Editor

ಉಡುಪಿ: ಚುನಾವಣೆ ಹಿನ್ನಲೆ ಉಡುಪಿ ಜಿಲ್ಲೆಯ 14 ಕಡೆಗಳಲ್ಲಿ ಪೊಲೀಸ್ ಚೆಕ್‌ಪೋಸ್ಟ್

ಸಮಗ್ರ ನ್ಯೂಸ್‌ : ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಾದ್ಯಂತ ಒಟ್ಟು 14 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊಲ್ಲೂರು, ಶಿರೂರು, ಹೊಸಂಗಡಿ, ಕುಂದಾಪುರ ಕ್ಷೇತ್ರದ ಸಾಬರಕಟ್ಟೆ, ಉಡುಪಿ ಕ್ಷೇತ್ರದ ಗುಡ್ಡೆಯಂಗಡಿ, ಮಣಿಪುರ ಉದ್ಯಾವರ, ಕಾಪು ಕ್ಷೇತ್ರದ ಹೆಜಮಾಡಿ, ಫಲಿಮಾರು, ಕಾರ್ಕಳದ ಮಾಳ, ಮುಂಡೂರು, ಸಚ್ಚರಿ ಪೇಟೆ, ಸೋಮೇಶ್ವರ, ಮುಡಾರು, ಬಜಗೋಳಿ, ಸಾಣೂರು, ಹೊಸ್ಮಾರು ನಲ್ಲೂರುಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ ವ್ಯಾಪಕ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯ ಗಡಿ ಪ್ರದೇಶಗಳಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಜಿಲ್ಲೆ

ಉಡುಪಿ: ಚುನಾವಣೆ ಹಿನ್ನಲೆ ಉಡುಪಿ ಜಿಲ್ಲೆಯ 14 ಕಡೆಗಳಲ್ಲಿ ಪೊಲೀಸ್ ಚೆಕ್‌ಪೋಸ್ಟ್ Read More »

ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಹಲ್ಲೆ| ಈ ಗೂಂಡಾಗಿರಿ ಸಹಿಸಲಾಗದು ಎಂದ ಪ್ರಕಾಶ ರಾಜ್

ಸಮಗ್ರ ನ್ಯೂಸ್: ಬೆಂಗಳೂರು ನಗರದ ನಗರತ್ ಪೇಟೆಯಲ್ಲಿ ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಯುವಕರು ಮೊಬೈಲ್ ಅಂಗಡಿ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣದಲ್ಲಿನ ಗೂಂಡಾಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಿ ಅಂತ ನಟ ಪ್ರಕಾಶ್ ರಾಜ್ ಆಗ್ರಹಿಸಿದ್ದಾರೆ. ಘಟನೆ ಬಗ್ಗೆ ನಟ ಪ್ರಕಾಶ್ ರಾಜ್ ಎಕ್ಸ್ ಮಾಡಿದ್ದು, ಈ ಗೂಂಡಾಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು. ಯಾವುದೇ ಧರ್ಮದ ಯಾವುದೇ ವ್ಯಕ್ತಿಯಿಂದ ಇಂತಹ ಗೂಂಡಾಗಿರಿ ಕೃತ್ಯಗಳು ನಡೆದರೂ ಅದನ್ನು ಯಾವುದೇ ಕಾರಣಕ್ಕೂ ಸಹಿಸಬಾರದು ಎಂದು ಹೇಳಿದ್ದಾರೆ. ಈ ಮೂಲಕ

ಹನುಮಾನ್ ಚಾಲಿಸಾ ಹಾಕಿದ್ದಕ್ಕೆ ಹಲ್ಲೆ| ಈ ಗೂಂಡಾಗಿರಿ ಸಹಿಸಲಾಗದು ಎಂದ ಪ್ರಕಾಶ ರಾಜ್ Read More »

ಪೌರತ್ವ ತಿದ್ದುಪಡಿ ಕಾಯ್ದೆ/ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್

ಸಮಗ್ರ ನ್ಯೂಸ್: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಡೆ ಕೋರುವಂತೆ ಸುಪ್ರೀಂ ಕೋರ್ಟ್ ಗೆ 237 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್, ತಡೆ ನೀಡಲು ನಿರಾಕರಿಸಿದೆ. ಜೊತೆಗೆ ವಿರೋಧ ಹಾಗೂ ತಡೆ ಕುರಿತು ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್, ಜಸ್ಟೀಸ್ ಜೆಬಿ ಪರಿದ್ವಾಲ್, ಮನೋಜ್ ಮಿಶ್ರಾ ಸೇರಿದ ಪೀಠ, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಅವಶ್ಯಕತೆ, ಇದಕ್ಕೆ ಎದುರಾಗಿರುವ ವಿರೋಧಗಳ ಕುರಿತು ಏಪ್ರಿಲ್

ಪೌರತ್ವ ತಿದ್ದುಪಡಿ ಕಾಯ್ದೆ/ ತಡೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್ Read More »

ತಿಂಗಳಿಗೆ 60,000 ಸಂಬಳ ಕೊಡ್ತಾರೆ, ಈಗಲೇ ಅರ್ಜಿ ಸಲ್ಲಿಸಿ

ಸಮಗ್ರ ಉದ್ಯೋಗ: ನವ ಮಂಗಳೂರು ಬಂದರು ಟ್ರಸ್ಟ್​ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 3 ಮೆಡಿಕಲ್ ಆಫೀಸರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಶೈಕ್ಷಣಿಕ ಅರ್ಹತೆ:ನವ ಮಂಗಳೂರು ಬಂದರು ಟ್ರಸ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಂಬಿಬಿಎಸ್ ಪೂರ್ಣಗೊಳಿಸಿರಬೇಕು. ವಯೋಮಿತಿ:ನವ ಮಂಗಳೂರು ಬಂದರು ಟ್ರಸ್ಟ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 65 ವರ್ಷ ಮೀರಿರಬಾರದು. ಮೀಸಲಾತಿ

ತಿಂಗಳಿಗೆ 60,000 ಸಂಬಳ ಕೊಡ್ತಾರೆ, ಈಗಲೇ ಅರ್ಜಿ ಸಲ್ಲಿಸಿ Read More »

ಕಾರವಾರದಲ್ಲಿ ಜಾಬ್ ಖಾಲಿ ಇದೆ! ತಿಂಗಳಿಗೆ 1.20 ಲಕ್ಷ ಸಂಬಳ ಕೊಡ್ತಾರೆ

ಸಮಗ್ರ ಉದ್ಯೋಗ: ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 24 ಸೀನಿಯರ್ ಅಸಿಸ್ಟೆಂಟ್ ಎಂಜಿನಿಯರ್​​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಮಾರ್ಚ್​ 20, 2024 ಅಂದರೆ ನಾಳೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆಫ್​​​ಲೈನ್ ಮೂಲಕ ಅಪ್ಲೈ ಮಾಡಬೇಕು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕಾರವಾರದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ವಿದ್ಯಾರ್ಹತೆ: ಭಾರತ್ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ

ಕಾರವಾರದಲ್ಲಿ ಜಾಬ್ ಖಾಲಿ ಇದೆ! ತಿಂಗಳಿಗೆ 1.20 ಲಕ್ಷ ಸಂಬಳ ಕೊಡ್ತಾರೆ Read More »

ಮಕ್ಕಳಿಗೆ ಬೆಂಕಿ ಹಚ್ಚಿ ತಾನು ಬೆಂಕಿಗೆ ಆಹುತಿಯಾದ ತಾಯಿ

ಸಮಗ್ರ ನ್ಯೂಸ್: ತಾಯಿಯೊಬ್ಬಳು ತನ್ನ ಇಬ್ಬರು ಮಕ್ಕಳ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊನೆಗೆ ತಾನೂ ಅಗ್ನಿ ಪ್ರವೇಶ ಮಾಡಿದ್ದ ಭಯಾನಕ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಲ್ಲ ಸಮುದ್ರ ಗ್ರಾಮದಲ್ಲಿ ನಡೆದಿದೆ. ಮಾರಕ್ಕ ಎಂಬ 24 ವರ್ಷದ ಮಹಿಳೆಯೇ ತನ್ನ ಇಬ್ಬರು ಪುಟ್ಟ ಕಂದಮ್ಮಗಳಾದ ನಯನ (4) ಮತ್ತು ಹರ್ಷ ವರ್ಧನ್ (2)ಗೆ ಪೆಟ್ರೋಲ್‌ ಹಾಕಿ ಬೆಂಕಿ ಹಚ್ಚಿ ತಾನೂ ಸಾವನ್ನಪ್ಪಿದವರು. ಮಕ್ಕಳನ್ನು ಮನೆಯಿಂದ ಹೊರಡಿಸಿ ಗ್ರಾಮದ ಹೊರವಲಯಕ್ಕೆ ಹೋಗಿ ಅಲ್ಲಿ ಈ

ಮಕ್ಕಳಿಗೆ ಬೆಂಕಿ ಹಚ್ಚಿ ತಾನು ಬೆಂಕಿಗೆ ಆಹುತಿಯಾದ ತಾಯಿ Read More »

ದೀಪ ಹಚ್ಚಲು ಹೋದ ವಿದ್ಯಾರ್ಥಿನಿ ಸಾವು| ಶಿಕ್ಷಕರು ಸಸ್ಪೆಂಡ್

ಸಮಗ್ರ ನ್ಯೂಸ್: ಶಾಲೆಯ ಸಮೀಪದ ದೇವಸ್ಥಾನವೊಂದರಲ್ಲಿ ದೀಪ ಹಚ್ಚಲು ಹೋದ ವಿದ್ಯಾರ್ಥಿನಿಯ ಬಟ್ಟೆಗೆ ಬೆಂಕಿ ತಗುಲಿ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ತುಮಕೂರು ಜಿಲ್ಲೆ ಶಿರಾ ತಾಲ್ಲೂಕು ಗೌಡಗೆರೆ ಹೋಬಳಿ ಮೇಳಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿನಿ ದೀಕ್ಷಾ ಮೃತಪಟ್ಟ ಬಾಲಕಿಯಾಗಿದ್ದಾಳೆ. ಶಾಲೆಯಲ್ಲಿ ಮಧ್ಯಾಹ್ನದ ಊಟದ ವಿರಾಮದ ವೇಳೆ ಆಕೆ ಶಾಲೆಯ ಪಕ್ಕದಲ್ಲೇ ಇರುವ ದೇವಾಲಯದಲ್ಲಿ ದೀಪ ಹಚ್ಚಲು ಹೋಗಿದ್ದಳು. ತನ್ನ ಜತೆಗೆ ತರಗತಿಯ ಇತರ ಕೆಲವು ಮಕ್ಕಳನ್ನು ಕೂಡಾ ಆಕೆ ಕರೆದುಕೊಂಡು ಹೋಗಿದ್ದಳು.

ದೀಪ ಹಚ್ಚಲು ಹೋದ ವಿದ್ಯಾರ್ಥಿನಿ ಸಾವು| ಶಿಕ್ಷಕರು ಸಸ್ಪೆಂಡ್ Read More »

ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ| ನಗರ್ತಪೇಟೆಯಲ್ಲಿ ಭುಗಿಲೆದ್ದ ಬಿಜೆಪಿ ಆಕ್ರೋಶ

ಸಮಗ್ರ ನ್ಯೂಸ್: ಬೆಂಗಳೂರಿನ ನಗರತ್​ಪೇಟೆಯಲ್ಲಿ ಮೊಬೈಲ್ ಅಂಗಡಿಯಲ್ಲಿ ಹನುಮಾನ್ ಚಾಲಿಸಾ ಹಾಡು ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆಗೆ ಸಂಬಂಧಿಸಿದಂತೆ ಇಂದು ನಗರದಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿದ್ದು, ನಗರತ್ ಪೇಟೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ಹಿಂದೂಪರ ಕಾರ್ಯಕರ್ತರು ನಗರತ್ ಪೇಟೆಗೆ ಸೇರಿದ್ದರು. ಈ ಮೆರವಣಿಗೆಗೆ ಬಿಜೆಪಿ ನಾಯಕರಾದ ಸುರೇಶ್ ಕುಮಾರ್ ಹಾಗೂ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ ಕೂಡ ಭಾಗಿಯಾಗಿದ್ದರು.ಈ ವೇಳೆ ತಳ್ಳಾಟ, ನೂಕಾಟ ನಡೆದಿದ್ದು, ಕಾರ್ಯಕರ್ತರು ಮತ್ತು​ ಪೊಲೀಸರ ನಡುವೆ ವಾಗ್ವಾದ

ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ| ನಗರ್ತಪೇಟೆಯಲ್ಲಿ ಭುಗಿಲೆದ್ದ ಬಿಜೆಪಿ ಆಕ್ರೋಶ Read More »

Whatsappನಲ್ಲಿ ನ್ಯೂ ಫೀಚರ್! ಸ್ಕ್ರೀನ್ ಶಾಟ್ಸ್ ಗೆ ಬಿತ್ತು ಕಡಿವಾಣ

ಬಳಕೆದಾರರ ಗೌಪ್ಯತೆಯನ್ನು ಕಾಪಾಡಲು ವಾಟ್ಸಾಪ್ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಮೂಲಕ ಯಾರೂ ಪ್ರೊಫೈಲ್ ಫೋಟೋಗಳನ್ನು ತೆಗೆಯುವಂತಿಲ್ಲ ಮತ್ತು ಸ್ಕ್ರೀನ್ ಶಾಟ್ ಗಳನ್ನು ತೆಗೆಯುವಂತಿಲ್ಲ ಮತ್ತು ಮಾರ್ಫ್ ಮಾಡುವಂತಿಲ್ಲ. WhatsApp ಸಾಮಾನ್ಯವಾಗಿ ಬಳಕೆದಾರರಿಗೆ ಫೋಟೋ ಅಥವಾ ವೀಡಿಯೊ ಸ್ಕ್ರೀನ್‌ಶಾಟ್‌ಗಳನ್ನು ವೀಕ್ಷಿಸಲು ಅನುಮತಿಸುವುದಿಲ್ಲ. ಈಗ ಅದೇ ವೈಶಿಷ್ಟ್ಯವು ಪ್ರೊಫೈಲ್ ಚಿತ್ರದಲ್ಲೂ ಬರಲಿದೆ. ಕೆಲವರು ನಿಮ್ಮ ಪ್ರೊಫೈಲ್ ಚಿತ್ರವನ್ನು ಉಳಿಸುತ್ತಾರೆ ಅಥವಾ ನಿಮಗೆ ತಿಳಿಯದೆ ಸ್ಕ್ರೀನ್‌ಶಾಟ್ ತೆಗೆದುಕೊಳ್ಳುತ್ತಾರೆ. ಚಾಟ್‌ಗಳು ಸ್ಕ್ರೀನ್‌ಶಾಟ್‌ಗಳನ್ನು ಸಹ ತೆಗೆದುಕೊಳ್ಳುತ್ತವೆ. WhatsApp ಇನ್ನು ಮುಂದೆ ಅಂತಹ ವಿಷಯಗಳನ್ನು

Whatsappನಲ್ಲಿ ನ್ಯೂ ಫೀಚರ್! ಸ್ಕ್ರೀನ್ ಶಾಟ್ಸ್ ಗೆ ಬಿತ್ತು ಕಡಿವಾಣ Read More »

ರಷ್ಯಾದ ರಾಯಭಾರಿಯಾಗಿ ವಿನಯ್ ಕುಮಾರ್ ನೇಮಕ

ಸಮಗ್ರ ನ್ಯೂಸ್: ಪ್ರಸ್ತುತ ಮಯಾನ್ಮಾರ್‍ನಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿನಯ್ ಕುಮಾರ್ ಅವರನ್ನು ರಷ್ಯಾಗೆ ಭಾರತದ ರಾಯಭಾರಿಯಾಗಿ ನೇಮಕ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, ಶೀಘ್ರದಲ್ಲಿಯೇ ರಷ್ಯಾದ ಭಾರತ ರಾಯಭಾರಿಯಾಗಿ ಅಧಿಕಾರವಹಿಸಿಕೊಳ್ಳಲಿದ್ದಾರೆ ಎಂದು ಸಚಿವಾಲಯ ಹೇಳಿದೆ. ಈ ಹಿಂದೆ ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿ ಪವನ್ ಕಪೂರ್ ಅವರು ಕಾರ್ಯನಿರ್ವಹಿಸುತ್ತಿದ್ದರು. ಭಾರತೀಯ ವಿದೇಶಾಂಗ ಸೇವೆಯ 1992 ರ ಬ್ಯಾಚ್ ಅಧಿಕಾರಿಯಾಗಿರುವ ವಿನಯ್ ಕುಮಾರ್, 2021ರ ಅಂತ್ಯದಿಂದ ಮ್ಯಾನ್ಮಾರ್‍ಗೆ ರಾಯಭಾರಿಯಾಗಿದ್ದರು.

ರಷ್ಯಾದ ರಾಯಭಾರಿಯಾಗಿ ವಿನಯ್ ಕುಮಾರ್ ನೇಮಕ Read More »