Editor

ಮೇಯಲು ಬಿಟ್ಟ ಎಮ್ಮೆಗೆ ಗುಂಡಿಕ್ಕಿದ ಕಿಡಿಗೇಡಿಗಳು| ಮತ್ತೊಂದು ಅಮಾನವೀಯ ಘಟನೆಗೆ ಸಾಕ್ಷಿಯಾದ ಕರಾವಳಿ|

ಬೆಳ್ತಂಗಡಿ : ಮೇಯಲು ಬಿಟ್ಟಿದ್ದ ಎಮ್ಮೆಯನ್ನು ಕಿಡಿಗೇಡಿಗಳು ಗುಂಡುಹಾರಿಸಿ ಕೊಂದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ಗ್ರಾಮದ ಅರಸಿನಮಕ್ಕಿಯ ಫಲಸ್ತಡ್ಕ ಎಂಬಲ್ಲಿ ನಡೆದಿದೆ. ಹೊಸ್ತೋಟ ವಾಳ್ಯದ ಅರೆಕ್ಕಲ್ ಮಹಾದೇವ ಭಟ್ ಎಂಬವರ ಹಾಲು ಕರೆಯುವ ಸುಮಾರು 10 ವರ್ಷ ಪ್ರಾಯದ ಎಮ್ಮೆಯನ್ನು ಮನೆ ಪರಿಸರದಲ್ಲಿ ಮೇಯಲು ಬಿಟ್ಟಿದ್ದರು. ಎಮ್ಮೆ ತಡರಾತ್ರಿವರೆಗೂ ಮನೆಗೆ ಬಾರದ ಕಾರಣ ಹುಡುಕಾಟ ನಡೆಸಿದಾಗ ಸಮೀಪದ ಫಲಸ್ತಡ್ಕ ಎಂಬಲ್ಲಿ ಮಂಗಳವಾರ ಮೃತದೇಹ ಪತ್ತೆಯಾಗಿದೆ. ಎಮ್ಮೆಯ ಮೈಮೇಲೆ ಗುಂಡಿನ ಗಾಯಗಳು ಕಂಡುಬಂದಿದ್ದು ಬೇಟೆಗಾರರ ಗುಂಡೇಟಿಗೆ ಬಲಿಯಾಗಿದೆಯೇ […]

ಮೇಯಲು ಬಿಟ್ಟ ಎಮ್ಮೆಗೆ ಗುಂಡಿಕ್ಕಿದ ಕಿಡಿಗೇಡಿಗಳು| ಮತ್ತೊಂದು ಅಮಾನವೀಯ ಘಟನೆಗೆ ಸಾಕ್ಷಿಯಾದ ಕರಾವಳಿ| Read More »

‘ನಿಫಾ’ ಆತಂಕ ಬೇಡ, ಎಚ್ಚರಿಕೆ ಇರಲಿ| ಈ ವೈರಸ್ ನಿಂದ ಕಾಪಾಡಿಕೊಳ್ಳೋದು ಹೇಗೆ ಗೊತ್ತಾ?

ಬೆಂಗಳೂರು: ಕೇರಳದಲ್ಲಿ ನಿಫಾ ವೈರಸ್ ಅಟ್ಟಹಾಸದ ನಡುವೆ ರಾಜ್ಯದಲ್ಲಿಯೂ ಹೆಮ್ಮಾರಿಯ ಆತಂಕ ಎದುರಾಗಿದ್ದು, ವೈರಸ್ ತಡೆಗೆ ಕೈಗೊಳ್ಳಬೇಕಾದ ಮುಂಜಾಗೃತೆ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ತೀವ್ರ ಜ್ವರ, ಮೈಕೈ ನೋವು, ನಡುಕ, ತೊದಲುವಿಕೆ, ತಲೆನೋವು, ವಾಂತಿ, ನಿದ್ರಾಲಸ್ಯ, ಪ್ರಜ್ಞಾಹೀನತೆ- ಇವು ನಿಫಾ ವೈರಸ್ ಲಕ್ಷಣಗಳಾಗಿದ್ದು, ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಸಲಹೆ ಪಡೆಯುವುದು ಉತ್ತಮ ನಿಫಾ ಬಗ್ಗೆ ಜಾಗೃತಿ ಇರಲಿ: ಪ್ರಾಣಿಗಳು ಮತ್ತು ಪಕ್ಷಿಗಳು ಕಚ್ಚಿದ ಹಣ್ಣುಗಳನ್ನು ಸೇವಿಸಬಾರದು ಬಾವಲಿಗಳು ಅತಿ ಹೆಚ್ಚು ಕಂಡುಬರುವ ಪ್ರದೇಶಗಳಿಂದ

‘ನಿಫಾ’ ಆತಂಕ ಬೇಡ, ಎಚ್ಚರಿಕೆ ಇರಲಿ| ಈ ವೈರಸ್ ನಿಂದ ಕಾಪಾಡಿಕೊಳ್ಳೋದು ಹೇಗೆ ಗೊತ್ತಾ? Read More »

ಅಪ್ಘಾನ್ ನಲ್ಲಿ ಸರ್ಕಾರ ರಚಿಸಿದ ತಾಲಿಬಾನ್ ಉಗ್ರರು| ಪ್ರಧಾನಿಯಾಗಿ ಹಸನ್ ಅಖುಂದ್|

ಕಾಬೂಲ್ : ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಹೊಸ ಸರ್ಕಾರ ರಚನೆಯಾಗಿದ್ದು, ಪ್ರಧಾನಿಯಾಗಿ ಮುಲ್ಲಾ ಮೊಹಮ್ಮದ್ ಹಸನ್‌ ಅಖುಂದ್‌ ನೇಮಕಗೊಂಡಿದ್ದಾನೆ. ಇನ್ನು ಈ ಹೊಸ ಸರ್ಕಾರದಲ್ಲಿ ಹಕ್ಕಾನಿಗಳಿಗೆ ಪ್ರಮುಖ ಖಾತೆಗಳನ್ನು ನೀಡಲಾಗಿದೆ. ಸಿರಾಜುದ್ದೀನ್‌ ಹಕ್ಕಾನಿಗೆ ಒಳಾಡಳಿತ ಸಚಿವ ಸ್ಥಾನ ನೀಡಲಾಗಿದೆ. ಅಫ್ಘಾನಿಸ್ತಾನದಲ್ಲಿ ಉಗ್ರವಾದಿಗಳ ತಾಲಿಬಾನ್ ಸರ್ಕಾರ ರಚನೆಯಾಗಿದ್ದು, ಮುಲ್ಲಾ ಮೊಹಮ್ಮದ್ ಹಸನ್ ಅಖುಂದ್ ಅಫ್ಘಾನಿಸ್ತಾನದ‌ ಚುಕ್ಕಾಣಿ ಹಿಡಿದಿದ್ದಾನೆ. ಇನ್ನು ಈ ಮಧ್ಯಂತರ ಸರ್ಕಾರದಲ್ಲಿ, ಸಿರಾಜ್ ಹಕ್ಕಾನಿಯನ್ನ ಆಂತರಿಕ ವ್ಯವಹಾರಗಳ ಸಚಿವರನ್ನಾಗಿ ಮಾಡಲಾಗಿದ್ದು, ಮುಲ್ಲಾ ಯಾಕೂಬ್ʼನನ್ನ ರಕ್ಷಣಾ ಸಚಿವರನ್ನಾಗಿ ಮಾಡಲಾಗಿದೆ.

ಅಪ್ಘಾನ್ ನಲ್ಲಿ ಸರ್ಕಾರ ರಚಿಸಿದ ತಾಲಿಬಾನ್ ಉಗ್ರರು| ಪ್ರಧಾನಿಯಾಗಿ ಹಸನ್ ಅಖುಂದ್| Read More »

ಮಳೆಗಾಗಿ ಅಪ್ರಾಪ್ತ ಬಾಲಕಿಯರನ್ನು ಬೆತ್ತಲೆ ಊರು ಸುತ್ತಿಸಿದ ಮೂಢರು| ಅಪ್ರಾಪ್ತರು ನಗ್ನವಾಗಿ ಭಿಕ್ಷೆ ಬೇಡಿದರೆ ವರುಣ ಕೃಪೆ ತೋರುತ್ತಾ‌ನಾ…?

ಮಧ್ಯಪ್ರದೇಶ: ಬರಪೀಡಿತ ಪ್ರದೇಶಗಳಲ್ಲಿ ಮಳೆ ಬರಿಸಲು ಕಪ್ಪೆ ಮದುವೆ, ಕತ್ತೆ ಮದುವೆಗಳನ್ನು ಮಾಡಿಸೋದು ಎಲ್ಲೆಡೆ ವರದಿಯಾಗುತ್ತಿರುತ್ತದೆ. ಆದರೆ ಮಧ್ಯಪ್ರದೇಶದ ದಮೋಹ್ ಎಂಬ ಬುಡಕಟ್ಟು ಗ್ರಾಮವೊಂದರಲ್ಲಿ ಅಪ್ರಾಪ್ತ ಬಾಲಕಿಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಮನೆಮನೆಗೆ ತೆರಳಿ ಭಿಕ್ಷೆ ಬೇಡುವಂತೆ ಮಾಡಿದ್ದಾರೆ. ದಮೋಹ್ ಜಿಲ್ಲೆಯಲ್ಲಿ ಮಳೆ ಕಾಣದೇ ವರ್ಷಗಳೇ ಆಗಿತ್ತು. ವರುಣ ದೇವ ತಮ್ಮ ಮೇಲೆ ಮುನಿಸಿಕೊಂಡಿದ್ದಾನೆಂದು, ಆತನನ್ನು ಶಾಂತಪಡಿಸಲು ಈ ಧಾರ್ಮಿಕ ಆಚರಣೆಯ ಭಾಗವಾಗಿ ಇದನ್ನು ಮಾಡಲಾಗಿದೆ ಎಂದು ಹೇಳಲಾಗಿದೆ. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ರಾಷ್ಟ್ರೀಯ ಮಕ್ಕಳ

ಮಳೆಗಾಗಿ ಅಪ್ರಾಪ್ತ ಬಾಲಕಿಯರನ್ನು ಬೆತ್ತಲೆ ಊರು ಸುತ್ತಿಸಿದ ಮೂಢರು| ಅಪ್ರಾಪ್ತರು ನಗ್ನವಾಗಿ ಭಿಕ್ಷೆ ಬೇಡಿದರೆ ವರುಣ ಕೃಪೆ ತೋರುತ್ತಾ‌ನಾ…? Read More »

ಸುಳ್ಯ: ಜಿ.ಪಂ ಸದಸ್ಯೆ ಮೇಲೆ ಹಲ್ಲೆ ಪ್ರಕರಣ| ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಸೇರಿ 14 ಮಂದಿಗೆ 2 ವರ್ಷ ಜೈಲು|

ಸುಳ್ಯ: 2014ರ ಚುನಾವಣೆ ಸಂದರ್ಭದಲ್ಲಿ ಸುಳ್ಯ ತಾಲೂಕಿನ ಮರ್ಕಂಜದ ಕುದ್ಕುಳಿ ಎಂಬಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಸರಸ್ವತಿ ಕಾಮತ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮತ್ತು ಇತರ 14 ಮಂದಿಗೆ ಸುಳ್ಯ ನ್ಯಾಯಾಲಯ ಜೈಲುವಾಸದ ತೀರ್ಪು ನೀಡಿದೆ. ಹರೀಶ್ ಕಂಜಿಪಿಲಿ ಮತ್ತು ಇತರ 14 ಮಂದಿ ಮದುವೆ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದಾಗ ತನ್ನ ವಾಹನವನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿದ್ದಲ್ಲದೆ ಕಾಲಿನಿಂದ ತನ್ನ

ಸುಳ್ಯ: ಜಿ.ಪಂ ಸದಸ್ಯೆ ಮೇಲೆ ಹಲ್ಲೆ ಪ್ರಕರಣ| ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಸೇರಿ 14 ಮಂದಿಗೆ 2 ವರ್ಷ ಜೈಲು| Read More »

ನಿಫಾ ಆತಂಕ| ಅಕ್ಟೋಬರ್ ವರೆಗೂ ರಾಜ್ಯಕ್ಕೆ ಪ್ರವೇಶಿಸುವ ಕೇರಳಿಗರಿಗೆ ನಿರ್ಬಂಧ| ಗಡಿಜಿಲ್ಲೆಗಳಲ್ಲಿ ಕಟ್ಟೆಚ್ಚರ

ಬೆಂಗಳೂರು: ನೆರೆಯ ಕೇರಳ ರಾಜ್ಯದಲ್ಲಿ ನಿಫಾ ವೈರಾಣುವಿನ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲು ನಿರ್ಧರಿಸಲಾಗಿದೆ. ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಕಣ್ಗಾವಲು ಮತ್ತು ಅಗತ್ಯ ಪೂರ್ವಸಿದ್ಧತೆಗಳನ್ನು ಬಲಪಡಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ನೆರೆಯ ಕೇರಳದ ಪ್ರಸ್ತುತ ಪರಿಸ್ಥಿತಿ ಪರಿಗಣಿಸಿ, ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ, ಹೋಟೆಲ್, ಆಸ್ಪತ್ರೆ, ನರ್ಸಿಂಗ್ ಹೋಮ್, ಕಾರ್ಖಾನೆ ಮುಂತಾದ ಸಂಸ್ಥೆಗಳ ಆಡಳಿತ ವರ್ಗ/ಮಾಲೀಕರಿಗೆ ಕೇರಳದಿಂದ ಆಗಮಿಸುವ

ನಿಫಾ ಆತಂಕ| ಅಕ್ಟೋಬರ್ ವರೆಗೂ ರಾಜ್ಯಕ್ಕೆ ಪ್ರವೇಶಿಸುವ ಕೇರಳಿಗರಿಗೆ ನಿರ್ಬಂಧ| ಗಡಿಜಿಲ್ಲೆಗಳಲ್ಲಿ ಕಟ್ಟೆಚ್ಚರ Read More »

ಮೈಸೂರು ಗ್ಯಾಂಗ್ ರೇಪ್| ಏಳನೇ ಆರೋಪಿಯೂ ಅಂದರ್

ಮೈಸೂರು : ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ 7 ನೇ ಆರೋಪಿಯನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 24 ರಂದು ಸಂಜೆ ಮೈಸೂರಿನ ಲೀಲಾದ್ರಿ ಗುಡ್ಡ ಪ್ರದೇಶದಲ್ಲಿ ನಡೆದಿದ್ದ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ ಭಾರೀ ಸುದ್ದಿಯಾಗಿತ್ತು ಪ್ರಕರಣ ಸಂಬಂಧ ಈಗಾಗಲೇ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ತಲೆಮರೆಸಿಕೊಂಡಿದ್ದ ಪ್ರಕರಣದ 7 ನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನಲ್ಲಿಯೇ ಮೈಸೂರು ಪೊಲೀಸರು ಅತ್ಯಾಚಾರಣ ಪ್ರಕರಣದ 7 ನೇ ಆರೋಪಿಯನ್ನು

ಮೈಸೂರು ಗ್ಯಾಂಗ್ ರೇಪ್| ಏಳನೇ ಆರೋಪಿಯೂ ಅಂದರ್ Read More »

ಸುಳ್ಯ: ಸಂಬಂಧಿಕನೆಂದು ಬಂದವನು ಪತ್ನಿಯ ಜೊತೆ ಸಂಬಂಧ ಬೆಳೆಸಿ ಕರೆದೊಯ್ದ| ಅವನೊಂದಿಗೆ ಹೋದವಳು ಠಾಣೆಗೆ ಬಂದು ಹೇಳಿದ್ದೇನು? ಉಂಡೂಹೋದ ಕೊಂಡೂ ಹೋದ…!

ಸುಳ್ಯ: ಮಹಿಳೆಯೋರ್ವಳು ತನ್ನ ಮಕ್ಕಳೊಂದಿಗೆ ಪರಿಚಿತ ಯುವಕನೊಂದಿಗೆ ಪರಾರಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ಸೋಮವಾರ ಸಂಜೆ ಸುಳ್ಯ ಪೊಲೀಸ್ ಠಾಣೆಗೆ ಹಾಜರಾಗಿದ್ದು, ಪತಿಯೊಂದಿಗೆ ತೆರಳಲು ಅಸಮ್ಮತಿ ಸೂಚಿಸಿರುವುದಾಗಿ ತಿಳಿದುಬಂದಿದೆ. ಸುಳ್ಯ ಜಯನಗರ ಕೊಯಿಂಗೋಡಿ ಸಮೀಪದ ನಿವಾಸಿ ಸಮಿತ್(ಸಂಧ್ಯಾ) ಎಂಬ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಸಂಬಂಧಿಕನೆಂದು ಮನೆಗೆ ಬರುತ್ತಿದ್ದ ಪ್ರದೀಪ್ ಎಂಬ ಯುವಕನೊಂದಿಗೆ ಪರಾರಿಯಾಗಿದ್ದಾಳೆಂದು ಆಕೆಯ ಪತಿ ಮನೋಜ್ ಸುಳ್ಯ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಸುಳ್ಯ ಠಾಣಾ ಉಪನಿರೀಕ್ಷಕ ಎಂ.ಆರ್.ಹರೀಶ್‌ರವರು ಪ್ರದೀಪ್ ಹಾಗೂ ಸಂದ್ಯಾಳನ್ನು ಠಾಣೆಗೆ

ಸುಳ್ಯ: ಸಂಬಂಧಿಕನೆಂದು ಬಂದವನು ಪತ್ನಿಯ ಜೊತೆ ಸಂಬಂಧ ಬೆಳೆಸಿ ಕರೆದೊಯ್ದ| ಅವನೊಂದಿಗೆ ಹೋದವಳು ಠಾಣೆಗೆ ಬಂದು ಹೇಳಿದ್ದೇನು? ಉಂಡೂಹೋದ ಕೊಂಡೂ ಹೋದ…! Read More »

ಬಂಟ್ವಾಳ| ಅಪ್ರಾಪ್ತೆಯ ಗರ್ಭವತಿಯನ್ನಾಗಿಸಿ ವಿದೇಶಕ್ಕೆ ಪರಾರಿ| ಆರೋಪಿ ವಿರುದ್ದ ಫೋಕ್ಸೊ ಕೇಸ್ ದಾಖಲು|

ಬಂಟ್ವಾಳ: ಅಪ್ರಾಪ್ತ ಬಾಲಕಿಯೊಂದಿಗೆ ಲೈಂಗಿಕ ಸಂಬಂಧ ಬೆಳೆಸಿ ಆಕೆ ಗರ್ಭಿಣಿಯಾಗುತ್ತಿದ್ದಂತೆ ಆರೋಪಿ ವಿದೇಶಕ್ಕೆ ತೆರಳಿ ತಲೆ ಮೆರೆಸಿಕೊಂಡಿರುವ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಉಪ್ಪಿನಂಗಡಿ ನಿವಾಸಿ ಮಸೂದ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಮಣಿನಾಲ್ಕೂರು ಗ್ರಾಮದ ನಿವಾಸಿಯಾಗಿರುವ ಸಂತಸ್ತ ಬಾಲಕಿ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಗುವಿಗೆ ಜನ್ಮ ನೀಡಿದ್ದು ಘಟನೆ ಬೆಳಕಿಗೆ ಬಂದಿದೆ. ಸಂತ್ರಸ್ತೆ ಬಾಲಕಿಗೆ ಆರೋಪಿ ಮಸೂದ್ ಒಂದು ವರ್ಷದ ಹಿಂದೆ ಇನ್ ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದು, ಬಳಿಕ ಆತ

ಬಂಟ್ವಾಳ| ಅಪ್ರಾಪ್ತೆಯ ಗರ್ಭವತಿಯನ್ನಾಗಿಸಿ ವಿದೇಶಕ್ಕೆ ಪರಾರಿ| ಆರೋಪಿ ವಿರುದ್ದ ಫೋಕ್ಸೊ ಕೇಸ್ ದಾಖಲು| Read More »

ಗುಡ್ ನ್ಯೂಸ್| ನಿಟ್ಟುಸಿರು ಬಿಟ್ಟ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪಾಸಿಟಿವಿಟಿ ದರ‌ 2 ಕ್ಕಿಂತ ಕಡಿಮೆ|

ಬೆಂಗಳೂರು: ಕೊರೋನಾ ಸೋಂಕು ಹೆಚ್ಚಿರುವ ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ದಕ್ಷಿಣ ಕನ್ನಡ ಶೇ. 1.99 ಮತ್ತು ಕೊಡಗು ಜಿಲ್ಲೆಯಲ್ಲಿ ಶೇ. 1.95 ಕೊರೋನಾ ಪಾಸಿಟಿವಿಟಿ ದರ ದಾಖಲಾಗುವುದರೊಂದಿಗೆ ರಾಜ್ಯದ ಎಲ್ಲ ಜಿಲ್ಲೆಗಳ ಪಾಸಿಟಿವಿಟಿ ದರ ಶೇ.2ಕ್ಕಿಂತ ಕಡಿಮೆಯಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಸೋಂಕಿನ ಪಾಸಿಟಿವಿಟಿ ದರ ಗಣನೀಯವಾಗಿ ಕಡಿಮೆಯಾಗಿದ್ದರೂ ಸಹ ದಕ್ಷಿಣ ಕನ್ನಡ ಮತ್ತು ಕೊಡಗು, ಉಡುಪಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚು ಕಂಡು ಬಂದ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಈಗ

ಗುಡ್ ನ್ಯೂಸ್| ನಿಟ್ಟುಸಿರು ಬಿಟ್ಟ ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪಾಸಿಟಿವಿಟಿ ದರ‌ 2 ಕ್ಕಿಂತ ಕಡಿಮೆ| Read More »