Editor

ಉಕ್ರೇನ್ ನಲ್ಲಿ ಸಿಲುಕಿದ ಉಡುಪಿ ಮೂಲದ ವಿದ್ಯಾರ್ಥಿ

ಸಮಗ್ರ ನ್ಯೂಸ್: ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ್ದು, ಅನೇಕ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದಾರೆ. ಇದೀಗ ಉಡುಪಿ ಜಿಲ್ಲೆಯ ವಿದ್ಯಾರ್ಥಿಯೋರ್ವ ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದೆ. ಉಕ್ರೇನ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ಉಡುಪಿಯ ರೋಹನ್ ಧನಂಜಯ್ ಬಗ್ಲಿ ಅವರು ಸದ್ಯ ಉಕ್ರೇನ್ ನಲ್ಲಿ ಸಿಲುಕಿಕೊಂಡಿದ್ದಾರೆ. ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಧನಂಜಯ್ ಬಗ್ಲಿ ಅವರ ಹಿರಿಯ ಮಗನಾಗಿದ್ದಾರೆ. ಉಕ್ರೇನ್ ನ ಕಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ 5ನೇ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದರು.

ಉಕ್ರೇನ್ ನಲ್ಲಿ ಸಿಲುಕಿದ ಉಡುಪಿ ಮೂಲದ ವಿದ್ಯಾರ್ಥಿ Read More »

ಮಂಗಳೂರು: ಹೆರಿಗೆ ವೇಳೆ ತಾಯಿ – ಮಗು ಸಾವು

ಸಮಗ್ರ ನ್ಯೂಸ್: ಚೊಚ್ಚಲ ಹೆರಿಗೆ ಸಂದರ್ಭ ಗರ್ಭದಲ್ಲಿದ್ದ ಮಗು ಸಹಿತ ತಾಯಿ ಮೃತಪಟ್ಟ ಘಟನೆ ಫೆ. 24 ರಂದು ನಡೆದಿದೆ. ಮಾಣಿ ಸಮೀಪದ ಕಡೆಶಿವಾಲಯ ಬುಡೋಳಿ ನಿವಾಸಿಯಾಗಿದ್ದ ವಕೀಲೆ ಗಾಯತ್ರಿ (38) ಎಂಬವರುಮೃತರು. ಅವರು ಪುತ್ತೂರಿನಲ್ಲಿ ಸುಮಾರು 8 ವರ್ಷ ವಕೀಲ ವೃತ್ತಿ ಮಾಡಿದ್ದ ಗಾಯತ್ರಿಗೆ 2010ರಲ್ಲಿ ಪೆರ್ಲದ ಆನಡ್ಕ ಕಾಡಮನೆ ಸುಧಾಕರ್ ಅವರೊಂದಿಗೆ ವಿವಾಹವಾಗಿತ್ತು. 2017ರಿಂದ ನಗರದ ಲೇಡಿಹಿಲ್ ಸಮೀಪ ವಾಸ್ತವ್ಯ ಹೊಂದಿದ್ದರು. ಅಲ್ಲದೆ ವಕೀಲ ವೃತ್ತಿ ಪುನರಾರಂಭಿಸಿದ್ದರು. ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು

ಮಂಗಳೂರು: ಹೆರಿಗೆ ವೇಳೆ ತಾಯಿ – ಮಗು ಸಾವು Read More »

‘ಹರ್ಷ ತಾಯಿಗೆ ಎಂಎಲ್ಎ ಟಿಕೆಟ್ ನೀಡಿ’ – ಪೋಸ್ಟರ್ ಅಭಿಯಾನದಿಂದ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ

ಸಮಗ್ರ ನ್ಯೂಸ್: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಯಾದ ಬೆನ್ನಲ್ಲೇ ‘ದೇಶಭಕ್ತರ ಕುಟುಂಬದ ಸದಸ್ಯರಿಗೆ ಎಂಎಲ್‌ಎ ಟಿಕೆಟ್‌ ನೀಡಬೇಕು’ ಎಂಬ ಹೊಸ ಅಭಿಯಾನವನ್ನು ದೇಶಭಕ್ತ ಹಿಂದೂ ಕಾರ್ಯಕರ್ತರ ಹೆಸರಿನಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದ್ದು, ಬಿಜೆಪಿಗೆ ಮುಜುಗರ ತಂದಿದೆ. ‘ಹರ್ಷ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟಿದ್ದಾನೆ. ಅವರ ಕುಟುಂಬದವರಿಗೆ ಸಾಂತ್ವನ, ಭಾಷಣ, ಆರ್ಥಿಕ ನೆರವು ನೀಡಿದರಷ್ಟೇ ಸಾಲದು. ಅವರ ತಾಯಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ನೀಡಬೇಕು. ದೇಶಭಕ್ತನ ಮನೆಯಿಂದ ಒಬ್ಬರು ಎಂಎಲ್‌ಎ ಹುಟ್ಟಿಬರಲಿ. ಇಂತಹ ಸ್ಥಾನಗಳು ಈಶ್ವರಪ್ಪ, ಯಡಿಯೂರಪ್ಪ

‘ಹರ್ಷ ತಾಯಿಗೆ ಎಂಎಲ್ಎ ಟಿಕೆಟ್ ನೀಡಿ’ – ಪೋಸ್ಟರ್ ಅಭಿಯಾನದಿಂದ ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ Read More »

ಪುಟಿನ್ ಗೆ ಯುದ್ಧ ನಿಲ್ಲಿಸಲು ಮನವಿ ಮಾಡಿದ ಪ್ರಧಾನಿ ಮೋದಿ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಕರೆ ಮಾಡಿ, ಉಕ್ರೇನ್‌ನಲ್ಲಿ ಇಂದು ಬೆಳಿಗ್ಗೆ ಪ್ರಾರಂಭವಾದ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಮನವಿ ಮಾಡಿದರು ಎಂದು ರಾಷ್ಟ್ರೀಯ ಮಾಧ್ಯಮ ಎನ್.ಡಿ ಟಿವಿ ವರದಿ ಮಾಡಿದೆ. ಮಧ್ಯಸ್ಥಿಕೆಗಾಗಿ ಭಾರತಕ್ಕೆ ಉಕ್ರೇನ್ ತುರ್ತು ಮನವಿ ಮಾಡಿದ ಗಂಟೆಗಳ ನಂತರ ಈ ಸಂಭಾಷಣೆ ನಡೆಯಿತು ಎನ್ನಲಾಗಿದೆ. ರಾಜತಾಂತ್ರಿಕ ಮಾತುಕತೆ ಮತ್ತು ಸಂವಾದದ ಹಾದಿಗೆ ಮರಳಲು ಎಲ್ಲಾ ಕಡೆಯಿಂದ ಸಂಘಟಿತ ಪ್ರಯತ್ನಗಳು ನಡೆಸುವ ಕುರಿತು ಪ್ರಧಾನಿ

ಪುಟಿನ್ ಗೆ ಯುದ್ಧ ನಿಲ್ಲಿಸಲು ಮನವಿ ಮಾಡಿದ ಪ್ರಧಾನಿ ಮೋದಿ Read More »

ಪ್ರೊ ಕಬಡ್ಡಿ; ಪಾಟ್ನಾ ಪೈರೈಟ್ಸ್-ದಬಂಗ್ ದಿಲ್ಲಿ ನಡುವೆ ಇಂದು ಫೈನಲ್

ಸಮಗ್ರ ನ್ಯೂಸ್: ಕೊರೊನಾದಿಂದಾಗಿ ಎರಡು ವರ್ಷ ಸ್ಥಗಿತಗೊಂಡು, ಈ ಬಾರಿ ಬಯೋಬಬಲ್‌ನಲ್ಲಿ ಯಶಸ್ವಿಯಾಗಿ ನಡೆದ 8ನೇ ಆವೃತ್ತಿ ಪ್ರೊ ಕಬಡ್ಡಿಗೆ ಶುಕ್ರವಾರ ರಾತ್ರಿ ತೆರೆ ಬೀಳಲಿದೆ. ಮೂರು ಬಾರಿಯ ಚಾಂಪಿಯನ್‌ ಪಾಟ್ನಾ ಪೈರೆಟ್ಸ್‌ ಮತ್ತು ಕಳೆದ ಬಾರಿಯ ರನ್ನರ್ ಅಪ್‌ ದಬಾಂಗ್‌ ದಿಲ್ಲಿ ಪ್ರಶಸ್ತಿ ಸಮರದಲ್ಲಿ ಮುಖಾಮುಖಿಯಾಗಲಿವೆ. ಪಾಟ್ನಾ-ದಿಲ್ಲಿ ಲೀಗ್‌ ಹಂತದ ನಂ.1 ಮತ್ತು ನಂ.2 ತಂಡಗಳೆಂಬುದು ವಿಶೇಷ. ಈ ಕಾರಣದಿಂದ ಫೈನಲ್‌ ಹಣಾಹಣಿ ತೀವ್ರ ಪೈಪೋಟಿಯಿಂದ ಕೂಡಿರಲಿದೆ.

ಪ್ರೊ ಕಬಡ್ಡಿ; ಪಾಟ್ನಾ ಪೈರೈಟ್ಸ್-ದಬಂಗ್ ದಿಲ್ಲಿ ನಡುವೆ ಇಂದು ಫೈನಲ್ Read More »

ಬೆಂಗಳೂರು: ಹಸುವಿನ ಮೇಲೆರಗಿದ ಕಾಮುಕ| ವಿಕೃತನಿಗೆ ಬಿತ್ತು ಸಕತ್ ಗೂಸಾ

ಸಮಗ್ರ ನ್ಯೂಸ್: ಗೋವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿಕೃತ ಕಾಮಿಯನ್ನು ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಬಂಧಿ ಸಿದ್ದಾರೆ. ದಾವಣಗೆರೆ ಮೂಲದ ನಿವಾಸಿ ವೆಂಕಟೇಶ್ ಬಂಧಿತ ಆರೋಪಿಯಾಗಿದ್ದು, ಹನುಮಂತಪ್ಪ ಎಂಬುವವರಿಗೆ ಸೇರಿದ ಹಸುವಿನ ಮೇಲೆ ದೌರ್ಜನ್ಯ ಎಸಗಿದ್ದಾನೆ. ಹೈನುಗಾರಿಕೆಯಲ್ಲಿ ತೊಡಗಿರುವ ಹನುಮಂತಪ್ಪನಿಗೆ ನೆರೆಹೊರೆ ಅವರಿಂದ ಈ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಫೆಬ್ರವರಿ 20 ರಂದು ಆ ಕಾಮಿಗಾಗಿ ಕಾದು ಕುಳಿತ್ತಿದ್ದ ಹಸುವಿನ ಮಾಲೀಕ, ಅದೇ ರಾತ್ರಿ ವೇಳೆ ಬಂದ ಕಾಮುಕ ಸಿಕ್ಕಿಬಿದ್ದಿದ್ದಾನೆ. ತಕ್ಷಣವೇ ಸ್ಥಳೀಯರಿಂದ ಆತನಿಗೆ

ಬೆಂಗಳೂರು: ಹಸುವಿನ ಮೇಲೆರಗಿದ ಕಾಮುಕ| ವಿಕೃತನಿಗೆ ಬಿತ್ತು ಸಕತ್ ಗೂಸಾ Read More »

ಸುಳ್ಯ : ಚಂದನ ಸಾಹಿತ್ಯ ವೇದಿಕೆ ವತಿಯಿಂದ ಚಂದನ ಕವಿ ಕಾವ್ಯ ಸಮ್ಮೇಳನ -2022

ಸಾಹಿತಿ,ಜ್ಯೋತಿಷಿ, ಸಂಘಟಕ, ಗಾಯಕ , ನಟ , ಚಿತ್ರ ನಿರ್ದೇಶಕರೂ ಆದ ಎಚ್ ಭೀಮರಾವ್ ವಾಷ್ಠರ್ ಕೋಡಿಹಾಳ ಇವರ 46ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ ಚಂದನ ಕವಿ ಕಾವ್ಯ ಸಮ್ಮೇಳನ -2022 ಸಾಹಿತ್ಯ ಸಮಾರಂಭವು ಫೆ20 ರಂದು ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ಬಹಳ ಅದ್ದೂರಿಯಿಂದ ಅರ್ಥಪೂರ್ಣವಾಗಿ ಜರುಗಿತು. ರಾಜ್ಯ ಮಟ್ಟದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಚಂದನ ಕವಿಗೋಷ್ಠಿ ಹಾಗೂ ಚಂದನ ಸೌರಭ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಿತು .

ಸುಳ್ಯ : ಚಂದನ ಸಾಹಿತ್ಯ ವೇದಿಕೆ ವತಿಯಿಂದ ಚಂದನ ಕವಿ ಕಾವ್ಯ ಸಮ್ಮೇಳನ -2022 Read More »

ಬೆಳ್ತಂಗಡಿ: ಮಸೀದಿಗೆ ಬಿಯರ್ ಬಾಟಲ್ ಎಸೆದ ದುಷ್ಕರ್ಮಿಗಳು| ಪೊಲೀಸರಿಂದ ತನಿಖೆ

ಸಮಗ್ರ ನ್ಯೂಸ್ ಡೆಸ್ಕ್ : ದುಷ್ಕರ್ಮಿಗಳ ತಂಡವೊಂದು ಮಸೀದಿಗೆ ಬಿಯರ್ ಬಾಟಲಿ ಎಸೆದು ದಾಂಧಲೆ ನಡೆಸಿರುವ ಘಟನೆ ಬೆಳ್ತಂಗಡಿ ತಾಲೂಕಿನ ಮುರ ಜುಮ್ಮಾ ಮಸೀದಿಯಲ್ಲಿ ನಡೆದಿದೆ . ದುಷ್ಕರ್ಮಿಗಳು ಮಸೀದಿಯ ಆವರಣದೊಳಗೆ ಬಿಯರ್ ಬಾಟ್ಲಿ ಎಸೆದಿದ್ದಾರೆ ಆವರಣದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಮೇಲೇ ಬಿಯರ್ ಬಾಟ್ಲಿಗಳು ಬಿದ್ದಿರುವುದಾಗಿ ಮಾಹಿತಿ ಲಭ್ಯವಾಗಿದೆ. ಮಸೀದಿಗೆ ಬಿಯರ್ ಬಾಟಲಿ ಎಸೆದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಸೀದಿಯೊಳಗೆ ಬಿಯರ್ ಬಾಟ್ಲಿ ಎಸೆದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಬೆಳ್ತಂಗಡಿ: ಮಸೀದಿಗೆ ಬಿಯರ್ ಬಾಟಲ್ ಎಸೆದ ದುಷ್ಕರ್ಮಿಗಳು| ಪೊಲೀಸರಿಂದ ತನಿಖೆ Read More »

ಯಾರದೋ ಬಂಗಾರ ಮತ್ಯಾರಿಗೋ!| ಇದು ಮಣಪ್ಪುರಂ ಗೋಲ್ಡ್ ಲೋನ್ ಸಿಬ್ಬಂದಿಯ ಎಡವಟ್ಟು

ಸಮಗ್ರ ನ್ಯೂಸ್: ಮಣಪ್ಪುರಂ ಗೋಲ್ಡ್ ಲೋನ್ ಸಿಬ್ಬಂದಿಯ ಎಡವಟ್ಟಿನಿಂದ ಯಾರದೋ ಬಂಗಾರ ಮತ್ಯಾರಿಗೋ ಹಸ್ತಾಂತರವಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಜಗದೇವಿ ಮಾಳಿ ಕುಟುಂಬಸ್ಥರು ಇವರು ಕಳೆದ ವರ್ಷ ಮಣಪ್ಪುರಂ ಗೋಲ್ಡ್ ಲೋನ್‍ನಲ್ಲಿ, 37ಗ್ರಾಂ ಬಂಗಾರವನ್ನು ಇಟ್ಟು ಸಾಲ ಪಡೆದಿದ್ದರು. ಪಡೆದ ಸಾಲಕ್ಕೆ ಪ್ರತಿ ತಿಂಗಳು ಸಾಲದ ಕಂತನ್ನು ಸಹ ಪಾವತಿ ಮಾಡುತ್ತಿದ್ದರು. ಆದರೆ ಕಳೆದ ಮೂರು ತಿಂಗಳಿನಿಂದ ಕೆಲಸದ ನಿಮಿತ್ತ ಸೊಲ್ಲಾಪುರ ಹೋಗಿದ್ದ ಈ ಕುಟುಂಬ ಬಡ್ಡಿ ಹಾಗೂ ಸಾಲದ ಪಾವತಿ ಮಾಡಿರಲಿಲ್ಲ. ಈಗ ಹಳೆಯ

ಯಾರದೋ ಬಂಗಾರ ಮತ್ಯಾರಿಗೋ!| ಇದು ಮಣಪ್ಪುರಂ ಗೋಲ್ಡ್ ಲೋನ್ ಸಿಬ್ಬಂದಿಯ ಎಡವಟ್ಟು Read More »

ಮಂಗಳೂರು: ‘ಜಿಲ್ಲೆಯ ಜನರು ಉಕ್ರೇನ್ ನಲ್ಲಿ ಸಿಲುಕಿದ್ದರೆ ಮಾಹಿತಿ ನೀಡಿ’ – ಡಿ.ಸಿ

ಸಮಗ್ರ ನ್ಯೂಸ್ ಡೆಸ್ಕ್: ರಷ್ಯಾ-ಉಕ್ರೇನ್ ಸಂಘರ್ಷವು ಸಮರದತ್ತ ಸಾಗುತ್ತಿದ್ದು, ಈ ನಡುವೆ ಉಕ್ರೇನ್ ನಲ್ಲಿ ಜಿಲ್ಲೆಯ ಜನರು‌ ನೆಲೆಸಿದ್ದರೆ, ಅಥವಾ ಅಲ್ಲಿ ಸಿಲುಕಿ ಹಾಕಿಕೊಂಡಿರುವ ಬಗ್ಗೆ ಮಾಹಿತಿ ಇದ್ದರೆ ತಕ್ಷಣ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಕೋರಿಕೊಂಡಿದೆ. ಈ ಬಗ್ಗೆ ಯಾರಾದರೂ ನಮ್ಮವರು ಅಲ್ಲಿ ಸಮಸ್ಯೆಗೆ ಸಿಲುಕಿದ್ದ್ರೆ ಮಾಹಿತಿ ನೀಡಿ,ಅಲ್ಲಿ ಇರುವವರು ಹಾಗೂ ಅಲ್ಲಿ ಸಿಲುಕಿಕೊಂಡಿರುವ ಜನರ ಕುಟುಂಬಸ್ಥರು ನೇರವಾಗಿ ಜಿಲ್ಲಾಡಳಿತವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ‌ ಕೆ.ವಿ ಮನವಿ ಮಾಡಿಕೊಂಡಿದ್ದಾರೆ. ಉಕ್ರೇನ್​ ಮೇಲೆ ರಷ್ಯಾ ಯುದ್ಧ

ಮಂಗಳೂರು: ‘ಜಿಲ್ಲೆಯ ಜನರು ಉಕ್ರೇನ್ ನಲ್ಲಿ ಸಿಲುಕಿದ್ದರೆ ಮಾಹಿತಿ ನೀಡಿ’ – ಡಿ.ಸಿ Read More »