ಚಿಲ್ಲರೆ ಕೊಡದೆ ಪ್ರಯಾಣಿಕನ ಮೇಲೆ ಹಲ್ಲೆ.. ಕಂಡಕ್ಟರ್ ಸಸ್ಪೆಂಡ್

ಸಮಗ್ರ ನ್ಯೂಸ್: ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರೊಬ್ಬರಿಗೆ 5 ರೂ. ಚಿಲ್ಲರೆ ಕೊಡದೆ, ಅವರ ಮೇಲೆಯೇ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ
ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಬಿಎಂಟಿಸಿ ಬಸ್‌ ಕಂಡಕ್ಟರ್‌ನನ್ನು ಅಮಾನತುಗೊಳಿಸಿದೆ. ಈ ಕುರಿತು ಬಿಎಂಟಿಸಿ ಆದೇಶ ಹೊರಡಿಸಿ ಪ್ರಕಟಣೆ ತಿಳಿಸಿದೆ.

. Ad Widget . Ad Widget . Ad Widget .

ಬಿಎಂಟಿಸಿ ಬಸ್‌ನಲ್ಲಿ ಅಭಿನವ್‌ ರಾಜ್‌ ಎಂಬ ಯುವಕ ಪ್ರಯಾಣಿಸುತ್ತಿದ್ದರು. ಅವರು 15 ರೂ. ಟಿಕೆಟ್‌ಗೆ 20 ರೂ. ನೀಡಿದ್ದರು. 5 ರೂ. ಚಿಲ್ಲರೆ ವಾಪಸ್‌ ಕೇಳಿದಾಗ ಪ್ರಯಾಣಿಕನ ಮೇಲೆ ಕಂಡಕ್ಟರ್‌ ರೇಗಾಡಿದ್ದಾರೆ. ಆಗ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಇದೇ ಕೋಪದಲ್ಲಿ ಕಂಡಕ್ಟರ್‌ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ವಿಡಿಯೊ ಮಾಡಿಕೊಂಡಿದ್ದ ಅಭಿನವ್‌ ರಾಜ್‌, ಬಿಎಂಟಿಸಿಗೆ ದೂರು ನೀಡಿದ್ದರು. ಅದರಂತೆ, ಅಮಾನತು ಮಾಡಲಾಗಿದೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಬೆಂಗಳೂರು ಮಹಾನಗರ ಸಾರಿಗೆ ಘಟಕ-32ರ ಬಸ್‌ನ ನಿರ್ವಾಹಕರು ಆಗಸ್ಟ್‌ 6ರಂದು ರಾತ್ರಿ ಸುಮಾರು 9..40 ಸುಮಾರಿಗೆ ಕರ್ತವ್ಯ ನಿರ್ವಹಿಸುವಾಗ ಅಭಿನವ್‌ ರಾಜ್‌ ಎಂಬ ಪ್ರಯಾಣಿಕರು 5 ರೂ. ಚಿಲ್ಲರೆ ವಾಪಸ್‌ ಕೊಡಿ ಎಂಬುದಾಗಿ ಕೇಳಿದ್ದಾರೆ. ಇದಕ್ಕೆ ನಿರ್ವಾಹಕರು ಪ್ರಯಾಣಿಕರ ಎದುರು ಅನುಚಿತವಾಗಿ ವರ್ತನೆ ತೋರಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಕೂಡಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ” ಎಂದು ಬಿಎಂಟಿಸಿ ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *