Editor

ಉಕ್ರೇನ್‍ನಲ್ಲಿ ಕರ್ನಾಟಕದ 10. ಮಂದಿ ವಿದ್ಯಾರ್ಥಿಗಳು ಲಾಕ್| ವಿದೇಶಾಂಗ ಇಲಾಖೆ ಜೊತೆ ಸಿಎಂ ಬೊಮ್ಮಾಯಿ ಚರ್ಚೆ

ಸಮಗ್ರ ನ್ಯೂಸ್: ರಷ್ಯಾ ಮತ್ತು ಉಕ್ರೇನ್ ನಡುವೆ ದಾಳಿ ನಡೆಯುತ್ತಿದ್ದು, ಈ ಮಧ್ಯೆ ಕರ್ನಾಟಕದ 10 ಮಂದಿ ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಉಕ್ರೇನ್ ನಲ್ಲಿ ಬೆಂಗಳೂರು ವಿದ್ಯಾರ್ಥಿ ಲಾಕ್ ಆಗಿದ್ದು, ಪೋಷಕರು ಆತಂಕದಲ್ಲಿ ಇದ್ದಾರೆ. ಪ್ರಸ್ತುತ ದಾಳಿಯಲ್ಲಿ ಸಿಕ್ಕಿ ಹಾಕಿಕೊಂಡಿರುವ ವಿದ್ಯಾರ್ಥಿಗಳ ಪೋಷಕರು ವಾಟ್ಸ್ ಆ್ಯಪ್ ವೀಡಿಯೋ ಕಾಲ್ ಮೂಲಕ ಸಂಪರ್ಕದಲ್ಲಿ ಇದ್ದಾರೆ. ಬೆಳಗ್ಗೆಯಿಂದ ಬಾಂಬ್ ಬ್ಲಾಸ್ಟ್ ಸದ್ದು ಕೇಳಿಬರುತ್ತಿದ್ದು, ನಾವು ಸುರಕ್ಷಿತವಾಗಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಪ್ರಸ್ತುತ ಭಾರತಕ್ಕೆ ಬರಲು

ಉಕ್ರೇನ್‍ನಲ್ಲಿ ಕರ್ನಾಟಕದ 10. ಮಂದಿ ವಿದ್ಯಾರ್ಥಿಗಳು ಲಾಕ್| ವಿದೇಶಾಂಗ ಇಲಾಖೆ ಜೊತೆ ಸಿಎಂ ಬೊಮ್ಮಾಯಿ ಚರ್ಚೆ Read More »

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ| ಏ. 10 ರಿಂದ ಬೇಸಿಗೆ ರಜೆ

ಸಮಗ್ರ ನ್ಯೂಸ್: ರಾಜ್ಯದಲ್ಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಮುಕ್ತಾಯಗೊಳಿಸುವ ಮತ್ತು 2022-23ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಡುಗಡೆ ಮಾಡಲಾಗಿದೆ. 2021-22ನೇ ಸಾಲಿನ 1 ರಿಂದ 9ನೇ ತರಗತಿಗಳ ವಾರ್ಷಿಕ ಪರೀಕ್ಷೆ ಮಾರ್ಚ್ 24ರಿಂದ ಆರಂಭಗೊಳ್ಳಲಿದೆ. ಅಲ್ಲದೇ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಬೇಸಿಗೆ ರಜೆ ಏಪ್ರಿಲ್ 10ರಿಂದ ಆರಂಭವಾಗಲಿದೆ. ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಶೈಕ್ಷಣಿಕ ಚಟುವಟಿಕೆಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ.

ಶಾಲಾ ಮಕ್ಕಳಿಗೆ ಸಿಹಿ ಸುದ್ದಿ| ಏ. 10 ರಿಂದ ಬೇಸಿಗೆ ರಜೆ Read More »

ವಿಟ್ಲ : ಮಗನನ್ನೇ ಕೊಲೆಗೈದ ತಂದೆ| ಕಾರಣ?

ಸಮಗ್ರ ನ್ಯೂಸ್: ಕುಡಿದು ಗಲಾಟೆ ಮಾಡುತ್ತಿದ್ದ ಮಗನನ್ನು ತಂದೆಯೇ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಚಂದಳಿಕೆ ಸಮೀಪದ ಕುರುಂಬಳ ಕಾಂತಮೂಲೆಯಲ್ಲಿ ಬುಧವಾರ ನಡೆದಿದೆ. ಮೃತನನ್ನು ದಿನೇಶ್ (45) ಎಂದು ಗುರುತಿಸಲಾಗಿದೆ. ನೀಲಯ್ಯ ಗೌಡ ಮಗನ ಕೊಲೆ ನಡೆಸಿದ ಆರೋಪಿ. ಮೃತರ ತಂದೆ ವಸಂತ ಗೌಡ ಹಾಗೂ ದಿನೇಶ್ ಅವರು ಮನೆಯಲ್ಲಿ ವಾಸವಾಗಿದ್ದು, ದಿನೇಶ್ ಪ್ರತೀ ದಿನ ಮನೆಗೆ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಎಂದು ಹೇಳಲಾಗಿದ್ದು, ಮಗನ ಉಪಟಳ ತಾಳಲಾರದೆ ಅಪ್ಪ ದೊಣೆಯಿಂದ ಹೊಡೆದಿದ್ದಾರೆ. ಮೃತರ

ವಿಟ್ಲ : ಮಗನನ್ನೇ ಕೊಲೆಗೈದ ತಂದೆ| ಕಾರಣ? Read More »

ಇಂಗ್ಲಿಷ್ ನಲ್ಲೂ ಬರುತ್ತಂತೆ ಕೆಜಿಎಫ್ 2 | ಏಪ್ರಿಲ್ 14 ರಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆ| ಹಾಲಿವುಡ್ ನಲ್ಲಿ ಮಿಂಚಲಿದ್ದಾರೆ ರಾಕಿಭಾಯ್|

ಸಮಗ್ರ‌ ಫಿಲಂ ಡೆಸ್ಕ್: ಕೆಜಿಎಫ್ 2 ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ. ಏಪ್ರಿಲ್ 14 ರಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆ ಮಾಡುವುದಾಗಿ ಹೊಂಬಾಳೆ ನಿರ್ಮಾಣ ಸಂಸ್ಥೆ ಈಗಾಗಲೇ ದಿನಾಂಕ ಗೊತ್ತು ಮಾಡಿದೆ. ಈ ನಡುವೆ ಗಾಂಧಿನಗರದಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಕೆಜಿಎಫ್ 2 ಇಂಗ್ಲಿಷ್ ನಲ್ಲೂ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಅಂದುಕೊಂಡಂತೆ ಆದರೆ, ರಾಕಿಭಾಯ್ ಹಾಲಿವುಡ್ ನಲ್ಲೂ ಹವಾ ಕ್ರಿಯೇಟ್ ಮಾಡಲಿದ್ದಾರೆ. ಸದ್ಯ ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ‘ಕೆಜಿಎಫ್ 2’

ಇಂಗ್ಲಿಷ್ ನಲ್ಲೂ ಬರುತ್ತಂತೆ ಕೆಜಿಎಫ್ 2 | ಏಪ್ರಿಲ್ 14 ರಂದು ವಿಶ್ವದಾದ್ಯಂತ ಸಿನಿಮಾ ಬಿಡುಗಡೆ| ಹಾಲಿವುಡ್ ನಲ್ಲಿ ಮಿಂಚಲಿದ್ದಾರೆ ರಾಕಿಭಾಯ್| Read More »

ಉಕ್ರೇನ್ ಮೇಲೆ ರಷ್ಯಾ‌ ದಾಳಿ| ಹಲವರ ಸಾವು; ಹಲವು ಆಸ್ಪೋಟ

ಸಮಗ್ರ ನ್ಯೂಸ್: ಈಗ ಉಕ್ರೇನ್-ರಷ್ಯಾದಲ್ಲಿ ಯುದ್ಧವು ಬಹುತೇಕ ಪ್ರಾರಂಭವಾಗಿದೆ. ಕೀವ್ ಸೇರಿದಂತೆ ಉಕ್ರೇನ್‌ನ ವಿವಿಧ ಭಾಗಗಳಲ್ಲಿ ಸ್ಫೋಟಗಳು ಕೇಳಿಬಂದಿವೆ. ಕೀವ್ ಮೇಲೆ ಕ್ರೂಸ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ದಾಳಿ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಕೀವ್ ಹೊರತುಪಡಿಸಿ, ಖಾರ್ಕಿವ್ ನಗರದಲ್ಲಿಯೂ ಸ್ಫೋಟಗಳು ಸಂಭವಿಸಿವೆ. ಇದಕ್ಕೂ ಮುನ್ನ ಗುರುವಾರ ಬೆಳಿಗ್ಗೆ ಡೊನೆಟ್ಸ್ಕ್‌ನಲ್ಲಿ ಐದು ಸ್ಫೋಟಗಳು ಸಂಭವಿಸಿದ್ದು ಹಲವು ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್ ವಿರುದ್ಧ ಮಿಲಿಟರಿ ಕ್ರಮವನ್ನು ಘೋಷಿಸಿದಾಗ ಈ

ಉಕ್ರೇನ್ ಮೇಲೆ ರಷ್ಯಾ‌ ದಾಳಿ| ಹಲವರ ಸಾವು; ಹಲವು ಆಸ್ಪೋಟ Read More »

ಅಂತಿಮ ತೀರ್ಪು ಬರುವವರೆಗೆ ನಿಗದಿತ ಸಮವಸ್ತ್ರ ಧರಿಸಿ- ವಿದ್ಯಾರ್ಥಿಗಳಿಗೆ ಹೈಕೋರ್ಟ್ ಸೂಚನೆ

ಸಮಗ್ರ ನ್ಯೂಸ್: ʻಹಿಜಾಬ್ʼ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಪೀಠ, ಪ್ರಕರಣದ ಅಂತಿಮ ತೀರ್ಪು ಬರುವವರೆಗೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳು ಸೂಚಿಸುವ ಸಮವಸ್ತ್ರವನ್ನು ಧರಿಸಬೇಕು ಎಂದು ಬುಧವಾರ ಸ್ಪಷ್ಟಪಡಿಸಿದೆ. ತ್ರಿಸದಸ್ಯ ಪೀಠದ ನೇತೃತ್ವದ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಅವರು, ‘ಪದವಿ ಅಥವಾ ಪಿಯು ಕಾಲೇಜ್ ಆಗಿರಲಿ, ಅಂತಿಮ ತೀರ್ಪಿನವರೆಗೆ ಸಮವಸ್ತ್ರವನ್ನು ಅನುಸರಿಸಬೇಕು ಎಂದು ನಾವು ಸ್ಪಷ್ಟವಾಗಿ ಹೇಳುತ್ತಿದ್ದೇವೆ’ ಎಂದು ಪುನರುಚ್ಚರಿಸಿದರು. ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಮತ್ತು ಜೆಎಂ ಖಾಜಿ ಅವರನ್ನೊಳಗೊಂಡ ಪೀಠವು ಮಧ್ಯಂತರ

ಅಂತಿಮ ತೀರ್ಪು ಬರುವವರೆಗೆ ನಿಗದಿತ ಸಮವಸ್ತ್ರ ಧರಿಸಿ- ವಿದ್ಯಾರ್ಥಿಗಳಿಗೆ ಹೈಕೋರ್ಟ್ ಸೂಚನೆ Read More »

ಮಂಗಳೂರು: ಡಾ. ಎಂ.ಎನ್. ರಾಜೇಂದ್ರ ಕುಮಾರ್ ಗೆ ‘ಸಾಧನ‌ಚಕ್ರವರ್ತಿ’ ಪ್ರಶಸ್ತಿ

ಸಮಗ್ರ ನ್ಯೂಸ್: ಐಕಳಬಾವ ಕಾಂತಾಬಾರೆ ಬೂದಾಬಾರೆ ಕುಂಬಳ ಸಮಿತಿ, ಐಕಳ ಮತ್ತು ಮುಂಬಯಿ ವತಿಯಿಂದ ಫೆ. 26ರಂದು ನಡೆಯುವ ಐಕಳ ಕಂಬಳೋತ್ಸವದಲ್ಲಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಅವರಿಗೆ “ಸಾಧನ ಚಕ್ರವರ್ತಿ’ ಪ್ರಶಸ್ತಿ ನೀಡಲಾಗುವುದು ಎಂದು ಕಂಬಳ್ಳೋತ್ಸವ ಸಮಿತಿಯ ಅಧ್ಯಕ್ಷ ಐಕಳಬಾವ ದೇವಿಪ್ರಸಾದ್‌ ಶೆಟ್ಟಿ ಬೆಳಪು ತಿಳಿಸಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ 28 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಸಾರ್ಥಕ ಸೇವೆ

ಮಂಗಳೂರು: ಡಾ. ಎಂ.ಎನ್. ರಾಜೇಂದ್ರ ಕುಮಾರ್ ಗೆ ‘ಸಾಧನ‌ಚಕ್ರವರ್ತಿ’ ಪ್ರಶಸ್ತಿ Read More »

ದ.ಕ ಜಿಲ್ಲೆಯಾದ್ಯಂತ ಫೆ. 27ರಿಂದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಫೆ. 27ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಅಂಗವಾಗಿ ಫೆ.27ರಂದು ನಗರದ ಲೇಡಿಗೋಶನ್ ಆಸ್ಪತ್ರೆಯಲ್ಲಿ ಬೆಳಗ್ಗೆ 8 ಗಂಟೆಗೆ ಅಭಿಯಾನಕ್ಕೆ ಚಾಲನೆ ದೊರೆಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಐದು ವರ್ಷದೊಳಗನ

ದ.ಕ ಜಿಲ್ಲೆಯಾದ್ಯಂತ ಫೆ. 27ರಿಂದ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ Read More »

ಮಂಗಳೂರು: ಪ್ರಿಯಕರನ ಜೊತೆ ಮೊಬೈಲ್ ಸಂಭಾಷಣೆ ನಡೆಸುತ್ತಲೇ ಯುವತಿ ಆತ್ಮಹತ್ಯೆಗೆ ಶರಣು

ಸಮಗ್ರ ನ್ಯೂಸ್: ಮೊಬೈಲ್ ಸಂಭಾಷಣೆ ನಡೆಸುತ್ತಾ ಯುವತಿಯೋರ್ವಳು ನೇಣುಬಿಗಿದು ಸಾವನ್ನಪ್ಪಿರುವ ಘಟನೆ ಮಂಗಳೂರು ಕುಂಪಲ ಸಮೀಪದ ಬಲ್ಯ ಎಂಬಲ್ಲಿ ಸಂಭವಿಸಿದೆ. ನೇಣುಬಿಗಿದು ಸಾವನ್ನಪ್ಪಿರುವ ಯುವತಿಯನ್ನು ಕುಂಪಲ ಬಲ್ಯ ನಿವಾಸಿ ಹರ್ಷಿತಾ(21) ಎಂದು ಗುರುತಿಸಲಾಗಿದೆ. ಮನೆಯ ಕೊಠಡಿಯಲ್ಲಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಹರ್ಷಿತಾ ಇಂದು ಬೆಳಿಗ್ಗೆ ಪತ್ತೆಯಾಗಿದ್ದಾಳೆ. ಪ್ರಿಯಕರನೊಂದಿಗೆ ವಿರಸಗೊಂಡು ಮೊಬೈಲ್ ಸಂಭಾಷಣೆಯಲ್ಲಿದ್ದ ನಡುವೆ ನೇಣುಹಾಕಿಕೊಂಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಸ್ಥಳೀಯ ನಿವಾಸಿ ಪ್ರಿಯಕರ ಆಕೆಯನ್ನು ನೇಣಿನ ಕುಣಿಕೆಯಿಂದ ಕೆಳಗಿಳಿಸಿ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದಾನೆ. ಆದರೆ ಇಂದು ಬೆಳಿಗ್ಗೆ

ಮಂಗಳೂರು: ಪ್ರಿಯಕರನ ಜೊತೆ ಮೊಬೈಲ್ ಸಂಭಾಷಣೆ ನಡೆಸುತ್ತಲೇ ಯುವತಿ ಆತ್ಮಹತ್ಯೆಗೆ ಶರಣು Read More »

ಕಾಸರಗೋಡು: ಹುಟ್ಟು ಹಬ್ಬದ ದಿನದಂದೇ ಅಪಘಾತಕ್ಕೆ ಬಲಿಯಾದ ಬಾಲಕಿ

ಸಮಗ್ರ ನ್ಯೂಸ್: ಹುಟ್ಟುಹಬ್ಬದಂದೇ ಅಪಘಾತಕ್ಕೆ ಸಿಲುಕಿ ಹನ್ನೊಂದು ವರ್ಷದ ಬಾಲಕಿ ಬಾಲಕಿ ಮೃತಪಟ್ಟ ದಾರುಣ ಘಟನೆ ಮಂಜೇಶ್ವರದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಬಂಗ್ರಮಂಜೇಶ್ವರ ಕಟ್ಟೆಬಜಾರಿನ ರವಿಚಂದ್ರ ಹೆಗ್ಡೆ ರವರ ಪುತ್ರಿ ದೀಪಿಕಾ (11) ಮೃತಪಟ್ಟವರು. ಹುಟ್ಟುಹಬ್ಬದ ಹಿನ್ನಲೆಯಲ್ಲಿ ಸಾಮಾಗ್ರಿ ತರಲೆಂದು ಮಂಜೇಶ್ವರಕ್ಕೆ ತಂದೆ ಜೊತೆ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಮಂಜೇಶ್ವರ ಒಳರಸ್ತೆಯ ಗಿಳಿವಿಂಡು ಸಮೀಪ ಇವರು ಸಂಚರಿಸುತ್ತಿದ್ದ ಸ್ಕೂಟರ್ ಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ. ಡಿಕ್ಕಿಯಿಂದ ಇಬ್ಬರು

ಕಾಸರಗೋಡು: ಹುಟ್ಟು ಹಬ್ಬದ ದಿನದಂದೇ ಅಪಘಾತಕ್ಕೆ ಬಲಿಯಾದ ಬಾಲಕಿ Read More »