ಹವಾಮಾನ ಆಧಾರಿತ ಬೆಳೆವಿಮೆ| ವಿಮಾ ಪಾವತಿಗೆ ಜು.31 ಕೊನೆ ದಿನ

ಸಮಗ್ರ ನ್ಯೂಸ್: 2026-27ನೇ ಸಾಲಿನ ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆವಿಮೆ ಯೋಜನೆಯಡಿ ವಿಮೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಅಡಿಕೆ, ಮಾವು, ಕಾಳು ಮೆಳಸು, ಶುಂಠಿ ಬೆಳೆಗಳಿಗೆ ವಿಮೆ ದರವನ್ನು ನಿಗದಿಪಡಿಸಲಾಗಿದ್ದು, ರೈತರು ನಿಗದಿತ ಅವಧಿಯೊಳಗೆ ಪಾವತಿಸಬಹುದು ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ.

. Ad Widget . Ad Widget . Ad Widget .

ಫಸಲು ಬಿಡುವಂತಹ ಅಡಿಕೆ, ಮಾವು, ಕಾಳುಮೆಣಸು ಮತ್ತು ನಾಟಿ ಮಾಡಿರುವಂತಹ ಶುಂಠಿ ಬೆಳೆಗಳಿಗೆ ರೈತರು ವಿಮೆ ಮಾಡಿಸಬಹುದಾಗಿದೆ. ಆಸಕ್ತ ರೈತರು ತಮ್ಮ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ ಗ್ರಾಮ ಒನ್ ಅಥವಾ ಬ್ಯಾಂಕುಗಳಲ್ಲಿ ವಿಮೆ ಕಂತನ್ನು ಪಾವತಿಸಲು ಅವಕಾಶ ಮಾಡಿಕೊಡಲಾಗಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಯಾವ ಬೆಳೆಗೆ ಎಷ್ಟು?
ಅಡಿಕೆ: ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ₹ 1,28,000 ಆಗಿದ್ದು, ರೈತರು ಪ್ರತಿ ಎಕರೆಗೆ ₹ 2560 ಅಥವಾ ಪ್ರತಿ ಗುಂಟೆಗೆ ₹ 64 ಪಾವತಿಸಬೇಕು.

ಮಾವು: ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ₹ 80,000 ಆಗಿದ್ದು, ರೈತರು ಪ್ರತಿ ಎಕರೆಗೆ ₹ 3200 ಅಥವಾ ಪ್ರತಿ ಗುಂಟೆಗೆ ₹ 80 ಪಾವತಿಸಬೇಕು.

ಕಾಳುಮೆಣಸು: ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ₹ 47,000 ಆಗಿದ್ದು, ರೈತರು ಪ್ರತಿ ಎಕರೆಗೆ ₹ 1692 ಅಥವಾ ಪ್ರತಿ ಗುಂಟೆಗೆ ₹ 42.30 ಪಾವತಿಸಬೇಕು.

ಶುಂಠಿ: ಪ್ರತಿ ಹೆಕ್ಟೇರ್‌ಗೆ ವಿಮಾ ಮೊತ್ತ ₹ 1,30,000 ಆಗಿದ್ದು, ರೈತರು ಪ್ರತಿ ಎಕರೆಗೆ ₹ 2600 ಅಥವಾ ಪ್ರತಿ ಗುಂಟೆಗೆ ₹ 65 ಪಾವತಿಸಬೇಕು.

ಮೇಲ್ಕಂಡ ಬೆಳೆಗಳನ್ನು ಬೆಳೆದಿರುವ ತಾಲೂಕಿನ ರೈತರು ಈ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು. ವಿಮೆ ಪಾವತಿಸಲು ಜುಲೈ 31 ಕೊನೆ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಬಹುದು.

Leave a Comment

Your email address will not be published. Required fields are marked *