ಮಂಗಳೂರು: ಗಾಂಜಾ ಮಾರಾಟ| ಇಬ್ಬರ ಬಂಧನ
ಸಮಗ್ರ ನ್ಯೂಸ್ : ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ವಶಕ್ಕೆ ಪಡೆದ ಘಟನೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತಿರುವೈಲ್ ಗ್ರಾಮದ ವಾಮಾಂಜೂರು ಗ್ರಾಮದಲ್ಲಿ ನಡೆದಿದೆ. ಆರೋಪಿಗಳನ್ನು ದೇರಳಕಟ್ಟೆ ಬೆಳ್ಮ ಗ್ರಾಮದ ಕನಕೂರು ಪದವು ಮನೆ ನಿವಾಸಿ ಅಶ್ರಫ್ ಯಾನೆ ಪೊಂಗ ಅಶ್ರಫ್ (30), ಅದೇ ಗ್ರಾಮದ ತಿಲಕನಗರ ನಿವಾಸಿ ಮೊಹಮ್ಮದ್ ಅಲ್ಫಾಜ್ (26) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 115 ಗ್ರಾಂ ಮೌಲ್ಯದ ಗಾಂಜಾ, ಮೊಬೈಲ್ ಫೋನ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮಂಗಳೂರು: ಗಾಂಜಾ ಮಾರಾಟ| ಇಬ್ಬರ ಬಂಧನ Read More »










