Editor

ಬಿಸಿ ಬಿಸಿ ಪಾಯಸ ತಿಂದು ಬಾಯಿ ಸುಟ್ಕೋತೀರಾ? ತಣಿಯೋವರೆಗೂ ಕಾಯ್ಬೇಕಲ್ವೇ? ಡಿ.ಸಿ ರಾಜೇಂದ್ರ ಆಡಿಯೊ ವೈರಲ್

ಮಂಗಳೂರು, ಸೆ.5 : ಪಾಯಸ ಆಗೋವರೆಗೆ ಇದ್ದವರು ಆರೋ ತನಕ ಇರಬಾರದೇ ? ಪಾಯಸ ಆಗಿದೆ, ಅದನ್ನು ಬಿಸಿ ಬಿಸಿ ಇರುವಾಗಲೇ ತಿಂದ್ಬಿಟ್ಟು ಬಾಯಿ ಸುಟ್ಟುಕೊಳ್ಳೋದು ಯಾಕೆ ? ಹೀಗೆಂದು ಗಾದೆ ಮಾತಿನ ಮೂಲಕ ದಕ್ಷಿಣ ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ. ಅವರು ವೀಕೆಂಡ್ ಕರ್ಫ್ಯೂ ಬಗ್ಗೆ ಪ್ರಶ್ನಿಸಿ ಕರೆ ಮಾಡಿದ ವ್ಯಕ್ತಿಗೆ ಸಮಾಧಾನ ಚಿತ್ತದಿಂದ ಉತ್ತರಿಸಿದ ಆಡಿಯೋ ಈಗ ವೈರಲ್ ಆಗಿದೆ. ರೆಡಿಮೇಡ್ ಬಟ್ಟೆ, ಫ್ಯಾನ್ಸಿ, ಚಪ್ಪಲಿ ಮಾರಾಟದ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಸಂತೋಷ್ ಕಾಮತ್ ಅನ್ನುವವರು […]

ಬಿಸಿ ಬಿಸಿ ಪಾಯಸ ತಿಂದು ಬಾಯಿ ಸುಟ್ಕೋತೀರಾ? ತಣಿಯೋವರೆಗೂ ಕಾಯ್ಬೇಕಲ್ವೇ? ಡಿ.ಸಿ ರಾಜೇಂದ್ರ ಆಡಿಯೊ ವೈರಲ್ Read More »

ದೆಹಲಿಯಲ್ಲಿ ನಡೆಯಿತು ಮತ್ತೊಂದು ನಿರ್ಭಯ ಪ್ರಕರಣ| ಪೊಲೀಸ್ ಅಧಿಕಾರಿಯೇ ಗ್ಯಾಂಗ್ ರೇಪ್ ಮಾಡಿ ಮರ್ಡರ್

ನವದೆಹಲಿ, ಸೆ.5 : ರಾಜಧಾನಿ ದೆಹಲಿಯಲ್ಲಿ ಪೊಲೀಸ್ ಅಧಿಕಾರಿಯಾಗಿದ್ದ ಯುವತಿಯನ್ನು ಗ್ಯಾಂಗ್ ರೇಪ್ ಮಾಡಿ, ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಸಬಿಯಾ ಸೈಫಿ ಎನ್ನುವ 22 ವರ್ಷದ ಯುವತಿ ಈ ರೀತಿ ಬರ್ಬರ ಹತ್ಯೆಗೀಡಾಗಿದ್ದು, ಘಟನೆಯನ್ನು ಖಂಡಿಸಿ ಸಬಿಯಾ ಸೈಫಿ ಹೆಸರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಟ್ರೆಂಡ್ ಸೃಷ್ಟಿಯಾಗಿದೆ. ಲಜಪತ್ ನಗರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಬಿಯಾ ಸೈಫಿ ವಾರದ ಹಿಂದೆ ನಾಪತ್ತೆಯಾಗಿದ್ದಳು. ಆಕೆಯನ್ನು ಆಗಸ್ಟ್ 26ರಂದು ತಂಡವೊಂದು ಅಪಹರಿಸಿ, ಕ್ರೂರವಾಗಿ ಹಿಂಸಿಸಿ

ದೆಹಲಿಯಲ್ಲಿ ನಡೆಯಿತು ಮತ್ತೊಂದು ನಿರ್ಭಯ ಪ್ರಕರಣ| ಪೊಲೀಸ್ ಅಧಿಕಾರಿಯೇ ಗ್ಯಾಂಗ್ ರೇಪ್ ಮಾಡಿ ಮರ್ಡರ್ Read More »

ಪುತ್ತೂರು| ರೈಲ್ವೆ ಜಾಯಿಂಟ್ ಕದಿಯುತ್ತಿದ್ದ ಖದೀಮರ ಬಂಧನ| ಇದರ ಹಿಂದೆ ವಿಧ್ವಂಸಕ ಕೃತ್ಯವಿತ್ತೇ…?

ಪುತ್ತೂರು, ಸೆ.5 : ರೈಲ್ವೇ ಹಳಿಗೆ ಅಳವಡಿಸಿರುವ ಜಾಯಿಂಟ್ ಕ್ಲಿಪ್ ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಸುಮಾರು ಒಂದು ತಿಂಗಳಿನಿಂದ ರೈಲು ಹಳಿಯಿಂದ ಕಬ್ಬಿಣದ ಕ್ಲಿಪ್​ಗಳನ್ನು ಕಳ್ಳತನ ಮಾಡುತ್ತಿರುವ ಬಗ್ಗೆ ರೈಲ್ವೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಮಫ್ತಿಯಲ್ಲಿ ಕಳ್ಳರ ಪತ್ತೆಗೆ ಬಲೆ ಬೀಸಿದ್ದರು. ಶನಿವಾರ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಮಫ್ತಿಯಲ್ಲಿದ್ದ ರೈಲ್ವೇ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ

ಪುತ್ತೂರು| ರೈಲ್ವೆ ಜಾಯಿಂಟ್ ಕದಿಯುತ್ತಿದ್ದ ಖದೀಮರ ಬಂಧನ| ಇದರ ಹಿಂದೆ ವಿಧ್ವಂಸಕ ಕೃತ್ಯವಿತ್ತೇ…? Read More »

ಕಡಬ: ಮಹಿಳೆಯ ಮೇಲೆ ವ್ಯಕ್ತಿಯಿಂದ ಹಲ್ಲೆ ಆರೋಪ| ಆಸ್ಪತ್ರೆಗೆ ದಾಖಲಾದ ಇತ್ತಂಡಗಳು|

ಕಡಬ: ಇಲ್ಲಿನ ಮುಳಿಮಜಲು ಎಂಬಲ್ಲಿ ಗೂಡಂಗಡಿ ವ್ಯಾಪಾರಸ್ಥೆಯೋರ್ವರ ಮೇಲೆ ಅಲ್ಲೇ ಪಕ್ಕದಲ್ಲಿ ಅಂಗಡಿ ನಡೆಸುತ್ತಿರುವ ವ್ಯಕ್ತಿಯೋರ್ವರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ದೂರು ದಾಖಲಾಗಿ ಈ ಸಂಬಂಧ ಇತ್ತಂಡದ ಐವರು ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಸೆ.5ರಂದು ನಡೆದಿದೆ. ಮುಳಿಮಜಲಿನಲ್ಲಿ ಗೂಡಂಗಡಿ ವ್ಯಾಪಾರ ನಡೆಸುತ್ತಿರುವ ಜಗನ್ನಾಥ ಎಂಬವರ ಪತ್ನಿ ಪ್ರಮೋದ ಎಂಬವರ ಮೇಲೆ ಸಮೀಪದಲ್ಲಿ ಮಾಂಸದಂಗಡಿ ನಡೆಸುತ್ತಿರುವ ರಾಜುಮ್ಯಾಥ್ಯೂ ಎಂಬವರು ವೀಡಿಯೋ ಮಾಡಿ ಹಲ್ಲೆ ನಡೆಸಿದ್ದಾರೆ ,ಅಲ್ಲದೆ ರಕ್ಷಣೆಗೆ ಬಂದ ತನ್ನ ಮಗಳ ಮೇಲೆ ಕೈ

ಕಡಬ: ಮಹಿಳೆಯ ಮೇಲೆ ವ್ಯಕ್ತಿಯಿಂದ ಹಲ್ಲೆ ಆರೋಪ| ಆಸ್ಪತ್ರೆಗೆ ದಾಖಲಾದ ಇತ್ತಂಡಗಳು| Read More »

ಸೈಯದ್ ಅಲಿ ಶಾ ಗೀಲಾನಿ ಮೃತದೇಹಕ್ಕೆ ಪಾಕ್ ಧ್ವಜ – ಕುಟುಂಬಸ್ಥರ ವಿರುದ್ಧ ಎಫ್‍ಐಆರ್

ಶ್ರೀನಗರ: ಕಾಶ್ಮೀರ ಪ್ರತ್ಯೇಕವಾದಿ ನಾಯಕ ಸೈಯದ್ ಅಲಿ ಗೀಲಾನಿಯವರ ಮೃತದೇಹಕ್ಕೆ ಪಾಕಿಸ್ತಾನ ಧ್ವಜ ಹೊದಿಸಿ, ಕುಟುಂಬದವರ ವಿರುದ್ಧ ಬದ್ಗಾಂ ಪೆÇಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸೈಯದ್ ಅಲಿ ಗೀಲಾನಿ(92)ಯವರು ಬುಧವಾರ ರಾತ್ರಿ ತಮ್ಮ ನಿವಾಸದ ಮೃತಪಟ್ಟಿದ್ದರು. ನಂತರ ಅವರ ಮೃತ ದೇಹವನ್ನು ಸಮೀಪದಲ್ಲಿರು ಮಸೀದಿಯ ಸ್ಮಶಾನದಲ್ಲಿ ಹೂಳುವ ಕಾರ್ಯವನ್ನು ಮಾಡಲಾಗಿತ್ತು. ಇದಕ್ಕೂ ಮುನ್ನ ಪಾಕಿಸ್ತಾನ ರಾಷ್ಟ್ರ ಧ್ವಜವನ್ನು ಹೊದಿಸಿ ದೇಶದ ವಿರುದ್ಧ ಘೋಷಣೆ ಕೂಗಲಾಗಿತ್ತು. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ

ಸೈಯದ್ ಅಲಿ ಶಾ ಗೀಲಾನಿ ಮೃತದೇಹಕ್ಕೆ ಪಾಕ್ ಧ್ವಜ – ಕುಟುಂಬಸ್ಥರ ವಿರುದ್ಧ ಎಫ್‍ಐಆರ್ Read More »

ಅಚ್ಚರಿ ಮೂಡಿಸಿದ ತ್ರಿಕೋನ ಪ್ರೇಮ – ಲಾಟರಿಯ ಮೂಲಕ ಪ್ರೇಯಸಿಯ ಆಯ್ಕೆ – ಹೀಗೂ….ಉಂಟೇ….

ಹಾಸನ: ಯುವಕೊನಬ್ಬ ಇಬ್ಬರು ಯುವತಿಯರನ್ನು ಪ್ರೀತಿಸಿ ಕೊನೆಗೆ ಇಬ್ಬರ ಕೈಗೆ ಸಿಕ್ಕಿ ಬಿದ್ದು ಮದೆಯಾಗಳು ಕುಟುಬಂಸ್ಥರು ಲಾಟರಿ ಪ್ರಯೋಗಕ್ಕೆ ಮುಂದಾದ ಪ್ರಸಂಗವೊಂದು ಸಕಲೇಶಪುರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.ಯುವಕನಿಗೆ ಯುವತಿಯ ಮೇಲೆ, ಯುವತಿಗೆ ಯುವಕನ ಮೇಲೆ ಮೋಹ ಉಂಟಾಗುವುದು ಸಹಜ. ಅದರೆ ಕೆಲವು ಯುವತಿ/ಯುವಕರಿಗೆ ತನಗೊಬ್ಬ ಪೀಯತಮ/ಪ್ರೀಯತಮೆ ಇದ್ದರೂ ಇನ್ನೂಂದು ಯುವತಿಯನ್ನು /ಯುವಕನನ್ನು ಕಂಡಾಗ ಆಕೆ ಮೇಳೆ ಸೆಳೆತ ಉಂಟಾಗುವುದು ಸಾಮನ್ಯ. ಅದರೆ ಇಲ್ಲೊಬ್ಬ ಯುವಕ ಇಬ್ಬರೂ ಯುವತಿಯರನ್ನು ಪ್ರೀತಿಸುತ್ತಿದ್ದ. ಆಕೆಗೆ ಈಕೆಯ ವಿಚಾರ ತಿಳಿಯದಂತೆ , ಈಕೆಗೆ

ಅಚ್ಚರಿ ಮೂಡಿಸಿದ ತ್ರಿಕೋನ ಪ್ರೇಮ – ಲಾಟರಿಯ ಮೂಲಕ ಪ್ರೇಯಸಿಯ ಆಯ್ಕೆ – ಹೀಗೂ….ಉಂಟೇ…. Read More »

ಸಾರ್ವಜನಿಕ ಗಣೇಶೋತ್ಸವ ಕ್ಕೆ ಷರತ್ತುಬದ್ದ ಅನುಮತಿ

ಬೆಂಗಳೂರು : ರಾಜ್ಯದಲ್ಲಿ ಸಾರ್ವಜನಿಕ ಗಣೇಶೋತ್ಸವ ಕ್ಕೆ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಮಹತ್ವದ ಸಭೆಯಲ್ಲಿ ರ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಾಗಿದ್ದು, ಸಾರ್ವಜನಿಕ ಗಣೇಶೋತ್ಸವ ಕೇವಲ ಮೂರು ದಿನ ಮಾತ್ರ ಅವಕಾಶ ನೀಡಲಾಗಿದೆ.ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ವರದಿ ಆಧರಿಸಿ ಸಿಎಂ ಈ ನಿರ್ಧಾರ ಕೈಗೊಂಡಿದ್ದು, ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ 3 ದಿನ

ಸಾರ್ವಜನಿಕ ಗಣೇಶೋತ್ಸವ ಕ್ಕೆ ಷರತ್ತುಬದ್ದ ಅನುಮತಿ Read More »

ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ನಿಫಾ| ಬಾಲಕನ ಬಲಿ ಪಡೆದ ಬಾವಲಿ ಜ್ವರ

ಕೋಝಿಕೋಡ್: ಕೇರಳದಲ್ಲಿ ಆತಂಕ ಮೂಡಿಸಿದ್ದ ನಿಫಾ ವೈರಸ್ ಮತ್ತೆ ಕಾಣಿಸಿಕೊಂಡಿದೆ. ರಾಜ್ಯದ ಕೋಳಿಕೋಡ್ ನಲ್ಲಿ 13 ವರ್ಷದ ಬಾಲಕ ನಿಫಾ ವೈರಸ್ ನಿಂದ ಸಾವನ್ನಪ್ಪಿದ್ದಾನೆ ಎಂದು ಆರೋಗ್ಯ ಇಲಾಖೆ ಮೂಲಗಳು ಭಾನುವಾರ ತಿಳಿಸಿವೆ. ಸೋಂಕಿಗೊಳಗಾಗಿರುವ ಬಾಲಕ ಛತಮಂಗಳಂ ಹತ್ತಿರ ಬಳಿಯಿರುವ ಚುಲೂರ್ ಮೂಲದವನೆಂದು ತಿಳಿದುಬಂದಿದೆ.ಪುಣೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾದ ಹುಡುಗನ ಮಾದರಿಗಳು ನಿಫಾ ವೈರಸ್ ಇರುವಿಕೆಯನ್ನು ದೃಢಪಡಿಸಿವೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ತಂಡವನ್ನು ರಾಜ್ಯಕ್ಕೆ ರವಾನಿಸಿದೆ, ಅದು ಭಾನುವಾರ ತಲುಪಲಿದೆ.

ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ನಿಫಾ| ಬಾಲಕನ ಬಲಿ ಪಡೆದ ಬಾವಲಿ ಜ್ವರ Read More »

ಬಸವನಾಡು ವಿಜಯಪುರದಲ್ಲಿ ಭೂಕಂಪನ| ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲು

ವಿಜಯಪುರ : ಶನಿವಾರ ತಡರಾತ್ರಿ ವಿಜಯನಗರ ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಗಳಲ್ಲಿ ಭೂಮಿ ನಡುಗಿದ ಅನುಭವ ಆಗಿದ್ದು, ರಿಕ್ಟರ್ ಮಾಪಕದಲ್ಲಿ ದಾಖಲಾದ ಲಘು ತೀವ್ರತೆ ಭೂಕಂಪ ಎಂಬುದನ್ನು ಜಿಲ್ಲಾಡಳಿತ ದೃಢೀಕರಿಸಿದೆ. ಭೂಕಂಪನ ಅಗಿದ್ದು‌ ರಿಕ್ಟರ್ ಮಾಪಕದಲ್ಲಿ ದಾಖಲು 3.9 ತೀವ್ರತೆಯ ಭೂಕಂಪನ ಆಗಿದೆ.ಮಹಾರಾಷ್ಟ್ರದ ಕೊಲ್ಹಾಪುರ ಭೂಕಂಪನದ ಕೇಂದ್ರ ಬಿಂಧುವಾಗಿತ್ತು. ಕೆ.ಎಸ್.ಎನ್.ಡಿ.ಎಂ.ಸಿ. ಮೂಲಕ ಮಾಹಿತಿ ಸಂಗ್ರಹಿಸಿದೆ ಎಂದು ಜಿಲ್ಲಾಧಿಕಾರಿ ಸುನಿಲಕುಮಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ವಿಜಯಪುರ ಜಿಲ್ಲೆಯ ಬಹುತೇಕ ಎಲ್ಲ ಕಡೆ ಶನಿವಾರ ರಾತ್ರಿ11-47, 11-48 ರ ಮಧ್ಯಾವಧಿಯಲ್ಲಿ

ಬಸವನಾಡು ವಿಜಯಪುರದಲ್ಲಿ ಭೂಕಂಪನ| ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆ ದಾಖಲು Read More »

ಪ್ಯಾರಾಲಂಪಿಕ್ ನಲ್ಲಿ ಭಾರತದ ಮುಡಿಗೆ ಐದನೇ ಚಿನ್ನ| ಪುರುಷರ ಹೆಚ್ ಎಸ್ ಬ್ಯಾಡ್ಮಿಂಟನ್ ನಲ್ಲಿ ಪರಾಕ್ರಮ ಮೆರೆದ ಕೃಷ್ಣ ನಗರ್

ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತದ ಪದಕಗಳ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.ಪುರುಷರ ಬ್ಯಾಡ್ಮಿಂಟನ್ ಎಸ್​ಹೆಚ್​6 ವಿಭಾಗದ ಫೈನಲ್ ಪಂದ್ಯದಲ್ಲಿ ಕೃಷ್ಣ ನಗರ್ ಭರ್ಜರಿ ಗೆಲುವು ಸಾಧಿಸಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಹಾಂಕಾಂಗ್​ನ ಚು ಮನ್ ಕೈ ವಿರುದ್ಧ ನಡೆದ ಮೆಡಲ್ ಪಂದ್ಯದಲ್ಲಿ ಕೃಷ್ಣ 2-1 ಸೆಟ್​ಗಳ ಅಂತರದಿಂದ ಗೆದ್ದು ಭಾರತಕ್ಕೆ 5ನೇ ಚಿನ್ನ ತಂದುಕೊಟ್ಟಿದ್ದಾರೆ. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಕೃಷ್ಣ ನಗರ್ ಮೊದಲ ಸೆಟ್​ನಲ್ಲೇ 21-17 ಅಂಕಗಳ ಮುನ್ನಡೆ ಸಾಧಿಸಿದರು. ಎರಡನೇ ಸೆಟ್​ನಲ್ಲಿ ಕಮ್​ಬ್ಯಾಕ್ ಮಾಡಿದ

ಪ್ಯಾರಾಲಂಪಿಕ್ ನಲ್ಲಿ ಭಾರತದ ಮುಡಿಗೆ ಐದನೇ ಚಿನ್ನ| ಪುರುಷರ ಹೆಚ್ ಎಸ್ ಬ್ಯಾಡ್ಮಿಂಟನ್ ನಲ್ಲಿ ಪರಾಕ್ರಮ ಮೆರೆದ ಕೃಷ್ಣ ನಗರ್ Read More »