Editor

ಕೋವಿಡ್ ತಪಾಸಣೆ ಹೆಚ್ಚಿಸದಿದ್ದರೆ ಆರೋಗ್ಯಾಧಿಕಾರಿಗಳ ಮೇಲೆ ಕ್ರಮ- ಸಚಿವ ಅಂಗಾರ ಎಚ್ಚರಿಕೆ

ಮಂಗಳೂರು : ಕೋವಿಡ್-19 ಸೋಂಕು ಹೆಚ್ಚು ಕಂಡುಬರುವ ಪ್ರದೇಶಗಳಲ್ಲಿ ಸಂಬಂಧಿಸಿದ ಆಯಾ ತಾಲೂಕುಗಳ ಆರೋಗ್ಯಾಧಿಕಾರಿಗಳು ಹೆಚ್ಚಿನ ತಪಾಸಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಈ ನಿರ್ದೇಶನವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಅವರು ತಿಳಿಸಿದರು. ಸೆ. 6ರ ಸೋಮವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೋವಿಡ್-19 ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈಗಾಗಲೇ ಜಾರಿಯಲ್ಲಿರುವ ನಿರ್ಬಂಧಗಳ ಕುರಿತು ಚರ್ಚಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ […]

ಕೋವಿಡ್ ತಪಾಸಣೆ ಹೆಚ್ಚಿಸದಿದ್ದರೆ ಆರೋಗ್ಯಾಧಿಕಾರಿಗಳ ಮೇಲೆ ಕ್ರಮ- ಸಚಿವ ಅಂಗಾರ ಎಚ್ಚರಿಕೆ Read More »

ಟೆಸ್ಟ್ ಕ್ರಿಕೆಟ್ | ಮುನ್ನಡೆ ಕಾಯ್ದುಕೊಂಡ ಭಾರತ ತಂಡ, 157 ರನ್ ಗಳ ಭರ್ಜರಿ ಗೆಲುವು

ವೇಗ ಮತ್ತು ಸ್ಪಿನ್ ದಾಳಿಯ ಮೂಲಕ ಎದುರಾಳಿಗಳನ್ನು ಕಂಗೆಡಿಸಿದ ಭಾರತ ತಂಡ ಇಂಗ್ಲೆಂಡ್ ಎದುರಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 157 ರನ್‌ಗಳ ಗೆಲುವು ಸಾಧಿಸಿತು. ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಬಿಟ್ಟುಕೊಟ್ಟರೂ ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ ಭಾರತ ಮುಂದಿಟ್ಟ 368 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಆತಿಥೇಯ ತಂಡ 92.2 ಓವರ್‌ಗಳಲ್ಲಿ 210 ರನ್‌ಗಳಿಗೆ ಪತನಗೊಂಡಿತು. ಐದು ಪಂದ್ಯಗಳ ಸರಣಿಯಲ್ಲಿ ಭಾರತ 2-1 ಮುನ್ನಡೆ ಸಾಧಿಸಿತು. 147 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡು ಭೋಜನಕ್ಕೆ ತೆರಳಿದ

ಟೆಸ್ಟ್ ಕ್ರಿಕೆಟ್ | ಮುನ್ನಡೆ ಕಾಯ್ದುಕೊಂಡ ಭಾರತ ತಂಡ, 157 ರನ್ ಗಳ ಭರ್ಜರಿ ಗೆಲುವು Read More »

ದನದ ಕೊಟ್ಟಿಗೆಗೆ ನುಗ್ಗಿ ಲೈಂಗಿಕ ದೌರ್ಜನ್ಯ| ದನಗಳನ್ನೇ ಮಾರಾಟ ಮಾಡಿದ ರೈತರು…!?

ಕೊಲ್ಲಂ: ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಮಯ್ಯಾನಾಡ್​ನಲ್ಲಿ ಸುಮಾರು 20 ರೈತರು ವಿಚಿತ್ರವಾದ ಆರೋಪವೊಂದನ್ನು ಮಾಡಿದ್ದಾರೆ. ಆ ಊರಿನ ವ್ಯಕ್ತಿಯೊಬ್ಬ 2021ರ ಜನವರಿ ತಿಂಗಳಿನಿಂದ ತಾವು ಸಾಕಿರುವ ಹಸುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಹಸು ಸಾಕಾಣಿಕೆದಾರರು ಆರೋಪಿಸಿದ್ದಾರೆ. ಕಾಮುಕನ ಉಪಟಳ ತಾಳಲಾರದೆ ತಂಬಿ ಎಂಬ ರೈತ ತನ್ನ ಬಳಿಯಿದ್ದ 7 ಹಸುಗಳಲ್ಲಿ 4 ಹಸುಗಳನ್ನು ಮಾರಾಟ ಮಾಡಿದ್ದಾನೆ. ನನ್ನ ಕೊಟ್ಟಿಗೆಯಲ್ಲಿದ್ದ ಹಸುಗಳ ಮೇಲೆ ಜನವರಿಯಿಂದ 5 ಬಾರಿ ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು ಎಂದು ಆತ ಆರೋಪಿಸಿದ್ದಾನೆ.

ದನದ ಕೊಟ್ಟಿಗೆಗೆ ನುಗ್ಗಿ ಲೈಂಗಿಕ ದೌರ್ಜನ್ಯ| ದನಗಳನ್ನೇ ಮಾರಾಟ ಮಾಡಿದ ರೈತರು…!? Read More »

ಸೆ.7ರಿಂದ ಕುವೈತ್ – ಭಾರತ ವಿಮಾನ ಸಂಚಾರಕ್ಕೆ ಅನುಮತಿ

ನವದೆಹಲಿ: ಕುವೈತ್ ಏರ್ವೇಸ್ ಸೆಪ್ಟೆಂಬರ್ 7 ರಿಂದ ಹಲವಾರು ಭಾರತೀಯ ಸ್ಥಳಗಳಿಗೆ ನೇರ ವಿಮಾನಯಾನದ ಬುಕಿಂಗ್ ತೆರೆಯಲಿದೆ. ಚೆನ್ನೈ ಮತ್ತು ಮುಂಬೈನಿಂದ ವಿಮಾನಗಳು ಹೊರಡಲಿದ್ದು, ಕುವೈಟ್‌ಗೆ ಏಕಮುಖ ಟಿಕೆಟ್‌ಗಾಗಿ ದರ 590 ದಿನಾರ್ ನಿಂದ ಆರಂಭವಾಗುತ್ತದೆ. ಕೊಚ್ಚಿನ್ ಮತ್ತು ದೆಹಲಿಯಿಂದ ವಿಮಾನಗಳು ಕೂಡ ಇದೇ ಶ್ರೇಣಿಯಲ್ಲಿವೆ, ಸೆಪ್ಟೆಂಬರ್ 8 ಮತ್ತು 9 ರಂದು ವಿಮಾನ ಹಾರಾಟ ನಡೆಯಲಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್‌ನ ಕೋಟಾದ ಪ್ರಕಾರ ಭಾರತೀಯ ಸ್ಥಳಗಳಿಂದ ಒಟ್ಟು 768 ದೈನಂದಿನ ಆಗಮನಕ್ಕೆ ಭಾರತೀಯ

ಸೆ.7ರಿಂದ ಕುವೈತ್ – ಭಾರತ ವಿಮಾನ ಸಂಚಾರಕ್ಕೆ ಅನುಮತಿ Read More »

ಪಂಚಾಯತ್ ಗಳಲ್ಲಿ ‘ಸರ್’, ‘ಮೇಡಂ’ ಪದಬಳಕೆ ಸಲ್ಲದು – ಕೆಪಿಸಿಸಿ ಆದೇಶ

ತಿರುವನಂತಪುರಂ: ಕಾಂಗ್ರೆಸ್ ಅಧಿಕಾರದಲ್ಲಿರುವ ಕೇರಳದ ಯಾವ ಪಂಚಾಯತ್​ಗಳ ಕಾಂಗ್ರೆಸ್ ಕಚೇರಿಗಳಲ್ಲೂ ಸರ್ ಮತ್ತು ಮೇಡಂ ಎಂಬ ಪದಗಳನ್ನು ಬಳಸುವಂತಿಲ್ಲ ಎಂದು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಕೆ. ಸುಧಾಕರನ್ ಆದೇಶ ನೀಡಿದ್ದಾರೆ. ಕೇರಳ ರಾಜ್ಯದ ಪಲಕ್ಕಾಡ್ ಜಿಲ್ಲೆಯ ಮಥೂರ್ ಗ್ರಾಮ ಪಂಚಾಯತ್​ನಿಂದ ಆರಂಭವಾಗಿರುವ ಈ ಸಂಪ್ರದಾಯ ಕಾಂಗ್ರೆಸ್ ಅಧಿಕಾರದಲ್ಲಿರುವ ಕೇರಳದ ಎಲ್ಲ ಪಂಚಾಯತ್​ಗಳಿಗೂ ಅನ್ವಯವಾಗಲಿದೆ. ಈ ಮೊದಲು ಮಥೂರ್ ಗ್ರಾಮ ಪಂಚಾಯಿತಿಯಲ್ಲಿ ಮಾತ್ರ ಸರ್ ಮತ್ತು ಮೇಡಂ ಎಂದು ಕರೆಯುವುದನ್ನು ನಿಷೇಧಿಸಲಾಗಿತ್ತು. ಆದರೆ, ಕಾಂಗ್ರೆಸ್

ಪಂಚಾಯತ್ ಗಳಲ್ಲಿ ‘ಸರ್’, ‘ಮೇಡಂ’ ಪದಬಳಕೆ ಸಲ್ಲದು – ಕೆಪಿಸಿಸಿ ಆದೇಶ Read More »

ಜೋಕಾಲಿ ಬಿಗಿದು ಬಾಲಕ ಸಾವು

ಹಾಸನ: ಆಟವಾಡುತ್ತಿದ್ದಾಗ ಕುತ್ತಿಗೆಗೆ ಜೋಕಾಲಿ ಬಿಗಿದು ಬಾಲಕನೋರ್ವ ಸಾವನ್ನಪ್ಪಿದ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ತೆಂಡೆಕೆರೆ ಎಂಬಲ್ಲಿ ನಡೆದಿದೆ. ಗ್ರಾಮದ ಲೋಕೇಶ್​-ನೇತ್ರಾವತಿ ದಂಪತಿಯ ಪುತ್ರ ಮನೋಜ್ ಎಂಬ ಎಂಟರ ವಯಸ್ಸಿನ ಬಾಲಕ ಆಟ ಆಡುತ್ತಲೇ ಪ್ರಾಣ ಕಳೆದುಕೊಂಡ ದುರ್ದೈವಿ. ನಾಲ್ಕನೆಯ ತರಗತಿಯ ವಿದ್ಯಾರ್ಥಿ ಆಗಿದ್ದ ಈತ ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಜೋಕಾಲಿಯಲ್ಲಿ ಆಡಿದ್ದಾನೆ. ಈ ಸಂದರ್ಭದಲ್ಲಿ ಜೋಕಾಲಿ ಹಗ್ಗ ಉರುಳಾಗಿ ಈತ ಸಿಲುಕಿಕೊಂಡಿದ್ದಾನೆ. ಬಾಲಕ ಆಟ ಆಡುವ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ

ಜೋಕಾಲಿ ಬಿಗಿದು ಬಾಲಕ ಸಾವು Read More »

ಸುಳ್ಯ| ನಾಪತ್ತೆಯಾಗಿ ಎರಡು ದಿನ ಕಳೆದರೂ‌ ಪತ್ತೆಯಾಗದ ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ| ಸಾಲಬಾಧೆಯಿಂದ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾದರಾ ರಾಜೇಶ್ ಗುಂಡಿಗದ್ದೆ?

ಸುಳ್ಯ : ಬೆಳ್ಳಾರೆಯ ಉದ್ಯಮಿ ರಾಜೇಶ್ ಗುಂಡಿಗದ್ದೆ (47) ಯವರು ಸೆ. 4 ರಿಂದ ಮನೆಗೆ ಬಾರದೇ ನಾಪತ್ತೆಯಾಗಿರುವ ಬಗ್ಗೆ ಅವರ ಪತ್ನಿ ವಿನಯಶ್ರೀಯವರು ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎರಡು ದಿನ ಕಳೆದರೂ ಪತ್ತೆಯಾಗದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಸೆ. 5 ರಂದು ರಾಜೇಶ್ ಪತ್ನಿ ವಿನಯಶ್ರೀ ಅವರು ಠಾಣೆಗೆ ದೂರು ನೀಡಿದ್ದು, ಸುಳ್ಯ ಪೇಟೆಗೆ ಬರುವುದಾಗಿ ಹೇಳಿ ಹೋದವರು ಮನೆಗೆ ಬಾರದೆ, ಫೋನ್ ಸಂಪರ್ಕಕ್ಕೂ ಸಿಗದೆ ಕಾಣೆಯಾಗಿರುವುದಾಗಿ ಅದರಲ್ಲಿ ತಿಳಿಸಲಾಗಿದೆ.

ಸುಳ್ಯ| ನಾಪತ್ತೆಯಾಗಿ ಎರಡು ದಿನ ಕಳೆದರೂ‌ ಪತ್ತೆಯಾಗದ ರಬ್ಬರ್ ಉತ್ಪಾದಕರ ಸಂಘದ ಅಧ್ಯಕ್ಷ| ಸಾಲಬಾಧೆಯಿಂದ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾದರಾ ರಾಜೇಶ್ ಗುಂಡಿಗದ್ದೆ? Read More »

ಉಪ್ಪಿನಂಗಡಿ‌| ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಭೀಕರ ಅಪಘಾತ| ಯಮಸ್ವರೂಪಿಯಾದ ಲಾರಿ ಹಾಗೂ ಕಂಟೈನರ್| ಇಬ್ಬರು ದುರ್ಮರಣ

ಉಪ್ಪಿನಂಗಡಿ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಉಪ್ಪಿನಂಗಡಿ ಹಾಗೂ ನೆಲ್ಯಾಡಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಾಲಕ ಸೇರಿ‌ ಇಬ್ಬರು ದುರ್ಮರಣ ಹೊಂದಿದ್ದಾರೆ. ಉಪ್ಪಿನಂಗಡಿಯ ಬೈಪಾಸ್ ನಲ್ಲಿ ಬುಲೆಟ್ ಟ್ಯಾಂಕರ್ ವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬಾಲಕನೋರ್ವ ಸ್ಥಳದಲ್ಲೇ ಮೃತಪಟ್ಟ ಹಾಗೂ ಅವನ ತಾಯಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಅಪಘಾತವೂ ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಇದೇ ಹೆದ್ದಾರಿಯ ನೆಲ್ಯಾಡಿ ಸಮೀಪ ಲಾರಿ ಹಾಗೂ

ಉಪ್ಪಿನಂಗಡಿ‌| ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಭೀಕರ ಅಪಘಾತ| ಯಮಸ್ವರೂಪಿಯಾದ ಲಾರಿ ಹಾಗೂ ಕಂಟೈನರ್| ಇಬ್ಬರು ದುರ್ಮರಣ Read More »

ಬೆಳಗಾವಿ ಪಾಲಿಕೆ ಮೊದಲ ಬಾರಿಗೆ ಬಿಜೆಪಿ ತೆಕ್ಕೆಗೆ

ಬೆಳಗಾವಿ : ತೀವ್ರ ಕುತೂಹಲ ಮೂಡಿಸಿದ್ದ ಬೆಳಗಾವಿ ಮಹಾನಗರ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಈಗಾಗಲೇ 31 ವಾರ್ಡ್ ಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್‌ಗಳಿಗೆ ಬಿಜೆಪಿಯಿಂದ 55 ಅಭ್ಯರ್ಥಿಗಳು ಸ್ಪರ್ಧಿಸಿದ್ರೆ, ಕಾಂಗ್ರೆಸ್‌ನಿಂದ 45, ಜೆಡಿಎಸ್‌ನಿಂದ 11 ಹಾಗೂ ಎಂಇಎಸ್‌ನಿಂದ 21 ಮಂದಿ ಸ್ಪರ್ಧಿಸಿದ್ದಾರೆ . ಆಪ್‌, ಪಕ್ಷೇತರರು ಸೇರಿದಂತೆ ಒಟ್ಟು 217 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬೆಳಗಾವಿ ಮಹಾನಗರ ಪಾಲಿಕೆಯ 58 ವಾರ್ಡ್ ಗಳ ಪೈಕಿ ಬಿಜೆಪಿ ಸದ್ಯ

ಬೆಳಗಾವಿ ಪಾಲಿಕೆ ಮೊದಲ ಬಾರಿಗೆ ಬಿಜೆಪಿ ತೆಕ್ಕೆಗೆ Read More »

ಶಾಸಕ ಎನ್ ಮಹೇಶ್ ಗೆ ಪತ್ನಿ‌ ವಿಯೋಗ|

ಚಾಮರಾಜನಗರ: ಕೊಳ್ಳೇಗಾಲ ಶಾಸಕ ಎನ್.ಮಹೇಶ್‌ಗೆ ಪತ್ನಿ ವಿಯೋಗವಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ವಿಜಯಾ ಮಹೇಶ್(66) ತಡರಾತ್ರಿ 11ಗಂಟೆ ವೇಳೆಗೆ ನಿಧನರಾಗಿದ್ದಾರೆ. ಬೆಂಗಳೂರಿನ ಕನಕಪುರ ರಸ್ತೆಯ ರವಿಶಂಕರ್ ಗುರೂಜಿ ಆಶ್ರಮದ ಬಳಿ ಇರುವ ಕಾನ್ಶ್ ಫೌಂಡೇಶನ್‌ನಲ್ಲಿ ಶಾಸಕ ಎನ್.ಮಹೇಶ್‌ರ ಪತ್ನಿ ವಿಜಯಾ ಮಹೇಶ್ ಅಂತ್ಯಕ್ರಿಯೆ ನೆರವೇರಲಿದೆ. ಶಾಸಕ ಎನ್.ಮಹೇಶ್‌ ಮತ್ತು ವಿಜಯಾ ಇಬ್ಬರದ್ದು ಲವ್ ಕಂ ಅರೇಂಜ್ ಮ್ಯಾರೇಜ್. ಇವರಿಬ್ಬರು ಒಂದೇ ಕಡೆ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಪ್ರೀತಿ ಹುಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು. ಸುಮಾರು 37 ವರ್ಷಗಳ ಸುಖಕರ ದಾಂಪತ್ಯ

ಶಾಸಕ ಎನ್ ಮಹೇಶ್ ಗೆ ಪತ್ನಿ‌ ವಿಯೋಗ| Read More »