Editor

ದತ್ತಯಾತ್ರಿಕರ ಬಸ್ ಗೆ ಕಲ್ಲೇಟು| ಇಂದು ಕೋಲಾರ ಬಂದ್|

ಕೋಲಾರ: ದತ್ತಮಾಲಾಧಾರಿಗಳಿದ್ದ ಬಸ್ ಮೇಲೆ‌ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಘಟನೆ ಖಂಡಿಸಿ, ಹಿಂದೂಪರ ಸಂಘಟನೆಗಳು ಇಂದು ಕೋಲಾರ ಬಂದ್​ಗೆ ಕರೆ ಕೊಟ್ಟಿದ್ದು ಪ್ರತಿಭಟನೆ ನಡೆಸುತ್ತಿದ್ದಾರೆ. ಕೋಲಾರ ಬಂದ್​ನಲ್ಲಿ ಪ್ರಮೋದ್ ಮುತಾಲಿಕ್ ಭಾಗವಹಿಸುವ ಸಾಧ್ಯತೆ ಇದ್ದು, ಅವರಿಗೆ ಜಿಲ್ಲಾ ಪ್ರವೇಶಕ್ಕೆ ನಿಷೇಧ ಹೇರಿ‌ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ. ಪ್ರಮೋದ್​ ಮುತಾಲಿಕ್​ ಅವರು ಕೋಮು ಪ್ರಚೋದನಾ ಭಾಷಣ ಮಾಡಿರುವ ಉದಾಹರಣೆ ಇದೆ. ಈ ಕಾರಣದಿಂದ ಪ್ರಮೋದ್ ಮುತಾಲಿಕ್​ಗೆ ನವೆಂಬರ್ 18ರಂದು ಪ್ರವೇಶಕ್ಕೆ ನಿಷೇಧಿಸಲಾಗಿದೆ ಎಂದು ಜಿಲ್ಲಾಡಳಿತ

ದತ್ತಯಾತ್ರಿಕರ ಬಸ್ ಗೆ ಕಲ್ಲೇಟು| ಇಂದು ಕೋಲಾರ ಬಂದ್| Read More »

ಅರವಣ ಪಾಯಸ ಶಬರಿಮಲೆಯಲ್ಲೇ ತಯಾರಾಗುತ್ತೆ| ಸ್ಪಷ್ಟನೆ ನೀಡಿದ ದೇವಸ್ವಂ ಮಂಡಳಿ

ತಿರುವನಂತಪುರಂ: ಶಬರಿಮಲೆ ದೇವಸ್ಥಾನದಲ್ಲಿ ಸಿಗುವ ‘ಅರಾವಣಾ ಪಾಯಸಂ’ ಈ ಸಾಂಪ್ರದಾಯಿಕ ಸಿಹಿ ಪ್ರಸಾದವನ್ನು ದೇವಸ್ಥಾನದ ಸಿಬ್ಬಂದಿಗಳೇ ತಯಾರಿಸುತ್ತಾರೆ; ಕೇವಲ ಅಕ್ಕಿ ಮತ್ತು ಬೆಲ್ಲದ ಪೂರೈಕೆಯ ಗುತ್ತಿಗೆಗಳನ್ನು ಮಾತ್ರ ಹೊರಗೆ ನೀಡಲಾಗುತ್ತದೆ, ಎಂದು ಕೇರಳ ದೇವಸ್ವಂ ಬೋರ್ಡ್‌ನ ಕಾರ್ಯನಿರ್ವಾಹಕ ಅಧಿಕಾರಿ ಸ್ಪಷ್ಟಪಡಿಸಿದರು. ಕೇರಳ ದೇವಸ್ವಂ ಬೋರ್ಡ್ ಶಬರಿಮಲೆ ದೇವಸ್ಥಾನದಲ್ಲಿ ಸಿಗುವ ‘ಅರಾವಣಾ ಪಾಯಸಂ’ ಈ ಪ್ರಸಾದವನ್ನು ತಯಾರಿಸುವ ಗುತ್ತಿಗೆಯನ್ನು ಓರ್ವ ಮುಸಲ್ಮಾನ ವ್ಯಕ್ತಿಗೆ ನೀಡಲಾಗಿದೆ. ಈ ಪ್ರಸಾದಕ್ಕೆ ‘ಅಲ್-ಝಹಾ’ ಎಂಬ ಅರೇಬಿಕ್ ಹೆಸರನ್ನು ನೀಡಲಾಗಿದೆ ಮತ್ತು ಇದನ್ನು ‘ಹಲಾಲ್’

ಅರವಣ ಪಾಯಸ ಶಬರಿಮಲೆಯಲ್ಲೇ ತಯಾರಾಗುತ್ತೆ| ಸ್ಪಷ್ಟನೆ ನೀಡಿದ ದೇವಸ್ವಂ ಮಂಡಳಿ Read More »

ಕಾಂಗ್ರೆಸ್ ಗೆ‌ ಬಿಗ್ ಶಾಕ್| 20 ಹಿರಿಯ ನಾಯಕರು ಪಕ್ಷಕ್ಕೆ ಗುಡ್ ಬೈ

ನವದೆಹಲಿ: ಕಾಂಗ್ರೇಸ್ ಹಿರಿಯ ಮುಖಂಡ ಗುಲಾಬ್ ನಬಿ ಆಜಾದ್ ಸೇರಿದಂತೆ ಸುಮಾರು 20 ಮಂದಿ ಹಿರಿಯ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಗೆ ದೊಡ್ಡ ಆಘಾತ ಉಂಟಾಗಿದೆ. ಜಮ್ಮು ಕಾಶ್ಮೀರದಲ್ಲಿ ಶೀಘ್ರದಲ್ಲೇ ವಿಧಾನಸಭೆ ಚುನಾವಣೆ ಘೋಷಣೆ ಆಗಲಿದೆ ಎಂಬ ವದಂತಿಗಳ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವನ್ನು ಹಿರಿಯ ನಾಯಕರು ತೊರೆದಿರುವುದು ದೊಡ್ಡ ಹಿನ್ನಡೆ ಉಂಟಾದಂತಾಗಿದೆ. ಕೇಂದ್ರಾಡಳಿತ ಪ್ರದೇಶದಲ್ಲಿ ನೇಮಿಸಿರುವ ಪದಾಧಿಕಾರಿಗಳನ್ನು ಕೂಡಲೇ ಬದಲಾಯಿಸಬೇಕು ಎಂದು ರಾಜೀನಾಮೆ ನೀಡಿರುವ ಈ ನಾಯಕರು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಗೆ‌ ಬಿಗ್ ಶಾಕ್| 20 ಹಿರಿಯ ನಾಯಕರು ಪಕ್ಷಕ್ಕೆ ಗುಡ್ ಬೈ Read More »

ರಾಜ್ಯದಲ್ಲಿ ಟೊಮೆಟೊ ದುಬಾರಿ| ಗ್ರಾಹಕರಿಗೆ ಶಾಕ್

ಕೋಲಾರ: ರಾಜ್ಯದಲ್ಲಿ ಭಾರಿ ಮಳೆಯಿಂದಾಗಿ ಟೊಮೊಟೊ ಬೆಲೆ ಏರಿಕೆ ಕಂಡಿದೆ. ಮಾರುಕಟ್ಟೆಯಲ್ಲಿ ಕೆಜಿ ಟೊಮೇಟೋ ದರ 70 ರೂ.ಗಿಂತಲೂ ಹೆಚ್ಚಾಗಿದೆ. ಮಳೆಯ ಕಾರಣ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಟೊಮೆಟೊ ಬರುತ್ತಿರುವುದರಿಂದ ದರ ಏರಿಕೆಯಾಗಿದೆ. ಜೊತೆಗೆ ಉಳಿದ ತರಕಾರಿ, ಸೊಪ್ಪು ದರ ಕೂಡ ಹೆಚ್ಚಾಗಿದೆ. ಟೊಮೆಟೊ ಗ್ರಾಹಕರ ಜೇಬಿಗೆ ಕತ್ತರಿ ಹಾಕಿದರೆ ರೈತರಿಗೆ ಸಂತಸ ತಂದಿದೆ. 26 -27 ಕೆಜಿಯ ಒಂದು ಬಾಕ್ಸ್ ಗೆ ಕ್ಕೆ 1200 ರಿಂದ 1500 ರೂಪಾಯಿ ವರೆಗೂ ದರ ಇದೆ. ಕಳೆದ ವಾರ

ರಾಜ್ಯದಲ್ಲಿ ಟೊಮೆಟೊ ದುಬಾರಿ| ಗ್ರಾಹಕರಿಗೆ ಶಾಕ್ Read More »

ಅಗಲಿದ ಅರೆಹುಚ್ಚು ಬಸ್ಯಾ| ಭಿಕ್ಷುಕನ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನ ಭಾಗಿ|

ಬೆಂಗಳೂರು: ಭಿಕ್ಷುಕನ ಅಗಲಿಕೆಗೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಇಡೀ ಜನತೆಯೇ ಕಣ್ಣೀರಿಟ್ಟಿರುವ ಘಟನೆ ನಡೆದಿದೆ. ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಮಾನಸಿಕ ಅಸ್ವಸ್ಥ ವ್ಯಕ್ತಿಗೆ ವಿದಾಯ ಹೇಳಲು ಸಾವಿರಾರು ಜನರೇ ಆಗಮಿಸಿದ್ದರು. ಎಲ್ಲರ ಬಾಯಲ್ಲೂ ಅರೆಹುಚ್ಚು ಬಸ್ಯಾ ಎಂದು ಕರೆಸಿಕೊಳ್ಳುತ್ತಿದ್ದ ಈತ ಏಕೆ ಹುಚ್ಚನಾದ ಎಂಬುದು ಯಾರಿಗೂ ಗೊತ್ತಿಲ್ಲ. ಕೆದರಿದ ಕೂದಲು, ಮೈಮೇಲಿನ ಬಟ್ಟೆ ಕೊಳೆಯಾಗಿದ್ದರೂ ಈತನ ಮೊಗದಲ್ಲಿ ನಗುವಿಗೆ ಕೊರತೆ ಇರಲಿಲ್ಲ. ಹೂವಿನಹಡಗಲಿ ತುಂಬಾ ಓಡಾಡಿ ಭಿಕ್ಷೆ ಬೇಡುತ್ತಿದ್ದ ಈತ ಯಾರೇ ಸಿಗಲಿ 1 ರೂ.

ಅಗಲಿದ ಅರೆಹುಚ್ಚು ಬಸ್ಯಾ| ಭಿಕ್ಷುಕನ ಅಂತಿಮ ಯಾತ್ರೆಯಲ್ಲಿ ಸಾವಿರಾರು ಜನ ಭಾಗಿ| Read More »

ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಎನ್.ಕೆ ಶಾಫಿ ಸ ಅದಿ ಆಯ್ಕೆ

ಬೆಂಗಳೂರು, ನ.17: ರಾಜ್ಯ ವಕ್ಫ್ ಬೋರ್ಡ್‍ನ ನೂತನ ಅಧ್ಯಕ್ಷರಾಗಿ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ ಆಯ್ಕೆಯಾಗಿದ್ದಾರೆ. ಬುಧವಾರ ನಗರದ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ವಕ್ಫ್ ಬೋರ್ಡ್ ಕಚೇರಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಾಫಿ ಸಅದಿ ಪರ 6 ಮತ ಹಾಗೂ ಅವರ ಪ್ರತಿಸ್ಪರ್ಧಿ ಆಸಿಫ್ 4 ಮತಗಳನ್ನು ಪಡೆದರು. ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೌಲಾನ ಎನ್.ಕೆ.ಎಂ.ಶಾಫಿ ಸಅದಿ, 2011ರಲ್ಲಿ ನಾನು ವಕ್ಫ್ ಬೋರ್ಡ್‍ಗೆ ಸದಸ್ಯನಾಗಿ ಬಂದಿದ್ದೆ. ಅಲ್ಲಿಂದ ಈವರೆಗೆ ಸಮುದಾಯದ ಸಾಕಷ್ಟು

ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾಗಿ ಎನ್.ಕೆ ಶಾಫಿ ಸ ಅದಿ ಆಯ್ಕೆ Read More »

ಪ್ರೇಯಸಿಯ ಬೆತ್ತಲೆ ಫೋಟೋ ವಾಟ್ಸಪ್ ನಲ್ಲಿ ಸ್ಟೇಟಸ್| ಸಂಚು ಮಾಡಿ ವಿಕೃತಿ ‌ಮೆರೆದ ಪ್ರಿಯಕರ|

ಹುಬ್ಬಳ್ಳಿ: ಮದುವೆಯಾಗುವುದಾಗಿ ನಂಬಿಸಿ ಯುವತಿಯ ಬೆತ್ತಲೆ ವಿಡಿಯೋ ಸೆರೆಹಿಡಿದು, ಫೋಟೋ ಎಡಿಟ್​ ಮಾಡಿ, ವಾಟ್ಸ್​ಆಯಪ್​ ಸ್ಟೇಟಸ್​ ಹಾಕಿ ವಿಕೃತಿ ಮೆರೆದಿರುವ ಆತಂಕಕಾರಿ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ನಗರದ ಖಾಸಗಿ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿ ಶುಭಂ ಕೌಲೆ ವಿರುದ್ಧ ಮನನೊಂದ ವಿದ್ಯಾರ್ಥಿನಿ ಹುಬ್ಬಳ್ಳಿಯ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಶುಭಂ ಕೌಲೆ ತಮ್ಮದೇ ಕಾಲೇಜಿನ 20 ವರ್ಷದ ಕಿರಿಯ ವಿದ್ಯಾರ್ಥಿನಿಯ ಜತೆ ವಾಟ್ಸ್​ ಆ್ಯಪ್​ ಮೂಲಕ ಪರಿಚಯ ಬೆಳೆಸಿದ್ದ. ದಿನ ಕಳೆದಂತೆ ಪರಿಚಯ ಪ್ರೀತಿಗೆ ತಿರುಗಿತ್ತು.

ಪ್ರೇಯಸಿಯ ಬೆತ್ತಲೆ ಫೋಟೋ ವಾಟ್ಸಪ್ ನಲ್ಲಿ ಸ್ಟೇಟಸ್| ಸಂಚು ಮಾಡಿ ವಿಕೃತಿ ‌ಮೆರೆದ ಪ್ರಿಯಕರ| Read More »

ಪಡುಬಿದ್ರಿ: ಸ್ಕೂಟರ್ ಗೆ ಢಿಕ್ಕಿ ಹೊಡೆದ ಕಾರು| 25 ಅಡಿ ದೂರ ಎಸೆಯಲ್ಪಟ್ಟ ಸವಾರ ಸಾವು

ಉಡುಪಿ: ಕಾರು ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನಪ್ಪಿರುವ ಘಟನೆ ಪಡುಬಿದ್ರಿಯ ಕೆಳಗಿನ ಪೇಟೆಯ ಹೆದ್ದಾರಿ ತಿರುವಿನಲ್ಲಿ ನಡೆದಿದೆ. ಮೃತರನ್ನು ಪಾದೆಬೆಟ್ಟು ನಿವಾಸಿ ಬಾಲಕೃಷ್ಣ ಭಟ್ (74) ಎಂದು ಗುರುತಿಸಲಾಗಿದೆ. ಬಾಲಕೃಷ್ಣ ಭಟ್‌ ಅವರು ಮಂಗಳೂರು ಕಡೆಗೆ ಹೋಗುತ್ತಿದ್ದರು ಈ ವೇಳೆ ಉಡುಪಿ ಕಡೆಯಿಂದ ಹೆಜಮಾಡಿ ಕಡೆಗೆ ಬರುತ್ತಿದ್ದ ಕಾರು ಹಿಂಬದಿಯಿಂದ ಸ್ಕೂಟರ್‌ಗೆ ಢಿಕ್ಕಿಯಾಗಿದೆ. ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ಸವಾರ ಅಪಘಾತ ಸಂಭವಿಸಿದ ಸ್ಥಳದಿಂದ ಸುಮಾರು 25 ಅಡಿ ದೂರಕ್ಕೆ ಎಸೆಯಲ್ಪಟ್ಟರು.

ಪಡುಬಿದ್ರಿ: ಸ್ಕೂಟರ್ ಗೆ ಢಿಕ್ಕಿ ಹೊಡೆದ ಕಾರು| 25 ಅಡಿ ದೂರ ಎಸೆಯಲ್ಪಟ್ಟ ಸವಾರ ಸಾವು Read More »

‘ಯಾವ ಪುಟುಗೋಸಿ‌ ಟಿಪ್ಪು ರೀ!?’ | ಇಮ್ರಾನ್ ಗಡಿ‌‌ ವಿರುದ್ದ ಗೋ ಮಧುಸೂದನ್ ಕಿಡಿ|

ಬೆಂಗಳೂರು : ಕಾಂಗ್ರೆಸ್ ಅಲ್ಪ ಸಂಖ್ಯಾತ ರಾಷ್ಟ್ರೀಯ ಅಧ್ಯಕ್ಷ ಇಮ್ರಾನ್ ಗಡಿ ನೀಡಿದ ವಿವಾದಾತ್ಮಕ ಹೇಳಿಕೆ ವಿರುದ್ಧ ಬಿಜೆಪಿ ಮುಖಂಡ ಗೋ ಮಧುಸೂದನ್ ಬುಧವಾರ ಕಿಡಿ ಕಾರಿದ್ದಾರೆ. ಸುದ್ದಿಗಾರೊಂದಿಗೆ ಮಾತನಾಡಿದ ಅವರು, ‘ನೀವು ಟಿಪ್ಪು ವಂಶಸ್ಥರಿರಬಹುದು, ಬಾಬರ್ ವಂಶಸ್ಥರಿರಬಹುದು, ಅಲ್ಲಾವುದ್ದೀನ್ ಖಿಲ್ಜಿ ವಂಶಸ್ಥರಿರಬಹುದು, ದೇಶದ ಮೇಲೆ ದಾಳಿ ಮಾಡಿದ ಯಾವುದೇ ಆಕ್ರಮಣಕಾರರ ವಂಶಸ್ಥರಿರಬಹುದು. ಆಕ್ರಮಣ ಮಾಡಿದವರೆಲ್ಲ ನಾಶವಾಗಿದ್ದಾರೆಯೇ ವಿನಃ ದೇಶ ಸಾವಿರಾರು ವರ್ಷಗಳಿಂದ ಹಾಗೇ ಉಳಿದಿದೆ. ಇದು ದೇವಭೂಮಿ ಭಾರತ, ನೂರಾರು ವರ್ಷ ಗುಲಾಮಗಿರಿ ಅನುಭವಿಸಿದರೂ ಕೂಡ

‘ಯಾವ ಪುಟುಗೋಸಿ‌ ಟಿಪ್ಪು ರೀ!?’ | ಇಮ್ರಾನ್ ಗಡಿ‌‌ ವಿರುದ್ದ ಗೋ ಮಧುಸೂದನ್ ಕಿಡಿ| Read More »

ಬೈಕ್ ಗೆ ಅಡ್ಡಬಂದ ನಾಯಿ| ಸಹಸವಾರ ಸಾವು

ಕಡಬ: ನಾಯಿಯೊಂದು ದ್ವಿಚಕ್ರ ವಾಹನಕ್ಕೆ ಅಡ್ಡಬಂದ ಪರಿಣಾಮ ಅಪಘಾತ ಸಂಭವಿಸಿ ಸಹಸವಾರ ಮೃತಪಟ್ಟ ಘಟನೆ ಎಡಮಂಗಲದಲ್ಲಿ ನಡೆದಿದೆ. ಮೃತಪಟ್ಟವರನ್ನು ಗ್ರಾಮದ ಸುರೇಶ್ (53) ಎಂದು ಗುರುತಿಸಲಾಗಿದೆ. ಇವರು ಎಡಮಂಗಲದಿಂದ ಕೊಳಂಬೆ ಎಂಬಲ್ಲಿಗೆ ಟ್ಯಾಪಿಂಗ್ ಗೆ ಮಾಡಲು ತಮ್ಮ ಸಂತೋಷ್ ಎಂಬವರೊಂದಿಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ನಾಯಿ ಅಡ್ಡ ಬಂದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ. ಪರಿಣಾಮ ಸುರೇಶ್ ಎಂಬವರು ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿನ ವೈದ್ಯರ ಸಲಹೆಯಂತೆ ಮಂಗಳೂರಿನ

ಬೈಕ್ ಗೆ ಅಡ್ಡಬಂದ ನಾಯಿ| ಸಹಸವಾರ ಸಾವು Read More »