ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ ಭಾರತ| ಸ್ಪೇನ್ ವಿರುದ್ಧ ಭರ್ಜರಿ ಗೆಲುವು

ಸಮಗ್ರ ನ್ಯೂಸ್: ಒಲಿಂಪಿಕ್ಸ್ ನಲ್ಲಿ ಗುರುವಾರ ನಡೆದ ಪ್ಲೇ ಆಫ್ ಪಂದ್ಯದಲ್ಲಿ ಸ್ಪೇನ್ ತಂಡವನ್ನು 2-1 ಅಂಕಗಳಿಂದ ಸೋಲಿಸಿ ಭಾರತ ಹಾಕಿ ತಂಡವು ಕಂಚಿನ ಪದಕಕ್ಕೆ ಕೊರಳೊಡ್ಡಿತು.

. Ad Widget . Ad Widget . Ad Widget .

ಸ್ಪೇನ್ ನಾಯಕ ಮಾರ್ಕ್ ಮಿರಾಲ್ಲೆಸ್ ಅವರು ಮೊದಲು ಗೋಲ್ ಬಾರಿಸುವ ಮೂಲಕ ಸ್ಪೇನ್ ಗೆ ಮುನ್ನಡೆ ತಂದು ಕೊಟ್ಟರು. ಆ ಬಳಿಕ ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲುಗಳನ್ನು ಬಾರಿಸಿ ಭಾರತಕ್ಕೆ ಮತ್ತೊಂದು ಕಂಚಿನ ಪದಕವನ್ನು ತಂದುಕೊಟ್ಟರು.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವು ಕಂಚಿನ ಪದಕ ಜಯಿಸಿತ್ತು. ಈಗ ಟೊಕಿಯೊದ ಸಾಧನೆಯನ್ನು ಮತ್ತೆ ಪುನರಾವರ್ತಿಸಿದೆ. ಇದರೊಂದಿಗೆ ಹಾಕಿ ದಿಗ್ಗಜ ಗೋಲ್‌ ಕೀಪರ್ ಪಿ.ಆರ್. ಶ್ರೀಜೇಶ್ ಅವರು ಗೆಲುವಿನೊಂದಿಗೆ ಅಂತರರಾಷ್ಟ್ರೀಯ ಹಾಕಿಗೆ ವಿದಾಯ ಹೇಳಿದ್ದಾರೆ.

ಒಲಿಂಪಿಕ್ಸ್‌ ನ ಹಾಕಿ ಸೆಮಿಫೈನಲ್‌ನಲ್ಲಿ ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತ ತಂಡವು ಜರ್ಮನಿಯ ವಿರುದ್ಧ ಸೋಲನುಭವಿಸಿತ್ತು.

ಒಲಿಂಪಿಕ್ಸ್ ನಲ್ಲಿ ಭಾರತ ಪುರುಷರ ಹಾಕಿ ತಂಡವು ಅತ್ಯಂತ ಯಶಸ್ವಿ ತಂಡವಾಗಿದ್ದು, ಈವರೆಗೆ 1928, 1932, 1936, 1948, 1952, 1956, 1964, 1980ರಲ್ಲಿ ಒಟ್ಟು 8 ಬಾರಿ ಚಿನ್ನದ ಪದಕ ಜಯಿಸಿದೆ.

ಹಾಕಿಯಲ್ಲಿ ಪಡೆದ ಕಂಚಿನ ಪದಕಗಳೊಂದಿಗೆ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾರತ ತಂಡವು ಪಡೆದ ಪದಕಗಳ ಸಂಖ್ಯೆ 4 ಆಗಿದೆ. ಇದುವರೆಗೆ ಭಾರತ ಪಡೆದ ಎಲ್ಲಾ 4 ಪದಕಗಳೂ, ಕಂಚಿನ ಪದಕಗಳಾಗಿವೆ.

Leave a Comment

Your email address will not be published. Required fields are marked *