ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ/ 50ರಷ್ಟು ವಿಧದ `ನಂದಿನಿ’ ಐಸ್‍ಕ್ರೀಂ ಉತ್ಪನ್ನಗಳನ ಬಿಡುಗಡೆ
ಮಂಗಳೂರು: ಕರ್ನಾಟಕ ಹಾಲು ಮಹಾಮಂಡಳಿ ಉತ್ಪಾದಿಸುವ ಸುಮಾರು 50ರಷ್ಟು ವಿಧದ `ನಂದಿನಿ’ ಐಸ್‍ಕ್ರೀಂ ಉತ್ಪನ್ನಗಳನ್ನು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಐಸ್‍ಕ್ರೀಂ ಸಂಗ್ರಹದ ಕೋಲ್ಡ್ ಸ್ಟೋರೇಜ್ ಘಟಕ ಉದ್ಘಾಟನೆ ಹಾಗೂ ಐಸ್‍ಕ್ರೀಂ ಬಿಡುಗಡೆಯನ್ನು ನೆರವೇರಿಸಿದರು. ‘ಹಾಲು ಮಹಾಮಂಡಳವು ಒಕ್ಕೂಟವನ್ನು ಐಸ್‍ಕ್ರೀಂ ಮಾರಾಟಕ್ಕೆ ಸೂಪರ್ ಸ್ಟಾಕಿಸ್ಟ್ ಆಗಿ ನೇಮಿಸಿದೆ. ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರಾರಂಭಿಕ ಹಂತದಲ್ಲಿ ನಂದಿನಿ 157 ಶ್ರೇಣಿಯ ಐಸ್‍ಕ್ರೀಂಗಳಲ್ಲಿ 50 ಶ್ರೇಣಿಗಳನ್ನು










