳಿದುಬಂದಿದೆ. ಈ ಮಧ್ಯೆ ಪರಿಸ್ಥಿತಿ ಎದುರಿಸಲು ರಾಷ್ಟ್ರೀಯ ವಿವತ್ತು ನಿರ್ವಹಣಾ ತಂಡವನ್ನು ಕೇಂದ್ರ ಸರ್ಕಾರ ಒ಼ಡಿಶಾಕ್ಕೆ ರವಾನಿಸಿದೆ. ಮೇ 26ರಂದು ಯಾಸ್ ಚಂಡಮಾರುತ ಒಡಿಶಾ ತಲುಪುವ ಸಾಧ್ಯತೆ ಇದೆ. ಯಾಸ್ ಚಂಡಮಾರುತ ತನ್ನ ಶಕ್ತಿ ಹೆಚ್ಚಿಸಿಕೊಳ್ಳುತ್ತಿದ್ದು, ಶಕ್ತಿಶಾಲಿ ಚಂಡಮಾರುತವಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

‘ಯಾಸ್’ ಚಂಡಮಾರುತದ ಎಫೆಕ್ಟ್ | ಒಡಿಶಾದ ಕರಾವಳಿಯಲ್ಲಿ ಭಾರೀ ಮಳೆ Read More »