ವಿನೇಶ್ ಪೋಗಟ್ ಗೆ ಮತ್ತೊಂದು ಅವಕಾಶ| ಬೆಳ್ಳಿ ಪದಕ ಗೆಲ್ಲುವ ಸಾಧ್ಯತೆ

ಸಮಗ್ರ ನ್ಯೂಸ್: ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ 50 ಕೆಜಿ ವಿಭಾಗದ ಅಂತಿಮ ಪಂದ್ಯದಿಂದ ಅನರ್ಹಗೊಂಡ ನಂತರ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (CAS) ಮೇಲ್ಮನವಿ ಸಲ್ಲಿಸಿದ್ದರು. ಅವರು ನ್ಯಾಯಾಲಯಕ್ಕೆ ಎರಡು ಮನವಿಗಳನ್ನ ಬರೆದಿದ್ದರು.

Ad Widget ... ..

ಒಂದು, ಫೋಗಟ್’ರನ್ನ ಮತ್ತೆ ತೂಕ ಮಾಡಿ ಆಡಲು ಅವಕಾಶ ನೀಡುವುದು. ಇದನ್ನ ನ್ಯಾಯಾಲಯವು ತಿರಸ್ಕರಿಸಿತು ಮತ್ತು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಮತ್ತು ಅಂತಿಮ ಚಿನ್ನದ ಪದಕದ ಪಂದ್ಯವನ್ನ ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ಮತ್ತು ಯುಎಸ್‌ಎಯ ಸಾರಾ ಆನ್ ಹಿಲ್ಡೆಬ್ರಾಂಟ್ ನಡುವೆ ಆಡಲಾಯಿತು ಎಂದು ಹೇಳಿದೆ.

Ad Widget

ಇನ್ನೊಂದು ಮನವಿಯ ಪ್ರಕಾರ ವಿನೇಶ್ ಫೋಗಟ್ ಅವರು 50 ಕೆಜಿ ಕುಸ್ತಿ ವಿಭಾಗದಲ್ಲಿ ಒಲಿಂಪಿಕ್ ಜಂಟಿ ಬೆಳ್ಳಿ ಪದಕವನ್ನ ಕೋರಿ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ಸ್ (CAS)ಗೆ ಅರ್ಜಿ ಸಲ್ಲಿಸಿದ್ದರು. ಅಂದಹಾಗೆ, ಚಿನ್ನದ ಪದಕ ಪಂದ್ಯದ ದಿನವಾದ ಬುಧವಾರ ವಿನೇಶ್ ಅವರನ್ನು ಅನರ್ಹಗೊಳಿಸಲಾಯಿತು.

ತನ್ನ ಎರಡನೇ ಮನವಿಯಲ್ಲಿ, ಪೋಗಟ್ ಬೆಳ್ಳಿ ಪದಕಕ್ಕೆ ಅರ್ಹಳು. ಯಾಕೆಂದರೆ, ಆಕೆ ಆ ದಿನವೇ ಅದನ್ನು ಗಳಿಸಿದ್ದರು, ಮತ್ತು ಅವರ ತೂಕವೂ ಉತ್ತಮವಾಗಿತ್ತು ಎಂದು ಹೇಳಿದರು. ಸಿಎಎಸ್ ತೀರ್ಪು ಫೋಗಟ್ ಪರವಾಗಿ ಬಂದರೆ, ಐಒಸಿ ಅದಕ್ಕೆ ಬದ್ಧವಾಗಿರಬೇಕು. ಬೆಳ್ಳಿಗಾಗಿ ಫೋಗಟ್ ಅವರ ಮನವಿಯ ಬಗ್ಗೆ ಸಿಎಎಸ್’ನ ಅಂತಿಮ ತೀರ್ಪು ಶುಕ್ರವಾರ ಬೆಳಿಗ್ಗೆ 11: 30ರ ಸುಮಾರಿಗೆ ಬರಲಿದೆ.

Leave a Comment

Your email address will not be published. Required fields are marked *