Editor

ಕಡಬ: ಅಪ್ರಾಪ್ತೆಯ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ ಇಬ್ಬರು ಅರೆಸ್ಟ್

ಸಮಗ್ರ ನ್ಯೂಸ್: ಅಪ್ರಾಪ್ತ ವಯಸ್ಕ ಬಾಲಕಿಯೋರ್ವಳ ಮೇಲೆ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ ಆರೋಪದಲ್ಲಿ ಕಡಬ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಡಬ ತಾಲೂಕಿನ ಮರ್ಧಾಳ ಸಮೀಪದ ನಿವಾಸಿಗಳಾದ ನಂದನ್‌ ಹಾಗೂ ಮಾಹಿಝ್ ಬಂಧಿತ ಆರೋಪಿಗಳು. ಆರೋಪಿಗಳನ್ನು ಸೋಮವಾರ ರಾತ್ರಿ ವಶಕ್ಕೆ ಪಡೆದಿದ್ದ ಪೊಲೀಸರು, ಪ್ರತ್ಯೇಕ 2 ಪೋಕ್ಸೋ ಪ್ರಕರಣ ದಾಖಲಿಸಿಕೊಂಡು ಮಂಗಳವಾರ ಸ್ಥಳ ಮಹಜರು ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕಡಬ: ಅಪ್ರಾಪ್ತೆಯ ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ ಇಬ್ಬರು ಅರೆಸ್ಟ್ Read More »

‘ಈಕೆಯನ್ನಲ್ಲವೇ ನಾವು ಬೀದಿಯಲ್ಲಿ ಎಳೆದಾಡಿದ್ದು?’| ವಿನೇಶ್ ಪೋಗಟ್ ಪೈನಲ್‌ಗೆ ಎಂಟ್ರಿಯಾದ ಬೆನ್ನಲ್ಲೇ ಭಜರಂಗ್ ಪೂನಿಯಾ ಟ್ವೀಟ್

ಸಮಗ್ರ ನ್ಯೂಸ್: ವಿನೇಶ್‌ ಪೋಗಟ್‌ ಪ್ಯಾರಿಸ್‌ ಒಲಿಂಪಿಕ್ಸ್‌ನ ಮಹಿಳೆಯ 50 ಕೆಜಿ ರೆಸ್ಲಿಂಗ್‌ನಲ್ಲಿ ಸೆಮಿಫೈನಲ್‌ಗೇರುವ ಮೂಲಕ ಪದಕದ ಭರವಸೆ ಮೂಡಿಸಿದ್ದಾರೆ. ಪ್ರೀ ಕ್ವಾರ್ಟರ್‌ ಫೈನಲ್‌ನಲ್ಲಿ ಆಕೆ ಹಾಲಿ ವಿಶ್ವಚಾಂಪಿಯನ್‌ಅನ್ನು ಸೋಲಿಸಿದ ರೀತಿಯೇ ಒಲಿಂಪಿಕ್ಸ್‌ ಚಿನ್ನ ಗೆಲುವಿಗಿಂತ ಮಹತ್ವದ್ದು ಎಂದು ಬಿಂಬಿಸಲಾಗುತ್ತದೆ. ವಿನೇಶ್‌ ಪೋಗಟ್‌ ಚಿನ್ನದ ಭರವಸೆಯನ್ನು ಮೂಡಿಸಿರುವ ನಡುವೆಯೇ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಭಜರಂಗ್‌ ಪೂನಿಯಾ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದಾರೆ. ರೆಸ್ಲಿಂಗ್‌ ಫೆಡರೇಷನ್‌ನಲ್ಲಿ ಬದಲಾವಣೆ ಆಗಬೇಕು. ಮಾಜಿ ಅಧ್ಯಕ್ಷರಾಗಿರುವ ಬ್ರಿಜ್‌ ಭೂಷಣ್‌ ಸಿಂಗ್‌ ವಿರುದ್ಧ

‘ಈಕೆಯನ್ನಲ್ಲವೇ ನಾವು ಬೀದಿಯಲ್ಲಿ ಎಳೆದಾಡಿದ್ದು?’| ವಿನೇಶ್ ಪೋಗಟ್ ಪೈನಲ್‌ಗೆ ಎಂಟ್ರಿಯಾದ ಬೆನ್ನಲ್ಲೇ ಭಜರಂಗ್ ಪೂನಿಯಾ ಟ್ವೀಟ್ Read More »

ಪುತ್ತೂರು: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಸಮಿತಿ ರಚನೆ

ಸಮಗ್ರ ನ್ಯೂಸ್: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸುಳ್ಯ ವಿಧಾನಸಭಾ ಕ್ಷೇತ್ರದ ಸವಣೂರು ಗ್ರಾಮ ಸಮಿತಿಯ ಆಂತರಿಕ ಚುನಾವಣೆಯು ಸವಣೂರಿನ ಅಂಬೇಡ್ಕರ್ ಭವನದಲ್ಲಿ ಆ.2 ರಂದು ನಡೆಯಿತು. ಸಮಿತಿಯ ಅಧ್ಯಕ್ಷರಾಗಿ ಇಕ್ಬಾಲ್ ಕೆನರ, ಕಾರ್ಯದರ್ಶಿಯಾಗಿ ರಫೀಕ್ ಪಣೆಮಜಲು ,ಕೋಶಾಧಿಕಾರಿಯಾಗಿ ಅಶ್ರಫ್ ಜನತಾ, ಉಪಾಧ್ಯಕ್ಷರಾಗಿ ಶಹೀರ್ ರಾಯಲ್, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ರಹಿಮಾನ್ ಸರ್ವೆ, ಸದಸ್ಯರಾಗಿ ಬಶೀರ್ ಕಾಯರ್ಗ, ಮಹಮ್ಮದ್ ಕುಞಿ ಬಾಬ ಆಯ್ಕೆಯಾದರು. ಪಕ್ಷದ ಚುನಾವಣಾ ಅಧಿಕಾರಿಯಾಗಿ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿಯಾದ ಉಸ್ಮಾನ್

ಪುತ್ತೂರು: ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದ ಸಮಿತಿ ರಚನೆ Read More »

ಕಾರವಾರ: ಏಕಾಏಕಿ ಕುಸಿದ ಕಾಳಿ ನದಿ ಸೇತುವೆ| ಸೇತುವೆಯ‌ ಮೇಲೆ ಸಂಚರಿಸುತ್ತಿದ್ದ ಲಾರಿ ನದಿಗೆ|

ಸಮಗ್ರ ನ್ಯೂಸ್: ಉತ್ತರ ಕನ್ನಡ ಜಿಲ್ಲೆಯ ಅಲ್ಲಲ್ಲಿ ನಾನಾ ಕಾರಣಗಳಿಂದ ಮಳೆಯ ಅವಾಂತರ, ಗುಡ್ಡ ಕುಸಿತ,ಅವಘಡಗಳು ಸಂಭವಿಸುತ್ತಲೇ ಇದ್ದು ಹೆದ್ದಾರಿ ಸಂಚಾರಿಗಳು ತಮ್ಮ ಜೀವವನ್ನು ಕೈಯಲ್ಲಿಯೇ ಹಿಡಿದು ಒಡಾಡುವಂತಾಗಿದೆ. ಕಾರವಾರ ನಗರ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಕಾಳಿ ನದಿ ಸೇತುವೆ, ರಾತ್ರಿ ವೇಳೆ ಆಕಸ್ಮಿಕವಾಗಿ ಕುಸಿದು ಬಿದ್ದಿದೆ. ಈ ವೇಳೆ ಗೋವಾದಿಂದ ಹುಬ್ಬಳ್ಳಿಗೆ ತೆರಳುತ್ತಿತ್ತು ಎನ್ನಲಾದ ತಮಿಳುನಾಡು ಮೂಲದ ಲಾರಿಯೊಂದು ನದಿಯಲ್ಲಿ ಬಿದ್ದಿದೆ. ಚಾಲಕ, ಲಾರಿಯ ಕ್ಯಾಬಿನ್ ಏರಿ ನಿಂತು ತನ್ನ ರಕ್ಷಣೆಗಾಗಿ

ಕಾರವಾರ: ಏಕಾಏಕಿ ಕುಸಿದ ಕಾಳಿ ನದಿ ಸೇತುವೆ| ಸೇತುವೆಯ‌ ಮೇಲೆ ಸಂಚರಿಸುತ್ತಿದ್ದ ಲಾರಿ ನದಿಗೆ| Read More »

ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್| ಫಲಾನುಭವಿಗಳ ಖಾತೆಗೆ ಈ ದಿನ ಬೀಳಲಿದೆ ಗೃಹಲಕ್ಷ್ಮಿ ಹಣ

ಸಮಗ್ರ ನ್ಯೂಸ್: ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಗಳಲ್ಲಿ ಗೃಹ ಲಕ್ಷ್ಮೀ ಯೋಜನೆಯಲ್ಲಿ ಕಳೆದ ಜೂನ್ ತಿಂಗಳಿನಿಂದ ಮಹಿಳೆಯರ ಖಾತೆಗೆ ಹಣ ಜಮಾ ಆಗಿರಲಿಲ್ಲ ಆದರೆ ಇದೀಗ ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಜೂನ್ ಜುಲೈ ತಿಂಗಳ ಗೃಹಲಕ್ಷ್ಮೀ ಹಣವನ್ನು ಇಂದೇ ಬಿಡುಗಡೆ ಮಾಡುತ್ತೇವೆ. ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳ ಖಾತೆಗೆ ಇಂದಿನಿಂದ (ಆ.08) ಹಣ ಜಮಾವಣೆ ಆಗುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಜನಾಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ

ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್| ಫಲಾನುಭವಿಗಳ ಖಾತೆಗೆ ಈ ದಿನ ಬೀಳಲಿದೆ ಗೃಹಲಕ್ಷ್ಮಿ ಹಣ Read More »

ರಾಜಧಾನಿಯಲ್ಲಿ ಮದ್ಯ ಮಾರಾಟದ ಅವಧಿ ವಿಸ್ತರಣೆ/ ರಾತ್ರಿ 1 ಗಂಟೆವರೆಗೆ ಸಿಗುತ್ತೆ ಮದ್ಯ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಇನ್ಮುಂದೆ ಹೊಟೇಲ್‌, ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳ ವ್ಯಾಪಾರ- ವಹಿವಾಟು ಅವಧಿಯನ್ನು ವಿಸ್ತರಿಸಲು ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹೊಟೇಲ್‌ ಮಾಲೀಕರ ಸಂಘದ ಮನವಿ ಪುರಸ್ಕರಿಸಿರುವ ಸರ್ಕಾರ, ಬೆಳಗ್ಗೆ 9 ರಿಂದ ರಾತ್ರಿ 1 ಗಂಟೆವರೆಗೆ ವ್ಯಾಪಾರ-ವಹಿವಾಟು ನಡೆಸಲು ಅನುಮತಿ ನೀಡಿದೆ. ಈ ಬಗ್ಗೆ ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಲಕ್ಷ್ಮೀ ಸಾಗ‌ರ್ ಎನ್‌.ಕೆ. ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ ಸಿಎಲ್ 4, ಸಿಎಲ್ 6, ಸಿಎಲ್ 7,

ರಾಜಧಾನಿಯಲ್ಲಿ ಮದ್ಯ ಮಾರಾಟದ ಅವಧಿ ವಿಸ್ತರಣೆ/ ರಾತ್ರಿ 1 ಗಂಟೆವರೆಗೆ ಸಿಗುತ್ತೆ ಮದ್ಯ Read More »

ಎಡಕುಮೇರಿಯಲ್ಲಿ ಭೂಕುಸಿತ/ ಆಗಸ್ಟ್ 8 ರವರೆಗೆ ಬೆಂಗಳೂರು-ಕಾರವಾರ ರೈಲು ಸಂಚಾರ ಸ್ಥಗಿತ

ಸಮಗ್ರ ನ್ಯೂಸ್: ಭಾರೀ ಮಳೆ ಸುರಿಯುತ್ತಿರುವ ಪಶ್ಚಿಮ ಘಟ್ಟ ಭಾಗದ ಎಡಕುಮೇರಿ ಕಡಗರವಳ್ಳಿ ರೈಲು ಮಾರ್ಗದಲ್ಲಿ ಭೂಕುಸಿತ ಉಂಟಾಗಿದ್ದರಿಂದ ರೈಲು ಹಳಿಗಳ ಮೇಲೆ ಮಣ್ಣು ಕುಸಿದ ಕಾರಣ ಕಾರವಾರ ಹಾಗೂ ಬೆಂಗಳೂರು ನಡುವೆ ರೈಲು ಸಂಚಾರಕ್ಕೆ ತಡೆಯಾಗಿದೆ. ದುರಸ್ತಿ ಕಾರ್ಯಗಳು ನಡೆಯುತ್ತಿರುವ ಹಿನ್ನಲೆಯಲ್ಲಿ ಕೊಂಕಣ ರೈಲು ಮಾರ್ಗದಲ್ಲಿ ಕಾರವಾರ ಹಾಗೂ ಬೆಂಗಳೂರು ನಡುವಿನ ಎಲ್ಲಾ ರೈಲುಗಳ ಸಂಚಾರವನ್ನು ಆಗಸ್ಟ್ 8ರವರೆಗೆ ರದ್ದುಪಡಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಎಡಕುಮೇರಿಯಲ್ಲಿ ಭೂಕುಸಿತ/ ಆಗಸ್ಟ್ 8 ರವರೆಗೆ ಬೆಂಗಳೂರು-ಕಾರವಾರ ರೈಲು ಸಂಚಾರ ಸ್ಥಗಿತ Read More »

ಮಂಗಳೂರು: ಹೋಂ‌‌ ಸ್ಟೇ ದಾಳಿ ಪ್ರಕರಣದ ತೀರ್ಪು ಪ್ರಕಟ| 11 ವರ್ಷಗಳ ಬಳಿಕ ಪ್ರಕರಣ ಖುಲಾಸೆ

ಸಮಗ್ರ ನ್ಯೂಸ್: ದೇಶಾದ್ಯಂತ ಸುದ್ದಿ ಮಾಡಿದ್ದ 2012ರ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಮಹತ್ವದ ತೀರ್ಪನ್ನು ನ್ಯಾಯಾಲಯ ಮಂಗಳವಾರ (ಆ.6) ಪ್ರಕಟಿಸಿದೆ. ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದ್ದು ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ. ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಆದೇಶ ಹೊರಡಿಸಿದ್ದಾರೆ. 2009ರ ಪಬ್ ದಾಳಿ ನಂತರ 2012ರಲ್ಲಿ ನಡೆದ ಹೋಂ ಸ್ಟೇ ದಾಳಿಯೂ ಬಾರಿ ಸುದ್ದಿಯಾಗಿತ್ತು. ಹುಟ್ಟುಹಬ್ಬ ಆಚರಿಸುತ್ತಿದ್ದ ವೇಳೆ ಈ ದಾಳಿ

ಮಂಗಳೂರು: ಹೋಂ‌‌ ಸ್ಟೇ ದಾಳಿ ಪ್ರಕರಣದ ತೀರ್ಪು ಪ್ರಕಟ| 11 ವರ್ಷಗಳ ಬಳಿಕ ಪ್ರಕರಣ ಖುಲಾಸೆ Read More »

ಮಂಗಳೂರು: ಬಿಜೈನಿಂದ‌ ಕಾಣೆಯಾಗಿದ್ದ ಹುಡುಗಿ ಕಾರ್ಕಳದ ಯುವಕನ ಮನೆಯಲ್ಲಿ ಪತ್ತೆ| ಮಕ್ಕಳ ಕೈಗೆ ಮೊಬೈಲ್ ಕೊಟ್ರೆ‌ ಹೀಗೆಲ್ಲಾ ಆಗುತ್ತೆ ಜೋಪಾನ…

ಸಮಗ್ರ ನ್ಯೂಸ್: ಬಿಜೈನ ನಿವಾಸಿಯಾಗಿರುವ 18 ವರ್ಷದ ಯುವತಿ ಸಿಮ್ ಇಲ್ಲದ ಮೊಬೈಲ್ ನೊಂದಿಗೆ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಯುವತಿಯನ್ನು ಕಾರ್ಕಳದಲ್ಲಿ ಪತ್ತೆ ಹಚ್ಚಿದ್ದಾರೆ. ಜುಲೈ 30 ರಂದು ಯುವತಿ ಮನೆಯಿಂದ ಯಾರಿಗೂ ಹೇಳದೆ ನಾಪತ್ತೆಯಾಗಿದ್ದಳು. ಈ ವೇಳೆ ಸಿಮ್ ಇಲ್ಲದ ಮೊಬೈಲ್ ನ್ನು ತೆಗೆದುಕೊಂಡು ಹೋಗಿದ್ದಳು. ಈ ಕುರಿತಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ. ತನಿಖೆ ಕೈಗೊಂಡ ಬರ್ಕೆ ಪೊಲೀಸ್ ಇನ್ಸ್ಪೆಕ್ಟರ್ ತಂಡ, CC TV ದೃಶ್ಯಾವಳಿಗಳನ್ನು ಆಧರಿಸಿ

ಮಂಗಳೂರು: ಬಿಜೈನಿಂದ‌ ಕಾಣೆಯಾಗಿದ್ದ ಹುಡುಗಿ ಕಾರ್ಕಳದ ಯುವಕನ ಮನೆಯಲ್ಲಿ ಪತ್ತೆ| ಮಕ್ಕಳ ಕೈಗೆ ಮೊಬೈಲ್ ಕೊಟ್ರೆ‌ ಹೀಗೆಲ್ಲಾ ಆಗುತ್ತೆ ಜೋಪಾನ… Read More »

ಧರ್ಮಸ್ಥಳಕ್ಕೆ ಭೇಟಿ ನೀಡಿದ ನಟ ಯಶ್ ಕುಟುಂಬ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳಕ್ಕೆ ಇಂದು ನಟ ಯಶ್ ಅವರು ಭೇಟಿ ನೀಡಿದ್ದಾರೆ. ‘ಟಾಕ್ಸಿಕ್’ ಸಿನಿಮಾದ ಕೆಲಸಗಳು ಶುರುವಾಗುವುದಕ್ಕೂ ಮೊದಲು ಅವರು ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ. ಇದರ ಜೊತೆಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಯಶ್ ಅವರು ಪಂಚೆ ಉಟ್ಟು ಮಂಗಳೂರು ವಿಮಾನ ನಿಲ್ದಾಣದಿಂದ ಹೊರಗೆ ಬರುತ್ತಿರುವ ವಿಡಿಯೋ ವೈರಲ್ ಆಗಿದೆ. ಆ ಬಳಿಕ

ಧರ್ಮಸ್ಥಳಕ್ಕೆ ಭೇಟಿ ನೀಡಿದ ನಟ ಯಶ್ ಕುಟುಂಬ Read More »