Editor

ಬಟ್ಟೆಬಿಚ್ಚಿ ಓಡಾಡೋರಿಗೇನ್ ಗೊತ್ತು ಗಾಂಧಿ ಮೌಲ್ಯ?: ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಕಿಡಿಕಾರಿದ್ದು ಯಾರ ಬಗ್ಗೆ ಗೊತ್ತ?

ಬೆಂಗಳೂರು: ನಮಗೆ ಸ್ವಾತಂತ್ರ‍್ಯ ಸಿಕ್ಕಿದ್ದು ಬರೀ ಭಿಕ್ಷೆ ಮಾತ್ರ. ಒಂದು ಕೆನ್ನೆಗೆ ಹೊಡೆದರೆ ಎರಡೂ ಕೆನ್ನೆಗೆ ಹೊಡೆಸಿಕೊಳ್ಳಿ ಎಂದು ಗಾಂಧೀಜಿ ಅವರಿಗೆ ಸಿಗುವುದು ಭಿಕ್ಷೆ ಮಾತ್ರವೇ ಎಂದು ಹೇಳಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಕಿಡಿಕಾರಿದ್ಧಾರೆ. ಈ ಬಗ್ಗೆ ಮಾತನಾಡಿದ ರಮೇಶ್ ಕುಮಾರ್ ಬಟ್ಟೆ ಬಿಚ್ಚಿ ಓಡಾಡುವವರಿಗೇನು ಗೊತ್ತಿದೆ ಗಾಂಧಿ ಮೌಲ್ಯ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಆಕೆಯಂಥವರು ಹೊಟ್ಟೆಪಾಡಿಗಾಗಿ ಬಟ್ಟೆ ಬಿಚ್ಚಿ ತಿರುಗುವವರು. ಅಂಥವರ ಬಗ್ಗೆ ಇಲ್ಲಿ ಮಾತನಾಡುವುದು ಸರಿಯಲ್ಲ.

ಬಟ್ಟೆಬಿಚ್ಚಿ ಓಡಾಡೋರಿಗೇನ್ ಗೊತ್ತು ಗಾಂಧಿ ಮೌಲ್ಯ?: ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಕಿಡಿಕಾರಿದ್ದು ಯಾರ ಬಗ್ಗೆ ಗೊತ್ತ? Read More »

“ಕಾಂಗ್ರೆಸ್‌ನವರು ಸುಳ್ಳಿನ ಫ್ಯಾಕ್ಟರಿ ಇದ್ದಂತೆ”- ಶ್ರೀರಾಮುಲು ವಾಗ್ದಾಳಿ

ಗದಗ: ಕಾಂಗ್ರೆಸ್‍ನವರು ಸುಳ್ಳಿನ ಫ್ಯಾಕ್ಟರಿ ಇದ್ದಂತೆ. ಸತ್ಯಕ್ಕೆ ದೂರವಾದದ್ದನ್ನು ಮಾತನಾಡುತ್ತಾರೆ. ಸಿದ್ದರಾಮಯ್ಯ ಅವರು ಹೊಸ ಟ್ರೆಂಡ್ ಆರಂಭಿಸಿದ್ದಾರೆ. ಅವರ ಬೂಟಾಟಿಕೆ ನೋಡುತ್ತಿದ್ದೇವೆ ಜನರಲ್ಲಿ ಗೊಂದಲ ಸೃಷ್ಟಿ ಮಾಡಲು ಮುಂದಾಗಿದ್ದಾರೆ ಎಂದು ಸಚಿವ ಬಿ. ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನ ಸ್ವರಾಜ್ ಯಾತ್ರೆ ಮೂಲಕ ಪರಿಷತ್ ಚುನಾವಣೆ ಪ್ರಚಾರ ಮಾಡುತ್ತಿದ್ದೇವೆ. ನಾಲ್ಕು ತಂಡಗಳಲ್ಲಿ ಇಂದಿನಿಂದ ಯಾತ್ರೆ ಆರಂಭವಾಗಲಿದೆ. ಸುನಾಮಿ, ಸುಂಟರಗಾಳಿ, ಬಿರುಗಾಳಿ ಅಲೆ ಕಾಂಗ್ರೆಸ್ ಪಕ್ಷಕ್ಕೆ ಸೀಮಿತ. ಪರಿಷತ್ ಚುನಾವಣೆಯಲ್ಲಿ

“ಕಾಂಗ್ರೆಸ್‌ನವರು ಸುಳ್ಳಿನ ಫ್ಯಾಕ್ಟರಿ ಇದ್ದಂತೆ”- ಶ್ರೀರಾಮುಲು ವಾಗ್ದಾಳಿ Read More »

ವಿಧಾನಸೌಧದಲ್ಲಿ ಸ್ಯಾನಿಟೈಜರ್ ಕುಡಿದು ಆತ್ಮಹತ್ಯೆಗೆ ಯತ್ನ| ನ್ಯಾಯ ಸಿಗದೇ ಮನನೊಂದು ಕೃತ್ಯ|

ಬೆಂಗಳೂರು: ಕೌಟುಂಬಿಕ ಕಲಹಕ್ಕೆ ನ್ಯಾಯ ಸಿಗುತ್ತಿಲ್ಲ ಎಂದು ಬೇಸತ್ತ ವ್ಯಕ್ತಿಯೋರ್ವ ವಿಧಾನಸೌಧದ ಒಳಗೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ. ನಂದಕುಮಾರ್ (54) ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ ಎನ್ನಲಾಗಿದೆ. ಕೂಡಲೇ ಈತನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂದ ಕುಮಾರ್‌ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೆ.ಸಿ.ನಗರ ವ್ಯಾಪ್ತಿಯ ಪ್ಯಾಲೇಸ್‌ ಗುಟ್ಟಹಳ್ಳಿ ನಿವಾಸಿಯಾಗಿರುವ ನಂದಕುಮಾರ್‌ ತಮ್ಮ ಕುಟುಂಬಸ್ಥರ ವಿರುದ್ದ ಜೆಸಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಕುಟುಂಬಸ್ಥರನ್ನು ಬಂಧಿಸಿ ನ್ಯಾಯ ಒದಗಿಸಿಲ್ಲ

ವಿಧಾನಸೌಧದಲ್ಲಿ ಸ್ಯಾನಿಟೈಜರ್ ಕುಡಿದು ಆತ್ಮಹತ್ಯೆಗೆ ಯತ್ನ| ನ್ಯಾಯ ಸಿಗದೇ ಮನನೊಂದು ಕೃತ್ಯ| Read More »

ಕಾಸರಗೋಡು ಜಿಲ್ಲೆಯ ರೇಷನ್ ಕಾರ್ಡ್‍ಗಳಲ್ಲಿ ಕನ್ನಡ ಮುದ್ರಿಸಲು ಒತ್ತಾಯ

ಮಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಪಡಿತರ ಕಾರ್ಡ್ ಗಳಲ್ಲಿ ಹೆಸರು ಮತ್ತು ಇತರ ವಿವರಗಳನ್ನು ಕನ್ನಡದಲ್ಲಿ ಮುದ್ರಿಸಬೇಕು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅವರು ಕಾಸರಗೋಡಿನ ಜಿಲ್ಲಾಧಿಕಾರಿ, ಕೇರಳಾದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ , ಆಹಾರ ಸಚಿವರು ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಅಕ್ಷಯ ಯೋಜನೆಯಡಿ ಅಕ್ಷಯ ಕೇಂದ್ರಗಳಲ್ಲಿ ಹೊಸದಾಗಿ ರೇಷನ್ ಕಾರ್ಡ್‍ಗಳನ್ನು ಮುದ್ರಿಸುತ್ತಿದ್ದು, ಈ ರೇಷನ್ ಕಾರ್ಡುಗಳಲ್ಲಿ ಮಲಯಾಳಿ ಭಾಷೆ

ಕಾಸರಗೋಡು ಜಿಲ್ಲೆಯ ರೇಷನ್ ಕಾರ್ಡ್‍ಗಳಲ್ಲಿ ಕನ್ನಡ ಮುದ್ರಿಸಲು ಒತ್ತಾಯ Read More »

ಮಂಗಳೂರು: ಲೈಂಗಿಕ ಕಿರುಕುಳ ಪ್ರಕರಣ| ನಾಪತ್ತೆಯಾದ ವಕೀಲ ರಾಜೇಶ್ ಮನೆಯಲ್ಲಿ ಪೊಲೀಸರಿಂದ ಶೋಧ

ಮಂಗಳೂರು: ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯಾದ ವಕೀಲ ಕೆ.ಎಸ್.ಎನ್ ರಾಜೇಶ್ ಭಟ್ ಅವರ ಮನೆಯಲ್ಲಿ ಪೊಲೀಸರು ನ.18ರ ಬುಧವಾರ ಶೋಧ ನಡೆಸಿದ್ದಾರೆ. ಪ್ರಕರಣದ ತನಿಖಾಧಿಕಾರಿ ಎಸಿಪಿ ರಂಜಿತ್ ಬಂಡಾರು ಅವರ ನೇತೃತ್ವದ ಪೊಲೀಸರ ತಂಡ ಬಿಜೈನ ಮನೆಯಲ್ಲಿ ಶೋಧ ನಡೆಸಿದೆ. ತನಿಖೆಗೆ ಅಗತ್ಯವಾದ ದಾಖಲೆಗಳಿಗಾಗಿ ಶೋಧ ನಡೆಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳೂರಿನ ಖ್ಯಾತ ವಕೀಲರಾಗಿದ್ದ ರಾಜೇಶ್ ಭಟ್ ಅವರು ತಮ್ಮ ಕಚೇರಿಯಲ್ಲಿ ಇಂಟರ್ನ್‌ಶಿಪ್‌ಗೆ ಬಂದ ಕಾನೂನು ಕಾಲೇಜಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

ಮಂಗಳೂರು: ಲೈಂಗಿಕ ಕಿರುಕುಳ ಪ್ರಕರಣ| ನಾಪತ್ತೆಯಾದ ವಕೀಲ ರಾಜೇಶ್ ಮನೆಯಲ್ಲಿ ಪೊಲೀಸರಿಂದ ಶೋಧ Read More »

ಬಂಟ್ವಾಳ: ರವಿ ಪೂಜಾರಿ ಹೆಸರಲ್ಲಿ ಬೆದರಿಕೆ ಕರೆ ಪ್ರಕರಣ ರದ್ದುಗೊಳಿಸಿದ ಕೋರ್ಟ್

ಬಂಟ್ವಾಳ: ಕೃಷಿಕರೊಬ್ಬರ ಮೊಬೈಲ್ ಗೆ ರವಿ ಪೂಜಾರಿ ಹೆಸರು ಹೇಳಿಕೊಂಡು 25 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟು ಕೊಡದೇ ಇದ್ದರೆ ಜೀವ ಬೆದರಿಕೆ ಒಡ್ಡಿರುವ ಪ್ರಕರಣವನ್ನು ‌ಬಂಟ್ವಾಳ ಜೆಎಂಎಫ್ ಸಿ ನ್ಯಾಯಾಲಯ‌ ರದ್ದು ಪಡಿಸಿದೆ. ವಿಟ್ಲಾ ಠಾಣಾ ವ್ಯಾಪ್ತಿಯ ಇಡ್ಕಿದು ಗ್ರಾಮದ ಮಾತೃಶ್ರೀ ಕೃಪಾ ನಿವಾಸಿ ವೆಂಕಟರಮಣ ಭಟ್ ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಈಗ ನ್ಯಾಯಾಲಯದಲ್ಲಿ ದೂರುದಾರರು ಪ್ರಕರಣವನ್ನು ಮುಂದುವರಿಸದಿರಲು ನಿರ್ಧರಿಸಿದ ಕಾರಣ ಪ್ರಕರಣ ರದ್ದುಗೊಳ್ಳುವ

ಬಂಟ್ವಾಳ: ರವಿ ಪೂಜಾರಿ ಹೆಸರಲ್ಲಿ ಬೆದರಿಕೆ ಕರೆ ಪ್ರಕರಣ ರದ್ದುಗೊಳಿಸಿದ ಕೋರ್ಟ್ Read More »

ಮಂಗಳೂರು: ಮಕ್ಕಳ ಮಾರಾಟ ಮತ್ತು ಕೊಳ್ಳುವವರಿಗೆ 5 ವರ್ಷ ಸಜೆ

ಮಂಗಳೂರು: ಮಕ್ಕಳನ್ನು ಮಾರುವವರಿಗೂ ಹಾಗೂ ಕೊಳ್ಳುವವರಿಗೂ ಬಾಲನ್ಯಾಯ ಕಾಯ್ದೆ-2015ರ ಸೆಕ್ಷನ್ 81 ಪ್ರಕಾರ 5 ವರ್ಷ ಸೆರೆಮನೆ ವಾಸ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು. ಮಕ್ಕಳ ಮಾರಾಟ ಅಪರಾಧವಾಗಿದ್ದು, ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾದರೆ ಶಿಕ್ಷೆಯನ್ನು 3 ರಿಂದ 7 ವರ್ಷಗಳವರೆಗೆ ವಿಧಿಸಬಹುದಾಗಿದೆ.ಹೆಚ್ಚಿನ ಮಾಹಿತಿಗೆ ರಾಜ್ಯ ದತ್ತು ಸಂಪನ್ಮೂಲ ಏಜೆನ್ಸಿ ದೂ.ಸಂ:080-22867381/2, ನಗರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದೂ.ಸಂ.:0824-2440004 ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು: ಮಕ್ಕಳ ಮಾರಾಟ ಮತ್ತು ಕೊಳ್ಳುವವರಿಗೆ 5 ವರ್ಷ ಸಜೆ Read More »

ಉರಿಯುತ್ತಿದ್ದ ಮನೆಯಿಂದ ವೃದ್ಧೆಯನ್ನು ಕಾಪಾಡಿದ ‘ಅಪ್ಪು’|

ಬೆಂಗಳೂರು: ನಗರದ ಹೆಬಗೋಡಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಬೆಂಕಿ ತಗುಲಿದಾಗ ಮನೆಯೊಳಗಿದ್ದ ವೃದ್ಧೆಯನ್ನು ಮನೆಯ ಸಾಕು ನಾಯಿ ಕಾಪಾಡಿದ ಘಟನೆ ನಡೆದಿದೆ. ಸಂಪಿಗೆ ನಗರದಲ್ಲಿರುವ ಅಪಾರ್ಟ್ ಮೆಂಟ್ ಒಂದರಲ್ಲಿ ನಿನ್ನೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು. ಈ ವೇಳೆ ಮನೆಯಲ್ಲಿ ವೃದ್ಧೆ ಮತ್ತು ಸಾಕು ನಾಯಿ ‘ಅಪ್ಪು’ ಮಾತ್ರ ಇದ್ದರು. ಮನೆಗೆ ಬೆಂಕಿ ತಗುಲುತ್ತಿದ್ದಂತೇ ನಾಯಿ ಸೆಕ್ಯುರಿಟಿ ಬಳಿ ಹೋಗಿ ಜೋರಾಗಿ ಬೊಗಳಿ ಆತನ ಗಮನ ಸೆಳೆದಿದೆ. ಬಳಿಕ ಅಪಾರ್ಟ್ ಮಂದಿಯನ್ನೂ ಜೋರಾಗಿ ಬೊಗಳಿ ಎಚ್ಚರಿಸಿದೆ. ಇದರಿಂದಾಗಿ ಎಚ್ಚೆತ್ತುಕೊಂಡ

ಉರಿಯುತ್ತಿದ್ದ ಮನೆಯಿಂದ ವೃದ್ಧೆಯನ್ನು ಕಾಪಾಡಿದ ‘ಅಪ್ಪು’| Read More »

‘ಎರಡು‌ ವಿಭಿನ್ನ ಭಾರತದಿಂದ ಬಂದಿದ್ದೇನೆ’ – ವಿವಾದಾತ್ಮಕ ಹೇಳಿಕೆ ನೀಡಿದ‌ ಬಾಲಿವುಡ್ ನಟ|

ಮುಂಬೈ: ಸದಾ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿ ಮಾಡುವ ಕಾಮೆಡಿಯನ್ ವೀರ್‌ ದಾಸ್‌ ಯೂಟ್ಯೂಬ್‌ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋವೊಂದರ ಮೂಲಕ ಹೊಸದೊಂದು ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ. ವಾಷಿಂಗ್ಟನ್‌ ಡಿ.ಸಿ.ಯ ಜಾನ್‌ ಎಫ್ ಕೆನಡಿ ಕೇಂದ್ರದಲ್ಲಿ ನಡೆದ ಇವೆಂಟ್‌ನಲ್ಲಿ ಕೊಟ್ಟ ಪ್ರದರ್ಶನವೊಂದರ ವಿಡಿಯೋವೊಂದು ಭಾರೀ ವಿವಾದಕ್ಕೆ ಗ್ರಾಸವಾಗಿದೆ. ನಾನು ಎರಡು ಭಾರತಗಳಿಂದ ಬಂದಿದ್ದೇನೆ,” ಎನ್ನುವ ವೀರ್‌ ದಾಸ್, ದೇಶದಲ್ಲಿ ಘಟಿಸುತ್ತಿರುವ ಇಬ್ಬಂದಿತನದ ವಿಚಾರಗಳ ಉಲ್ಲೇಖ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಪರ-ವಿರೋಧಗಳ ಚರ್ಚೆಗೆ

‘ಎರಡು‌ ವಿಭಿನ್ನ ಭಾರತದಿಂದ ಬಂದಿದ್ದೇನೆ’ – ವಿವಾದಾತ್ಮಕ ಹೇಳಿಕೆ ನೀಡಿದ‌ ಬಾಲಿವುಡ್ ನಟ| Read More »

“ನೀವಂತೂ ಸ್ಲಿಮ್ ಆಗಿದ್ದೀರಿ, ಹಾಗೆ ಪೆಟ್ರೋಲ್ ರೇಟ್ ಕೂಡಾ ಕಡಿಮೆ ಮಾಡ್ಸಿ!” | ಸಚಿವೆ ಸ್ಮೃತಿ ಇರಾನಿಗೆ ನೆಟ್ಟಿಗರ ರಿಕ್ವೆಸ್ಟ್|

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ತೂಕ ಇಳಿಸಿಕೊಂಡ ಲೇಟೆಸ್ಟ್ ಫೋಟೊ ನೋಡಿ ನೆಟ್ಟಿಗರು ಮಾಜಿ ನಟಿ, ಸಚಿವೆಯ ವೈಟ್ ಲಾಸ್‌ ಬಗ್ಗೆ ಮಾತನಾಡುತ್ತಿದ್ದಾರೆ. ನಟಿ ಸೋನಂ ಕಪೂರ್, ಮೌನಿಯಂತಹ ನಟಿಯರು ಫೊಟೋ ನೋಡಿ ಅಚ್ಚರಿಪಟ್ಟಿದ್ದಾರೆ. ಹಾಗಿದ್ರೆ ನಿಜಕ್ಕೂ ಮತ್ತೆ ಹಿಂದಿನ ರೂಪ ಪಡೆದುಕೊಂಡರಾಸ್ಮೃತಿ ಇರಾನಿ ? ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮತ್ತು ಮಾಜಿ ನಟಿ ಸ್ಮೃತಿ ಇರಾನಿ ಅವರು ಇತ್ತೀಚೆಗೆ ವೈಟ್ ಲಾಸ್ ಫೋಟೋ ಮೂಲಕ ತಮ್ಮ ಅಭಿಮಾನಿಗಳ ಗಮನ ಸೆಳೆದರು. ಸ್ಮೃತಿ

“ನೀವಂತೂ ಸ್ಲಿಮ್ ಆಗಿದ್ದೀರಿ, ಹಾಗೆ ಪೆಟ್ರೋಲ್ ರೇಟ್ ಕೂಡಾ ಕಡಿಮೆ ಮಾಡ್ಸಿ!” | ಸಚಿವೆ ಸ್ಮೃತಿ ಇರಾನಿಗೆ ನೆಟ್ಟಿಗರ ರಿಕ್ವೆಸ್ಟ್| Read More »