ನೇಪಾಳ ಪ್ರವಾಹ| ದಿನದಿನವಹ ಏರುತ್ತಿರುವ ಸಾವಿನ ಲೆಕ್ಕ

ಸಮಗ್ರ ನ್ಯೂಸ್: ನೇಪಾಳದಲ್ಲಿ ಸಂಭವಿಸಿದ ಹಠಾತ್‌ ಪ್ರವಾಹದಿಂದ ಮೃತಪಟ್ಟವರ ಸಂಖ್ಯೆ ಶನಿವಾರ 675ಕ್ಕೆ ಏರಿಕೆಯಾಗಿದ್ದು, ರಕ್ಷಣಾ ತಂಡಗಳು ಸಮರೋಪಾದಿಯಲ್ಲಿ ಶೋಧ ಮತ್ತು ಪರಿಹಾರ ಕಾರ್ಯಗಳನ್ನು ಮುಂದುವರಿಸಿವೆ. ಅಲ್ಲದೆ, ಚೀನಾ ಭಾಗದಲ್ಲಿಯೂ ಏಳು ಜನ ಮೃತಪಟ್ಟಿದ್ದಾರೆ.

. Ad Widget . Ad Widget . Ad Widget .

ಇನ್ನೂ 2,426 ಮಂದಿ ನಾಪತ್ತೆಯಾಗಿದ್ದಾರೆ. ಇಲ್ಲಿಯವರೆಗೆ ಸುಮಾರು 2,465 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಮತ್ತೊಂದೆಡೆ, ಭೋಟೆ ಕೋಶಿ ನದಿಯಲ್ಲಿ ನೀರಿನ ಮಟ್ಟ ಏರುತ್ತಿದ್ದು ಮತ್ತೊಂದು ಪ್ರವಾಹದ ಭೀತಿಯೂ ಆವರಿಸಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ನಾಪತ್ತೆ ಆದವರಲ್ಲಿ 517 ವಿದೇಶಿಯರು ಮತ್ತು ಜಲವಿದ್ಯುತ್‌ ಯೋಜನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 933 ಕಾರ್ಮಿಕರು ಸೇರಿದ್ದಾರೆ. ಅಲ್ಲದೆ 45 ಸೈನಿಕರು, 40 ಪೊಲೀಸ್‌ ಅಧಿಕಾರಿಗಳು, 19 ವಲಸೆ ಮತ್ತು ಕಸ್ಟಮ್ಸ್‌ ಅಧಿಕಾರಿಗಳೂ ನಾಪತ್ತೆಯಾಗಿದ್ದಾರೆ.

ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ 5,000ಕ್ಕೂ ಹೆಚ್ಚು ಸೇನಾ ಸಿಬ್ಬಂದಿ ಸೇರಿದಂತೆ 11,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನೇಪಾಳ ನಿಯೋಜಿಸಿದೆ.

ಇಲ್ಲಿಯವರೆಗೆ 163 ವಿದೇಶಿಯರು ಸೇರಿದಂತೆ ಒಟ್ಟು 2,465 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ನೇಪಾಳ ಸೇನೆಯ ಸಾರ್ವಜನಿಕ ಸಂಪರ್ಕ ವಿಭಾಗ ಮಾಹಿತಿ ನೀಡಿದೆ. ರಸುವಾ ಮತ್ತು ತ್ರಿಶೂಲಿಯಲ್ಲಿನ ವಿವಿಧ ಜಲವಿದ್ಯುತ್‌ ಯೋಜನೆಗಳ ಸುರಂಗಗಳಿಂದ 191 ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ.

ವಿದೇಶಿಯರ ಪೈಕಿ 113 ಭಾರತೀಯರು, 26 ಚೀನೀಯರು, ದಕ್ಷಿಣ ಕೊರಿಯಾದ 15 ಮಂದಿ, ಜರ್ಮನಿಯ ನಾಲ್ವರು, ಇಟಲಿ, ಅಮೆರಿಕದ ತಲಾ ಇಬ್ಬರು ಮತ್ತು ಒಮನ್‌ನ ಒಬ್ಬ ಪ್ರಜೆಯನ್ನು ಸ್ಥಳಾಂತರಿಸಲಾಗಿದೆ ಎಂದು ಅದು ತಿಳಿಸಿದೆ.

ಒಟ್ಟು 2,265 ಜನರನ್ನು ಹೆಲಿಕಾಪ್ಟರ್‌ಗಳ ಮೂಲಕ ಮತ್ತು 200 ಮಂದಿಯನ್ನು ಭೂಮಾರ್ಗದ ಮೂಲಕ ಸ್ಥಳಾಂತರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಧುಂಚೆ ಮತ್ತು ತ್ರಿಶೂಲಿಯಲ್ಲಿ ಸ್ಥಾಪಿಸಲಾಗಿರುವ ತುರ್ತು ಆರೋಗ್ಯ ಕೇಂದ್ರಗಳಲ್ಲಿ 1,706 ಮಂದಿಗೆ ವೈದ್ಯಕೀಯ ನೆರವು ನೀಡಲಾಗಿದೆ.

Leave a Comment

Your email address will not be published. Required fields are marked *